ಮೇಷ: ಸಹನೆ, ವಿನಯ ನಿಮ್ಮ ಜೀವನದ ಗುರಿ ಮುಟ್ಟಿಸಲು ಸಹಕಾರಿಯಾಗಲಿದೆ. ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಮಕ್ಕಳಿಗೆ ಓದಿನಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಸೇವಿಸುವ ಆಹಾರದಲ್ಲಿ ಸ್ವಲ್ಪ ಹಿಡಿತ ಹಾಗೂ ಎಚ್ಚರವಹಿಸಿ.

ವೃಷಭ: ಮಕ್ಕಳಲ್ಲಿ ತೀರಾ ಹಠ ಒಳ್ಳೆಯದಲ್ಲ. ಅದರಿಂದ ಪೋಷಕರಿಗೆ ಕಿರಿಕಿರಿ ಸಾಧ್ಯತೆ. ಆದರೆ ಮಕ್ಕಳಿಂದಲೇ ಒಳ್ಳೆಯ ಹೆಸರು ದೊರಕಲಿದೆ. ಪುರುಷರಿಗೆ ಕೆಲಸದ ಒತ್ತಡ ಜಾಸ್ತಿಯಾದರೂ ಅದನ್ನು ಮೀರಿ ಉತ್ತಮ ರೀತಿಯಲ್ಲಿ ಹೊರಬರಲಿದ್ದೀರಿ. ಮನೆಯಲ್ಲಿ ನೆಮ್ಮದಿ ದಿನಗಳು ಈ ವಾರ ಲಭಿಸಲಿದೆ. ವ್ಯಾಪಾರಿಗಳಿ ಲಾಭ ಹಾಗೂ ಶುಭವಾಗಲಿದೆ.

ಮಿಥುನ: ಕೆಲಸ ಕೆಲಸ ಎಂದು ಜಾಸ್ತಿ ಒತ್ತಡ ನೀಡಬೇಡಿ. ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆಗಳು. ಇವೆ. ಮಕ್ಕಳ ಬಗ್ಗೆ ಜಾಗೃತರಾಗಿರಿ. ಮನೆಗೆ ಸ್ನೇಹಿತರ ಆಗಮನ. ಪುರುಷರು ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿದ್ದು, ಪ್ರಯಾಣದ ಬಗ್ಗೆ ಎಚ್ಚರವಿರಲಿ. ಹೊರಗೆ ಹೋಗುವಾಗ ಇಷ್ಟ ದೇವರನ್ನು ನೆನೆದರೆ ಉತ್ತಮ.

ಕಟಕ: ಶಾಂತ ಸ್ವಭಾವದಿಂದ ಎಲ್ಲರ ಮೆಚ್ಚುಗೆಗೆ ಪಾರಾಗುವಿರಿ. ನಿಮ್ಮ ಪರಿಶ್ರಮ ಹಾಗೂ ನಿಷ್ಠೆಗೆ ಮೇಲಕಾರಿಗಳಿಂದ ಬಡ್ತಿ ಸಾಧ್ಯತೆ. ನಿಮ್ಮ ಗುರಿ ಸಾಧನೆಗೆ ಮನೆಯವರಿಂದ ಪ್ರೋಾಕ್ಸಹ ಸಿಗಲಿದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಇರುಸುಮುರುಸು ಆದರೂ ಅದರಿಂದ ಸುಲಭವಾಗಿ ಪಾರಾಗುವಿರಿ.

ಸಿಂಹ: ಎಷ್ಟೇ ಆಪ್ತರಿದ್ದರೂ ನಂಬಿಕೆ ವಿಚಾರದಲ್ಲಿ ಸ್ವಲ್ಪ ಎಚ್ಚರ ಇರಲಿ. ನಂಬಿದವರೇ ನಿಮ್ಮ ಏಳಿಗೆಯನ್ನು ಸಹಿಸದೆ ಬೆನ್ನ ಹಿಂದೆಯೇ ಚೂರಿ ಹಾಕುತ್ತಾರೆ. ವಾರದ ಆರಂಭದಲ್ಲಿ ಕಷ್ಟಗಳು ಎದುರಾಗಬಹುದು. ಒಬ್ಬರೇ ಹೋರಾಡಿ ನಿಮ್ಮ ಜೀವನದಲ್ಲಿ ಸಂ್ಕೃೋಷದ ಕ್ಷಣಗಳು ನಿಮಗೆ ದೊರಕಲಿದೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ.
 
ಕನ್ಯಾ: ಅತಿಯಾದ ಸಿಟ್ಟು ಒಳ್ಳೆಯದಲ್ಲ. ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟು ನಷ್ಟ ಅನುಭವಿಸಬೇಡಿ. ಹೆಚ್ಚಾಗಿ ಸಂಗೀತ ಕೇಳಿ. ಧ್ಯಾನ ಮಾಡಿದರೆ ಮನಸ್ಸಲ್ಲಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಿ. ಗುರುವಿನ ಸಲಹೆ, ಸೂಚನೆ ಪಡೆದು ಒಳ್ಳೆಯದ ದಾರಿಯಲ್ಲಿ ನಡೆದರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ.

ತುಲಾ: ನಿಮ್ಮನ್ನು ನೀವು ಕೀಳಾಗಿ ಭಾವಿಸದಿರಿ. ಅನ್ಯ ರಿಗಿಂತ ನೀವು ಭಿನ್ನ ಎಂದು ತಿಳಿದು ಮುನ್ನುಗ್ಗಿ. ಕೊಡುಗೈ ಗುಣ ಹೊಂದಿರುವ ನೀವು, ಈ ವಾರದಲ್ಲಿ ಪ್ರತಿ ಹೆಜ್ಜೆಗೂ ಜಯವನ್ನು ಪಡೆಯಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ  ಉತ್ತಮ ಬೆಳವಣಿಗೆ. ಅವಿವಾಹಿತರಿಗೆ ಕಂಕಣ ಭಾಗ್ಯ. ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾದರೂ ಹೂಡಿಕೆಯಷ್ಟು ವಾಪಸ್ಸಾಗಲಿದೆ. 

ವೃಶ್ಚಿಕ: ಕೈಗಾರಿಕೋದ್ಯಮಿಗಳಿಗೆ ಉತ್ತಮ ವಾರವಾಗಲಿದೆ. ಕೂಲಿ ಕಾರ್ಮಿಕರಿಗೆ ನಷ್ಟದ ದಿನ ಎದುರಾಗಬಹುದು. ಮನೆಯಲ್ಲಿ ಕಿರಿಕಿರಿ ಎದುರಾದರೂ ನಿಮ್ಮ ಸಹನೆಯಿಂದ ಶಾಂತ ವಾತಾವರಣ ನೆಲೆಸಲಿದೆ. ಮಹಿಳೆಯರು ಧ್ಯಾನ ಮಾಡಿ ಮನಸ್ಸಿನ ದುಗುಡ ದೂರಾಗಿಸಿ. ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ.

ಧನುಸ್ಸು: ಹಣ ಖರ್ಚು ಮಾಡುವಾಗ ಎಚ್ಚರವಿರಲಿ. ಶಾಂತ ಸ್ವಭಾವದವಾರಾದ ನೀವು ನಿಮ್ಮ ಸುತ್ತಲಿನವರಿಗೆ ಆಸರೆಯಾಗಲಿದ್ದೀರಿ. ಸಕಾರಾತ್ಮಕ ಆಲೋಚನೆಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗುವಿರಿ. ಆರೋಗ್ಯದ ಕಡೆ ಎಚ್ಚರ ಇರಲಿ.

ಮಕರ: ನಿರೀಕ್ಷೆಗೂ ಹೆಚ್ಚಿನ ಯಶಸ್ಸು ಈ ವಾರ ನಿಮ್ಮದಾಗಲಿದೆ. ಪುರುಷರ ಉದ್ಯೋಗದಲ್ಲಿ ಹಾಗೂ ಆರ್ಥಿಕ ವಿಚಾರಗಳಲ್ಲಿ ಈ ವಾರ ಸಮಬಲ ಕಾಯ್ದುಕೊಳ್ಳುವಿರಿ. ಮಹಿಳೆಯರು ಬಂದ ಹಣ ವನ್ನು ಹಿಗ್ಗಾಮುಗ್ಗಾ ಖರ್ಚು ಮಾಡದಿರುವುದು ಒಳಿತು.

ಕುಂಭ: ನಿಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸ ಇರಲಿ. ಹಣಕಾಸಿನ ವಿಚಾರದಲ್ಲಿ ತೊಂದರೆ ಸಾಧ್ಯತೆ. ಕಹಿ ಸುದ್ದಿಗಳನ್ನು ಕೇಳಲಿದ್ದೀರಿ. ಸ್ನೇಹಿತರ ಬಗ್ಗೆ ಎಚ್ಚರ ಇರಲಿ. ಯಾರನ್ನೂ ಅತಿಯಾಗಿ ನಂಬುವುದು ಒಳ್ಳೆಯದಲ್ಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ಪಲ್ಷ ಗೊಂದಲ. ದೂರ ಪ್ರಯಾಣ
ಸಾಧ್ಯತೆ. ಆರೋಗ್ಯದಲ್ಲಿ ಏರುಪೇರು.

ಮೀನ: ಗೊತ್ತಿದ್ದು ತಪ್ಪು ಮಾಡುವುದು ಒಳ್ಳೆಯದಲ್ಲ. ಹಣದ ವಿಚಾರದಲ್ಲಿ ಯಾವುದೇ ಕೆಲಸ ಮಾಡುವಾಗ ಆಲೋಚಿಸಿ, ಹಿರಿಯರ ಮಾರ್ಗ
ದರ್ಶನ ಪಡೆದು ಮುಂದುವರೆಯಿರಿ. ಆರೋಗ್ಯದಲ್ಲಿ ಸ್ಥಿರತೆ. ಮನೆಯಲ್ಲಿ ನೆಮ್ಮದಿ. ಬಂಧುಗಳ ಆಗಮನ.