ಶುಭವಾಗುವುದು ಯಾವ ರಾಶಿಗೆ - ಸಮಸ್ಯೆ ಯಾವ ರಾಶಿಗೆ : ವಾರ ಭವಿಷ್ಯ

ಮೇಷ
ಒಂದಾದರೊಂದು ಅಡೆತಡೆಗಳು ಎರಾಗುವ
ಸಂಭವವಿದೆ. ಈ ಸಂಕಷ್ಟದಲ್ಲಿ ನಿಮ್ಮ
ಮನೆಯವರ ಬೆಂಬಲ ಪ್ರತಿ ಹಂತದಲ್ಲೂ
ಇರುವುದರಿಂದ ಕುಗ್ಗದೆ ಧೈಯಧವಾಗಿ ಎದುರಿಸಲಿದ್ದೀರಿ.
ನಿಮ್ಮ ಸಾಮರ್ಥ್ಯ, ತಾಳ್ಮೆಯ ಪರೀಕ್ಷೆ ಈ ವಾರ
ನಡೆಯಲಿದೆ. ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ.

ವೃಷಭ
ನಿವಂದುಕೊಳ್ಳದ ಘಟನೆಗಳು, ಸನ್ನಿವೇಶಗಳು
ಈ ವಾರ ಎದುರಾಗಲಿದೆ. ಹೊಸ ವಸ್ತುಗಳ
ಖರೀದಿ ಸಾಧ್ಯತೆ. ಪ್ರಾಣಿ ಪಕ್ಷಿಗಳೆಂದರೆ
ಇಷ್ಟಪಡುವ ಮಕ್ಕಳ ಒತ್ತಾಸೆಗೆ ಸಾಕು ಪ್ರಾಣಿ ತರುವ
ಸಾಧ್ಯತೆ. ಮಹಿಳೆಯರಲ್ಲಿ ಈ ವಾರ ಪ್ರಾಯಾಸ ಜಾಸ್ತಿ
ಹಾಗೂ ಹೊಸ ಕೆಲಸಗಳತ್ತ ಆಸಕ್ತಿ ಹೆಚ್ಚಲಿದೆ.

ಮಿಥುನ
ಹೊಸ ಕೆಲಸ ಆರಂಭಿಸಬೇಕು ಎಂದುಕೊಂಡ
ವರಿಗೆ ಈ ವಾರ ನೆರವೇರಲಿದೆ. ಯಾವುದೇ
ಕಾರಣ್ಕ ಹಳೆಯ ಘಟನೆಗಳನ್ನು ಮೆಲುಕು
ಹಾಕದೆ ಮುಂದೆ ಸಾಗಿ. ಕೈಕೊಟ್ಟವರ ಜೊತೆಗೆ ಕೈ ಕುಲುಕಿ
ದರೆ ನೀವು ಕೈ ಸುಟ್ಟುಕೊಳ್ಳುವಿರಿ. ಮನೆಯವರ ಪ್ರೋತ್ಸಾಹ
ದಿಂದ ಅಂದುಕೊಂಡ ಕಾರ್ಯ ಸುಗಮವಾಗಲಿದೆ.

ಕಟಕ
ಬುಡಕ್ಕೆ ಬೆಂಕಿ ಬಿದ್ದಾಗ ಎಚ್ಚತ್ತುಕೊಳ್ಳುವ ಬದಲು
ಮುಂದಾಲೋಚನೆಯಿಂದ ಹೆಜ್ಜೆ ಇಡುವುದು
ಒಳಿತು. ಹಣಕಾಸಿನ ವ್ಯವಹಾರದ ವಿಷಯದಲ್ಲಿ
ಅತಿಯಾದ ಸೋಮಾರಿತನ ಬೇಡ. ಹೊಸ ಸ್ನೇಹಿತರ
ಪರಿಚಯದಿಂದ ಹೊಸ ಅನುಭವ ಆಗಲಿದೆ. ಮಕ್ಕಳ
ಮುಂದಿನ ವಿದ್ಯಾಭ್ಯಾಸದಲ್ಲಿ ಗೊಂದಲ ಬೇಡ.

ಸಿಂಹ
ಜೀವನದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ
ಜಿಗುಪ್ಸೆ ಹೆಚ್ಚಾಗುವ ಸಾಧ್ಯತೆ. ಇಷ್ಟು ದಿನ
ಇದ್ದಂತಹ ಫ್ರೀನೆಸ್ ಇನ್ನು ಮುಂದೆ
ಇರುವುದಿಲ್ಲ. ಏಕಾಂತ ಎನಿಸಿದಾಗ ಆಪ್ತರೊಡನೆ
ಮಾತನಾಡುವುದು, ಬೇರೆವಿಷಯಗಳ ಬಗ್ಗೆ ಆಲೋಚಿಸಿ,
ಕ್ರಿಯಾಶೀಲತೆಗೆ ಒತ್ತುಕೊಟ್ಟರೆ ಎಲ್ಲವೂ ಸರಿಹೋಗಲಿದೆ.

ಕನ್ಯಾ
ನಿಮ್ಮಲ್ಲಿನ ಆಲೋಚನಾ ಶಕ್ತಿಯೇ ನಿಮ್ಮ ಗುರಿ
ಸಾಧನೆಯ ಪ್ರಮುಖ ಅಸ್ತ್ರವಾಗಲಿದೆ. ಹಿಡಿದು
ಮುಟ್ಟಿದವರ ಬಳಿ ನಿಮ್ಮ ಹೊಸ ಕೆಲಸದ ಬಗ್ಗೆ
ಚರ್ಚಿಸಿ ನಿರ್ಧರಿಸುವುದಕ್ಕಿಂತ ಸ್ವ ಚಿಂತನೆಯಿಂದ
ಮುಂದಿನ ಕೆಲಸಗಳಿಗೆ ಅನುಕೂಲವಾ ಗಲಿದೆ. ಸಕಾರಾತ್ಮಕ
ಆಲೋಚನೆಗಳೇ ನಿಮ್ಮ ಶಕ್ತಿಯಾಗಲಿದೆ. 

ತುಲಾ
ಮನೆ ಬಾಗಿಲಿಗೆ ಬಂದ ಅವಕಾಶ ಕೈಬಿಟ್ಟರೆ
ನಿಮಗೆ ನಷ್ಟವಾಗಲಿದೆ. ಯಾವುದೋ ಒಂದು
ತಪ್ಪು ನಿರ್ಧಾರ ನಿಮ್ಮನ್ನು ಜೀವನ ಪೂರ್ತಿ
ಕಾಡದಿರಲಿ. ತಾಳ್ಮೆಯಿಂದ, ಸಮಯವಕಾಶ ಪಡೆದು
ನಿರ್ಧರಿಸುವುದು ಒಳಿತು. ಮಹಿಳೆಯರು ಹೊಸ ಕೆಲಸದಲ್ಲಿ
ಹಿಂದೆ ಮುಂದೆ ನೋಡದೆ ಮುನ್ನಡೆದರೆ ಕೆಲಸಗಳು ಸಫಲ.

ವೃಶ್ಚಿಕ
ಉಪ್ಪು ತಿಂದಮೇಲೆ ನೀರು ಕುಡಿಯಲೇಬೇಕು.
ಅನಿರೀಕ್ಷಿತವಾಗಿ ನಿಮ್ಮಿಂದಾದ ತಪ್ಪುಗಳನ್ನು
ಒಪ್ಪಿಕೊಳ್ಳಬೇಕು. ನಂತರ ದಿನಗಳಲ್ಲಿ
ಅವಮಾನಗಳು ಎದುರಾಗುವ ಸಾಧ್ಯತೆ. ಕುಟುಂಬ
ಸದಸ್ಯೆರು ಹಾಗೂ ಸ್ನೇಹಿತರ ಜೊತೆಗೆ ಹಣಕಾಸಿವ
ವ್ಯವಹಾರ ಬೇಡ. ಆಹಾರದ ಬಗ್ಗೆ ಎಚ್ಚರ ಇರಲಿ.

ಧನಸ್ಸು
ಮಕ್ಕಳು ಏನೇ ಮಾಡಿದರು ಸರಿ ಎನ್ನುವ
ಭಾವನೆ ಬೆಳೆಸಿಕೊಳ್ಳದಿರಿ. ಸರಿ ಇದ್ದದ್ದನ್ನು
ಬೆನ್ನುತಟ್ಟಿ, ಅವರಿಂದಾದ ತಪ್ಪನ್ನು
ಆಗಿಂದಾಗಲೇ ಸರಿಪಡಿಸಿ. ಈ ವಾರ ದೂರದೂರಿಗೆ
ಪ್ರಯಾಣ ಸಾಧ್ಯತೆ. ವಾರಾಂತ್ಯದಲ್ಲಿ ಆಯಾಸ ಜಾಸ್ತಿ. 

ಮಕರ
ಎಲ್ಲರಿಗೂ ಒಳಿತು ಮಾಡುವುದು ಸರಿಯೇ.
ಆದರೆ ಅತಿಯಾದ ಸಹಾಯ ಕಂಟಕವಾಗ
ಬಾರದು. ಅಪರಿಚಿತರನ್ನು ನಂಬಿ ಹಣಕಾಸಿವ
ವ್ಯವಹಾರ ಮಾಡಿದಲ್ಲಿ ನಷ್ಟ ಅನುಭವಿಸಲಿದ್ದೀರಿ. ಈ
ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆ ಅನಾಹುತ ತಪ್ಪಿಸಲಿದೆ. 

ಕುಂಭ
ಕುಟುಂಬದವರ ನಿರೀಕ್ಷೆ ಇಂದು ಹುಸಿಯಾ
ಗಲಿದೆ. ದಿಢೀರ್ ನಿರ್ಧಾರ ಬದುಕಿನಲ್ಲಿ ಶಾಂತಿ
ನೆಮ್ಮದಿ ತಂದುಕೊಡಲಿದೆ. ಸಂಗೀತ ಕ್ಷೇತ್ರದಲ್ಲಿ
ಇರುವವರಿಗೆ ಒಳ್ಳೆಯ ಗೌರವ, ವೇದಿಕೆ ಸಿಗಲಿದೆ. ಮಕ್ಕಳ
ಶೈಕ್ಷಣಿಕ ವಿಚಾರದಲ್ಲಿ ಆರಂಭದಲ್ಲೇ ಒಳ್ಳೆಯ ಸುದ್ದಿ
ಕೇಳುವಿರಿ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ. 

ಮೀನ
ನೀರಿನಲ್ಲಿ ಮೀನಿನ ಹೆಜ್ಜೆ ಕಾಣುವುದಿಲ್ಲ. ಹಾಗೆ
ನಿಮ್ಮ ಬಗ್ಗೆ ನಿಮ್ಮ ಪ್ರೀತಿ ಪಾತ್ರರೇ ನಡೆಸುವ
ಕುತಂತ್ರ ನಿಮಗೇ ತಿಳಿಯುವುದಿಲ್ಲ. ಹಾಗಾಗಿ
ಯಾವುದೊಂದು ನಿರ್ಧಾರ ಕೈಗೊಳ್ಳುವ ಮೊದಲು
ಹಿರಿಯರೊಂದಿಗೆ ಯೋಚಿಸಿ. ಬಂಧುಗಳ ಆಗಮನ.