Asianet Suvarna News Asianet Suvarna News

ಈ ವಾರ ಯಾರ ಭವಿಷ್ಯ ಹೇಗಿದೆ: ನಿಮ್ಮ ರಾಶಿಯಲ್ಲೇನಿದೆ..?

ಈ ವಾರ ಯಾರ ಭವಿಷ್ಯ ಹೇಗಿದೆ: ನಿಮ್ಮ ರಾಶಿಯಲ್ಲೇನಿದೆ..?

Weekly Horoscope 28 October 2018
Author
Bengaluru, First Published Oct 28, 2018, 7:18 AM IST

ಮೇಷ

ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ನಟ-ನಟಿಯರಿಗೆ ಒತ್ತಡದಿಂದ ಮುಕ್ತಿ ಸಿಕ್ಕಲಿದೆ.
ಮೊಣಕೈ ನೋವಿಗೆ ತಾತ್ಕಾಲಿಕ ಪರಿಹಾರ. ಹಿರಿಯ
ವ್ಯಕ್ತಿಗಳ ಸಲಹೆಯಿಂದ ಕಾರ್ಯ ಸಿದ್ಧಿ. ಅತಿಯಾದ
ಆತ್ಮವಿಶ್ವಾಸ ಬೇಡ. ಪ್ರೀತಿ-ಪ್ರೇಮದಿಂದ ಅಂತರ
ಕಾಯ್ದುಕೊಳ್ಳುವುದು ಒಳ್ಳೆಯದು. ಗಣೇಶನನ್ನು ಪೂಜಿಸಿ.

ವೃಷಭ

ಸಂಬಂಧಗಳ ಕಡೆಗೆ ಹೆಚ್ಚು ಗಮನ ನೀಡುವಿರಿ.
ಸೂಕ್ಷ್ಮ ವಿಚಾರಗಳಲ್ಲಿ ಅವಸರದಲ್ಲಿ ನಿರ್ಧಾರ
ತೆಗೆದುಕೊಳ್ಳಿ. ಒಳ್ಳೆಯವರು ಅಂದುಕೊಂಡವ
ರಿಂದಲೇ ಹೆಚ್ಚು ಅಪಾಯವಾಗುವ ಸಾಧ್ಯತೆ. ಬಿಚ್ಚು
ಮನಸ್ಸಿನಿಂದ ನಿಮ್ಮ ಸಮಸ್ಯೆಯನ್ನು ಸ್ನೇಹಿತರ ಬಳಿ
ಹೇಳಿಕೊಳ್ಳುವಿರಿ. ಗೃಹಿಣಿಯರಿಗೆ ಒಡವೆ ಕೊಳ್ಳುವ ಅವಕಾಶ

ಮಿಥುನ

ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ. ಮನಸ್ಸಿಗೆ
ನೆಮ್ಮದಿ ದೊರೆಯಲಿದೆ. ಹೆಣ್ಣು ಮಕ್ಕಳು ಹೆಚ್ಚು
ಅವಸರ ಪಡುವುದು ಬೇಡ. ನಿಮ್ಮಿಂದ ಸಹಾಯ
ಪಡೆದವರು ನಿಮಗೆ ಗೌರವ ನೀಡಲಿದ್ದಾರೆ. ದಿನಗೂಲಿ
ಕಾರ್ಮಿಕರಿಗೆ ಆರ್ಥಿಕವಾಗಿ ಇಕ್ಕಟ್ಟು ಉಂಟಾಗಲಿದೆ.
ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ ಕಾಣಲಿದೆ.

ಕಟಕ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು
ತೊಡಗಿಸಿಕೊಳ್ಳುವಿರಿ. ಓಡಾಟ ಹೆಚ್ಚಾಗಲಿದೆ.
ಕಣ್ಣಿನ ಆರೋಗ್ಯದಲ್ಲಿ ವ್ಯತ್ಯಯ. ಆತ್ಮೀಯ
ರಿಂದಲೇ ತೊಂದರೆಯಾಗುವ ಸಾಧ್ಯತೆ. ಸರಿಯಾದ
ಸಮಯಕ್ಕೆ ಆಹಾರ ಸೇವನೆಯ ಅಭ್ಯಾಸ ಮಾಡಿ
ಕೊಳ್ಳಲಿದ್ದೀರಿ. ಜವಾಬ್ದಾರಿಯುತ ಕೆಲಸ ಹೆಗಲಿಗೆ ಬೀಳಲಿದೆ.

ಸಿಂಹ

ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಪ್ರೋತ್ಸಾಹ
ದೊರೆಯಲಿದೆ. ಸಮಾಜಮುಖಿ ಚಿಂತನೆಗಳು
ಹೆಚ್ಚಾಗಲಿದೆ. ಲೋಕ ನಿಂದನೆಗೆ ಒಳಗಾಗುವಿರಿ.
ಅತಿಯಾದ ಮಾತು ಬೇಡ. ಸೂಕ್ತ ಸಂದರ್ಭದಲ್ಲಿ ಒಳ್ಳೆಯ
ನಿರ್ಧಾರ ಕೈಗೊಳ್ಳುವಿರಿ. ತಾಯಿಯ ಆರೋಗ್ಯದಲ್ಲಿ
ಚೇತರಿಗೆ. ಹಣಕಾಸು ವ್ಯವಹಾರದಲ್ಲಿ ಜೋಪಾನ

ಕನ್ಯಾ

ಸ್ನೇಹಿತರೊಂದಿಗೆ ಸೇರಿ ಜಂಟಿ ಉದ್ಯಮ
ಪ್ರಾರಂಭಿಸಲಿದ್ದೀರಿ. ಹೊಸ ವಾಹನ ಕೊಳ್ಳುವ
ಅವಕಾಶ ಬರಲಿದೆ. ಅಡವಿಟ್ಟ ಚಿನ್ನವನ್ನು
ಬಿಡಿಸಲಿದ್ದೀರಿ. ಬಂಧುಗಳು ಮನೆಗೆ ಬರಲಿದ್ದಾರೆ.
ಎದುರಾದ ಸಮಸ್ಯೆಗಳನ್ನು ಶಾಂತವಾಗಿ ಇದ್ದುಕೊಂಡು
ಬಗೆಹರಿಸಿಕೊಳ್ಳುವಿರಿ. ಶಿವನ ದೇವಾಲಯಕ್ಕೆ ಭೇಟಿ ನೀಡಿ.

ತುಲಾ

ಒತ್ತಡವನ್ನು ಯಶಸ್ವಿಯಾಗಿ ನಿರ್ವಹಿಸಿದರೆ
ಒಳ್ಳೆಯ ಫಲ ದೊರೆಯಲಿದೆ. ವಿದೇಶಿ ಪ್ರವಾಸ
ಮಾಡುವ ಕನಸು ನನಸಾಗಲಿದೆ. ಖ್ಯಾತ ನಾಮರ
ನೇರ ಭೇಟಿ ಸಾಧ್ಯವಾಗಲಿದೆ. ಮಕ್ಕಳ ಬಗ್ಗೆ ಅಗತ್ಯ ನಿಗಾ
ಇರಲಿ. ಆರೋಗ್ಯದಲ್ಲಿ ಗಣನೀಯ ಚೇತರಿಕೆ. ದಿನಸಿ
ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗಲಿದೆ.

ವೃಶ್ಚಿಕ

ಸ್ನೇಹಿತರಿಗೆ ಸಹಾಯ ಮಾಡುವಿರಿ. ಕೂದಲು
ಉದುರುವಿಕೆ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳುವಿರಿ. ನಿಮ್ಮ ಚಿಂತನಾ ಕ್ರಮಗಳು
ಬದಲಾಗಲಿವೆ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹೆಚ್ಚಾಗಿ
ಅದರ ಫಲವಾಗಿ ಸ್ವಾಭಿಮಾನ ಹೆಚ್ಚಲಿದೆ. ಯಾರಿಗೂ
ಹೆದರುವುದು ಬೇಡ. ಆತ್ಮವಿಶ್ವಾಸ ಮೂಡಲಿದೆ

ಧನಸ್ಸು

ಕಷ್ಟದಲ್ಲಿರುವ ಬಂಧುಗಳಿಗೆ ಸಹಾಯ
ಮಾಡುವಿರಿ. ಹೊಸ ವಸ್ತುಗಳನ್ನು ಕೊಳ್ಳುವಾಗ
ಎಚ್ಚರವಿರಲಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ
ವಿನಾಕಾರಣ ಪಾಲ್ಗೊಳ್ಳುವುದು ಬೇಡ. ಸಮಸ್ಯೆಗಳನ್ನು
ಸವಾಲಾಗಿ ಸ್ವೀಕಾರ ಮಾಡುವಿರಿ. ಆತ್ಮವಿಶ್ವಾಸ ಹೆಚ್ಚಲಿದೆ.

ಮಕರ

ಸಹೋದ್ಯೋಗಿಗಳೊಂದಿಗೆ ವಿರಸ ಬೇಡ. ನಿಮ್ಮ
ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ
ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ
ಕಾಣಲಿದೆ. ರಾಜಕಾರಣಿಗಳಿಗೆ ಶುಭ ಸುದ್ದಿ ತಿಳಿಯಲಿದೆ.
ಕೃಷಿಕರಿಗೆ ಹೆಚ್ಚು ಲಾಭವಾಗಲಿದೆ. ವಿಷ್ಣುವನ್ನು ಆರಾಧಿಸಿ.

ಕುಂಭ

ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಸಮಸ್ಯೆಗೆ ಪರಿಹಾರ ಲಭ್ಯ. ಹೊಸ ಸ್ನೇಹಿತರ
ಪರಿಚಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ.
ಪ್ರಸಿದ್ಧ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುವ ಅವಕಾಶ.
ಕೆಲಸದಲ್ಲಿ ಬದ್ಧತೆ ಹೆಚ್ಚಾಗಲಿದೆ. ನಿಮ್ಮ ಮೇಲಾಧಿಕಾರಿ
ಯಿಂದ ಪ್ರಶಂಸೆಯ ಮಾತು ಕೇಳುವಿರಿ

ಮೀನ

ಅನಗತ್ಯ ಕಿರಿಕಿರಿಗಳು ದೂರಾಗಲಿವೆ. ಹಿಂದೆ
ಕೂಡಿಟ್ಟ ಕಾಸು ಇಂದು ನಿಮ್ಮ ಸಹಾಯಕ್ಕೆ
ಬರಲಿದೆ. ಕೆಲಸ ನಿಮಿತ್ತ ಬೇರೆ ಬೇರೆ ಸ್ಥಳಕ್ಕೆ ಭೇಟಿ
ನೀಡುವಿರಿ. ನಿಮ್ಮ ಜಾಣತನಕ್ಕೆ ಮಾನ್ಯತೆ ದೊರೆಯಲಿದೆ.
ಅದೃಷ್ಟದ ಆಟದಲ್ಲಿ ನಿಮಗೆ ಗೆಲುವು ದೊರೆಯಲಿದೆ.

Follow Us:
Download App:
  • android
  • ios