ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ

ಮೇಷ: ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಒತ್ತಡದ ಕೆಲಸಕ್ಕೆ ಸ್ವಲ್ಪ ಬಿಡುವು ಸಿಕ್ಕಂತಾಗುತ್ತದೆ. ಉದ್ಯೋಗ ಹುಡುಕುತ್ತಿರುವ ವರಿಗೆ ಇನ್ನಷ್ಟು ಪ್ರಯತ್ನ ಮಾಡಬೇಕಿದೆ. ಮಹಿಳೆಯರಲ್ಲಿ ಸಣ್ಣಪುಟ್ಟ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ. ಮಕ್ಕಳ ವಿದ್ಯಭ್ಯಾಸದಲ್ಲಿ ಉತ್ತಮ. ವಾರಾಂತ್ಯದಲ್ಲಿ ಸಿಹಿ ಸುದ್ದಿ.

Add Asianetnews Kannada as a Preferred SourcegooglePreferred

ವೃಷಭ: ನಿದ್ರೆ ವಿಚಾರದಲ್ಲಿ ಮೋಸ ಮಾಡಿಕೊಳ್ಳಬೇಡಿ. ಇಲ್ಲವಾದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಣಕಾಸಿನ ವಿಚಾರದಲ್ಲಿ ಬಲಗೈನಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗದಂತೆ ನೋಡಿ ಕೊಳ್ಳಿ. ಎಲ್ಲರನ್ನೂ ಅತಿಯಾಗಿ ನಂಬುವುದು ತರವಲ್ಲ. ಸ್ನೇಹಿತರು ಕೆಲವೊಮ್ಮೆ ಶತ್ರುಗಳೂ ಆಗುತ್ತಾರೆ.

ಮಿಥುನ: ಮನೆಯಲ್ಲಿ ಈ ವಾರ ಶಾಂತಿ ನೆಲೆಸಲಿದ್ದು, ಹೆಚ್ಚು ಸಂತೋಷದಿಂದ ಕೂಡಿರುತ್ತದೆ. ಕಾಲ್ಕೆರದು ಜಗಳಕ್ಕೆ ಬರುವ ಗುಣದವರಿಂದ ದೂರ ಇರುವುದು ಸೂಕ್ತ. ಮನಸ್ಸಲ್ಲಿ ಕಿರಿಕಿರಿ ಎದುರಾದರೂ ಧ್ಯಾನ ಅಥವಾ ದೇಗುಲಕ್ಕೆ ಭೇಟಿ ನೀಡಿ. ಯಾರ ವಿಚಾರಕ್ಕೂ ತಲೆ ಹಾಕದಿರುವುದು ಸೂಕ್ತ.

ಕಟಕ: ಫೋನ್ ನಂಬರ್‌ನಲ್ಲಿ ಒಂದಂಕಿ ಮಿಸ್ ಆದರೂ ಅಪರಿಚಿತರಿಗೆ ಹೋಗುತ್ತದೆ. ಹಾಗೆಯೇ ಮಾತ ನಾಡುವಾಗ ಎಚ್ಚರ ಇರಲಿ. ನಿಮ್ಮ ಮಾತು ಬೇರೆ ರೀತಿ ಅರ್ಥೈಸಿದರೆ ಇನ್ನೊಬ್ಬರು ಮತ್ತೇನೋ ತಿಳಿಯ ಬಹುದು. ಹೊಸ ಕೆಲಸಗಳು ಈ ವಾರ ಯಶಸ್ವಿಯಾಗೇ ಪೂರ್ಣವಾಗಲಿದೆ. ಮಕ್ಕಳ ಆರೋಗ್ಯ ಬಗ್ಗೆ ಎಚ್ಚರ.

ಸಿಂಹ: ಮರಳಿನಲ್ಲಿ ಇಂಗಿದ ನೀರು ಹೇಗೆ ಮರಳಿ ಪಡೆಯಲು ಸಾಧ್ಯವಿಲ್ಲವೊ ಹಾಗೆ ಕಳೆದು ಹೋದ ವಸ್ತುವೂ ಸಹ. ಕಳೆದು ಹೋದವರ ಬಗ್ಗೆ, ದೂರಾದವರ ಬಗ್ಗೆ ಚಿಂತಿಸಿ ಇಂದಿನ ಸಂತೋಷದ ದಿನಗಳನ್ನು ಕಳೆದುಕೊಳ್ಳದಿರಿ. ವಾರಾಂತ್ಯದಲ್ಲಿ ಕುಟುಂಬ ಸಮೇತ ದೂರದ ಊರಿಗೆ ಪ್ರಯಾಣ ಸಾಧ್ಯತೆ.

ಕನ್ಯಾ: ಸ್ನೇಹಿತರನ್ನು ಜಾಸ್ತಿ ಹಚ್ಚಿಕೊಳ್ಳುವುದು ಸೂಕ್ತವಲ್ಲ. ಕೆಲ ಸಂದರ್ಭದಲ್ಲಿ ಅವರಿಂದಲೇ ತೊಂದರೆ ಸಾಧ್ಯತೆ. ಈ ವಾರವೂ ನಿಮ್ಮ ಶ್ರದ್ಧೆ ನಿಷ್ಠೆಯ ಕೆಲಸ ಮುಂದುವರಿಯಲಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಕೆಲ ಅವಕಾಶಗಳು ಬಳಿಬಂದಲ್ಲಿ ಅದನ್ನು ನಿರಾಕರಿಸದಿರುವುದು ಒಳಿತು. ಶುಭ ವಾರ.

ದೀಪಾವಳಿಯಲ್ಲಿ ದೀಪಗಳನ್ನು ಯಾಕಾಗಿ ಹಚ್ಚಬೇಕು? ಏನಿದರ ಮಹತ್ವ?

ತುಲಾ: ಕೆಲಸದಲ್ಲಿ ಕಣ್ಣ ಮುಚ್ಚಲೆ ಬೇಡ. ಸಿಕ್ಕಿಹಾಕಿಕೊಂಡಲ್ಲಿ ನಿಮ್ಮ ಮರ್ಯಾದೆ ನೀವೇ ತೆಗೆದುಕೊಂಡಂತಾಗುತ್ತದೆ. ಯಾರ ಮಾತಿಗೂ ಕಿವಿಗೊಡದೆ ನೀವು ಆರಂಭಿಸಬೇಕೆಂದುಕೊಂಡ ಕೆಲಸವನ್ನು ಧೈರ್ಯ ದಿಂದ ಒಳ್ಳೆಯ ಮನಸ್ಸಿನಿಂದ ಆರಂಭಿಸಿದರೆ ಮುಂದೆ ಶುಭವಾಗಲಿದೆ. ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕ: ಮನೆಯಲ್ಲಿ ಈ ವಾರ ಅರ್ಧ ಸಂತೋಷ ಅರ್ಧ ದುಃಖ ಇರಲಿದೆ. ಕಹಿ ಅನುಭವ ಈ ವಾರ ಆಗಲಿದ್ದು, ಅದನ್ನು ಉತ್ತಮ ರೀತಿಯಲ್ಲೇ ಎದುರಿಸಿ ಮುಂದೆ ಬರಲಿದ್ದೀರಿ. ನಿಮ್ಮ ಪ್ರೋತ್ಸಾಹ ಮಕ್ಕಳನ್ನು ಹುರಿದುಂಬಿಸುವುದರಿಂದ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ಅನುಕೂಲವಾಗಲಿದೆ.

ಧನುಸ್ಸು: ಕೆಲಸದಲ್ಲಿ ಮಾಡಿದ್ದೆಲ್ಲಾ ಸರಿ ಎನ್ನುವ ನಿಮ್ಮ ಮೊಂಡು ವಾದಕ್ಕೆ ಈ ವಾರ ಭಾರೀ ಹೊಡೆತ ಬೀಳಲಿದೆ. ಈಗಾದರೂ ಎಚ್ಚೆತ್ತು ಮುನ್ನಡೆ ಯುವುದು ಒಳಿತು. ಕಷ್ಟ ಎದುರಾದಾಗ ಮಕ್ಕಳೇ ನಿಮ್ಮ ತೋಳ್ಬಲದಂತೆ ನಿಲ್ಲುವರು. ಮನೆಯಲ್ಲಿ ಸಂತಸ.

ಮಕರ: ಹಿರಿಯರ ಮಾರ್ಗದರ್ಶನ ನಿಮ್ಮ ಗುರಿ ಸಾಧನೆಗೆ ಸರಿ ದಾರಿ ತೋರಲಿದೆ. ಯಾವುದೇ ಕೆಲಸ ಆರಂಭಿಸುವ ಮುನ್ನ ಹಿರಿಯರನ್ನು ಕೇಳಿ ತೀರ್ಮಾನಿಸಿ. ಮಹಿಳೆಯರಿಗೆ ಈ ವಾರ ಲಾಭದಾಯಕವಾಗಿದ್ದು, ಅದು ಸದುದ್ದೇಶಕ್ಕೆ ಬಳಕೆಯಾಗಲಿದೆ.

ಕುಂಭ: ಕಡ್ಡಿ ತುಂಡಾದರೆ ಹೇಗೆ ಜೋಡಿಸಲು ಅಸಾಧ್ಯ ವೋ ಹಾಗೇ ಕಟುವಾದ ಮಾತಿನಿಂದ ಒಡೆದ ಮನಸ್ಸು ಜೋಡಿಸುವುದು ಸಾಧ್ಯವಿಲ್ಲ. ಹಿಂದಿನ ವಾರ ಮಾಡಿದ ತಪ್ಪು ಈ ವಾರ ಮರುಕಳಿಸುವ ಸಾಧ್ಯತೆ. ಎಚ್ಚರಿಕೆಯ ಹೆಜ್ಜೆ ಇಡುವುದು ಒಳಿತು. ನಿಮ್ಮ ನಿರ್ಧಾರ ಕುಟುಂಬಕ್ಕೆ ಉತ್ತಮ ದಿನಗಳನ್ನು ತಂದುಕೊಡಲಿದೆ.

ಮೀನ: ಜನ ಸೇವೆಯಲ್ಲಿನ ನಿಮ್ಮ ಕಾರ್ಯಗಳು ಈ ವಾರ ನಿಮ್ಮ ಗೌರವ ಹೆಚ್ಚಿಸಲು ಕಾರಣವಾಗಲಿದೆ. ಶ್ರಮದ ಜೀವಿಯಾದ ನಿಮಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪ್ರತಿ ಹೆಜ್ಜೆಗೂ ಬೆಂಬಲಿಸುವ ಸ್ನೇಹಿತರಿಗೆ ಇನ್ನಷ್ಟು ಆಪ್ತರಾಗುವಿರಿ