ಈ ವಾರ ಮೇಷಕ್ಕೆ ಅನುಕೂಲ : ಉಳಿದ ರಾಶಿ ಫಲ ಹೇಗಿದೆ.?

ಮೇಷ
ಈ ವಾರ ಮನೆಯಲ್ಲಿ ಕಾರ್ಯಕ್ರಮಗಳು
ಹೆಚ್ಚಾಗಲಿದೆ. ಮನೆಯಲ್ಲಿ ಬಂಧುಗಳೂ ಹೆಚ್ಚಾ
ಗುವ ಸಾಧ್ಯತೆಗಳಿದ್ದು, ಸಂಭ್ರಮ ನೆಲೆಸಲಿದೆ.
ಒಂದು ರೀತಿಯ ರಿಲ್ಯಾಕ್ಸ್ ಈ ವಾರ ಸಿಕ್ಕರೂ ಅಷ್ಟೇ
ಆಯಾಸ ಇರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ
ಪ್ರಗತಿ ಸಾಧ್ಯ. ನೆಮ್ಮದಿಯ ದಿನಗಳು ಎದುರಾಗಲಿದೆ. 

ವೃಷಭ
ಹಣಕಾಸಿನ ವಿಚಾರದಲ್ಲಿ ಮಾಡಿದ ಎಡವಟ್ಟು
ಗಳಿಂದ ಈ ವಾರ ಕೈಸುಟ್ಟುಕೊಳ್ಳುವ ಸಾಧ್ಯತೆ
ಹೆಚ್ಚು. ಮನೆಯವರ ಮಾತು ಕೇಳಿ, ಇಲ್ಲವೇ
ಹಿರಿಯರ ಮಾರ್ಗದರ್ಶನ ಪಡೆದು ಇಂತಹ ವಿಚಾರದಲ್ಲಿ
ಮುಂದುವರೆಯುವುದು ಒಳ್ಳೆಯದು. ಅತಿಯಾದ
ವಿಶ್ವಾಸ, ನಂಬಿಕೆ ಅಂತಿಮವಾಗಿ ಪೆಟ್ಟು ಕೊಡಬಲ್ಲದು. 

ಮಿಥುನ
ಮಕ್ಕಳ ಪ್ರತಿ ತಪ್ಪುಗಳಿಗೆ ಸಮರ್ಥನೆ
ಕೊಟ್ಟುಕೊಂಡು ಬಂದರೆ ಮುಂದಾಗುವ
ತೊಂದರೆಗಳಿಗೆ ಕೊನೆಗೆ ನೀವೇ ಹೊಣೆಯಾಗ
ಲಿದ್ದೀರಿ. ಹಾಗಾಗಿ ಆದಷ್ಟು ಮಕ್ಕಳ ವಿಚಾರದಲ್ಲಿ
ಎಚ್ಚರಿಕೆಯ, ಚಾಣಾಕ್ಷ ನಡೆ ಬೇಕು. ಅತಿಯಾದ ಪ್ರೀತಿ
ಅಟ್ಟಕೇರಿಸಿದರೆ ಮುಂದೆ ಕಂಟಕ ತಂದೊಡ್ಡಬಹುದು.

ಕಟಕ
ನಿಮ್ಮ ವರ್ತನೆ ಮತ್ತೊಬ್ಬರಿಗೆ ನೋವುಂಟು
ಮಾಡುವಂತಿರಬಾರದು. ಅದು ನಿಮಗೆ
ಗೊತ್ತಿದ್ದರೂ ಅದನ್ನೇ ಮುಂದುವರಿಸುವುದು
ಸರಿಯಲ್ಲ. ಆದಷ್ಟು ಪ್ರೀತಿಯಿಂದ ಜನ ಸಂಪಾದಿಸಬೇಕೆ
ಹೊರತು, ಮೋಸ, ವಂಚನೆಗಳಿಂದಲ್ಲ. ಈ ವಾರ ನಿಮಗೆ
ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿ

ಸಿಂಹ
ನಿಮ್ಮನ್ನು ಹಂಗಿಸಿದರೂ, ಅವಮಾನಿಸಿದರೂ
ನೀವು ಮಾತ್ರ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿ
ಸಿಕೊಳ್ಳದಿರಿ. ಮುಂದೊಂದು ದಿನ ನಿಮ್ಮನ್ನು
ಅವಮಾನಿಸಿದ ವ್ಯಕ್ತಿಗಳು ಇದೇ ನಿಮ್ಮ ಒಳ್ಳೆಯ
ಗುಣಗಳಿಂದ ಬದಲಾಗಿ ನಿಮ್ಮ ಬಳಿ ಬರಬಹುದು.
ಒಂದು ದಿಟ್ಟ ನಡೆ ನಿಮ್ಮನ್ನು ಎತ್ತರದ ಸ್ಥಾನಕ್ಕೇರಿಸುವುದು.

ಕನ್ಯಾ
ಅತಿಯಾದ ಕೆಲಸ, ಟೆನ್ಷನ್‌ನಿಂದ ಆರೋಗ್ಯದಲ್ಲಿ
ಏರುಪೇರು. ಆಹಾರದಲ್ಲಿ ಏರುಪೇರು.
ಬಂಧುಗಳ ಆಗಮನ. ನಿಮ್ಮಲ್ಲಿರುವ
ಪ್ರತಿಭೆಯನ್ನು ನಿಮ್ಮ ಆತ್ಮೀಯರು ಇಲ್ಲವೇ ಸ್ನೇಹಿತ
ರಿಂದಲೇ ಅನಾವರಣಗೊಳ್ಳಲಿದೆ. ಕಳೆದ ವಾರದ ನಿಮ್ಮ
ಸಮಸ್ಯೆಗೆ ಈ ವಾರ ಸಂಪೂರ್ಣ ಪರಿಹಾರ ಸಿಗಲಿದೆ.

ತುಲಾ
ಮನಸ್ಸಿನ ಭಾವನೆ, ತಳಮಳವನ್ನು ನಿಮ್ಮ ಆಪ್ತರ
ಬಳಿ ಹಂಚಿಕೊಳ್ಳಿ. ಇದರಿಂದ ಸಮಾಧಾನದ,
ಪರಿಹಾರವೂ ಸಿಗಬಹುದು. ಹೆಚ್ಚು ನಿರೀಕ್ಷೆ
ಇಟ್ಟುಕೊಂಡು ಮಾಡುವ ಕೆಲದಿಂದ ನಿರಾಸೆಯಾಗು
ವುದು. ಮಹಿಳೆಯರಿಗೆ ಈ ವಾರ ಸಿಹಿ ಸುದ್ದಿ ಸಿಗಲಿದ್ದು,
ಈ ವಾರ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. 

ವೃಶ್ಚಿಕ
ವಯಕ್ತಿಕ ವಿಚಾರಗಳನ್ನು ನಿಮ್ಮ
ಸ್ನೇಹಿತರೊಂದಿಗೊ ಇನ್ಯಾರ ಬಳಿಯೊ
ಹಂಚಿಕೊಳ್ಳದಿರಿ. ಮುಂದೊಂದು ದಿನ ಅದೇ
ನಿಮಗೆ ಸಮಸ್ಯೆಯಾಗಬಹುದು. ಹೊಸ ಸ್ನೆಹಿತರ
ಪರಿಚಯವಾಗಲಿದ್ದು, ದೂರ ದೂರಿಗೆ ಪ್ರಯಾಣ
ಸಾಧ್ಯತೆ. ಮಕ್ಕಳಿಂದ ಹೆಚ್ಚು ಸಂತೋಷ ಸಿಗಲಿದೆ.

ಧನಸ್ಸು
ನೀವು ಆಸೆ ಪಟ್ಟ ಕೆಲಸಗಳು ಈ ವಾರ
ಸುಸೂತ್ರವಾಗಿ ನಡೆಯಲಿದೆ. ಈ ಶುಭ
ಸಂದರ್ಭದಲ್ಲಿ ಸೇರಿದ ನಿಮ್ಮ ಬಂಧುಗಳಿಂದ
ಪ್ರಶಂಸೆಗೆ ಒಳಗಾಗಲಿದ್ದೀರಿ. ವಾರಾಂತ್ಯದಲ್ಲಿ ನಿಮಗೆ
ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ. 

ಮಕರ
ಕಹಿ ನುಂಗಿ ಸಿಹಿ ಹಂಚುವುದು ಎಷ್ಟು
ಒಳ್ಳೆಯದೊ ಅದೇ ರೀತಿ ಕಷ್ಟ ನುಂಗಿ ಸಂತೋಷ
ಕೊಡುವುದು ಒಳ್ಳೆಯದೇ. ನಿಮಗೆ ಕೆಡುಕು
ಬಯಸಿದವರಿಗೆ ಒಳ್ಳೆಯದನ್ನೇ ಬಯಸಿ. ನಿಮ್ಮ
ಸ್ನೇಹಿತರು ಈ ವಾರ ನಿಮ್ಮ ಕಷ್ಟಗಳಿಗೆ ನೆರವಾಗಲಿದ್ದಾರೆ. 

ಕುಂಭ
ಸಸಿ ನೆಟ್ಟು ನೀರು ಹಾಕುವುದರಲ್ಲಿ ಸಿಗುವ
ಖುಷಿಯಂತೆ ನಿಮ್ಮ ಸಮಸ್ಯೆಗಳು
ಪರಿಹಾರವಾಗಿ ಇನ್ನು ನೆಮ್ಮದಿ ನೆಲೆಸಲಿದೆ.
ಕೆಲಸದಿಂದ ಗೊಂದಲಗಳು ಎದುರಾದಾಗ ಆದಷ್ಟು ಧ್ಯಾನ
ಮಾಡಿ, ಇಲ್ಲವೇ ಪ್ರವಾಸ ಬೆಳೆಸಿ. ಇದರಿಂದ ಒತ್ತಡ
ನಿವಾರಣೆಯಾಗಿ ಎಲ್ಲವೂ ಸರಿಯಾಗಿ ನಿಭಾಯಿಸುವಿರಿ.

ಮೀನ
ಮಾಡಿದ್ದೆಲ್ಲವೂ ಸರಿ ಎನ್ನುವ ನಿಮ್ಮ
ಭಾವನೆಗಳಿಗೆ ಈ ವಾರ ಎಳ್ಳು ನೀರು ಬೀಳಲಿದೆ.
ಕೆಲಸದಲ್ಲಿ ಸೋತರು ಅದನ್ನು ಚಾಲೆಂಜಿಂಗ್
ಆಗಿ ತೆಗೆದುಕೊಂಡು ತಪ್ಪನ್ನು ಸರಿಪಡಿಸಿಕೊಂಡು ಮುನ್ನ
ಡೆಯಿರಿ. ಮಕ್ಕಳಿಂದ ಮನೆಯಲ್ಲಿ ನೆಮ್ಮದಿ ಸಿಗಲಿದೆ.