ಮೇಷ: ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದರೆ, ಸುಟ್ಟಿಕೊಳ್ಳುವುದು ನಿಮ್ಮದೇ ಕೈ. ಹಾಗಾಗಿ ಯಾರ ವಿಚಾರದಲ್ಲಿಯೂ ಅತಿಯಾದ ಆಸಕ್ತಿ ತೋರಿ ಸಲಹೆ ಸೂಚನೆ ಕೊಡುವಂತಹ ಕೆಲಸ ಮಾಡಬೇಡಿ. ಮನೆಯಲ್ಲಿ ವಾರದ ಮಧ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಕಾರ್ಯಕ್ರಮಗಳು ಸುಗಮವಾಗಿ ನೆರವೇರಲಿದೆ.

ವೃಷಭ: ಆತಂಕದಿಂದ ಯಾವ ಕೆಲಸವನ್ನು ಮಾಡಬೇಡಿ. ಕೆಟ್ಟು ಹೋಗುವ ಸಾಧ್ಯತೆಗಳಿವೆ. ಅತಿಯಾದ ಒತ್ತಡದ ಕೆಲದಿಂದ ನಿಮ್ಮ ಮನಸ್ಸಲ್ಲಿ ಕಿರಿಕಿರಿ, ಗೊಂದಲಗಳು ಎದುರಾಗಲಿದೆ. ವಾರಾಂತ್ಯದಲ್ಲಿ ಕುಟುಂಬದ ಜೊತೆಗೆ ದೂರ ಪ್ರಯಾಣ ಬೆಳೆಸಿ. ಇದರಿಂದ ಸಂತೋಷದ ಕ್ಷಣಗಳನ್ನು ನೀವೆ ಕಂಡುಕೊಳ್ಳಿ.

ಮಿಥುನ: ಕೆಲಸದೊತ್ತಡ ಹೆಚ್ಚಾಗಲಿದೆ. ಆದರೂ ಅದನ್ನು ಉತ್ತಮ ರೀತಿಯಲ್ಲೇ ಎದುರಿಸಿ ನಿಮ್ಮ ಮೇಲಧಿಕಾರಿಯ ಪ್ರಶಂಸೆ ಪಡೆಯಲಿದ್ದೀರಿ. ಹಳೇ ಸ್ನೇಹಿತರ ಭೇಟಿಯಾಗಿ ಅವರ ಜೊತೆಗೆ ಒಳ್ಳೆಯ ಸಮಯ ಕಳೆಯುವಿರಿ. ವ್ಯವಹಾರ ನಡೆಸುವಾಗ ಮನೆಯವರ ಸಲಹೆ ಸೂಚನೆ ಪಡೆಯುವುದು ಒಳಿತು.

ಕಟಕ: ನಂಬಿಕೆಗೆ ಅರ್ಹರೆನ್ನಿಸುವವರ ಹತ್ತಿರವಷ್ಟೇ ನಿಮ್ಮ ದುಃಖಗಳನ್ನು ಹೇಳಿಕೊಳ್ಳಿ. ಸ್ನೇಹಿತರೇ ಶತ್ರುಗಳಾಗುವ ಸಾಧ್ಯತೆ. ವಾರಾತ್ಯದಲ್ಲಿ ವಾಹನ ಖರೀದಿ ಸಾಧ್ಯತೆ. ಮನೆಗೆ ಬಂಧುಗಳ ಆಗಮನ. ಮಕ್ಕಳ ವಿದ್ಯಾಭ್ಯಾಸ ವಿಚಾರಗಳಲ್ಲಿ ಸ್ವಲ್ಪ ಗಮನ ಕೊಡುವುದು ಉತ್ತಮ. ಓದಿನಲ್ಲಿ ಅವರಿಗಾಗುವ ಕಷ್ಟಕ್ಕೆ ಔಷಧ ನೀವೇ ನೀಡಬೇಕು.

ಸಿಂಹ: ಹಿರಿಯರು ನೀಡಿದ ಸಲಹೆಗಳನ್ನು ಅಲ್ಲಗಳೆಯದೆ ಅದನ್ನು ಪಾಲಿಸಿದ್ದಲ್ಲಿ ಒಂದು ಹಂತದ ಯಶಸ್ಸು ಸಿಗಲಿದೆ. ದನ ಕರುಗಳ ಮೇಲಿನ ಪ್ರೀತಿ ಹೆಚ್ಚಲಿದೆ. ಮಹಿಳೆಯರು ಸಣ್ಣ ಕೈ ಕೆಲಸ ಆರಂಭಿಸಲು ನೋಡುತ್ತಿದ್ದರೆ ಇದೊಂದು ಶುಭಗಳಿಗೆ. ಮಕ್ಕಳಿಗೆ ನಿಮ್ಮ ಪ್ರೀತಿಯ ನುಡಿಗಳು ಅವರಲ್ಲಿನ ಗೊಂದಲಕ್ಕೆ ಮದ್ದಾಗಲಿದೆ.

ಕನ್ಯಾ: ಸಮಾಜ ಸೇವೆಯಂತಹ ಕಾರ್ಯಗಳನ್ನೋ, ಅಥವಾ ನಿಮ್ಮ ಕೈಲಾದ ಸೇವೆಯನ್ನೋ ಕಷ್ಟಾ ಎಂದು ನಿಮ್ಮ ಬಳಿ ಬಂದವರಿಗೆ ಸಹಾಯ ಮಾಡಿ. ಒಬ್ಬರಿಗೆ ಸಹಾಯ ಮಾಡಿದ್ದನ್ನು ಬಲಗೈಗೆ ಗೊತ್ತಿದ್ದರೆ ಎಡೈಗೆ ಗೊತ್ತಾಗದಂತೆ ಕೆಲ ವಿಚಾರಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಮುಂದೊಂದು ದಿನ ಅದರ ಫಲ ನಿಮಗೆ ಸಿಗಲಿದೆ.

ತುಲಾ: ನಿಮ್ಮ ಕನಸಿನ್ನು ಈಡೇರಿಸಿಕೊಳ್ಳಲು ಪರದಾಡುತ್ತಿದ್ದರೆ ಅದಕ್ಕೆ ಕಾರಣ ನೀವೆ ಹಾಕಿಕೊಂಡಿರುವ ಕೆಲ ಕಟ್ಟುಪಟುಗಳು ಎಂಬುದು ನೆನಪಿರಲಿ. ಅದರಿಂದ ಹೊರ ಬಂದಿದ್ದೇ ಆದಲ್ಲಿ ನಿಮ್ಮ ಪರಿಶ್ರಮಕ್ಕೆ ಫಲ ಸಿಗಲಿದೆ. ಸ್ನೇಹಿತರು, ಬಂಧುಗಳ ಪ್ರಶಂಸೆ ಸಿಗಲಿದ್ದು, ಈ ವಾರ ಸಂತೋಷದಿಂದ ನೆಮ್ಮದಿಯಿಂದ ದಿನ ಕಳೆಯುವಿರಿ.

ವೃಶ್ಚಿಕ: ಕುಟುಂಬದಲ್ಲಿನ ಜಗಳ, ಜಂಜಾಟ, ಗೊಂದಲಗಳಿಗೆ ಮುಕ್ತಿ ನೀಡಲು ಧ್ಯಾನ ಮಾಡುವುದು ಉತ್ತಮ ಮಾರ್ಗ. ಯಾವುದೊಂದು ಕೆಲಸ ಆರಂಭಿಸುವ ಮುನ್ನ ಗೊಂದಲವಿಲ್ಲದ ನೆಮ್ಮದಿ, ಪ್ರಶಾಂತ ಚಿತ್ತದಿಂದ ಆರಂಭಿಸಿ. ಮಕ್ಕಳ ಆರೋಗ್ಯದಲ್ಲಿ ಹೆಚ್ಚುಕಮ್ಮಿ ಆದೀದು. ಎಣ್ಣೆ ಪದಾರ್ಥಗಳಿಂದ ದೂರ ಇರಿ.

ಧನುಸ್ಸು: ಮಕ್ಕಳ ವಿಚಾರದಲ್ಲಿ ನೀವು ಅಂದುಕೊಂಡದ್ದು ಎಲ್ಲವೂ ಸರಿಯಾಗಿರಲು ಸಾಧ್ಯವಿಲ್ಲ. ಸಮಚಿತ್ತ ದಿಂದ ಒಳಿತು ಕೆಡಕುಗಳನ್ನು ಹುಡುಕಿಕೊಂಡು ನಂತರ ನಿರ್ಧಾರ ಕೈಗೊಳ್ಳಿ. ಆಫೀಸಿನ ಕೆಲಸದ ಅತಿಯಾದ ಒತ್ತಡದಿಂದ ಆರೋಗ್ಯ ಹದಗೆಡಲಿದೆ. ಶುಭ ಫಲ ಲಭಿಸಲಿದೆ.

ಮಕರ: ಮೊದಲು ನೀವು ನಿಮ್ಮನ್ನು ನಂಬಿ. ಹಿಂಜರಿಕೆ, ನನ್ನ ಕೈಲಾಗದು ಎಂಬ ಮನೋಭಾವವನ್ನು ಕಿತ್ತೊಗೆಯಿರಿ. ಇದರಿಂದ ಬದಲಾವಣೆಯನ್ನು ನಿಮ್ಮಲ್ಲಿ ಕಂಡುಕೊಂಡು, ಸೂಕ್ತ ಮಾರ್ಗವನ್ನೂ ನೀವೇ ಹುಡುಕಿಕೊಳ್ಳಬೇಕು. ಸದ್ವಿಚಾರಗಳ ಮೂಲಕ ಗುರಿ ಮುಟ್ಟಲು ಸಾಧ್ಯ.

ಕುಂಭ: ಇಷ್ಟು ದಿನ ಕಾಯುತ್ತಿದ್ದ ಆ ಸಮಯ ನಿಮ್ಮ ಜೀವನದಲ್ಲಿ ಈಗ ಬಂದಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದ್ದು, ಅಂದುಕೊಂಡ ಕೆಲಸಗಳೂ ಈ ವಾರ ಈಡೇರಲಿದೆ. ಸ್ನೇಹಿತರು, ಸಂಬಂಧಿಕರಿಂದ ಪ್ರಶಂಸೆ ಸಿಗಲಿದೆ. ವಾರಾಂತ್ಯದಲ್ಲಿ ಕಹಿ ಸುದ್ದಿಗಳನ್ನು ಕೇಳಲಿದ್ದೀರಿ. ಮಕ್ಕಳ ಓದಿನಲ್ಲಿ ಉತ್ತಮ ಬೆಳವಣಿಗೆ. ಮಹಿಳೆಯರಿಗೆ ಶುಭ ವಾರ.

ಮೀನ: ಸ್ನೇಹಿತರ ಮೇಲೆ ನೀವಿಟ್ಟದ್ದ ನಂಬಿಕೆ ಈ ವಾರಾಂತ್ಯದಲ್ಲಿ ಹುಸಿಯಾಗಲಿದೆ. ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿದ ನಿಮಗೆ ಇನ್ನು ಮುಂದೆ ಒಳ್ಳೆಯ ದಿನಗಳು ಬಂದೊದಗುವುದು. ಪ್ರಾಣಿ ಹಿಂಸೆ ಬೇಡ. ಮಹಿಳೆಯರು ಗೋಮಾತೆಯ ಪೂಜೆ ಮಾಡಿ.