Asianet Suvarna News Asianet Suvarna News

ವಾರಾಂತ್ಯದಲ್ಲಿ ಭರ್ಜರಿ ಲಾಭ : ಸಿಹಿ ಸುದ್ದಿ - ವಾರ ಭವಿಷ್ಯ

ವಾರ ಭವಿಷ್ಯ : ಸೆಪ್ಟೆಂಬರ್ 08, ಭಾನುವಾರ, ಹೇಗಿದೆ ನಿಮ್ಮ ರಾಶಿಗಳ ಫಲಾ ಫಲ

Weekly Horoscope 08 September 2019
Author
Bengaluru, First Published Sep 8, 2019, 7:13 AM IST


ವಾರಾಂತ್ಯದಲ್ಲಿ ಭರ್ಜರಿ ಲಾಭ : ಸಿಹಿ ಸುದ್ದಿ - ವಾರ ಭವಿಷ್ಯ

ಮೇಷ
ಇಷ್ಟು ದಿನದ ಶ್ರಮಕ್ಕೆ ಈ ವಾರ ಫಲ ಸಿಗಲಿದೆ.
ಇನ್ನು ಮುಂದೆ ನಿರಾಳವಾಗಿದ್ದು, ಸಂತೋಷದ
ಜೀವನ ಸಾಗಿಸಲಿದ್ದೀರಿ. ಮೊದಲೇ ಯೋಚಿಸಿದ್ದ
ಪ್ರವಾಸವು ಈ ವಾರ ಕೈಗೂಡಲಿದ್ದು, ಮನಸ್ಸಿಗೊಪ್ಪುವ
ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಇದರಿಂದ ಮನಸ್ಸಿಗೆ
ನೆಮ್ಮದಿ ಸಿಗಲಿದೆ. ಮನೆಯಲ್ಲಿ ಸಂತೋಷ ನೆಲಸಲಿದೆ.

ವೃಷಭ
ಬೆಳಕು ಮುಗಿದು ಇರುಳು ಆವರಿಸುವಷ್ಟರಲ್ಲಿ
ಅಪಾರ ಬದಲಾವಣೆ ಕಾಣಲಿದ್ದೀರಿ. ಹೊಸ
ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ. ಅಂದುಕೊಂಡ
ಕೆಲಸ ಸಿಗುವುದರಿಂದ ಮನೆಯಲ್ಲಿ ಸಂತೋಷ, ಮನಸ್ಸಿಗೆ
ನೆಮ್ಮದಿ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವ್ಯಾಪಾರಿಗಳಿಗೆ ಈ ವಾರ ಲಾಭ. ಶುಭ ಫಲ.

ಮಿಥುನ
ಮಕ್ಕಳಿಂದ ಮನೆಯಲ್ಲಿ ಈ ವಾರ ಅಪಾರ
ಸಂತೋಷ ಮನೆಮಾಡಲಿದೆ. ಎಲ್ಲರ ಮೆಚ್ಚುಗೆಗೆ
ಪಾತ್ರರಾಗಲಿದ್ದೀರಿ. ಒಳ್ಳೆಯ ಕೆಲಸಗಳಿಗೆ ತಡ
ಬೇಡ. ಮೂರನೆಯವರ ಮಾತಿಗೆ ತಲೆಕೆಡಿಸಿಕೊಳ್ಳದೆ
ನಿಮಗೆ ಸರಿ ಅನಿಸಿದ್ದು ಮಾಡುವುದು ಒಳಿತು. ಸೇವಾ
ಕಾರ್ಯಗಳಲ್ಲಿ ಈ ವಾರ ಹೆಚ್ಚಾಗಿ ತೊಡಗಿಸಿಕೊಳ್ಳಲಿದ್ದೀರಿ.

ಕಟಕ
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ
ಕೊಡೆ ಹಿಡಿ ಎನ್ನುವರು. ಅಂತಹ ಅವಕಾಶ ಈ
ವಾರ ಎದುರಾಗಲಿದೆ. ಆದರೆ ಸರಿಯಾದ
ಚಿಂತನೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಿ. ಒಮ್ಮೊಮ್ಮೆ
ಅತಿಯಾಸೆ ಗತಿಗೇಡು ಎನ್ನುವಂತಾಗುತ್ತೆ.
ದೂರದೂರಿನಿಂದ ಬಂಧುಗಳ ಆಗಮನ ಸಾಧ್ಯತೆ.

ಸಿಂಹ
ಮಾಡುವ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ನಿಮಗಿದ್ದರೆ
ಅಷ್ಟೇ ಸಾಕು. ಮುಂದಿನ ದಾರಿ ಸುಗಮವಾ
ಗಲಿದೆ. ಇನ್ನೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳುವ
ಅಗತ್ಯವಿಲ್ಲ. ಕೆಸರಿದ್ದ ಮೇಲೆ ಅದು ಸಿಡಿಯುತ್ತೆ ಅಂತ
ಗೊತ್ತಿರುವಾಗ ಅದರ ಹತ್ತಿರ ಹೋಗುವುದು ನಿಮ್ಮ ತಪ್ಪು.
ವಾರಾಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ.

ಕನ್ಯಾ
ಒಮ್ಮೆ ಕೆಲಸದಲ್ಲಿ ಯಶಸ್ಸು ಸಿಕ್ಕಿತೆಂದು
ಹಿಗ್ಗಬೇಡಿ. ಮೇಲಧಿಕಾರಿಯಿಂದ ಪ್ರಶಂಸೆಗೆ
ಒಳಗಾದರೂ ಮುಂದಿನ ಕೆಲಸ ಹಾದಿಯ
ಇನ್ನಷ್ಟು ಕಷ್ಟವಾಗಿರುತ್ತೆ ಎನ್ನುವ ಬಗ್ಗೆ ಯೋಚಿಸಿ.
ಅತಿಯಾದ ನಿರೀಕ್ಷೆಯೂ ಸರಿಯಲ್ಲ. ಉದ್ಯೋಗ
ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಾಧ್ಯತೆ.

ತುಲಾ
ಗುರು ಹಿರಿಯರ ಆಶೀರ್ವಾದ ಪಡೆದು ಹೊಸ
ಕೆಲಸಗಳಿಗೆ ಕೈ ಹಾಕಿದಲ್ಲಿ ಎಲ್ಲವೂ ಸಫಲತೆ
ಕಾಣಲಿದ್ದೀರಿ. ಮಕ್ಕಳ ಯವ್ವನದಲ್ಲಾಗುವ
ತಪ್ಪುಗಳಿಂದ ಮನೆಯವರಿಗೆ ಕಂಟಕ ಎದುರಾಗುವ
ಸಾಧ್ಯತೆ. ಅದಕ್ಕೆ ಮಕ್ಕಳಲ್ಲಿ ಮನಸ್ಸಿನ ಹಿಡಿತ ಬಹಳ
ಮುಖ್ಯ. ವಾರಾಂತ್ಯದಲ್ಲಿ ಲಾಭ ಸಾಧ್ಯತೆ.

ವೃಶ್ಚಿಕ
ಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ
ಎಂಬ ಕಲ್ಪನೆ ಬೇಡ. ನಿಮ್ಮ ತಪ್ಪು ಇನ್ನೊಬ್ಬರ
ಮೇಲೆ ಎತ್ತಾಕುವುದರಿಂದ ಬೀಸೊ ದೊಣ್ಣೆ
ಇಂದ ಸದ್ಯ ತಪ್ಪಿಸಿಕೊಳ್ಳಬಹುದು. ಆದರೆ ಒಂದಿಲ್ಲೊಂದು
ದಿನ ಸತ್ಯ ಗೊತ್ತಾದಲ್ಲಿ ಕಂಟಕ ಕಟ್ಟಿಟ್ಟ ಬುತ್ತಿ. ಅದಕ್ಕೆ
ಮಾಡುವ ಕೆಲಸವನ್ನುನ್ನು ನಿಷ್ಠಯಿಂದ ಮಾಡಿ.

ಧನಸ್ಸು
ಬಹು ನಿರೀಕ್ಷೆ ಇಟ್ಟುಕೊಂಡಿರುವ ನೀವು ಈ
ವಾರ ಆಶಾದಾಯಕ ವಾರ್ತೆ ಕೇಳುವಿರಿ. ನಿಮ್ಮ
ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ
ಕಾಣಿಸುವುದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ.
ಶುಭ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.

ಮಕರ
ಮಾಡಿದ ಕೆಲಸಕ್ಕೆ ನಿರೀಕ್ಷೆಯಂತೆ ಫಲ ಸಿಗಲಿದೆ.
ಕೆಲಸದಲ್ಲಿ ಒತ್ತಾಡ ಹೆಚ್ಚಾಗುವ ಸಾಧ್ಯತೆ ಇದೆ.
ಅದರಂತೆ ಒತ್ತಡವನ್ನು ಸೂಕ್ತವಾಗಿ ಎದುರಿಸಿ
ಅದರಿಂದ ಹೊರಬರಲಿದ್ದೀರಿ. ನಿಮ್ಮ ಸೇವಾ
ಮನೋಭಾವ ಇತರರಿಗೆ ಮಾದರಿಯಾಗಲಿದೆ.

ಕುಂಭ
ಕುಟುಂಬದ ಸಮಸ್ಯೆತನ್ನು ಕೂತು
ಬಗೆಹರಿಸಿಕೊಳ್ಳುವುದು ಒಳ್ಳೆಯದು. ಈ
ವಿಷಯದಲ್ಲಿ ಮೂರನೆಯವರು ಮೂಗುತೂರಿ
ಸದಂತೆ ನೋಡಿಕೊಳ್ಳಿ. ವಾರದ ಆರಂಭದಲ್ಲಿ ಅತಿಯಾದ
ಸಂತೋಷ ಕಂಡರೂ ವಾರಾಂತ್ಯದಲ್ಲಿ ಎಲ್ಲವೂ ಮರೆ
ಮಾಚಲಿದೆ. ವ್ಯಾಪಾರಿಗಳಿಗೆ ಬಂಪರ್ ಲಾಭ ಸಿಗಲಿದೆ.

ಮೀನ
ಮಾಡಿದುಣ್ಣೋ ಮಹರಾಯ ಎಂದು
ಅಂದುಕೊಂಡು ಸುಮ್ಮನಾಗಿ ಬಿಡಿ. ಕೆಟ್ಟದ್ದು
ಮಾಡಿದವನಿಗೆ ಪಾಪ ಎಂದರೆ ನಿಮಗೇ
ಆಯಸ್ಸು ಕಡಿಮೆ. ತಪ್ಪಿನ ಅರಿವಾಗಲು ಶಿಕ್ಷೆ ಮುಖ್ಯ.
ಹಿರಿಯರ ಸಲಹೆ ನಿಮಗೆ ಮಾರ್ಗದರ್ಶನವಾಗಲಿದೆ.

Follow Us:
Download App:
  • android
  • ios