Asianet Suvarna News Asianet Suvarna News

ಹೇಗಿದೆ ಈ ವಾರದ ನಿಮ್ಮ ಭವಿಷ್ಯ

ಹೇಗಿದೆ ಈ ವಾರದ ನಿಮ್ಮ ಭವಿಷ್ಯ

Weekly Horoscope August 12
Author
Bengaluru, First Published Aug 12, 2018, 7:06 AM IST

ಮೇಷ
ದೂರದಲ್ಲಿರುವ ಮಕ್ಕಳು ಮನೆಗೆ ಬರಲಿದ್ದಾರೆ.
ಆದಾಯದಲ್ಲಿ ಏರಿಕೆ. ರೈತರಿಗೆ ಉತ್ತಮ ಮಳೆಯಿಂದ
ಅನುಕೂಲವಾಗಲಿದೆ. ಮಾತಿನಲ್ಲಿ ಸ್ಪಷ್ಟತೆ ಇರಲಿ.
ಹಿರಿಯರ ಮಾತಿಗೆ ಗೌರವ ನೀಡಿ. ಅದರ ಜೊತೆಗೆ ನಿಮ್ಮ
ನಿರ್ಧಾರವನ್ನೂ ಗಟ್ಟಿ ಮಾಡಿಕೊಳ್ಳುವುದು ಸೂಕ್ತ. ಸ್ನೇಹಿತರ
ವಲಯದಿಂದ ಪ್ರಶಂಸೆ ಸಿಗಲಿದೆ. ಶ್ರಾವಣದಲ್ಲಿ ಶುಭಫಲ.

ವೃಷಭ
ಈ ವಾರ ಸಕಾರಾತ್ಮಕವಾಗಿರುವಿರಿ. ಆಸಕ್ತಿಯ
ಕ್ಷೇತ್ರಗಳಲ್ಲಿ ಪ್ರಗತಿ ದೊರೆಯಲಿದೆ. ಯುವಕರಿಗೆ
ಉದ್ಯೋಗ ದೊರೆಯಲಿದೆ. ಆಟೋಟಗಳಲ್ಲಿ ಆಸಕ್ತಿ
ಹೆಚ್ಚಲಿದೆ. ಮನೆಗೆ ಹೊಸ ಅತಿಥಿಗಳ ಆಗಮನ. ಸೂಕ್ತ
ನಿರ್ಧಾರಗಳಿಂದ ಅಧಿಕ ಲಾಭ. ತಂದೆ, ತಾಯಿಯ ಮಾತಿಗೆ
ಹೆಚ್ಚು ಮಹತ್ವ ಬರಲಿದೆ. ಅಂದುಕೊಂಡ ಕಾರ್ಯ ಸಿದ್ಧಿ

ಮಿಥುನ
ಒಮ್ಮೆ ತೆಗೆದು ಕೊಂಡ ನಿರ್ಧಾರದಿಂದ ಮತ್ತೆ ಹಿಂದೆ
ಸರಿಯುವುದು ಬೇಡ. ವಿವಿಧ ಕ್ಷೇತ್ರದ ಗಣ್ಯರನ್ನು
ಭೇಟಿ ಮಾಡುವ ಅವಕಾಶ. ಪ್ರತಿ ಯೊಬ್ಬರನ್ನೂ
ಪ್ರೀತಿಯಿಂದ ಕಾಣಿ. ಆಹಾರ ಸೇವನೆಯಲ್ಲಿ ಮಿತಿ ಇರಲಿ.
ಹೆಚ್ಚಿನ ಕೆಲಸದ ಒತ್ತಡದಿಂದ ಹೊರ ಬರುವಿರಿ. ಆರೋಗ್ಯದಲ್ಲಿ
ಸ್ಥಿರತೆ ಏರ್ಪಡಲಿದೆ. ನಿಮ್ಮ ಆಲೋಚನೆಗಳಿಗೆ ಮನ್ನಣೆ.

ಕಟಕ
ವೈದ್ಯರ ಸಲಹೆಯನ್ನು ಸರಿಯಾಗಿ ಪಾಲನೆ ಮಾಡಿ.
ವ್ಯಾಪಾರಿಗಳಿಗೆ ಕೊಂಚ ನಷ್ಟ. ನಗರ ವಾಸಿಗಳಿಗೆ
ಹೊಸ ಉದ್ಯೋಗಾವಕಾಶಗಳ ಬಾಗಿಲು
ತೆರೆಯಲಿದೆ. ಶ್ರಾವಣದಲ್ಲಿ ಕಂಕಣ ಭಾಗ್ಯ. ಮೆಚ್ಚಿದ ಸಂಗಾತಿ
ಯೊಂದಿಗೆ ಬಾಳುವೆ. ಕಣ್ಣಿನ ಆರೋಗ್ಯದಲ್ಲಿ ಕೊಂಚ ವ್ಯತ್ಯಯ
ಉಂಟಾಗಲಿದೆ. ಶುಭಕಾರ್ಯಕ್ಕೆ ಒಳ್ಳೆಯ ಸಮಯ.

ಸಿಂಹ
ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ತಂದೆ
ತಾಯಿಯ ಸಲಹೆ ಪಡೆಯಿರಿ. ತಮ್ಮನೊಂದಿಗೆ
ಹಣಕಾಸಿನ ವಿಚಾರದಲ್ಲಿ ಗೊಂದಲ. ದೂರದ
ಬಂಧುಗಳು ಹತ್ತಿರವಾಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿರುವವ
ರಿಗೆ ಅವಕಾಶಗಳು ಹೆಚ್ಚಾಗಲಿವೆ. ಖರ್ಚಿನಲ್ಲಿ ಏರು ಪೇರು.
ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಿರಿ.

ಕನ್ಯಾ
ಆರೋಗ್ಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ.
ಹಿರಿಯರ ಆಶೀರ್ವಾದದಿಂದ ಪ್ರಗತಿ. ಬಂಧು
ಬಳಗವೆಲ್ಲಾ ಒಟ್ಟಿಗೆ ಸೇರುವುದು. ಸಂತಸಕ್ಕೆ ಸಾಕಷ್ಟು
ಕಾರಣಗಳು ಸಿಕ್ಕಲಿವೆ. ಬದ್ಧತೆಯಿಂದ ಮಾಡುವ ಕೆಲಸದಿಂದ
ಹೆಚ್ಚು ಪ್ರಸಿದ್ಧಿ ಹೊಂದುವಿರಿ. ಗೆಳೆಯರ ಸಹಾಯದಿಂದ ಹೊಸ
ವಾಹನ ಕೊಳ್ಳುವಿರಿ. ಓದಿನಲ್ಲಿ ಪ್ರಗತಿ. 

ತುಲಾ
ಮಾತಿನ ಮೇಲೆ ಹೆಚ್ಚು ಹಿಡಿತವಿರಲಿ. ನೆಮ್ಮದಿಯು
ಹೆಚ್ಚಾಗಲಿದೆ. ಜಾಣತನದಿಂದ ಹಿಡಿದ ಕೆಲಸದಲ್ಲಿ
ಉನ್ನತಿ ಸಾಧಿಸುವಿರಿ. ಮಕ್ಕಳ ಆರೋಗ್ಯದಲ್ಲಿ
ಕೊಂಚ ಏರುಪೇರಾಗಲಿದೆ. ಆತ್ಮೀಯರ ಸಾಧನೆಯಿಂದ
ಸಂತೋಷ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ
ಉಂಟಾಗಲಿದೆ. ಗಣೇಶನ ಆರಾಧನೆ ಮಾಡಿ.

ವೃಶ್ಚಿಕ
ಸಣ್ಣ ಉದ್ದಿಮೆದಾರರಿಗೆ ಸಾಲದ ಹೊರೆ
ಹೆಚ್ಚಾಗಲಿದೆ. ಮಾನಸಿಕ ಸ್ಥೈರ್ಯದಿಂದ
ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಿರಿ.
ವ್ಯಾಪಾರದಲ್ಲಿ ಪ್ರಗತಿ. ತಂದೆಯ ಮಾರ್ಗದರ್ಶನದಲ್ಲಿ
ನಡೆಯುವುದು ಸೂಕ್ತ. ಶ್ರಾವಣ ಮಾಸದಲ್ಲಿ ಶುಭ ಫಲಗಳನ್ನು
ಪಡೆದುಕೊಳ್ಳುವಿರಿ. ದಾಂಪತ್ಯದಲ್ಲಿ ವಿರಸಗಳು ಮಾಯ.

ಧನಸ್ಸು
ಬ್ಯಾಂಕ್ ಸಾಲ, ಇಎಂಐಗಳಿಂದ ಸಾಧ್ಯ
ವಾದಷ್ಟು ದೂರ ಇರಲು ಪ್ರಯತ್ನಿಸಿ. ಮದುವೆ
ಮೊದಲಾದ ಶುಭ ಕಾರ್ಯಗಳಿಗೆ ಮುಂದಾಗುವಿರಿ.
ದೈಹಿಕವಾಗಿ ಸದೃಢರಾಗುವಿರಿ. ಆರ್ಥಿಕ ಸಮಸ್ಯೆಗಳು ಸ್ವಲ್ಪ
ಸ್ವಲ್ಪವಾಗಿ ಕಡಿಮೆಯಾಗುತ್ತಾ ಸಾಗಲಿವೆ. 

ಮಕರ
ಕೆಲಸದಲ್ಲಿ ಪ್ರಗತಿ. ಹೊಸ ವಸ್ತುಗಳನ್ನು ಕೊಳ್ಳುವ
ಕನಸು ಈಡೇರಲಿದೆ. ಒಳ್ಳೆಯ ವಿಚಾರಗಳಿಗೆ ಹೆಚ್ಚು
ಪ್ರಾಮುಖ್ಯತೆ ನೀಡಿ. ಮತ್ತೊಬ್ಬರನ್ನು ಹಗುರವಾಗಿ
ಕಾಣುವುದು ಬೇಡ. ಸಾಧ್ಯವಾದಷ್ಟು ಮೌನವಾಗಿರುವುದು
ಒಳಿತು. ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. 

ಕುಂಭ
ಹಿಂದಿನ ಉಳಿತಾಯಗಳಿಂದ ನೂತನ ಉದ್ಯಮ
ಸ್ಥಾಪನೆ. ಸಹೋದ್ಯೋಗಿಗಳಿಂದ ಆಗುತ್ತಿದ್ದ ಅನಗತ್ಯ
ಕಿರಿಕಿರಿಗೆ ಮುಕ್ತಿ ದೊರೆಯಲಿದೆ. ಸಾಫ್ಟ್‌ವೇರ್
ಉದ್ಯೋಗಿ ಗಳಿಗೆ ವೃತ್ತಿ ಬದಲಾವಣೆಯ ಅವಕಾಶ. ನೂತನ
ದಂಪತಿಗಳಿಗೆ ಶುಭ ಸುದ್ದಿ ತಿಳಿಯಲಿದೆ. ಹೊಸ ವಸ್ತುಗಳನ್ನು
ಕೊಳ್ಳುವ ಕನಸನ್ನು ಸದ್ಯಕ್ಕೆ ಕೈ ಬಿಡುವುದು ಉತ್ತಮ. 

ಮೀನ
ನೂತನ ದಂಪತಿಗಳ ಬಾಳಿನಲ್ಲಿ ಆರ್ಥಿಕ ಸಂಪತ್ತು
ಹೆಚ್ಚಲಿದೆ. ಮನೆ ದೇವರಿಗೆ ಪೂಜೆ ಸಲ್ಲಿಸಿಬರುವುದು
ಉತ್ತಮ. ಮನಸ್ಸಿನ ನೆಮ್ಮದಿಗೆ ಅಡೆತಡೆ ಉಂಟು
ಮಾಡುವ ಸಾಕಷ್ಟು ವಿಚಾರಗಳು ಎದುರಾಗಲಿವೆ. ಸ್ವಲ್ಪ
ಧೈರ್ಯದಿಂದ ಎಲ್ಲವನ್ನೂ ಎದುರಿಸಿ.

Follow Us:
Download App:
  • android
  • ios