Asianet Suvarna News Asianet Suvarna News

ಈ ವಾರ ಯಾವ ರಾಶಿಗೆ ಯಾವ ಫಲ : ಹೇಗಿದೆ ನಿಮ್ಮ ಭವಿಷ್ಯ?

ಈ ವಾರ ಯಾರ ಭವಿಷ್ಯ ಹೇಗಿದೆ..? ನಿಮ್ಮ ಭವಿಷ್ಯವನ್ನೂ ತಿಳಿದುಕೊಳ್ಳಿ

Weekly Horoscope 30 June 2019
Author
Bengaluru, First Published Jun 30, 2019, 7:09 AM IST
  • Facebook
  • Twitter
  • Whatsapp

ಈ ವಾರ ಯಾವ ರಾಶಿಗೆ ಯಾವ ಫಲ : ಹೇಗಿದೆ ನಿಮ್ಮ ಭವಿಷ್ಯ?

ಮೇಷ
ನಿತ್ಯ ಗುಮ್ಮನಗುಸುಕನ ಹಾಗಿದ್ರೆ ನಿಮಗೇ ನಷ್ಟ.
ಮನೆಯಲ್ಲಿ ಸ್ವಲ್ಪ ಓಪನ್ ಆಗಿರಲು ಪ್ರಯತ್ನಿಸಿ.
ಇದರಿಂದ ರಚನಾತ್ಮಕ ಸಹಾಯ ನಿಮಗೆ
ದೊರೆಯಲಿದೆ. ನೀವು ಸೂಕ್ಷ್ಮ ಮನಸ್ಸಿನವರು. ಇತರರ
ಮನಸ್ಸನ್ನೂ ಅರಿಯುವ ಶಕ್ತಿಯುಳ್ಳವರು. ಈ ಪ್ರವೃತ್ತಿ
ಹೊಸ ಆರಂಭಕ್ಕೆ ಮುನ್ನುಡಿ ಬರೆಯಬಹುದು. 

ವೃಷಭ
ಕಲಿಯುವಿಕೆ ನಿರಂತರ. ಉದ್ಯೋಗದಲ್ಲಿ
ಇದಮಿತ್ಥಂ ಅಂತಿರದೇ ಕಲಿಕೆಯನ್ನು
ಮುಂದುವರಿಸಿ. ಟೀಕೆಗೆ ಹೆಚ್ಚು ತಲೆ
ಕೆಡಿಸಿಕೊಳ್ಳಬೇಡಿ. ಈ ಕೌಶಲ್ಯ ವೃದ್ಧಿಯಿಂದ ನಿಮಗೆ
ಹೆಚ್ಚೆಚ್ಚು ಅವಕಾಶಗಳು ಬರಬಹುದು. ಈಗ
ಟೀಕಿಸುವವರು ಆಗ ಹೊಗಳಬಹುದು. 

ಮಿಥುನ
ನಿಮ್ಮ ಬಾಸ್ ಬಹಳ ಕಷ್ಟದ ಟಾಸ್ಕ್
ಕೊಡಬಹುದು. ಸುಮ್ಮನಿದ್ದರೆ ನಿಮ್ಮ ಹೊರೆ
ಹೆಚ್ಚಬಹುದು. ಧೈರ್ಯವಾಗಿ ಮಾತನಾಡಿ,
ಸಮಸ್ಯೆ ಹೇಳಿ. ಪರಿಹಾರ ಸಿಕ್ಕೇ ಸಿಗುತ್ತದೆ. ಹತ್ತಾರು
ದಿಕ್ಕುಗಳಲ್ಲಿ ಯೋಚಿಸುವ ಬದಲು ಒಂದು ವಿಷಯದತ್ತ
ಗಮನ ಕೇಂದ್ರೀಕರಿಸಿ. ಈ ವಾರ ಆರ್ಥಿಕ ಬಲ ಹೆಚ್ಚಲಿದೆ. 

ಕಟಕ
ಜಾಗ್ರತೆ ಒಳ್ಳೆಯದು, ಅತಿ ಜಾಗ್ರತೆ ಬೇಡ.
ಕೆಲವು ಅಹಿತಕರ ಘಟನೆಗಳಾಗಬಹುದು.
ಸಾಂಸಾರಿಕವಾಗಿ ನೆಮ್ಮದಿ
ಮರೀಚಿಕೆಯಾಗಬಹುದು. ಅಂದುಕೊಂಡದ್ದು ಉಲ್ಟಾ
ಹೊಡೆಯಬಹುದು. ಲೈಫು ಅಂದ್ಮೇಲೆ ಇದೆಲ್ಲ ಕಾಮನ್.
ನೋಡಿಯೂ ನೋಡದಂತೆ ಮುಂದುವರಿಯಿರಿ.

ಸಿಂಹ
ಈ ವಾರ ಸಮಯ ಹೊಂದಿಸಲು ತ್ರಾಸ
ಪಡಬೇಕಾಗುತ್ತದೆ. ಕೆಲಸದ ಒತ್ತಡ
ಹೆಚ್ಚಾಗಬಹುದು. ವಾರದ ಕೊನೆಯಲ್ಲಿ
ನಿರಾಳ. ಊರೂರು ಸುತ್ತಬೇಕೆಂಬ ನಿಮ್ಮ ಆಸೆ ಶೀಘ್ರವೇ
ಈಡೇರಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ.
ಅತಿಸೂಕ್ಷ್ಮವೂ ಒಳ್ಳೆಯದಲ್ಲ

ಕನ್ಯಾ
ಖರ್ಚು ಹೆಚ್ಚಾಗಬಹುದು. ಹಾಸಿಗೆ ಇರುವಷ್ಟೇ
ಕಾಲು ಚಾಚಲು ಕಲಿಯಿರಿ. ಎಲ್ಲರೂ ತಾನು
ಹೇಳಿದ ಹಾಗಿರಬೇಕು ಅನ್ನೋ ಮನಸ್ಥಿತಿಗೆ
ಬ್ರೇಕ್ ಬೀಳಬಹುದು. ಕೃಷಿ ಕ್ಷೇತ್ರದವರಿಗೆ ಪ್ರಗತಿ.
ವೈದ್ಯರಿಗೆ ವಿದೇಶ ಯೋಗ. ಯುವಕರಿಗೆ ದೂರ
ಪ್ರಯಾಣದ ಸಾಧ್ಯತೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. 

ತುಲಾ
ಕೆಲಸದ ಜಾಗದಲ್ಲಿ ಕೆಲವೊಂದಿಷ್ಟು ವಿಚಾರಗಳ
ಬಗ್ಗೆ ಚರ್ಚಿಸಿ ಮುಂದುವರಿಯಿರಿ. ಪರಿಸ್ಥಿತಿ
ನೀವಂದುಕೊಂಡಷ್ಟು ಸರಳವಾಗಿರಲ್ಲ. ನಿಮ್ಮ
ಪ್ರತಿಭೆಗೆ ತಕ್ಕ ಫಲ ಈಗ ಸಿಗದೇ ಇರಬಹುದು.
ತಲೆಕೆಡಿಸಿಕೊಳ್ಳಬೇಡಿ. ಕಷ್ಟಪಟ್ಟದ್ದು ಎಂದೂ
ವ್ಯರ್ಥವಾಗಲ್ಲ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಇದೆ.

ವೃಶ್ಚಿಕ
ಈ ವಾರ ನಿರೀಕ್ಷೆಗೂ ಮೀರಿದ ಅವಕಾಶ ನಿಮಗೆ
ಸಿಗಲಿದೆ. ಸಂಕುಚಿತಗೊಂಡಿದ್ದ ಮನಸ್ಸಿಗೆ
ಪ್ರಯಾಣ ಹೆಚ್ಚಿನ ಮುದ ನೀಡಲಿದೆ.
ಪಾಸಿಟಿವ್ ಆಗಿ ಚಿಂತಿಸಿ. ಕ್ರಿಯಾಶೀಲತೆಯತ್ತ ನಿಮ್ಮ
ತುಡಿತ ಹೆಚ್ಚಾಗಲಿ. ಈ ವಾರ ಹಣದ ಮುಗ್ಗಟ್ಟು
ಎದುರಾಗಬಹುದು. 

ಧನಸ್ಸು
ನಗು ಎಲ್ಲದಕ್ಕೂ ದಿವ್ಯೌಷಧ. ಯಾವ
ಸಮಸ್ಯೆಯನ್ನೂ ನಿವಾರಿಸಬಲ್ಲದು. ಸವಾಲು
ಬಹಳ ಇವೆ. ನಗು ನಗುತ್ತ ನಿಭಾಯಿಸಿ.
ಇತರರು ನಿಮ್ಮಿಂದ ಏನೋ ಮುಚ್ಚಿಟ್ಟಿದ್ದಾರೆ ಎಂಬ ಭಯ
ಬೇಡ. ನಿಮ್ಮ ಸಹಕಾರ ಬುದ್ಧಿಯಿಂದಲೇ ಗೆಲುವಿದೆ. 

ಮಕರ
ಕೆಲಸದಲ್ಲಿ ಬದಲಾವಣೆಯಿಂದ ಆತಂಕ. ಸ್ವಲ್ಪ
ದಿನದಲ್ಲಿ ಈ ಬದಲಾವಣೆಯೇ ಖುಷಿ
ಹೆಚ್ಚಿಸಲಿದೆ. ಬಿಡುವಿನ ಸಮಯದಲ್ಲಿ ನೆಮ್ಮದಿ.
ಆರ್ಥಿಕ ಚೈತನ್ಯ ಬರಲಿದೆ. ಸ್ಪೆಷಲ್ ವ್ಯಕ್ತಿಯೊಬ್ಬನನ್ನು ಈ
ವಾರ ಭೇಟಿಯಾಗುವಿರಿ. 

ಕುಂಭ
ದೀರ್ಘಕಾಲಿಕ ಯೋಜನೆಗಳನ್ನು ಮಾಡುವಾಗ
ಹಳೆಯ ತಪ್ಪುಗಳು ನೆಮ್ಮದಿ ಕೆಡಿಸಬಹುದು.
ಹೊಸ ಬದುಕು ಆರಂಭಿಸುವ ಮುನ್ನ
ಭಾವನಾತ್ಮಕ ರಗಳೆಗಳನ್ನು ಸರಿಪಡಿಸಿಕೊಳ್ಳಿ. ಹಳೆಯ
ಸಹೋದ್ಯೋಗಿಗಳ ಭೇಟಿ. ದೂರ ಪ್ರಯಾಣ ಸಾಧ್ಯತೆ.
ಆರೋಗ್ಯದ ಬಗ್ಗೆ ಎಚ್ಚರವಿರಲಿ. 

ಮೀನ
ಹೊಸ ನಿರ್ಧಾರಗಳು ಬದುಕಿನ ಚೈತನ್ಯ
ಹೆಚ್ಚಿಸುತ್ತವೆ. ಆರೋಗ್ಯ ಸಮಸ್ಯೆ
ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಭಡ್ತಿ
ಸಿಗಬಹುದು. ಬೇರೆಯವರ ಮಾತಿಗೆ ಹೆಚ್ಚು ಬೆಲೆ
ಕೊಡಬೇಡಿ. ನಿಮ್ಮಿಷ್ಟದಂತೆ ಬದುಕಿ.

Follow Us:
Download App:
  • android
  • ios