ಈ ವಾರ ನಿಮ್ಮ ಪಾಲಿಗೆ ಹೇಗಿರಲಿದೆ..?
ಮೇಷ
ಯಾರಿಗೂ ಅಂಜುವ ಅವಶ್ಯಕತೆ ಇಲ್ಲ. ನಿಮ್ಮ
ನಿರ್ಧಾರಗಳಿಗೆ ಬದ್ಧವಾಗಿ ನೀವು ನಡೆಯುವಿರಿ.
ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ
ಸಮಯವಿದು. ಹೆಚ್ಚು ಉತ್ಸಾಹದಿಂದ ವಾರವೀಡೀ ಕೆಲಸ
ಮಾಡುವಿರಿ. ಬಂಧುಗಳೊಂದಿಗೆ ಹೆಚ್ಚು ಆತ್ಮೀಯತೆ
ಸಾಧ್ಯವಾಗಲಿದೆ. ನಿಮ್ಮನ್ನು ನೀವು ನಂಬಿ ನಡೆಯಿರಿ.
ವೃಷಭ
ಮತ್ತೊಬ್ಬರನ್ನು, ಅವರ ಶಕ್ತಿ ಸಾಮರ್ಥ್ಯಗಳನ್ನು
ಅಳೆದು ತೂಗಿ ನೋಡುವುದು ಬೇಡ. ನಿಮ್ಮಲ್ಲಿನ
ಗುಣಗಳೇ ನಿಮಗೆ ಮಾನ್ಯತೆ ದೊರಕಿಸಿಕೊಡಲಿವೆ.
ಹಣಕಾಸಿನ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಇರಲಿ. ಮನೆಗೆ
ಬಂಧುಗಳು ಆಗಮಿಸಲಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಸ್ವಲ್ಪ ಕೈ
ಸಾಲಗಳು ಹೆಚ್ಚಾಗಲಿವೆ. ಆರೋಗ್ಯದಲ್ಲಿ ಚೇತರಿಕೆ.
ಮಿಥುನ
ತಂದೆ-ತಾಯಿಗಳು ನಿಮ್ಮ ಪಾಲಿಗೆ ದೊಡ್ಡ
ದೇವರು. ಅವರ ಮಾತಿನಂತೆ ಎಲ್ಲವೂ
ನಡೆಯಲಿದೆ. ಮತ್ತೊಬ್ಬರ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಜಂಜಾಟಗಳಿಂದ ದೂರ ಬರುವಿರಿ.
ಅಂದುಕೊಂಡ ಕೆಲಸಗಳಲ್ಲಿ ಪ್ರಗತಿ ಸಾಧ್ಯವಾಗಲಿದೆ.
ಸುತ್ತಾಟದಿಂದ ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ.
ಕಟಕ
ನಿಮ್ಮ ಶಕ್ತಿಯೇ ನಿಮ್ಮ ಏಳಿಗೆಗೆ ಮೂಲ ಕಾರಣ.
ಮತ್ತೊಬ್ಬರ ಮೇಲಿನ ಅವಲಂಬನೆ ಕಡಿಮೆ
ಯಾಗಲಿದೆ. ಬೇರೆಯವರ ಮೇಲೆ ಕೋಪ
ಮಾಡಿಕೊಳ್ಳುವುದು ಬೇಡ. ವ್ಯಕ್ತಿತ್ವದಲ್ಲಿ ಬದಲಾವಣೆ
ಯಾಗಲಿದೆ. ಹೈನುಗಾರಿಕೆ ಮಾಡುವವರಿಗೆ ಸ್ವಲ್ಪ ಏರುಪೇರು
ಉಂಟಾಗಲಿದೆ. ಆರ್ಥಿಕವಾಗಿ ಜಾಗೃತೆ ವಹಿಸಿ
ಸಿಂಹ
ಮನಸ್ಸಿನಲ್ಲಿ ಉಂಟಾಗಿರುವ ಗೊಂದಲಗಳಿಗೆ
ಪರಿಹಾರ ದೊರೆಯಲಿದೆ. ಗುರುಗಳ ಮಾತಿನಂತೆ
ನಡೆದುಕೊಳ್ಳಿ. ನಿಮಗೆ ಎದುರಾಗಿರುವ
ಸಮಸ್ಯೆಯೇ ದೊಡ್ಡದಲ್ಲ. ಮತ್ತೊಬ್ಬರ ಕಷ್ಟಕ್ಕೆ ನೆರ
ವಾಗುವಿರಿ. ಹೆಚ್ಚು ಸಂತೋಷದಿಂದ ಈ ವಾರ ಕಳೆಯ
ಲಿದ್ದೀರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು.
ಕನ್ಯಾ
ಸಂಬಂಧಗಳು ವೃದ್ಧಿಯಾಗಲಿವೆ. ಫೋಟೋ
ಗ್ರಾಫರ್‌ಗಳಿಗೆ ಹೆಚ್ಚು ಉದ್ಯೋಗಾವಕಾಶ. ಸೂಕ್ತ
ಸಮಯಕ್ಕೆ ಸ್ನೇಹಿತರಿಂದ ಆರ್ಥಿಕ ಸಹಕಾರ
ದೊರೆಯಲಿದೆ. ಸಮಯ ಹಾಳು ಮಾಡದೇ ಕೆಲಸದಲ್ಲಿ
ತೊಡಗಿಕೊಳ್ಳಿ. ವಾರಾಂತ್ಯದಲ್ಲಿ ದೂರದ ಪ್ರಯಾಣ
ಮಾಡಬೇಕಾಗಿ ಬರಬಹುದು. ಧನಾಗಮನವಾಗಲಿ
ತುಲಾ
ನೀವು ನಂಬಿರುವ ವ್ಯಕ್ತಿಗಳಿಂದಲೇ ನಿಮಗೆ
ತೊಂದರೆಯುಂಟಾಗಲಿದೆ. ಬರುವ ಕಷ್ಟಕ್ಕೆ
ಹೆದರುವುದು ಬೇಡ. ನಿಮ್ಮ ಸಹಾಯಕ್ಕೆ ಸಾಕಷ್ಟು
ಮಂದಿ ಮುಂದೆ ಬರಲಿದ್ದಾರೆ. ಈ ದೀಪಾವಳಿ ನಿಮ್ಮ ಬಾಳಿಗೆ
ಶುಭ ಕಾರಕ. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು
ಬೇಡ. ಹೆಚ್ಚು ಆತ್ಮವಿಶ್ವಾಸ ಅಪಾಯಕಾರಿ.
ವೃಶ್ಚಿಕ
ನಿಮ್ಮ ಭಾವನೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯ
ಲಿದೆ. ನಿಮ್ಮ ನೆಚ್ಚಿನ ವ್ಯಕ್ತಿ ಹೆಚ್ಚು ಹತ್ತಿರವಾಗುವನು.
ಗೃಹಿಣಿಯರಿಗೆ ಹೆಚ್ಚು ಅನುಕೂಲಗಳು ಆಗಲಿವೆ.
ತಂದೆಯ ಆರೋಗ್ಯ ಚೇತರಿಕೆಯಿಂದ ಮನಸ್ಸಿಗೆ ದೀರ್ಘ
ಸಂತೋಷ ದೊರೆಯಲಿದೆ. ಖರ್ಚುಗಳು ಅಧಿಕವಾಗಲಿವೆ.
ಅಂತಯೇ ಆದಾಯವೂ ಹೆಚ್ಚಲಿದೆ
ಧನಸ್ಸು
ತೋರ್ಪಡಿಕೆಯಿಂದ ಹೊರಗೆ ಬರುವಿರಿ. ನಿಮ್ಮ
ಸುತ್ತ ಮುತ್ತಲೇ ಶತ್ರುಗಳು ಇದ್ದಾರೆ. ಹೆಚ್ಚು
ಮಾತನಾಡುವುದು ಒಳಿತಲ್ಲ. ಕೆಲಸದಲ್ಲಿ
ಪ್ರವೀಣತೆ ಹೆಚ್ಚಾಗಲಿದೆ. ಎಲ್ಲರನ್ನೂ ಕೆಟ್ಟವರು
ಎಂದುಕೊಳ್ಳುವುದು ಬೇಡ. ಮಹಿಳೆಯರಿಗೆ ಶುಭವಾಗಲಿದೆ.
ಮಕರ
ಸಂಗೀತ ಕೇಳುವ ಅಭ್ಯಾಸ ಹೆಚ್ಚಾಗಲಿದೆ. ನಿಮ್ಮ ಇಷ್ಟದ
ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ.
ಮುಟ್ಟುವುದೆಲ್ಲಾ ಚಿನ್ನವಾಗಲಿದ್ದು, ಶುಭ ಕಾರ್ಯಕ್ಕೆ
ಇದು ಸಕಾಲ. ವ್ಯಾವಹಾರಿಕವಾಗಿ ಮುಂದೆ ಬರಲಿದ್ದೀರಿ.
ಗೆಳೆಯರ ನೋವಿಗೆ ನಿಮ್ಮಿಂದ ಸ್ಪಂದನೆ ದೊರೆಯಲಿದೆ.
ಕುಂಭ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದೀರಿ. ಹೆಣ್ಣು
ಮಕ್ಕಳಿಗೆ ಇದು ಶುಭ ಕಾಲ. ಕಲಾವಿದರು ಹೆಚ್ಚು
ಶ್ರಮ ಪಡಬೇಕಾದೀತು. ನಿಂದನೆಗಳಿಗೆ ಹೆಚ್ಚು ತಲೆ
ಕಡಿಸಿಕೊಳ್ಳುವುದು ಬೇಡ. ಸುಂದರವಾದ ಬದುಕಿನೆಡೆಗೆ
ಸದಾ ಪ್ರಯತ್ನ ಮಾಡುತ್ತಿರುವಿರಿ. ಕೆಲಸದ ಒತ್ತಡದಿಂದ
ಹೊರಗೆ ಬರಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.
ಮೀನ
ಬೇರೆಯವರ ಬಗ್ಗೆ ಹಗುರವಾಗಿ
ಮಾತನಾಡುವುದು ಬೇಡ. ವಾರದಲ್ಲಿ ಹೆಚ್ಚು ದಿನ
ಮನೆಯಿಂದ ಹೊರಗೇ ಇರಲಿದ್ದೀರಿ. ಕೆಲಸಗಳು
ಕೈಗೂಡಲಿವೆ. ವಾರಾಂತ್ಯದಲ್ಲಿ ನೆಮ್ಮದಿ ನೆಲೆಗೊಳ್ಳಲಿದೆ.
ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದ್ದೀರಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 4, 2018, 7:02 AM IST