ಮೇಷ: ಕೆಟ್ಟ ಕೆಲಸಕ್ಕೆ ಬೆಂಬಲ ನೀಡಿ ಒಳ್ಳೆಯವರು ಎನಿಸಿಕೊಳ್ಳುವುದಕ್ಕಿಂತ ಒಳ್ಳೆಯ ಕೆಲಸ ಮಾಡಿ ನಿಮ್ಮವರನ್ನು ಸರಿ ದಾರಿಯಲ್ಲಿ ನಡೆಸುವ ಗುಣ ನಿಮ್ಮದು. ಮಕ್ಕಳಿಗೆ ಕಷ್ಟ ಹಾಗೂ ಶ್ರಮದ ಫಲದ ಬಗ್ಗೆ ಪಾಠ ಹೇಳಿಕೊಡಿ. ಸುಖದ ಪಾಠ ತಿಳಿಯಬೇಕೆಂದರೆ ಕಷ್ಟದ ಪಾಠದ ಅರಿವು ಬೇಕೇಬೇಕು. ವಾರಾಂತ್ಯದಲ್ಲಿ ಸಿಹಿ ಸುದ್ದಿ.

ವೃಷಭ: ಶ್ರಮದ ಪ್ರಯತ್ನ ಸಫಲತೆ ತಂದುಕೊಡುತ್ತದೆ. ಕೆಲಸದ ವಿಚಾರದಲ್ಲಿ ಪ್ರಯತ್ನವೇ ಇಲ್ಲದೆ ಬರೀ ಜಪಿಸುತ್ತಿದ್ದರೆ ಪ್ರಯೋಜನವಿಲ್ಲ. ತಪ್ಪನ್ನು ತಿಳಿದು, ತಿದ್ದುಕೊಂಡು ಮುನ್ನಡೆಯಿರಿ. ವಾರಾಂತ್ಯದಲ್ಲಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದ್ದು, ಕುಟುಂಬದೊಂದಿಗೆ ದೂರ ಪ್ರಯಾಣ ಸಾಧ್ಯತೆ.

ಮಿಥುನ: ನಿಮ್ಮ ನೇರ ಸ್ವಭಾವ ಮನೆಯ ವಾತಾವರಣ ಬದಲಿಸಲಿದೆ. ನಿಮ್ಮ ಆಪ್ತರಿಗೆ ಇನ್ನಷ್ಟು ಹತ್ತಿರವಾಗಲಿದ್ದೀರಿ. ಕಲಸ ಕಾರ್ಯಗಳಲ್ಲಿ ಈ ವಾರ ಹೆಚ್ಚು ತೊಡಗಿಕೊಳ್ಳುವುದರಿಂದ ಒತ್ತಡ ಹೆಚ್ಚಾಗಿರಲಿದೆ. ಹಳೆಯ ಸ್ನೇಹಿತರ ದಿಢೀರ್ ಭೇಟಿ ಸಾಧ್ಯತೆ. ವಾರಾಂತ್ಯದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ.

ಕಟಕ: ಬಿಸಿಲು ಹೆಚ್ಚಾಗಿರುವುದರಿಂದ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಹಣ ಕಾಸಿನ ವಿಚಾರದಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಿ ಹಾಗೂ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ. ಆರಂಭದಲ್ಲಿ ಗೊಂದಲ ಮೂಡಿದರೂ ವಾರಾಂತ್ಯದಲ್ಲಿ ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗಲಿ

ಸಿಂಹ: ಹಿಡಿದು ಮುಟ್ಟಿದ್ದಕ್ಕೂ ಸಿಟ್ಟು, ಕೋಪ ಬೇಡ. ಇದರಿಂದ ಮನೆಯಲ್ಲಿ ಸಂಗಾತಿಯೊಂದಿಗೆ ಮನಸ್ಥಾಪ ಸಾಧ್ಯತೆ. ಆದಷ್ಟು ಸಂಗೀತ ಕೇಳಿ, ಧ್ಯಾನ ಮಾಡಿ ಮನಸ್ಸು ಶಾಂತಿಯಿಂದ ಇಟ್ಟುಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಒತ್ತಡ ಇದ್ದು, ಪರೀಕ್ಷೆ ನಂತರ ಒತ್ತಡದಿಂದ ಮುಕ್ತಿ. ಬಂಧುಗಳ ಆಗಮನ ಸಾಧ್ಯತೆ.

ಕನ್ಯಾ: ಸ್ನೇಹಿತರನ್ನು ಜಾಸ್ತಿ ಹಚ್ಚಿಕೊಳ್ಳುವುದು ಸೂಕ್ತವಲ್ಲ. ಕೆಲ ಸಂದರ್ಭದಲ್ಲಿ ಅವರಿಂದಲೇ ತೊಂದರೆ ಸಾಧ್ಯತೆ. ಈ ವಾರವೂ ನಿಮ್ಮ ಶ್ರದ್ಧೆ ನಿಷ್ಠೆಯ ಕೆಲಸ ಮುಂದುವರಿಯಲಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಕೆಲ ಅವಕಾಶಗಳು ಬಳಿಬಂದಲ್ಲಿ ಅದನ್ನು ನಿರಾಕರಿಸದಿರುವುದು ಒಳಿತು. ಶುಭ ವಾರ.

ತುಲಾ: ಕೆಲಸದಲ್ಲಿ ಕಣ್ಣ ಮುಚ್ಚಲೆ ಬೇಡ. ಸಿಕ್ಕಿಹಾಕಿಕೊಂ ಡಲ್ಲಿ ನಿಮ್ಮ ಮರ್ಯಾದೆ ನೀವೇ ತೆಗೆದುಕೊಂಡ ಂತಾಗುತ್ತದೆ. ಯಾರ ಮಾತಿಗೂ ಕಿವಿಗೊಡದೆ ನೀವು ಆರಂಭಿಸಬೇಕೆಂದುಕೊಂಡ ಕೆಲಸವನ್ನು ಧೈರ್ಯ ದಿಂದ ಒಳ್ಳೆಯ ಮನಸ್ಸಿನಿಂದ ಆರಂಭಿಸಿದರೆ ಮುಂದೆ ಶುಭವಾಗಲಿದೆ. ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕ: ಮನೆಯಲ್ಲಿ ಈ ವಾರ ಅರ್ಧ ಸಂತೋಷ ಅರ್ಧ ದುಃಖ ಇರಲಿದೆ. ಕಹಿ ಅನುಭವ ಈ ವಾರ ಆಗಲಿದ್ದು, ಅದನ್ನು ಉತ್ತಮ ರೀತಿಯಲ್ಲೇ ಎದುರಿಸಿ ಮುಂದೆ ಬರಲಿದ್ದೀರಿ. ನಿಮ್ಮ ಪ್ರೋತ್ಸಾಹ ಮಕ್ಕಳನ್ನು ಹುರಿದುಂಬಿಸುವುದರಿಂದ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ಅನುಕೂಲವಾಗಲಿದೆ.

ಧನುಸ್ಸು: ಕೆಲಸದಲ್ಲಿ ಮಾಡಿದ್ದೆಲ್ಲಾ ಸರಿ ಎನ್ನುವ ನಿಮ್ಮ ಮೊಂಡು ವಾದಕ್ಕೆ ಈ ವಾರ ಭಾರೀ ಹೊಡೆತ ಬೀಳಲಿದೆ. ಈಗಾದರೂ ಎಚ್ಚೆತ್ತು ಮುನ್ನಡೆ ಯುವುದು ಒಳಿತು. ಕಷ್ಟ ಎದುರಾದಾಗ ಮಕ್ಕಳೇ ನಿಮ್ಮ ತೋಳ್ಬಲದಂತೆ ನಿಲ್ಲುವರು. ಮನೆಯಲ್ಲಿ ಸಂತಸ.

ಮಕರ: ಹಿರಿಯರ ಮಾರ್ಗದರ್ಶನ ನಿಮ್ಮ ಗುರಿ ಸಾಧನೆಗೆ ಸರಿ ದಾರಿ ತೋರಲಿದೆ. ಯಾವುದೇ ಕೆಲಸ ಆರಂಭಿಸುವ ಮುನ್ನ ಹಿರಿಯರನ್ನು ಕೇಳಿ ತೀರ್ಮಾನಿಸಿ. ಮಹಿಳೆಯರಿಗೆ ಈ ವಾರ ಲಾಭದಾಯಕವಾಗಿದ್ದು, ಅದು ಸದುದ್ದೇಶಕ್ಕೆ ಬಳಕೆಯಾಗಲಿದೆ.

ಕುಂಭ: ಕಡ್ಡಿ ತುಂಡಾದರೆ ಹೇಗೆ ಜೋಡಿಸಲು ಅಸಾಧ್ಯ ವೋ ಹಾಗೇ ಕಟುವಾದ ಮಾತಿನಿಂದ ಒಡೆದ ಮನಸ್ಸು ಜೋಡಿಸುವುದು ಸಾಧ್ಯವಿಲ್ಲ. ಹಿಂದಿನ ವಾರ ಮಾಡಿದ ತಪ್ಪು ಈ ವಾರ ಮರುಕಳಿಸುವ ಸಾಧ್ಯತೆ. ಎಚ್ಚರಿಕೆಯ ಹೆಜ್ಜೆ ಇಡುವುದು ಒಳಿತು. ನಿಮ್ಮ ನಿರ್ಧಾರ ಕುಟುಂಬಕ್ಕೆ ಉತ್ತಮ ದಿನಗಳನ್ನು ತಂದುಕೊಡಲಿದೆ.

ಮೀನ: ಜನ ಸೇವೆಯಲ್ಲಿನ ನಿಮ್ಮ ಕಾರ್ಯಗಳು ಈ ವಾರ ನಿಮ್ಮ ಗೌರವ ಹೆಚ್ಚಿಸಲು ಕಾರಣವಾಗಲಿದೆ. ಶ್ರಮದ ಜೀವಿಯಾದ ನಿಮಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪ್ರತಿ ಹೆಜ್ಜೆಗೂ ಬೆಂಬಲಿಸುವ ಸ್ನೇಹಿತರಿಗೆ ಇನ್ನಷ್ಟು ಆಪ್ತರಾಗುವಿರಿ