ಈ ರಾಶಿಗೆ ಈ ವಾರವು ಸಂಪೂರ್ಣ ಯಶಸ್ಸಿನ ದಿನ

ಮೇಷ
ಮಾಡಿದ್ದೆಲ್ಲವೂ ಸರಿ ಎಂದು ನೀವು ಅಂದುಕೊಂಡ
ರೂ ನಿಮ್ಮ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳಲಿದೆ.
ವಿಫಲವಾದರೂ ಕುಗ್ಗದೆ ಮರಳಿ ಪ್ರಯತ್ನಿಸಿದರೆ
ಯಶಸ್ಸು ಲಭಿಸುವುದು. ಮಕ್ಕಳ ಓದಿನಲ್ಲಿ ಒಳ್ಳೆಯ ಬೆಳವಣಿಗೆ
ಕಾಣಲಿದೆ. ಮಹಿಳೆಯರಲ್ಲಿ ಧಾರ್ಮಿಕ ಮನೋಭಾವನೆ
ಹೆಚ್ಚಲಿದೆ. ವಾರಾಂತ್ಯದಲ್ಲಿ ಸಿಹಿ ಸುದ್ದಿ.

ವೃಷಭ
ಹೊಸ ವರ್ಷದ ಆರಂಭದಲ್ಲೇ ಬೀಸೋ
ದೊಣ್ಣೆಯಿಂದ ತಪ್ಪಿಸಿಕೊಂಡ ನೀವು, ಆಗಾಗ ಅಡ್ಡಿ
ಆತಂಕಗಳು ಎದುರಾಗಲಿದೆ. ಹಣಕಾಸಿನ ವ್ಯವಹಾ
ರದಲ್ಲಿ ಎಚ್ಚರ ವಹಿಸಿ. ಅತಿಯಾದ ಖರ್ಚು ಮುಂದೆ ಕಷ್ಟ
ತಂದೊಡ್ಡುವ ಸಾಧ್ಯತೆ. ಹೊಸ ಯೋಜನೆಗಳನ್ನು ಆರಂಭಿಸ
ಲು ಇದು ಸೂಕ್ತ ಸಮಯ. ಸಂತಸ ಮನೆಮಾಡಲಿದೆ.

ಮಿಥುನ
ಬಂಧುಗಳ ಸಹಕಾರದಿಂದ ಎದುರಾದ ಕಷ್ಟ
ದೂರಾಗಲಿದೆ. ಸ್ನೇಹಿತರಿಗೆ ನೀಡಿದ ಹಣ ವಿಚಾರ
ದಲ್ಲಿ ಸ್ವಲ್ಪ ಕಿರಿಕಿರಿ ಎದುರಾದರು ಕೊಟ್ಟ ಹಣ
ವಾಪಸ್ಸಾಗಲಿದೆ. ನಿರುದ್ಯೋಗಿಗಳಿಗೆ ಸದಾವಕಾಶ ಲಭಿಸಲಿದೆ.
ದುಡುಕು ನಿರ್ಧಾರ ಕಂಟಕ ತಂದೊಡ್ಡಬಹುದು. ಮಾಡುವ
ಕೆಲಸದಲ್ಲಿ ಶ್ರದ್ಧೆ ಇರಲಿ. ಮಹಿಳೆಯರಿಗೆ ಶುಭ ವಾರ.

ಕಟಕ
ವಾತಾವರಣದಲ್ಲಿನ ಬದಲಾವಣೆಯಿಂದ
ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಆಹಾರ
ವಿಚಾರದಲ್ಲಿ ಎಚ್ಚರ. ಹೊಸಬರ ಪರಿಚಯ.
ಅತಿಯಾದ ವಿಶ್ವಾಸ, ನಂಬುಗೆ ಒಳ್ಳೆಯದಲ್ಲ. ವಾರದ
ಮಧ್ಯದಲ್ಲಿ ಕಹಿ ಸುದ್ದಿ ಕೇಳುವಿರಿ. ಇನ್ನೊಬ್ಬರ ಮಾತುಗಳಿಂದ
ಕೈಗೊಂಡ ಯೋಜನೆಯನ್ನು ನಿಲ್ಲಿಸದಿರಿ.

ಸಿಂಹ
ಕುಟುಂಬದಲ್ಲಿನ ಸಮಸ್ಯೆ ಇನ್ನಷ್ಟು ಬಿಗುಡಾಯಿ
ಸಲಿದೆ. ಮನಃಶಾಂಗಾಗಿ ದೇವರ ಸ್ಮರಣೆ, ಧ್ಯಾನ
ಮಾಡಿ. ದಿಢೀರ್ ನಿರ್ಧಾರದಿಂದ ಬದುಕಿನಲ್ಲಿ
ಸುಧಾರಣೆಯಾಗಲಿದೆ. ವಾರಾಂತ್ಯದಲ್ಲಿ ಹಿರಿಯರ ಆಗಮ
ನ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ದೂರ
ಪ್ರವಾಸ. ಅಂದುಕೊಂಡ ಕೆಲಸ ಫಲಿಸಲಿದೆ.

ಕನ್ಯಾ
ಕುಟುಂಬದವರಲ್ಲೇ ಇಟ್ಟ ನಿರೀಕ್ಷೆ ಒಂದೇ ಸಮನೆ
ಹುಸಿಯಾಗಿಸಲಿದೆ. ಸಂಗೀತ ಕ್ಷೇತ್ರದಲ್ಲಿರುವವರಿಗೆ
ಉತ್ತಮ ವೇದಿಕೆ ಸಿಗಲಿದ್ದು, ಗೌರವ ಸಿಗಲಿದೆ.
ಒತ್ತಡದ ಕೆಲಸದಿಂದ ಮನಸ್ಸಿಗೆ ಕಿರಿಕಿರಿ. ಆದರೂ ಮೇಲಧಿಕಾ
ರಿಯಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಶ್ರಮ ಜೀವಿಯಾದ
ನೀವು ಎಲ್ಲರಿಗೂ ಪ್ರೀತಿಪಾತ್ರರಾಗಲಿದ್ದೀರಿ.

ತುಲಾ
ಶೈಕ್ಷಣಿಕವಾಗಿ ಪ್ರಗತಿ ಸಾಧ್ಯವಾಗಲಿದೆ. ವಹಿಸಿ
ಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸ
ಲಿದ್ದೀರಿ. ಮತ್ತೊಬ್ಬರ ಮೇಲಿನ ಅವಲಂಬನೆ
ಕಡಿಮೆಯಾಗಲಿದೆ. ಹೆಚ್ಚು ನಿರೀಕ್ಷೆ ಇಟ್ಟು ಕೊಂಡು ಮಾಡುವ
ಕೆಲಸದಿಂದ ತುಸು ನಿರಾಸೆ ಕಾದಿದೆ. ದೊಡ್ಡ ಮಟ್ಟದ
ಕಾರ್ಯಗಳನ್ನು ಪ್ರಾರಂಭಿಸಲು ಇದು ಸಕಾಲವಲ್ಲ.

ವೃಶ್ಚಿಕ
ಸಹೃದಯರು ಹಾಗೂ ನೇರ ಮಾತುಗಾರರಾಗಿ
ದ್ದು, ನಿಮ್ಮ ಸ್ನೇಹವನ್ನು ಕೈಬಿಟ್ಟವರ ಬಗ್ಗೆ
ಯೋಚಿಸಿ ಪ್ರಯೋಜನವಿಲ್ಲ. ಈ ವಾರ ಕೈಹಾಕಿದ
ಕೆಲಸಗಳು ಫಲಿಸಲಿದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ
ಗೊಂದಲ. ಮಹಿಳೆಯರ ಪಾಲಿಗೆ ಶುಭ ಸುದ್ದಿ ತಿಳಿಯಲಿದೆ.
ಮಾಡುವ ಕೆಲಸದಲ್ಲಿ ಎಚ್ಚರ. ವಾರವಿಡಿ ಸಂತಸ ನೆಲೆಸಲಿದೆ.

ಧನಸ್ಸು
ಅತಿಯಾದ ಕೆಲಸ ಹಾಗೂ ಟೆನ್ಷನ್‌ನಿಂದ ಆರೋಗ್ಯ
ದಲ್ಲಿ ಏರುಪೇರು. ಆಹಾರ ಸೇವನೆಯಲ್ಲಿ ಎಚ್ಚರ.
ಬಂಧುಗಳ ಆಗಮನ. ಮಕ್ಕಳಿಂದ ಸಿಹಿ ಸುದ್ದಿ.
ಹಣಕಾಸಿನ ವ್ಯವಹಾರ ಪ್ರಾರಂಭಿಸುವಾಗ ಸುತ್ತಮುತ್ತಲಿ
ನವರ ಸಲಹೆ ಪಡೆದು ನಿರ್ಧರಿಸಿದರೆ ಒಳಿತು.

ಮಕರ
ಎಂದೋ ಮಾಡಿದ ಪುಣ್ಯದ ಕೆಲಸ ಇಂದು ನಿಮ್ಮ
ಕೈ ಹಿಡಿಯಲಿದೆ. ಆಪದ್ಭಾಂದವರಂತೆ ಕಷ್ಟದ
ಸಂದರ್ಭದಲ್ಲಿ ಬಂದ ಅವಕಾಶವನ್ನು ಬಿಡಬೇಡಿ.
ನಿಮ್ಮಲ್ಲಿ ಅಡಗಿರುವ ಪ್ರತಿಭೆ ನಿಮ್ಮ ಆತ್ಮೀಯರಿಂದಲೇ
ಅನಾವರಣವಾಗಲಿದೆ. ಇದರಿಂದ ಎಲ್ಲರ ಮೆಚ್ಚುಗೆ ಸಿಗಲಿದೆ.

ಕುಂಭ
ನಿಮ್ಮ ಕಠೋರ ಹಾಗೂ ತೀಕ್ಷಣ ಮಾತಿನಿಂದ ಯಾರ
ಮನಸ್ಸನ್ನು ನೋಯಿಸದಿರಿ. ಇದರಿಂದ ನಿಮಗೆ
ಮುಂದೆ ನೋವುಂಟು ಮಾಡುವ ಸಾಧ್ಯತೆ ಇದೆ.
ನಿಮ್ಮಲ್ಲಿನ ಕೆಲ ದುಶ್ಚಟಗಳನ್ನು ಹಿಡಿತದಲ್ಲಿಟ್ಟುಕೊಂಡರೆ
ಮನೆಯಲ್ಲಿ ಮನಸ್ಥಾಪ ದೂರಾಗಲಿದೆ. ನಿಮ್ಮ ನೆಮ್ಮದಿಯ
ಜೀವನಕ್ಕೆ ನೀವೆ ದಾರಿ ಹುಡುಕಬೇಕಾಗಿದೆ.

ಮೀನ
ಮನೆಯಲ್ಲಿ ಈ ವಾರ ನಗು ತುಂಬಿದ ವಾತಾವ
ರಣ ನೆಲೆಸಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು
ಸಿಗಲಿದ್ದು, ಹೊಸ ಸ್ನೇಹಿತರು ಸೇರ್ಪಡೆಯಾಗಲಿ
ದ್ದಾರೆ. ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಕಾಲಕಳೆದ
ರೆ ಉತ್ತಮ. ಮಹಿಳೆಯರಿಗೆ ಶುಭವಾಗಲಿದೆ.

 

ದಿನ ಪಂಚಾಂಗ 

ಧಾರ್ಮಿಕಪಂಚಾಂಗವನ್ನು ಆಧರಿಸಿದ ನಿತ್ಯ ಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23

ದಿನಾಂಕ 06/01/2019

ವಿಲಂಬ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ಧನು 21
ಪೌಷ್ಯ ಮಾಸ
ಕೃಷ್ಣ ಪಕ್ಷ
ರವಿವಾರ
ಪ್ರತಿಪದೆ ತಿಥಿ (ದಿನಪೂರ್ತಿ)
ಪೂರ್ವಾಷಾಢಾ ನಕ್ಷತ್ರ (05-41pm)
ವ್ಯಾಘಾತ ಯೋಗ (50-12)
ಕಿಂಸ್ತುಘ್ನ ಕರಣ (30-47)
ಸೂರ್ಯೋದಯ - 06-59am
ಸೂರ್ಯಾಸ್ತ - 06-12pm

ರಾಹು ಕಾಲ
04:52pm - 06:16pm ಅಶುಭ
ಯಮಘಂಡ ಕಾಲ
12:38pm - 02:03pm ಅಶುಭ
ಗುಳಿಕ ಕಾಲ03:27pm - 04:52pm