Asianet Suvarna News Asianet Suvarna News

ವಾರ ಭವಿಷ್ಯ: ಯಾವ ರಾಶಿಗಿದೆ ಸಿಹಿ ಸುದ್ದಿ? ಯಾರಿಗಿದೆ ಕಂಟಕ?

ಈ ವಾರದಲ್ಲಿ ಯಾವ ರಾಶಿಗಿದೆ ಸಿಹಿ ಸುದ್ದಿ? ಯಾರಿಗಿದೆ ಕಂಟಕ? ಇಲ್ಲಿದೆ ನಿಮ್ಮ ವಾರ ಭವಿಷ್ಯ

weekly horoscope of November fourth week
Author
Bangalore, First Published Nov 25, 2018, 8:02 AM IST

ಮೇಷ: ನಿಮ್ಮ ನಗುಮುಖವೇ ನಿಮಗೆ ಮಿತ್ರ. ಸಂಬಂಧದ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಬರಬಹುದು. ಸಹನೆಯಿಂದ ವರ್ತಿಸುವುದು ಕಲಿಯಿರಿ. ಉದ್ಯೋಗದಲ್ಲಿ ಮತ್ತೊಂದು ಸ್ತರಕ್ಕೆ ಬೆಳೆದು ಆತ್ಮವಿಶ್ವಾಸ ಹೆಚ್ಚುತ್ತೆ. ಬ್ಯುಸಿನೆಸ್ ಕ್ಷೇತ್ರದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಪ್ರಗತಿಯಿದೆ.

ವೃಷಭ: ಕೆಲಸ ಕಷ್ಟವಾಗಬಹುದು, ಗುರಿ ದೂರ ಹೋಗಬಹುದು, ಆದರೆ ನಿಮ್ಮ ತಾಕತ್ತಿಗೆ ಇದು ದೊಡ್ಡ ವಿಚಾರವೇ ಅಲ್ಲ. ಸೋಮಾರಿತನ ಬಿಟ್ಟು ಮುಂದುವರಿದರೆ ಜಯ ಶತಃಸಿದ್ಧ. ಸಂಬಂಧದ ವಿಷಯದಲ್ಲಿ ಕಟುವಾಗಿ ವರ್ತಿಸಬೇಡಿ. ಮನಸ್ಸಿಗೆ ಕಿರಿಕಿರಿ ಇದ್ದರೂ ಅದನ್ನು ಮೀರಿ ನಡೆಯಲು ಕಲಿಯೋದು ಮುಖ್ಯ.

ಮಿಥುನ: ತುಸು ದುಡುಕು ಪ್ರವೃತ್ತಿಯ, ಯಜಮಾನಿಕೆಯ ಸ್ವಭಾವ ನಿಮ್ಮದು. ನೀವು ಮ್ಯಾನೇಜ್ ಮಾಡುವ ಕೆಲಸಗಳಲ್ಲೆಲ್ಲ ಜಯ. ಸಂಗಾತಿಗೂ ಖುಷಿ. ನಿಮಗಿಷ್ಟವಾದ ವಸ್ತು ಖರೀದಿಸುವ ಯೋಗ. ಸೋ ಹ್ಯಾಪಿಯಾಗಿರಿ. ಎಲ್ಲ ವಿಷಯಗಳಲ್ಲೂ ಖುಷಿ, ನೆಮ್ಮದಿ ಹೆಚ್ಚಬಹುದು. ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಇರಲಿದೆ.

ಕಟಕ: ನೀವು ಬಹಳ ಪ್ರೀತಿಸುವವರಿಗೆ ಸಹಾಯ ಮಾಡುವ ಅವಕಾಶ. ಇದರಿಂದ ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಹೆಚ್ಚುತ್ತೆ. ಸಹೋದರರ ಜೊತೆ ಬಾಂಧವ್ಯ ವೃದ್ಧಿ. ನಿರಾಸೆಯೇ ಹೆಚ್ಚಾಗಿದ್ದ ಬದುಕಿನಲ್ಲಿ ಈಗ ಭರವಸೆಯ ಬೆಳಕು ಮೂಡಬಹುದು. ಮಂಗಳ ಗ್ರಹದ ಸಪೋರ್ಟ್‌ನಿಂದ ಸ್ವಲ್ಪ ರಿಲೀಫ್, ಹುರುಪು.

ಸಿಂಹ: ಈ ವಾರ ಅಂದುಕೊಂಡದ್ದು ಆಗೋದು ಕಷ್ಟ. ಕೆಲಸ, ಆರೋಗ್ಯ, ಕೌಟುಂಬಿಕ ವಿಚಾರಗಳಲ್ಲಿ ಹಿನ್ನಡೆ. ನಿರಾಶರಾಗಬೇಡಿ. ಮುಂದೆ ಉತ್ತಮ ಫಲ ಇದ್ದೇ ಇರುತ್ತೆ. ಈ ವಾರ ನಿಮ್ಮ ಭಾಗ್ಯದ ವಾರ. ಉದ್ಯೋಗದಲ್ಲಿ ಪ್ರಗತಿ ಇದೆ. ಆರೋಗ್ಯ ಬಹಳ ಚೆನ್ನಾಗಿರುತ್ತೆ. ಮುಗುಳ್ನಗೆ ಮೂಡಲಿದೆ.

ಕನ್ಯಾ: ಗುರು ಮತ್ತು ಬುಧ ಗ್ರಹ ಎರಡನೇ ಮನೆ ಪ್ರವೇಶಿಸುವ ಕಾರಣ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಮನೆ, ಕೌಟುಂಬಿಕ ವಿಷಯಗಳು ತುಸು ದುಬಾರಿಯಾಗಲಿವೆ. ಕೆಲಸ, ಒತ್ತಡ ಸ್ವಲ್ಪ ಜಾಸ್ತಿ. ಹಾಗಂತ ನಷ್ಟವಿಲ್ಲ. ವಾರದ ಕೊನೆಗೆ ಹಣಕಾಸು ಸುಗಮ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ತುಲಾ: ತುಸು ಹಿಂಜರಿಕೆ ಸ್ವಭಾವ ನಿಮ್ಮದಾಗಿರುವ ಕಾರಣ ಹೊಸ ಸವಾಲುಗಳನ್ನು ಒಪ್ಪಿಕೊಳ್ಳೋದು ಕಷ್ಟ. ಹೀಗಾದರೆ ನಿಮಗೇ ನಷ್ಟ. ಉದ್ಯೋಗ, ಆರ್ಥಿಕತೆಯಲ್ಲಿ ಅಸ್ಥಿರತೆ. ಧೃತಿಗೆಡದೇ ಸ್ಥಿರವಾಗಿರಿ, ಯಾರಿಗೂ ನಿಮ್ಮನ್ನು ಅಲ್ಲಾಡಿಸಕ್ಕಾಗಲ್ಲ. ನಿಮಗೆ ನೀವೇ ಆತಂಕ ಸೃಷ್ಟಿಸಿಕೊಂಡರೆ ಯಾರೇನೂ ಮಾಡಲಿಕ್ಕಾಗುವುದಿಲ್ಲ.

ವೃಶ್ಚಿಕ: ಬ್ಯುಸಿನೆಸ್ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆ ಎದುರಾಗಬಹುದು. ಚಾಲೆಂಜ್‌ಅನ್ನು ಅಂಗೀಕರಿಸಿ. ಕಷ್ಟಪಟ್ಟರೆ ಫಲ ಯಾರಿಗೆ ಸಿಗಲ್ಲ ಹೇಳಿ. ಆರ್ಥಿಕತೆ ಕುಸಿಯಬಹುದು, ನಿಮ್ಮ ಉಳಿತಾಯ ಸಹಾಯಕ್ಕೆ ಬರುತ್ತೆ. ಬೌದ್ಧಿಕ ವಲಯದಲ್ಲಿ ನಿಮ್ಮ ವಿಚಾರಗಳಿಗೆ ಮಾನ್ಯತೆ ಸಿಗಲಿದೆ.  

ಧನುಸ್ಸು: ಮೆಚ್ಚಿನ ಸ್ನೇಹಿತರಿಂದ ಸಿಹಿ ಸುದ್ದಿ ಕೇಳಲಿದ್ದೀರಿ. ಅನಗತ್ಯ ಚಿಂತೆಗಳೇ ನಿಮ್ಮನ್ನು ಕುಗ್ಗಿಸುವುದು. ಸಕಾರಾತ್ಮಕ ನಡೆ ಈ ದಿನವೇ ರೂಢಿಸಿಕೊಳ್ಳಿ. ದುಬಾರಿ ವಸ್ತು ಖರೀದಿ, ಆದರೆ ಅವುಗಳಿಂದಲೇ ಸರ್ಪೈಸ್ ಕಾದಿರುತ್ತದೆ. ಉದ್ಯೋಗದಲ್ಲಿ ಸ್ಥಿರತೆ. 

ಮಕರ: ಆದಾಯದಲ್ಲಿ ಏರಿಕೆಯಾದರೂ ಖರ್ಚು ಅದೇ ರೀತಿ ಹೆಚ್ಚುತ್ತದೆ. ವೃತ್ತಿಯಲ್ಲಿ ಕಿರಿಕ್ ಬರಬಹುದು. ಹುಷಾರಾಗಿರಿ. ವಾರದ ಕೊನೆಗೆ ಎಲ್ಲ ಸರಿಹೋಗಿತ್ತೆ. ಆರೋಗ್ಯದ ಬಗ್ಗೆ ಭಯ ಬೇಡ. ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಖುಷಿಯಾಗಿರುತ್ತೀರಿ.  

ಕುಂಭ: ಅತಿಯಾದ ಆತ್ಮ ವಿಶ್ವಾಸ ಬೇಡ. ಹಣಕಾಸು ವಹಿವಾಟಿಗೆ ಈ ವಾರ ಉತ್ತಮ. ಹಣದ ಹರಿವು ಹೆಚ್ಚುತ್ತೆ. ಜಾಸ್ತಿ ಎಮೋಶನಲ್ ಆಗಬೇಡಿ. ಅಚ್ಚರಿಯ ಸುದ್ದಿಯೊಂದು ನಿಮಗಾಗಿ ಕಾದಿರುತ್ತೆ. ನಿಮ್ಮ ಖುಷಿ ಹೆಚ್ಚಾಗುತ್ತೆ. ಕೌಟುಂಬಿಕ ಭಿನ್ನಾಭಿಪ್ರಾಯಕ್ಕೂ ಕೊನೆ ಹಾಡುವ ದಿನ ದೂರವಿಲ್ಲ 

ಮೀನ: ವಿನಾಕಾರಣ ಕೋಪ ಮಾಡಿಕೊಳ್ಳಬೇಡಿ. ಆರ್ಥಿಕ ವಿಚಾರಗಳಲ್ಲಿ ಬಹಳ ಜಾಗ್ರತೆ ಬೇಕು. ಸಣ್ಣ ಎಡವಟ್ಟೂ ದೊಡ್ಡ ಹಾನಿಗೆ ಕಾರಣವಾಗಬಹುದು. ಸಂಬಂಧದ ವಿಷಯದಲ್ಲೂ ದೊಡ್ಡ ಪಾಠ ಕಲಿಯಬಹುದು. ಹುಂಬತನ ಬೇಡ, ತಾಳ್ಮೆಯಿಂದಿರಿ.  

Follow Us:
Download App:
  • android
  • ios