ಮೇಷ
ನಿಮ್ಮಲ್ಲಿರುವ ಸಂತೋಷವನ್ನು ಇತರರಿಗೂ ಹಂಚಿ.
ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ
ಮನಸ್ಸಿನೊಂದಿಗೆ ಕಾರ್ಯದಲ್ಲಿ ತೊಡಗಿ.  ಕಡೆಗೆ
ಒಳ್ಳೆಯ ಫಲ ಪಡೆಯಲಿದ್ದೀರಿ. ಸುಂದರ ಕ್ಷಣಗಳು
ಎದುರಾಗಲಿವೆ. ಮೊಕ್ತಬ್ಬರ ಬಗ್ಗೆ ಕೆಟ್ಟದಾಗಿ
ಮಾತನಾಡುವುದು ಬೇಡ. ಲಾಭದ ನಿರೀಕ್ಷೆ ಹೆಚ್ಚಲಿದೆ.

ವೃಷಭ
ಮಕ್ಕಳ ಆರೋಗ್ಯದ ಕಡೆ ನಿಗಾ ಇರಲಿ. ಹಿರಿಯ
ಅಧಿಕಾರಿಗಳಿಂದ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ
ದೊರೆಯಲಿದೆ. ನೀವು ಹೇಳಿದ್ದೇ ನಡೆಯಬೇಕು
ಎನ್ನುವ ಸ್ವಭಾವ ಬೇಡ. ಮತ್ತೊಬ್ಬರ ಮಾತಿಗೂ ಬೆಲೆ ನೀಡಿ.
ಆಭರಣ ಕೊಳ್ಳುವ ಸಾಧ್ಯತೆ ಹೆಚ್ಚಾಗಲಿದೆ. ಹೊಸ ಮೊಬೈಲ್
ಕೊಳ್ಳಲಿದ್ದೀರಿ. ಶುಭ ಕಾರ್ಯಗಳು ಮುಂದೂಡಲ್ಪಡಲಿವೆ.

ಮಿಥುನ
ಹತ್ತಿರ ಬಂಧುಗಳಿಂದ ಆರ್ಥಿಕ ಸಹಕಾರ
ದೊರೆಯಲಿದೆ.  ಪರಸ್ಥಳಗಳಿಗೆ
ಭೇಟಿ ನೀಡುವಿರಿ. ಸೂಕ್ತ ಸಮಯದಲ್ಲಿ ಕೂಡಿಟ್ಟ
ಹಣಕಾಸು ಇಂದು ನೆರವಿಗೆ ಬರಲಿದೆ.  ಸರಕಾರಿ
ಕೆಲಸಗಳಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಕಟಕ
ನಿಮ್ಮ ಬಗ್ಗೆ ಬರುವ ಮಾತುಗಳಿಗೆ  ಕಿವಿ
ಕೊಡುವುದು ಬೇಡ. ಅಂದುಕೊಂಡ ಕಾರ್ಯಗಳು
ಈ ವಾರದಲ್ಲಿ ಕೈಗೂಡಲಿವೆ. ಮಕ್ಕಳ, ಅಣ್ಣನ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯುಂಟಾಗಲಿದೆ. ಸ್ವಂತ 
ವ್ಯವಹಾರ ನಡೆಸುವವರಿಗೆ ಇದು ಶುಭ ಕಾಲ.

ಸಿಂಹ
ಸಾಕಷ್ಟು ದುಡಿದರೂ ಸಿಗುವ ಪ್ರತ್ಫಿಲ
ಕಡಿಮೆಯಾಗಲಿದೆ. ಆದರೆ ಮುಂದಿನ ದಿನಗಳಲ್ಲಿ
ಇದರಿಂದ ಫಲ ದೊರೆಯಲಿದೆ.
ಎಲ್ಲರನ್ನೂ ಸಮಾನವಾಗಿ ಕಾಣುವಿರಿ. 

ಕನ್ಯಾ
ನಿಮ್ಮ ಕೆಲಸದ ಬಗ್ಗೆ ಆತ್ಮ ವಿಶ್ವಾಸ ಇರಲಿ. ಹಿರಿಯರು ಸೂಚಿಸಿದ
ರೀತಿಯಲ್ಲಿ ಮುನ್ನಡೆಯಿರಿ. ಹೊಸ ಬೈಕ್ ಕೊಳ್ಳುವ
ಯೋಚನೆ ಮುಂದೆ ಹೋಗಲಿದೆ. ಮನೆ ನಿರ್ಮಾಣ ಕಾರ್ಯ
ಮುಂದೆ ಸಾಗಲಿದೆ. 

ತುಲಾ
ಮತ್ತೊಬ್ಬರ ಪ್ರಗತಿ ಕಂಡು ಹೊಟ್ಟೆ ಉರಿದುಕೊಳ್ಳದಿರಿ, ನಿಮ್ಮ ದಾರಿಯಲ್ಲಿ
ಮುಂದೆ ಸಾಗಿ

ವೃಶ್ಚಿಕ
ಅಲೆದಾಡುವುದು ತಪ್ಪಲಿದೆ. ಕುಟುಂಬದೊಂದಿಗೆ
ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿಲಿದ್ದೀರಿ.
ಸಾಕಷ್ಟು ಸಹಾಯಗಳು ಹರಿದು ಬರಲಿವೆ.  ಸಾಂಸ್ಕೃತಿಕ ಕಾರ್ಯಕ್ರಮಗಳ
ಮುಂದಾಳತ್ವ ವಹಿಸಲಿದ್ದೀರಿ.


ಧನಸ್ಸು
ನೀವು ನಿರೀಕ್ಷೆ ಮಾಡಿದ್ದಷ್ಟು ಕೆಲಸ ಈ ವಾರ
ಸಾಧ್ಯವಾಗಲಿದೆ.  ನಾಲ್ಕು
ಜನಕ್ಕೆ ಸಹಾಯ ಮಾಡುವಿರಿ. ಹಣಕಾಸಿನ
ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು. ಸಾಕಷ್ಟು
ಸಮಯಾವಕಾಶ ದೊರೆಯಲಿದೆ.

ಮಕರ
ಸ್ವಂತ ವ್ಯಾಪಾರ ಮಾಡುವವರಿಗೆ ಒಳ್ಳೆಯ
ಆದಾಯ ದೊರೆಯಲಿದೆ.  ಟ್ಯಾಕ್ಸ್ ಗಳನ್ನು
ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ. ಕಾನೂನು
ಉಲ್ಲಂಘನೆ ಮಾಡುವುದು ಬೇಡ. ಕೋರ್ ವ್ಯಾಜ್ಯಗಳಿಂದ
ಮುಕ್ತಿ ದೊರೆಯಲಿದೆ. ಹಿಡಿದ ಕೆಲಸದಲ್ಲಿ ಜಯ ಸಿಗಲಿದೆ.

ಕುಂಭ
ಮಾಡುವ ಕೆಲಸ ಕೈತಪ್ಪುವುದು ಎಂದು ತಿಳಿದ ಮೇಲೆ
ಅದನ್ನು ಮುಂದುವರೆಸುವುದು ಬೇಡ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದ
ವಿಚಾರದಲ್ಲಿ ಅಗತ್ಯ ಜಾಗೃತಿ ಇರಲಿ. ಮನೆಯಲ್ಲಿ ಶಾಂತಿ
ನೆಲೆಯಾಗಲಿದೆ. ದೂರದ ಬಂಧುಗಳು ಆಗಮಿಸಲಿದ್ದಾರೆ.
ದುಡುಕು ಸ್ವಾಭಾವವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ.

ಮೀನ
ನಿಮ್ಮ ಪ್ರಾಮಾಣಿಕ ಸೇವೆಗೆ ಖಂಡಿತವಾಗಿಯೂ
ಫಲ ದೊರೆಯಲಿದೆ. ನಂಬಿಕೆಯಿಂದ ವ್ಯವಹಾರ
ಮಾಡಿ. ಹೊಸ ವಸ್ತುಗಳನ್ನು ಕೊಳ್ಳುವಾಗ ಸೂಕ್ತ
ಪರೀಕ್ಷೆ ಮಾಡಿಕೊಳ್ಳಿ. ಹಾಲು ಜೇನಿನಂತೆ ನಿಮ್ಮ ಸಂಸಾರ
ಇರಲಿದೆ. ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯವಿದೆ.