Asianet Suvarna News Asianet Suvarna News

ವಾರದ ಸಂಪೂರ್ಣ ಭವಿಷ್ಯ : ಈ ವಾರ ನಿಮ್ಮ ಪಾಲಿಗೆ ಹೇಗಿದೆ.?

ಈ ವಾರ ನಿಮ್ಮ ಭವಿಷ್ಯ ಹೇಗಿದೆ?

Weekly Bhavishya 14 July 2019
Author
Bengaluru, First Published Jul 14, 2019, 7:26 AM IST
  • Facebook
  • Twitter
  • Whatsapp

ವಾರದ ಸಂಪೂರ್ಣ ಭವಿಷ್ಯ : ಈ ವಾರ ನಿಮ್ಮ ಪಾಲಿಗೆ ಹೇಗಿದೆ.?


ಮೇಷ
ಮನಸ್ಸಿನ ಕಿರಿಕಿರಿ, ಒತ್ತಡ, ಸಿಟ್ಟನ್ನು
ನಿಯಂತ್ರಿಸಲು ಪ್ರಾಣಾಯಾಮ ಸೂಕ್ತ.
ತಾಳ್ಮೆಯಿಂದ, ಶಾಂತ ಮನಸ್ಸಿನಿಂದ
ಅಂದುಕೊಂಡ ಕೆಲಸ ಮಾಡಿದರೆ ಅದು ಸಫಲವಾಗುತ್ತದೆ.
ಯಾವುದೇ ವಿಚಾರವಾಗಲಿ, ಕೆಲಸದಲ್ಲಿರಲಿ ಎರಡು
ಮನಸ್ಸು ಮಾಡದೆ ಒಂದು ನಿರ್ಧಾರದಲ್ಲಿ ಮುನ್ನಡೆಯಿರಿ

ವೃಷಭ
ಕೆಲವೊಮ್ಮೆ ನೆನಪುಗಳನ್ನು ಹಸಿ ಕಸ ಹಾಗೂ ಒಣ
ಕಸದಂತೆ ಬೇರ್ಪಡಿಸಿ ವಿಲೇವಾರಿ ಮಾಡಬೇಕು.
ಹೆಚ್ಚು ಕಾಲ ಮನಸ್ಸೆಂಬ ಮನೆಯಲ್ಲಿ ಇದ್ದರೆ ಕೆಟ್ಟ
ಪರಿಣಾಮ ಎದುರಿಸಬೇಕಾಗಬಹುದು. ಮಕ್ಕಳಿಂದ ಈ
ವಾರ ಒಳ್ಳೆಯ ಕಾರ್ಯಗಳು ನಡೆಯಲಿದ್ದು, ಇದರಿಂದ
ಪೋಷಕರಿಗೆ ನೆಮ್ಮದಿ ಹಾಗೂ ಗೌರವ ವೃದ್ಧಿಸಲಿದೆ. 

ಮಿಥುನ
ಈ ವಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ
ಹೆಚ್ಚು. ಒಂದು ಸ್ಥಳಕ್ಕಿಂತ ಇನ್ನೊಂದು ಭಿನ್ನವಾಗಿ
ರುತ್ತದೆ. ಹಾಗೆಯೇ ಮನಸ್ಸುಗಳು ಭಿನ್ನವಾಗಿರು
ತ್ತದೆ. ಏನೇ ಕಷ್ಟಗಳಾದರೂ ಅದನ್ನು ಸೂಕ್ತ ರೀತಿಯಲ್ಲಿ
ಎದುರಿಸಿ ಮುಂದೆ ಬರಲಿದ್ದೀರಿ. ಮಕ್ಕಳ ವಿಚಾರದಲ್ಲಿ
ಎಚ್ಚರಿಕೆ ಅಗತ್ಯ. ವಾರಾಂತ್ಯದಲ್ಲಿ ಸಿಹಿ ಸುದ್ದಿ ಕೇಳುವಿರಿ. 

ಕಟಕ
ನಿಮ್ಮ ಇಷ್ಟು ದಿನದ ಪರಿಶ್ರಮದ ಫಲವಾಗಿ
ನೀವಂದುಕೊಂಡ ಕೆಲಸಗಳು ಈ ವಾರ
ಸಿದ್ಧಿಸಲಿದೆ. ಹೆಚ್ಚು ಖುಷಿ ಅಷ್ಟೇ ಪ್ರಮಾಣದಲ್ಲಿ
ಕಷ್ಟಗಳು ಎದುರಾಗಲಿದೆ. ಎಲ್ಲವನ್ನೂ ಸಮನಾಗಿ ಸ್ವೀಕರಿಸಿ
ಮುನ್ನಡೆಯಿರಿ. ನಂಬಿಕೆ, ಧೈರ್ಯದ ಜೊತೆಗೆ
ಆತ್ಮಬಲವೇ ನಿಮ್ಮ ಶಕ್ತಿಯಾಗಲಿದೆ. 

ಸಿಂಹ
ಕಿರಿಕಿರಿ, ಮನಸ್ಸಲ್ಲಿ ಅಶಾಂತಿ, ಜೀವನದಲ್ಲಿ
ಜಿಗುಪ್ಸೆ, ಬೇಸರ ಎಲ್ಲದೂ ಒಂದೇ ಬಾರಿ ಈ
ವಾರ ಅಪ್ಪಳಿಸಲಿದ್ದು, ಕಣ್ಣೀರಿನಿಂದ ಒಂದೇ
ಬಾರಿ ಹೊರ ಹಾಕಿಬಿಡಿ. ಮನಸ್ಸಲ್ಲೇ ಇಟ್ಟುಕೊಂಡು
ಕೊರಗಿದೆ ಇನ್ನಷ್ಟು ಕೆಡುವುದು. ಇಲ್ಲವೇ ಶಾಂತತೆಗಾಗಿ
ಧ್ಯಾನ, ಇಲ್ಲವೆ ದೇಗುಲ, ಟ್ರಿಪ್‌ಗಳಿಗೆ ಹೋಗಿ ಬನಿ

ಕನ್ಯಾ
ಕೆಲಸದಲ್ಲಿ ಪ್ರಗತಿ. ನಿಮ್ಮ ಕೆಲಸ ಮೆಚ್ಚಿ
ಮೇಲಧಿಕಾರಿಗಳಿಂದ ಪ್ರಶಂಸೆಗೆ
ಒಳಗಾಗಲಿದ್ದೀರಿ. ನಿರೀಕ್ಷೆ ಹೆಚ್ಚಾದರೂ ಇನ್ನಷ್ಟು
ಉತ್ಸಾಹದಿಂದ ಕೆಲಸ ಮಾಡಿದರೆ ಸಫಲರಾಗುವಿರಿ.
ಅನಿರೀಕ್ಷಿತ ಸುದ್ದಿಗಳನ್ನು ಕೇಳಲಿದ್ದೀರಿ. ಇದರಿಂದ
ಬದುಕಿನಲ್ಲಿ ಹೊಸ ತಿರುವು ಸಿಗಲಿ

ತುಲಾ
ಸಣ್ಣ ಕೆಲಸಗಳಿಂದಲೂ ದೊಡ್ಡ ಯಶಸ್ಸು
ಪಡೆಯಲು ಸಾಧ್ಯ ಎನ್ನುವುದನ್ನು ನಿಮ್ಮನ್ನು
ಹೀಯಾಳಿಸುವವರಿಗೆ ತೋರಿಸಿಕೊಡಲಿದ್ದೀರಿ.
ನಿಮ್ಮ ಮಾತು ಹಾಗೂ ಆಲೋಚನೆಗಳಿಂದ ಇತರರನ್ನು
ಸಂತೋಷಪಡಿಸಲಿದ್ದೀರಿ. ವಾಸ್ತವದಲ್ಲಿ ಬದುಕಿ ಮುಂದಿನ
ಜೀವನವನ್ನು ರೂಪಿಸಿಕೊಳ್ಳಿ. ಸಿಹಿ ಅನುಭವ ಆಗಲಿದೆ.

ವೃಶ್ಚಿಕ
ಕೆಲ ವ್ಯಕ್ತಿಗಳ ಕೊಂಕು ಮಾತುಗಳೇ ನಿಮ್ಮ
ಜೀವನಕ್ಕೆ ದಾರಿ ದೀಪವಾಗುತ್ತವೆ. ಶತ್ರುಗಳನ್ನೂ
ಮಿತ್ರರನ್ನಾಗಿ ನೋಡುವ ನೀವು, ಅವರ ಕಷ್ಟವೂ
ನಿಮ್ಮ ಕಷ್ಟವೆಂದೇ ಕೈಜೋಡಿಸುವಿರಿ. ಇದರಿಂದ
ತತ್ಪರಿಣಾಮ ಬೀರದಿದ್ದರೂ ಮುಂದೊಂದು ದಿನ ನಿಮ್ಮ
ಬಗ್ಗೆ ಅವರಿಗೆ ಒಳ್ಳೆಯ ಭಾವನೆ ಮೂಡಲಿದೆ.

ಧನಸ್ಸು
ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಮಾತಿನ
ಮೇಲೆ ನಂಬಿಕೆ ಇರಲಿ. ನನ್ನಿಂದಾಗದು ಎನ್ನುವ
ಮನೋಭಾವನೆಯಿಂದ ಹೊರಬನ್ನಿ. ನಿತ್ಯ
ಕೆಲಸಗಳಿಗೆ ಸ್ವಲ್ಪ ಏರುಪೇರಾಗಲಿದ್ದು, ಅಗತ್ಯ
ವಿಚಾರಗಳಿಗೆ ಮಾತ್ರ ನಿಮ್ಮ ಪ್ರತಿಕ್ರಿಯೆ ನೀಡಿ.

ಮಕರ
ಸಮಯ ಸಂದರ್ಭ ನೋಡಿ ನಿಮ್ಮನ್ನು
ಉಪಯೋಗಿಸಿಕೊಂಡು ಕೈಬಿಡುವ ಜನರಿದ್ದಾರೆ
ಎನ್ನುವ ಬಗ್ಗೆ ನಿಮಗೆ ಅರಿವಿರಲಿ. ಸಿಕ್ಕ
ಕೆಲಸವನ್ನು ಕಳೆದುಕೊಳ್ಳದಿರಿ. ವಿದೇಶದಲ್ಲಿನ ಸಂಬಂಧಿಕರ
ಆಗಮನ ಸಾಧ್ಯತೆ. ಮನೆಯಲ್ಲಿ ಸಂತಸ ನೆಲೆಸಲಿದೆ.

ಕುಂಭ
ಜ್ಞಾನ ಹೆಚ್ಚಾಗುವುದು ದೇಶ ಸುತ್ತುವುದರಿಂದ
ಹಾಗೂ ಪುಸ್ತಗಳನ್ನು ಓದುವುದರಿಂದ. ಈ
ನಿಟ್ಟಿನಲ್ಲಿ ನಿಮ್ಮ ಕೆಲಸ ಕೈಗೂಡಲಿದೆ. ಯಾರಾದ
ರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಆ ಬಗ್ಗೆ ಹೆಚ್ಚು
ತಲೆಕೆಡಿಸಿಕೊಳ್ಳದಿರಿ. ಏಕೆಂದರೆ ನಿಮ್ಮ ಬಗ್ಗೆ ನಿಮಗೆ ಗೊತ್ತಿರ
ಬೇಕೆ ವಿನಃ ಇನ್ನೊಬ್ಬರು ಕೊಡುವ ಸರ್ಟಿಫಿಕೆಟ್ ಅಲ್ಲ.

ಮೀನ
ವಾದಕ್ಕಿಂತ ಮೌನಕ್ಕೆ ಹೆಚ್ಚು ಶಕ್ತಿ ಇದೆ. ಈ ವಾರ
ಕೆಲಸಗಳ ಹೊರೆ ಹೆಚ್ಚಾಗಲಿದ್ದು, ಹೊಸ
ಅವಕಾಶಗಳನ್ನು ಕೈಗೆತ್ತುಕೊಳ್ಳಲಿದ್ದೀರಿ.
ಸಮಸ್ಯೆಗಳು ಎದುರಾದಲ್ಲಿ ಹಿರಿಯರ ಸೂಕ್ತ
ಮಾರ್ಗದರ್ಶನ ತೆಗೆದುಕೊಳ್ಳುವುದು ಒಳ್ಳೆಯದು.

Follow Us:
Download App:
  • android
  • ios