Asianet Suvarna News Asianet Suvarna News

ವಾರ ಭವಿಷ್ಯ : ಈ ರಾಶಿಯವರಿಗಿದೆ ಭರ್ಜರಿ ಯೋಗ

ವಾರ ಭವಿಷ್ಯ : ಈ ರಾಶಿಯವರಿಗಿದೆ ಭರ್ಜರಿ ಯೋಗ

Weekly Horoscope 21 october 2018
Author
Bengaluru, First Published Oct 21, 2018, 7:03 AM IST

ಮೇಷ

ಕಾರು ಕೊಳ್ಳುವ ಯೋಗವಿದೆ. ಮಕ್ಕಳ
ಸಾಧನೆಯಿಂದ ಹೆಮ್ಮೆಯಾಗಲಿದೆ. ನಿತ್ಯವೂ
ಪ್ರಾರ್ಥನೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ
ದೊರೆಯಲಿದೆ. ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಇರಲಿ.
ಅಂದುಕೊಂಡ ಕಾರ್ಯಗಳಲ್ಲಿ ಪ್ರಗತಿ ಸಾಧ್ಯವಾಗಲಿದೆ. 

ವೃಷಭ

ಕೆಲಸಗಳು ಹೆಚ್ಚಾಗಲಿವೆ. ಆದರೆ ಅದರಿಂದ ಸದ್ಯಕ್ಕೆ
ಯಾವುದೇ ಆದಾಯ ದೊರೆಯುವುದಿಲ್ಲ.
ದೀರ್ಘಾವಧಿ ಯೋಜನೆಗಳಿಗೆ ವೇದಿಕೆ ಸಿದ್ಧವಾಗಲಿದೆ.
ಮದುವೆ ಮೊದಲಾದ ಶುಭ ಕಾರ್ಯಗಳನ್ನು ಕೈಗೊಳ್ಳಲು ಇದು
ಸಕಾಲ. ಮೃತ ಪಿತೃಗಳಿಗೆ ಸೂಕ್ತ ರೀತಿಯಲ್ಲಿ ಪಿಂಡ ಪ್ರಧಾನ
ಮಾಡಿ. ಮಾತಿನಲ್ಲಿ ಹಿಡಿತವಿರಲಿ.

ಮಿಥುನ

ಬಂಧುಗಳ ಸಹಕಾರದಿಂದ ನೂತನ ವ್ಯವಹಾರ
ಸಾಧ್ಯವಾಗಲಿದೆ. ಆಡಳಿತಾತ್ಮಕ ವಿಚಾರಗಳಲ್ಲಿ
ಮೇಲುಗೈ ಸಾಧಿಸುವಿರಿ. ಅಧಿಕಾರ ಸ್ಥಾನಕ್ಕೇ
ರುವಿರಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ವಾಹನ
ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಸಣ್ಣ ಸಣ್ಣ ವಿಚಾರಕ್ಕೆ
ಹೆಚ್ಚು ಕೋಪ ಮಾಡಿಕೊಳ್ಳುವುದು ಬೇಡ. 

ಕಟಕ

ಶುಭ ಕಾರ್ಯಕ್ಕೆ ಹೆಚ್ಚು ಕಾಯುವುದು ಬೇಡ.
ಶಾಲಾ ಮಕ್ಕಳಿಗೆ ಹೆಚ್ಚು ವಿರಾಮ ಸಿಕ್ಕಲಿದೆ.
ಕುಟುಂಬ ಸಮೇತರಾಗಿ ದೂರದ ಪ್ರಯಾಣ
ಮಾಡುವಿರಿ. ಸಂಬಂಧಗಳ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ
ನಡೆದುಕೊಳ್ಳಿ. ಜ್ಞಾಪಕ ಶಕ್ತಿ ಹೆಚ್ಚಾಗಲಿದೆ. ಮನೆಯಲ್ಲಿ
ಸಂಭ್ರಮದ ವಾತಾವರಣ. ದುರ್ಗೆಯ ಪೂಜೆ ಮಾಡಿ.

ಸಿಂಹ

ಅನಗತ್ಯ ವಿಚಾರಗಳ ಕಡೆಗೆ ಹೆಚ್ಚು ಗಮನಹರಿಸು
ವುದು ಬೇಡ. ನಿಮ್ಮ ಪಾಲಿಗೆ ಬಂದ ಕೆಲಸವನ್ನು
ಶ್ರದ್ಧೆಯಿಂದ ಮಾಡುವಿರಿ. ಮತ್ತೊಬ್ಬರ ಬಗ್ಗೆ
ವಿನಾಕಾರಣ ಕೋಪಗೊಳ್ಳದಿರಿ. ನೆಮ್ಮದಿಯ ನಾಳೆಗಾಗಿ
ನೀವು ಇಂದಿನಿಂದಲೇ ಕಷ್ಟಪಡುವುದು ಒಳ್ಳೆಯದು.
ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ.

ಕನ್ಯಾ

ಆರೋಗ್ಯದಲ್ಲಿ ಸ್ಥಿರತೆ ಏರ್ಪಡಲಿದೆ. ದೇವರ
ಮೇಲಿನ ನಂಬಿಕೆ ಹೆಚ್ಚಾಗಲಿದೆ. ಮಾಡುವ ಪ್ರತಿ
ಕೆಲಸವನ್ನೂ ತಾಳ್ಮೆಯಿಂದ ಮಾಡಿ. ಮಾತಿನಲ್ಲಿ
ಸ್ಪಷ್ಟತೆ ಇರಲಿ. ಅಡ್ಡ ಗೋಡೆಯ ಮೇಲೆ ದೀಪವಿಟ್ಟಹಾಗೆ
ಮಾತನಾಡುವುದು ಬೇಡ. ಶುಚಿತ್ವಕ್ಕೆ ಹೆಚ್ಚು ಆದ್ಯತೆ
ನೀಡುವಿರಿ. ಬಂಧುಗಳಿಂದ ಆರ್ಥಿಕ ಸಹಕಾರ.

ತುಲಾ

ವ್ಯಾಪಾರದಲ್ಲಿ ಪ್ರಗತಿ. ಉಳಿತಾಯಕ್ಕೆ ಹೆಚ್ಚು
ಪ್ರಾಮುಖ್ಯತೆ ನೀಡಿ. ಬಾಡಿಗೆ ಮನೆಯಲ್ಲಿ
ಇರುವವರಿಗೆ ಮಾಲೀಕರ ಕಾಟ ಹೆಚ್ಚಲಿದೆ. ತಂದೆಯ
ಆರೋಗ್ಯದಲ್ಲಿ ಚೇತರಿಕೆ. ಆದಾಯದ ಒಂದು ಭಾಗ ಅನವಶ್ಯಕ
ಖರ್ಚುಗಳಿಗೆ ವ್ಯಯವಾಗುವುದು. ಇದನ್ನು ತಪ್ಪಿಸುವ ಪ್ರಯತ್ನ
ಮಾಡಿ. ಸೋಮಾರಿತನದಿಂದ ಹೊರ ಬರುವಿರಿ.

ವೃಶ್ಚಿಕ

ಸ್ನೇಹಿತರೊಂದಿಗೆ ಮೃದುವಾಗಿ ವರ್ತಿಸಿ. ಹಿಂದೆ
ಕಂಡಿದ್ದ ಕನಸುಗಳು ನನಸಾಗುವ ದಿನಗಳಿವು. ಸೂಕ್ತ
ಮುಂಜಾಗೃತೆಯಿಂದ ದೊಡ್ಡ ಕೆಲಸಗಳಿಗೆ ಕೈ ಹಾಕಿ.
ಸರಕಾರಿ ನೌಕರರಿಗೆ ಖರ್ಚು ಹೆಚ್ಚಾಗಲಿದೆ. ನಿಮ್ಮ ಸ್ವಾಭಿಮಾನಕ್ಕೆ
ದೊಡ್ಡ ವ್ಯಕ್ತಿಗಳಿಂದ ಗೌರವ ದೊರೆಯಲಿದೆ. ಐಟಿ, ಬಿಟಿಯಲ್ಲಿ
ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಾಗಲಿದೆ.

ಧನಸ್ಸು

ನಿಮ್ಮ ಕೆಲಸಕ್ಕೆ ಹಿರಿಯರಿಂದ ಮೆಚ್ಚುಗೆ
ದೊರೆಯಲಿದೆ. ಅಲ್ಲದೇ ನಿಮ್ಮ ಆಲೋಚನೆಗಳಿಗೆ
ಹೆಚ್ಚು ಬೆಂಬಲ ಲಭ್ಯವಾಗಲಿದೆ. ಹಣಕಾಸಿನ
ವಿಚಾರದಲ್ಲಿ ಹೆಚ್ಚು ಹಿಡಿತವಿರಲಿ. ಅತಿಯಾದ ಆತ್ಮವಿಶ್ವಾಸ
ಬೇಡ. ವಾರ ಪೂರ್ತಿ ಉತ್ಸಾಹದಿಂದ ಇರುವಿರಿ.

ಮಕರ

ಕೂಲಿ ಕಾರ್ಮಿಕರ ಆದಾಯದಲ್ಲಿ ಹೆಚ್ಚಳವಾಗಲಿದೆ.
ಕೆಲಸದ ಬದಲಾವಣೆ ಸಾಧ್ಯತೆ. ವಿದೇಶದಿಂದ
ಬಂಧುಗಳ ಆಗಮನ. ಧೈರ್ಯವಾಗಿ ಮುಂದೆ ಸಾಗಿ.
ವಿದ್ಯುತ್ ಉಪಕರಣಗಳನ್ನು ಕೊಂಡುಕೊಳ್ಳುವಿರಿ. ಮನೆಯಲ್ಲಿ
ದುಂದುವ್ಯಯಗಳು ಹೆಚ್ಚಾಗಲಿವೆ. 

ಕುಂಭ

ಒತ್ತಡವನ್ನು ಯಶಸ್ವಿಯಾಗಿ ನಿರ್ವಹಿಸಿದರೆ
ಒಳ್ಳೆಯ ಫಲ ದೊರೆಯಲಿದೆ. ವಿದೇಶಿ ಪ್ರವಾಸ
ಮಾಡುವ ಕನಸು ನನಸಾಗಲಿದೆ. ಸಮಸ್ಯೆಗಳನ್ನು
ಸವಾಲಾಗಿ ಸ್ವೀಕಾರ ಮಾಡುವಿರಿ. ಆತ್ಮವಿಶ್ವಾಸ ಹೆಚ್ಚಲಿದೆ.
ಖ್ಯಾತ ನಾಮರ ನೇರ ಭೇಟಿ ಸಾಧ್ಯವಾಗಲಿದೆ. ಮಕ್ಕಳ ಬಗ್ಗೆ
ಅಗತ್ಯ ನಿಗಾ ಇರಲಿ. ಆರೋಗ್ಯದಲ್ಲಿ ಗಣನೀಯ ಚೇತರಿಕೆ.

ಮೀನ

ಕಷ್ಟದಲ್ಲಿರುವ ಬಂಧುಗಳಿಗೆ ಸಹಾಯ
ಮಾಡುವಿರಿ. ಹೊಸ ವಸ್ತುಗಳನ್ನು ಕೊಳ್ಳುವಾಗ
ಎಚ್ಚರವಿರಲಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ
ವಿನಾಕಾರಣ ಪಾಲ್ಗೊಳ್ಳುವುದು ಬೇಡ. ಸಾಹಿತ್ಯ, ಸಂಗೀತ
ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಮಸ್ಯೆಗೆ ಪರಿಹಾರ ಲಭ್ಯ.

Follow Us:
Download App:
  • android
  • ios