Asianet Suvarna News Asianet Suvarna News

ವಾರ ಭವಿಷ್ಯ: ಈ ರಾಶಿಯವರು ನಿಮಗಿಷ್ಟವಾದ ವಸ್ತುಗಳನ್ನು ಖರೀದಿಸುವಿರಿ

ವೃತ್ತಿಯಲ್ಲಿ ಕಿರಿಕ್ ಬರಬಹುದು. ಹುಷಾರಾಗಿರಿ. ವಾರದ ಕೊನೆಗೆ ಎಲ್ಲ ಸರಿಹೋಗಿತ್ತೆ. ಆರೋಗ್ಯದ ಬಗ್ಗೆ ಭಯ ಬೇಡ. ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಖುಷಿಯಾರುತ್ತೀರ. ಪ್ರೇಮೋದಯವಾಗಬಹುದು, ಆದರೆ ಮತ್ತೊಂದು ಬದಿಯಿಂದ ಸಕತ್ ಖಾರದ ರೆಸ್ಪಾನ್ಸ್ ಬರೋ ಸಾಧ್ಯತೆ ಇದೆ. ಯಾವುದಕ್ಕೂ ಯೋಚಿಸಿ ಮುನ್ನಡೆಯಿರಿ.

Weekly  horoscope in Kannada of November 18 to 24, 2018
Author
Bengaluru, First Published Nov 18, 2018, 7:26 AM IST

ಮೇಷ: ತುಸು ದುಡುಕು ಪ್ರವೃತ್ತಿಯ, ಯಜಮಾನಿಕೆಯ ಸ್ವಭಾವ ನಿಮ್ಮದು. ಈ ವಾರ ನಿಮ್ಮ ಭಾಗ್ಯದ ವಾರ. ಉದ್ಯೋಗದಲ್ಲಿ ಪ್ರಗತಿ ಇದೆ. ಆರೋಗ್ಯ ಬಹಳ ಚೆನ್ನಾಗಿರುತ್ತೆ. ನೀವು ಮ್ಯಾನೇಜ್ ಮಾಡುವ ಕೆಲಸಗಳಲ್ಲೆಲ್ಲ ಜಯ. ಸಂಗಾತಿಗೂ ಖುಷಿ. ನಿಮಗಿಷ್ಟವಾದ ವಸ್ತು ಖರೀದಿಸುವ ಯೋಗ. ಸೋ ಹ್ಯಾಪಿಯಾಗಿರಿ.

ವೃಷಭ: ವೃತ್ತಿಯಲ್ಲಿ ಕಿರಿಕ್ ಬರಬಹುದು. ಹುಷಾರಾಗಿರಿ. ವಾರದ ಕೊನೆಗೆ ಎಲ್ಲ ಸರಿಹೋಗಿತ್ತೆ. ಆರೋಗ್ಯದ ಬಗ್ಗೆ ಭಯ ಬೇಡ. ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಖುಷಿಯಾರುತ್ತೀರ. ಪ್ರೇಮೋದಯವಾಗಬಹುದು, ಆದರೆ ಮತ್ತೊಂದು ಬದಿಯಿಂದ ಸಕತ್ ಖಾರದ ರೆಸ್ಪಾನ್ಸ್ ಬರೋ ಸಾಧ್ಯತೆ ಇದೆ. ಯಾವುದಕ್ಕೂ ಯೋಚಿಸಿ ಮುನ್ನಡೆಯಿರಿ.

ಮಿಥುನ: ಈ ವಾರ ಅಂದುಕೊಂಡದ್ದು ಆಗೋದು ಕಷ್ಟ. ಕೆಲಸ, ಆರೋಗ್ಯ, ಕೌಟುಂಬಿಕ ವಿಚಾರಗಳಲ್ಲಿ ಹಿನ್ನಡೆ. ನಿರಾಶರಾಗಬೇಡಿ. ಮುಂದೆ ಉತ್ತಮ ಫಲ ಇದ್ದೇ ಇರುತ್ತೆ. ಮಂಗಳ ಗ್ರಹದ ಸಪೋರ್ಟ್‌ನಿಂದ ಸ್ವಲ್ಪ ರಿಲೀಫ್, ಹುರುಪು. ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಇರಲಿ ಅಂದುಕೊಂಡು ಮುಂದುವರಿಯಿರಿ.

ಕಟಕ:ಸಂಬಂಧದ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಬರಬಹುದು. ಸಹನೆಯಿಂದ ವರ್ತಿಸುವುದು ಕಲಿಯಿರಿ. ಉದ್ಯೋಗದಲ್ಲಿ ಮತ್ತೊಂದು ಸ್ತರಕ್ಕೆ ಬೆಳೆದು
ಆತ್ಮವಿಶ್ವಾಸ ಹೆಚ್ಚುತ್ತೆ. ಬ್ಯುಸಿನೆಸ್ ಕ್ಷೇತ್ರದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಪ್ರಗತಿಯಿದೆ.

ಸಿಂಹ: ಬ್ಯುಸಿನೆಸ್ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆ ಎದುರಾಗಬಹುದು. ಚಾಲೆಂಜ್‌ಅನ್ನು ಅಂಗೀಕರಿಸಿ. ಕಷ್ಟಪಟ್ಟರೆ ಫಲ ಯಾರಿಗೆ ಸಿಗಲ್ಲ ಹೇಳಿ. ಆರ್ಥಿಕತೆ ಕುಸಿಯಬಹುದು, ನಿಮ್ಮ ಉಳಿತಾಯ
ಸಹಾಯಕ್ಕೆ ಬರುತ್ತೆ. ಧೃತಿಗೆಡದೇ ಸ್ಥಿರವಾಗಿರಿ, ಯಾರಿಗೂ ನಿಮ್ಮನ್ನು ಅಲ್ಲಾಡಿಸಕ್ಕಾಗಲ್ಲ.

ಕನ್ಯಾ: ಕೆಲಸ ಕಷ್ಟವಾಗಬಹುದು, ಗುರಿ ದೂರಹೋಗಬಹುದು, ಆದರೆ ನಿಮ್ಮ ತಾಕತ್ತಿಗೆ ಇದು ದೊಡ್ಡ ವಿಚಾರವೇ ಅಲ್ಲ. ಸೋಮಾರಿತನ ಬಿಟ್ಟು ಮುಂದುವರಿದರೆ ಜಯ ಶತಃಸಿದ್ಧ. ಸಂಬಂಧದ ವಿಷಯದಲ್ಲಿ ಕಟುವಾಗಿ ವರ್ತಿಸಬೇಡಿ. ಮನಸ್ಸಿಗೆ ಕಿರಿಕಿರಿ ಇದ್ದರೂ ಅದನ್ನು ಮೀರಿ ನಡೆಯಲು ಕಲಿಯೋದು ಮುಖ್ಯ.

ತುಲಾ: ನೀವು ಬಹಳ ಪ್ರೀತಿಸುವವರಿಗೆ ಸಹಾಯ ಮಾಡುವ ಅವಕಾಶ. ಇದರಿಂದ ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಹೆಚ್ಚುತ್ತೆ. ಸಹೋದರರ ಜೊತೆ ಬಾಂಧವ್ಯ ವೃದ್ಧಿ. ನಿರಾಸೆಯೇ ಹೆಚ್ಚಾಗಿದ್ದ ಬದುಕಿನಲ್ಲಿ ಈಗ ಭರವಸೆಯ ಬೆಳಕು ಮೂಡಬಹುದು. ಎಲ್ಲ ವಿಷಯಗಳಲ್ಲೂ ಖುಷಿ, ನೆಮ್ಮದಿ ಹೆಚ್ಚಬಹುದು. ಬಿ ಹ್ಯಾಪಿ.

ವೃಶ್ಚಿಕ: ಗುರು ಮತ್ತು ಬುಧ ಗ್ರಹ ಎರಡನೇ ಮನೆ ಪ್ರವೇಶಿಸುವ ಕಾರಣ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಮನೆ, ಕೌಟುಂಬಿಕ ವಿಷಯಗಳು ತುಸು ದುಬಾರಿಯಾಗಲಿವೆ. ಕೆಲಸ, ಒತ್ತಡ ಸ್ವಲ್ಪ ಜಾಸ್ತಿ. ಬೌದ್ಧಿಕ ವಲಯದಲ್ಲಿ ನಿಮ್ಮ ವಿಚಾರಗಳಿಗೆ ಮಾನ್ಯತೆ ಸಿಗಲಿದೆ. ಸೀರಿಯಸ್ ಮುಖದಲ್ಲಿ ಮುಗುಳ್ನಗೆ ಮೂಡಲಿ.

ಧನುಸ್ಸು: ಆರ್ಥಿಕ ವಿಚಾರಗಳಲ್ಲಿ ಬಹಳ ಜಾಗ್ರತೆ ಬೇಕು. ಸಣ್ಣ ಎಡವಟ್ಟೂ ದೊಡ್ಡ ಹಾನಿಗೆ ಕಾರಣವಾಗಬಹುದು. ಸಂಬಂಧದ ವಿಷಯದಲ್ಲೂ ದೊಡ್ಡ ಪಾಠ ಕಲಿಯಬಹುದು. ಹುಂಬತನ
ಬೇಡ, ತಾಳ್ಮೆಯಿಂದಿರಿ. ನಿಮ್ಮ ನಗುಮುಖವೇ ನಿಮಗೆ ಮಿತ್ರ

ಮಕರ: ತುಸು ಹಿಂಜರಿಕೆ ಸ್ವಭಾವ ನಿಮ್ಮದಾಗಿರುವ ಕಾರಣ ಹೊಸ ಸವಾಲುಗಳನ್ನು ಒಪ್ಪಿಕೊಳ್ಳೋದು ಕಷ್ಟ. ಹೀಗಾದರೇ ನಿಮಗೇ ನಷ್ಟ, ಆರ್ಥಿಕತೆಯಲ್ಲಿ ಅಸ್ಥಿರತೆ. ಹಾಗಂತ ನಷ್ಟವಿಲ್ಲ. ವಾರದ ಕೊನೆಗೆ ಹಣಕಾಸು ಸುಗಮ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ಕುಂಭ: ಅನಗತ್ಯ ಚಿಂತೆಗಳೇ ನಿಮ್ಮನ್ನು ಕುಗ್ಗಿಸುವುದು. ಸಕಾರಾತ್ಮಕ ನಡೆ ಈ ದಿನವೇ ರೂಢಿಸಿಕೊಳ್ಳಿ. ದುಬಾರಿ ವಸ್ತು ಖರೀದಿ, ಆದರೆ ಅವುಗಳಿಂದಲೇ ಸರ್ಪೈಸ್ ಕಾದಿರುತ್ತದೆ. ಉದ್ಯೋಗದಲ್ಲಿ ಸ್ಥಿರತೆ. ಆತಂಕ ಇರಲ್ಲ. ಹಾಗಂತ ನಿಮಗೆ ನೀವೇ ಆತಂಕ ಸೃಷ್ಟಿಸಿಕೊಂಡರೆ ನಾವೇನೂ ಮಾಡಲಿಕ್ಕಾಗುವುದಿಲ್ಲ.

ಮೀನ: ಹಣಕಾಸು ವಹಿವಾಟಿಗೆ ಈ ವಾರ ಉತ್ತಮ. ಹಣದ ಹರಿವು ಹೆಚ್ಚುತ್ತೆ. ಜಾಸ್ತಿ ಎಮೋಶನಲ್ ಆಗಬೇಡಿ. ಅಚ್ಚರಿಯ ಸುದ್ದಿಯೊಂದು ನಿಮಗಾಗಿ ಕಾದಿರುತ್ತೆ. ನಿಮ್ಮ ಖುಷಿ ಹೆಚ್ಚಾಗುತ್ತೆ. ಕೌಟುಂಬಿಕ ಭಿನ್ನಾಭಿಪ್ರಾಯಕ್ಕೂ ಕೊನೆ ಹಾಡುವ ದಿನ ದೂರವಿಲ್ಲ.
 

Follow Us:
Download App:
  • android
  • ios