Asianet Suvarna News Asianet Suvarna News

ಒಂದು ರಾಶಿಗೆ ಹೆಚ್ಚಿನ ಒಳಿತು : ಈ ವಾರ ನಿಮ್ಮ ಭವಿಷ್ಯ ಹೇಗಿದೆ.?

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?

Weekly Horoscope 25 August 2019
Author
Bengaluru, First Published Aug 25, 2019, 7:12 AM IST

ಒಂದು ರಾಶಿಗೆ ಹೆಚ್ಚಿನ ಒಳಿತು : ಈ ವಾರ ನಿಮ್ಮ ಭವಿಷ್ಯ ಹೇಗಿದೆ.? 

ಮೇಷ
ಸತತ ಪ್ರಯತ್ನದಿಂದ ಕೆಲಸ ಮಾಡಿಯೂ
ಉತ್ತಮ ಫಲಿತಾಂಶ ಸಿಗದಿದ್ದಲ್ಲಿ ಎಂಥಹವರಿಗೂ
ಬೇಸರವಾಗುತ್ತದೆ. ಆದರೆ ಸೋತದ್ದಕ್ಕೆ ಕಾರಣ
ಹುಡುಕಿ ತಪ್ಪು ಎಲ್ಲಾಗಿದೆ ಎಂದು ತಿದ್ದಿಕೊಂಡು ಮುಂದಿನ
ಪ್ರಯತ್ನದಲ್ಲಿ ಸಂಪೂರ್ಣವಾಗಿ ನಿಮ್ಮ ಬೆಸ್ಟ್ ಅನ್ನು
ನೀಡಿದರೆ ಗುರಿ ಸಾಧಿಸುವಿರಿ. 

ವೃಷಭ
ಪಾಲಿಗೆ ಬಂದದ್ದೇ ಪಂಚಾಮೃತ ಎಂದು
ಮುಂದೆ ಸಾಗುತ್ತಿರಿ. ಬೇರೆಯವರ ವಿಚಾರಗಳಿಗೆ
ಹಸ್ತಕ್ಷೇಪ ಮಾಡದಿರಿ. ನಿಮ್ಮ ಸಹಜ
ವರ್ತನೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಸಾಧ್ಯತೆ. ಹೊಸ
ವ್ಯಕ್ತಿಗಳ ಪರಿಚಯವಾಗಲಿದ್ದು, ಕುಟುಂಬ ಹಾಗೂ
ಸ್ನೇಹಿತ ವರ್ಗದಲ್ಲಿ ನಿಮ್ಮ ಮಾತಿಗೆ ಮಾನ್ಯತೆ ಸಿಗಲಿದೆ.

ಮಿಥುನ
ಹೊಸ ವಿಚಾರಗಳ ಆಲೋಚನೆ. ಈ ಕುರಿತು
ಒಬ್ಬರೆ ನಿರ್ಧಾರ ಕೈಗೊಳ್ಳದೆ ಭವಿಷ್ಯದ
ಒಳಿತಿಗಾಗಿ ಎಲ್ಲರ ಅಭಿಪ್ರಾಯ ತೆಗೆದುಕೊಂಡು
ನಿರ್ಧಾರ ತೆಗೆದುಕೊಳ್ಳಿ. ಸಂಗೀತದಲ್ಲಿ ಒಲವು ಹೆಚ್ಚಲಿದ್ದು,
ಅದರಲ್ಲಿ ಮುಂದುವರಿಯಲು ಇದು ಸಕಾಲ.
ದೂರದೂರಿನಿಂದ ಬಂಧುಗಳ ಆಗಮನ ಸಾಧ್ಯತೆ.

ಕಟಕ
ವ್ಯಕ್ತಿಗಿಂತ ಕೆಲವೊಮ್ಮೆ ವ್ಯಕ್ತಿತ್ವ ಬಹಳ
ಮುಖ್ಯವಾಗುವುದು. ಈ ಪರೀಕ್ಷೆ ಎದುರಾಗುವ
ಸಾಧ್ಯತೆ ಇದ್ದು ವಿಚಲಿತಗೊಳ್ಳುವ ಅಗತ್ಯವಿಲ್ಲ.
ಅದನ್ನು ಸೂಕ್ತವಾಗಿ ಎದುರಿಸಿ ಹೊರಬರಲಿದ್ದೀರಿ. ಹೊಸ
ವಾಹನ ಕೊಳ್ಳುವುದಕ್ಕೆ ತಯಾರಿ ನಡೆಯಲಿದೆ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆಯಲ್ಲಿ ನೆಮ್ಮದಿ. 

ಸಿಂಹ
ಮನಸ್ಸು ಶಾಂತವಾಗಿದ್ದಷ್ಟು ಕೆಲಸ
ಕಾರ್ಯಗಳು ಸುಸೂತ್ರವಾಗಿ ನೆರವೇರುವುದು.
ಈ ವಾರ ನೀವಂದುಕೊಂಡು ಕೆಲಸ
ನಡೆಯಲಿದ್ದು, ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ
ಒಳ್ಳೆಯದು. ಸಹಾಯ ಎಂದು ಕೇಳಿ ಬಂದವರ ಬಳಿ
ಹಣಕಾಸಿನ ವಿಚಾರದಲ್ಲಿ ವ್ಯವಹಾರ ಬೇಡ. 

ಕನ್ಯಾ
ಹೊಸಬರು ನಿಮ್ಮ ಜೀವನಕ್ಕೆ ಬಂದರೂ
ಅತಿಯಾದ ಸಲಿಗೆ ಬೇಡ. ಇದರಿಂದ
ತೊಂದರೆಗಳು ನಿಮ್ಮನ್ನೇ ಅರಸಿ ಬರಬಹುದು.
ವಾರಾಂತ್ಯದಲ್ಲಿ ಒತ್ತಡದಿಂದ ಹೊರಬರುವಿರಿ. ದೊಡ್ಡ
ಕೆಲಸಗಳು ಈ ವಾರ ಕೈಗೂಡಲಿದೆ. ಮನೆ ಮಕ್ಕಳ ಜೊತೆಗೆ
ದೂರದೂರಿಗೆ ಹೋಗಿ ಬನ್ನಿ. ಸ್ವಲ್ಪ ಚೇಂಜ್ ಇರುತ್ತೆ

ತುಲಾ
ಚಿಂತೆಗಳಿಂದ ಮುಕ್ತಿ ಸಿಗಲಿದ್ದು, ಆರ್ಥಿಕವಾಗಿ
ಶಕ್ತರಾಗುವಿರಿ. ಅತಿಯಾದ ಮಾತು,
ಹರಟೆಗಳಿಗೆ ಬ್ರೇಕ್ ಹಾಕಿ ಆಸಕ್ತಿದಾಯಕ
ಕೆಲಸಗಳತ್ತ ಕೈ ಜೋಡಿಸಿ. ಸೇವಾ ಮನೋಭಾವ
ಬೆಳೆಸಿಕೊಳ್ಳಿ. ಕೆಲ ಕೆಲಸಗಳಿಂದ ಹಿರಿಯರ ಪ್ರಶಂಸೆಗೆ
ಪಾತ್ರರಾಗಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ. 

ವೃಶ್ಚಿಕ
ಭವಿಷ್ಯಕ್ಕಾಗಿ ಒಂದಷ್ಟು ತಯಾರಿ
ಮಾಡಿಕೊಳ್ಳುವಿರಿ. ಮಕ್ಕಳಿಗಾಗಿ ಹೆಚ್ಚು ಖರ್ಚು
ಮಾಡುವ ಅನಿವಾರ್ಯತೆ ಎದುರಾಗಲಿದೆ.
ಸೋಮಾರಿತನ ಬಿಟ್ಟು ಕೆಲಸದ ಕಡೆ ಮುಖ
ಮಾಡಲಿದ್ದೀರಿ. ಕೆಲಸದ ವಿಚಾರದಲ್ಲಿ ಮೇಲಧಿಕಾರಿ
ಗಳಿಂದ ಮೆಚ್ಚುಗೆ ಸಿಗಲಿದೆ.

ಧನಸ್ಸು
ಸಹೋದರರ ಆಗಮನದಿಂದ ಮನೆಯಲ್ಲಿ
ಸಂತಸ ನೆಲೆಸಲಿದೆ. ಕಣ್ಣಿನ ಆರೋಗ್ಯಕ್ಕೆ
ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿದೆ.
ಸಮಯಕ್ಕೆ ತಕ್ಕಂತೆ ಸ್ನೇಹಿತರೊಂದಿಗೆ ವ್ಯವಹರಿಸಿ. ಬಾಕಿ
ಇರುವ ಸಾಲ ಎಲ್ಲವೂ ತೀರಲಿದ್ದು, ನೆಮ್ಮದಿ ಇರಲಿ

ಮಕರ
ಆಮೆಗತಿಯಲ್ಲಿರುವ ಕೆಲಸಕ್ಕೆ ಈ ವಾರ ಚುರಿಕು
ಹೆಚ್ಚಲಿದೆ. ಕೊಟ್ಟ ಹಣ ವಾಪಸ್ಸು ನಿಮ್ಮ
ಕೈಸೇರಲಿದೆ. ಯಾವುದೇ ನಿರ್ಧಾರ ಕೈಗೊಳ್ಳುವ
ಮುನ್ನ ಶಾಂತರೀತಿಯಿಂದ ಯೋಚಿಸಿ. ಮಹಿಳೆಯರ
ಆರೋಗ್ಯದಲ್ಲಿ ಏರುಪೇರಾಗಲಿ

ಕುಂಭ
ಕೆಲಸದಲ್ಲಿ ಲಾಭ ಎನ್ನುವುದಕ್ಕಿಂತ ನಿಮ್ಮ ಶ್ರಮ
ಹಾಗೂ ಆಸಕ್ತಿಯೊಂದಿಗೆ ಪ್ರೀತಿಯಿಂದ ಕೆಲಸ
ಮಾಡಿ. ಯಾವುದೇ ಅಪೇಕ್ಷೆ ಬೇಡ.
ಜೀವನದಲ್ಲಿ ನೊಂದವರಿಗೆ ನಾಲ್ಕು ಪ್ರೇರಣೆಯ
ಮಾತುಗಳನ್ನಾಡಿದರೆ ಅವರ ಜೀವನದಲ್ಲಿ ನಿಮ್ಮಿಂದ
ಬದಲಾವಣೆ ಸಿಗಬಹುದು. 

ಮೀನ
ಒಳ್ಳೆಯ ಕೆಲಸಗಳಿಗೆ ತಡ ಮಾಡದೆ ಕಣ್ಮುಚ್ಚಿ
ಅಸ್ತು ಎಂದು ಮುಂದೆ ಸಾಗಿ. ಮುಂದೆ ಈ
ಅವಕಾಶ ಮತ್ತೆ ಸಿಗುತ್ತೊ ಇಲ್ಲವೋ ಯಾರಿಗೆ
ಗೊತ್ತು. ಉದ್ಯೋಗದಲ್ಲಿ ಪ್ರಗತಿ. ಬಂಧುಗಳ
ಆಗಮನದಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ

Follow Us:
Download App:
  • android
  • ios