ವಾರ ಭವಿಷ್ಯ : ಈ ರಾಶಿಗೆ ಶುಭ ಸುದ್ದಿಗಳು ದೊರೆಯುವುದು ಖಚಿತ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Dec 2018, 7:04 AM IST
Weekly Horoscope 30 December 2018
Highlights

ವಾರ ಭವಿಷ್ಯ : ಈ ರಾಶಿಗೆ ಶುಭ ಸುದ್ದಿಗಳು ದೊರೆಯುವುದು ಖಚಿತ

ವಾರ ಭವಿಷ್ಯ : ಈ ರಾಶಿಗೆ ಶುಭ ಸುದ್ದಿಗಳು ದೊರೆಯುವುದು ಖಚಿತ

ಮೇಷ
ವೃತ್ತಿ ಬದುಕು ಹೆಚ್ಚು ತೃಪ್ತಿ ನೀಡಲಿದೆ. ವಾರದ
ಮಧ್ಯ ಭಾಗದಲ್ಲಿ ಕುಟುಂಬದಲ್ಲಿ ಸಣ್ಣ ಕಲಹ
ಉಂಟಾದರೂ ವಾರಾಂತ್ಯಕ್ಕೆ ಎಲ್ಲವೂ ಸರಿ
ಯಾಗಲಿದೆ. ಮಹಿಳೆಯರು ಮತ್ತು ವೃದ್ಧರ ಪಾಲಿಗೆ ಹೆಚ್ಚು
ಸಿಹಿ ಸುದ್ದಿಗಳು ತಿಳಿಯಲಿವೆ. ಪಾಲುದಾರಿಕೆಯ
ವ್ಯವಹಾರದಲ್ಲಿ ಸಣ್ಣ ಪುಟ್ಟ ಮನಸ್ಥಾಪಗಳು ಬರಲಿವೆ.

ವೃಷಭ
ದೀರ್ಘಕಾಲದ ಶತ್ರುತ್ವ ಕಳೆಯಲಿದೆ.
ಸಂಬಂಧಗಳಲ್ಲಿ ಸಾಮರಸ್ಯ ಉಂಟಾಗಲಿದೆ. ನಿಮ್ಮ
ಬಗ್ಗೆ ಬರುವ ಕೆಟ್ಟ ಅಭಿಪ್ರಾಯಗಳಿಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೊಸ ವಸ್ತುಗಳನ್ನು ಕೊಳ್ಳುವ
ಆಲೋಚನೆಯನ್ನು ಸಧ್ಯಕ್ಕೆ ಮುಂದೂಡುವುದು ಒಳಿತು.
ಹಣಕಾಸಿನ ವಿಚಾರವನ್ನು ಸಮತೋಲನಕ್ಕೆ ತಂದುಕೊಳ್ಳಿ.

ಮಿಥುನ
ವಾರದ ಮೊದಲೇ ಕೋರ್ಟ್, ಜಮೀನು
ವ್ಯಾಜ್ಯಗಳು ಇತ್ಯರ್ಥವಾಗಲಿವೆ. ಸಾಧ್ಯವಾದಷ್ಟೂ
ಮೌನ ವಹಿಸಿ. ಹೆಚ್ಚು ಶ್ರಮ ಹಾಕಿದ ಕೆಲಸಗಳಿಂದ
ಕಡಿಮೆ ಪ್ರತಿಫಲ ದೊರೆಯಲಿದೆ. ಬೇರೆಯವರ ಮನೆಯ
ಕೆಲಸಕ್ಕೆ ನಿಮ್ಮ ಸಮಯವನ್ನು ಹೆಚ್ಚು ವ್ಯರ್ಥ ಮಾಡುವುದು
ಬೇಡ. ಲೆಕ್ಕಾಚಾರಗಳು ಹೆಚ್ಚಾಗಲಿವೆ.

ಕಟಕ
ವ್ಯಾಪಾರಿಗಳಿಗೆ ಹೆಚ್ಚು ಲಾಭ ತಂದುಕೊಡುವ
ವಾರ ಇದು. ವಿದ್ಯಾಭ್ಯಾಸದಲ್ಲಿ ಪ್ರಗತಿ
ಸಾಧ್ಯವಾಗಲಿದೆ. ನಿಮ್ಮ ಪಾಲಿಗೆ ಬಂದ ಕೆಲಸವನ್ನು
ಹೆಚ್ಚು ಶ್ರದ್ಧೆಯಿಂದ ಮಾಡಿ. ಸ್ನೇಹಿತರ ಮೇಲೆ ನಂಬಿಕೆ
ಇರಲಿ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ತಂದೆ
ತಾಯಿಯ ದೆಸೆಯಿಂದ ನೆಮ್ಮದಿ ಹೆಚ್ಚಲಿದೆ.

ಸಿಂಹ
ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಆತ್ಮೀಯರು
ಸಿಕ್ಕಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ ಆರೋಗ್ಯ
ಮತ್ತು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ವಾರಾಂ
ತ್ಯಕ್ಕೆ ಕುಟುಂಬ ಸಮೇತ ಪ್ರವಾಸ ಹೋಗಲಿದ್ದೀರಿ. ನೆರೆ
ಹೊರೆಯವರ ಜೊತೆ ಉತ್ತಮ ಬಾಂಧವ್ಯ ಸಾಧ್ಯವಾಗಲಿದೆ.

ಕನ್ಯಾ
ಏಕ ಕಾಲದಲ್ಲಿ ಎರಡು ದೋಣಿಗಳ ಮೇಲೆ ಸವಾರಿ
ಮಾಡುವ ಸಾಹಸ ಮಾಡುವುದು ಬೇಡ.
ಗೃಹಿಣಿಯರಿಗೆ ಶುಭ ಫಲ ದೊರೆಯಲಿದೆ.
ಕೆಲಸದಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಕೊಂಚ
ತಾಳ್ಮೆಯಿಂದ ವರ್ತಿಸಿದರೆ ಒಳಿತಾಗಲಿದೆ. ಸ್ನೇಹದಲ್ಲಿ
ವ್ಯವಹಾರ ಬೇಡ. ವಾರ ಪೂರ್ತಿ ಶಾಂತವಾಗಿ ಇರುವಿರಿ.

ತುಲಾ
ಶೈಕ್ಷಣಿಕವಾಗಿ ಪ್ರಗತಿ ಸಾಧ್ಯವಾಗಲಿದೆ. ವಹಿಸಿ
ಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸ
ಲಿದ್ದೀರಿ. ಮತ್ತೊಬ್ಬರ ಮೇಲಿನ ಅವಲಂಬನೆ
ಕಡಿಮೆಯಾಗಲಿದೆ. ಹೆಚ್ಚು ನಿರೀಕ್ಷೆ ಇಟ್ಟು ಕೊಂಡು ಮಾಡುವ
ಕೆಲಸದಿಂದ ತುಸು ನಿರಾಸೆ ಕಾದಿದೆ. ದೊಡ್ಡ ಮಟ್ಟದ
ಕಾರ್ಯಗಳನ್ನು ಪ್ರಾರಂಭಿಸಲು ಇದು ಸಕಾಲವಲ್ಲ

ವೃಶ್ಚಿಕ
ಜೀವನ ಶೈಲಿಯಲ್ಲಿ ಬದಲಾವಣೆಯಾಗಲಿದೆ.
ಆಹಾರ, ಪಥ್ಯಗಳನ್ನು ಅನುಸರಿಸಿ ನಡೆಯಲಿ
ದ್ದೀರಿ. ಸೂಕ್ತ ಬದ್ಧತೆಯೊಂದಿಗೆ ಮುಂದೆ ಸಾಗಿದರೆ
ಒಳ್ಳೆಯ ಫಲ ಪಡೆಯುವ ಅವಕಾಶ ಖಂಡಿತವಾಗಿಯೂ
ಇದೆ. ತಂದೆ ತಾಯಿಯಿಂದ ಆರ್ಥಿಕ ಸಹಕಾರ
ದೊರೆಯಲಿದೆ. ದೋಷಾರೋಪ ಮಾಡುವುದು ಸರಿಯಲ್ಲ.

ಧನಸ್ಸು
ಆದಾಯಕ್ಕೆ ತಕ್ಕಂತೆ ಖರ್ಚುಗಳನ್ನು
ಹೊಂದಿಸಿಕೊಂಡರೆ ಸೂಕ್ತ. ನಿಮ್ಮ ಅತಿಯಾದ
ಆಸೆಯಿಂದ ಇತರ ಕುಟುಂಬ ಸದಸ್ಯರೊಂದಿಗೆ
ಮನಸ್ಥಾಪ ಉಂಟಾಗಬಹುದು. ಸಣ್ಣ ಸಣ್ಣ ವಿಚಾರಗಳಲ್ಲೂ
ಎಚ್ಚರಿಕೆಯಿಂದ ಹೆಜ್ಜೆ ಇಡಿ. ಮಾಹಿತಿ ತಿಳಿದು ಮುನ್ನಡೆಯಿರಿ.

ಮಕರ
ನಿಮ್ಮ ದಾರಿಯಲ್ಲಿ ನೀವೇ ನಡೆದು ಗುರಿ
ಸೇರಬೇಕು. ಆದರೆ ಇದಕ್ಕೆ ಸೂಕ್ತ ಸಹಕಾರವೂ
ಬೇಕಾಗುತ್ತದೆ. ಇದು ನಿಮ್ಮ ಮನೆಯ ಸದಸ್ಯರು,
ಸ್ನೇಹಿತರಿಂದ ದೊರೆಯಲಿದೆ. ಹೆಣ್ಣು ಮಕ್ಕಳ ಓದಿನಲ್ಲಿ
ಪ್ರಗತಿ ಕಂಡು ಬರಲಿದೆ. ಶುಭ ಸುದ್ದಿ ತಿಳಿಯಲಿದ್ದೀರಿ.

ಕುಂಭ
ಮನೆಯಲ್ಲಿ ಕೆಲಸಗಳು ಹೆಚ್ಚಾಗಲಿವೆ. ಯಾರ ಮೇಲೆ
ಹೆಚ್ಚು ನಂಬಿಕೆ ಇಟ್ಟಿರುತ್ತಿರೋ ಅವರಿಂದಲೇ
ನೋವಾಗುವ ಸಾಧ್ಯತೆ. ದೂರದ ಪ್ರಯಾಣ
ಮಾಡುವ ಅವಕಾಶ ಬರಲಿದೆ. ಸೂಕ್ತ ತಯಾರಿಯೊಂದಿಗೆ ಹಿಂದೆ
ಮಾಡಿದ್ದ ಕೆಲಸಕ್ಕೆ ಈ ವಾರದಲ್ಲಿ ಫಲ ದೊರೆಯಲಿದೆ. ವೃತ್ತಿಯಲ್ಲಿ
ಪದೋನ್ನತಿ ದೊರೆಯಲಿದೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಯ.

ಮೀನ
ವೈವಾಹಿಕ ಬದುಕಿನಲ್ಲಿ ಸಂತಸ ಹೆಚ್ಚಾಗಲಿದೆ.
ನಿಮ್ಮ ಬಗೆಯಾಗಿ ನೀವೇ ಅತಿಯಾಗಿ
ಹೇಳಿಕೊಳ್ಳುವುದು ಬೇಡ. ಧರ್ಮದ ದಾರಿಯಲ್ಲಿ
ಮುಂದೆ ಸಾಗುವಿರಿ. ಇತರರ ಸಾಧನೆಯನ್ನು ಗುರುತಿಸಿ,
ಪ್ರೋತ್ಸಾಹಿಸುವ ಕೆಲಸ ಮಾಡಲಿದ್ದೀರಿ. 

loader