Asianet Suvarna News Asianet Suvarna News

ಗ್ರಹಣ ಸಂಭವಿಸುವ ಈ ವಾರ ನಿಮ್ಮ ಭವಿಷ್ಯ ಹೇಗಿದೆ..?

ಈ ವಾರ ಸೂರ್ಯಗ್ರಹಣ ಸಂಭವಿಸಲಿದ್ದು, ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ..? ನಿಮ್ಮ ಪಾಲಿಗೆ ಈ ವಾರವು ಹೇಗಿರಲಿದೆ..? 

Weekly Astrology in Kannada 22 - 29  Dec 2019 Horoscope
Author
Bengaluru, First Published Dec 22, 2019, 7:19 AM IST

ಗ್ರಹಣ ಸಂಭವಿಸುವ ಈ ವಾರ ನಿಮ್ಮ ಭವಿಷ್ಯ ಹೇಗಿದೆ..? 

ಮೇಷ
ಸಂಕಟಗಳ ನಿವಾರಣೆ. ಆರೋಗ್ಯ ಸುಧಾರಣೆ.
ಸಾಲದಿಂದ ಮುಕ್ತಿ ಹೊಂದುವಿರಿ. ಅಪರಿಚಿತರ
ನೆರವಿನಿಂದ ಉದ್ಯೋಗ. ನಿವೇಶನ ಖರೀದಿಗೆ
ಆಲೋಚನೆ ಮಾಡುವಿರಿ. ವಾಹನ ಚಾಲನೆ ಕಡಿಮೆ ಮಾಡಿ.
ಮನೆಯಲ್ಲಿ ಸಂತಸ. ಅನವಶ್ಯಕ ವಿಚಾರಗಳಿಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಗೊಂದಲಕ್ಕೆ ತೆರೆ ಬೀಳಲಿದೆ.

ವೃಷಭ
ಸಹೋದರರಿಂದ ನೆರವು. ಶುಭ ಸಮಾರಂಭಗಳಲ್ಲಿ
ಭಾಗಿ. ಮನಸ್ತಾಪಗಳು ದೂರವಾಗುವವು.
ಮಕ್ಕಳ ಮೇಲೆ ನೇರ ಆರೋಪಗಳನ್ನು ಕಡಿಮೆ
ಮಾಡಿ. ಆದಾಯ ಮಟ್ಟದಲ್ಲಿ ಗಣನೀಯ ಏರಿಕೆ ಕಾಣಲಿದೆ.
ಶುಭ ಸಮಾರಂಭದ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳುವಿರಿ.
ಆಹಾರದ ಮೇಲೆ ನಿಯಂತ್ರಣವಿರಲಿ. ಕೆಲಸದಲ್ಲಿ ಪ್ರಗತಿ.

ಮಿಥುನ
ನಿಮ್ಮ ಮುಂದಿನ ಬೃಹತ್ ಯೋಜನೆಗೆ ಐವತ್ತು
ಭಾಗ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. 
ಯಾರದೋ ಮಾತಿನಿಂದ ಮನೆಯಲ್ಲಿ
ಗೊಂದಲ. ಹತ್ತಿರದ ಬಂಧುಗಳಿಂದ ಸಹಕಾರ ಸಿಗಲಿದೆ.
ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ವಾಹನ ಚಾಲನೆ
ಮಾಡುವಾಗ ಎಚ್ಚರವಿರಲಿ. ಆರ್ಥಿಕ ಲಾಭವಾಗಲಿದೆ.

ಕಟಕ
ಕಲುಷಿತ ವಾತಾವರಣದಿಂದ ದೂರವಿರಿ.
ಸಾಧ್ಯವಾದಷ್ಟೂ ಮನೆಯಲ್ಲೇ ಮಾಡಿದ ಆಹಾರ
ವನ್ನು ಸೇವಿಸಿ. ನವ ವಿವಾಹಿತರಿಗೆ ಧನಾಗಮನ
ವಾಗಲಿದೆ. ಸಂತಾನ ಪ್ರಾಪ್ತಿ. ಮಾಡುವ ಕಾರ್ಯದಲ್ಲಿ
ಹೆಚ್ಚಿನ ಉತ್ಸಾಹ ಕಂಡುಬರಲಿದೆ. ನಿಮ್ಮ ಒಳ್ಳೆಯತನಕ್ಕೆ
ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಶುಭಫಲ.

ಸಿಂಹ
ದೂರದ ಪ್ರಯಾಣ ಮಾಡುವಾಗ ಅಗತ್ಯ
ಎಚ್ಚರಿಕೆ ವಹಿಸಿ. ತಂದೆ-ತಾಯಿಗಳಿಂದ ಶುಭ
ಸುದ್ದಿ ತಿಳಿಯಲಿದೆ. ಯಾವುದೇ ಹೊಸ ವಸ್ತು
ಕೊಳ್ಳುವಾಗ ನಿಗಾ ವಹಿಸಿ. ಇನ್ನೊಬ್ಬರನ್ನು ಅನಗತ್ಯವಾಗಿ
ಕಾಯಿಸದಿರಿ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಸಂಗಾತಿ
ಸಿಗಲಿದ್ದಾಳೆ. ಈ ವಾರ ನಿಮ್ಮ ಪಾಲಿಗೆ ಶುಭದಾಯಕ.

ಕನ್ಯಾ
ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ
ವಾಗಲಿದೆ. ಭೂ ವ್ಯವಹಾರಕ್ಕೂ ಮುನ್ನ
ಹಿರಿಯರ ಸಲಹೆ ಪಡೆಯಿರಿ. ದೀರ್ಘಾವಧಿಯ
ಹೂಡಿಕೆಯಲ್ಲಿ ವಿಶ್ವಾಸವಿಡಿ. ಸೂಕ್ತ ವ್ಯಕ್ತಿಗಳ ಸಂಪರ್ಕದಿಂದ
ಕಾರ್ಯ ಸಿದ್ಧಿ. ಖರ್ಚು ಕಡಿಮೆ ಮಾಡಿ. ಹೊಸ ಸಾಲ
ಮಾಡುವಾಗ ಎಚ್ಚರವಿರಲಿ. ಗೊಂದಲ ಬೇಡ.

ತುಲಾ
ಹಣಕಾಸಿನ ತೊಂದರೆ ಈ ಬಾರಿ ಸುಧಾರಿಸಲಿದೆ.
ಹಳೆಯ ಈಡುಗಂಟು ನೆರವಿಗೆ ಬರಲಿದೆ.
ಹಿರಿಯ ಆರೋಗ್ಯದಲ್ಲಿ ಏರುಪೇರು ಉಂಟಾ
ಗಲಿದೆ. ದೇವಾಲಯಗಳಿಗೆ ಸಂಬಂಧಿಕರೊಂದಿಗೆ ಭೇಟಿ
ನೀಡುವಿರಿ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಲು
ಇದು ಸಕಾಲ. ತಂದೆ ತಾಯಿಗಳ ಮಾತಿಗೆ ಆದ್ಯತೆ ನೀಡಿ.

ಕಂಕಣ ಸೂರ್ಯಗ್ರಹಣದಿಂದ ಯಾವ ರಾಶಿಗೆ ಏನು ಲಾಭ ...

ವೃಶ್ಚಿಕ
ಏಕಾಗ್ರತೆಗೆ ಧ್ಯಾನ ಮಾಡಿ. ಹಿರಿಯರಿಂದ
ಪ್ರಶಂಸೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ
ದೊರೆಯುತ್ತದೆ. ಅತೀ ಆತ್ಮೀಯರ ಬಳಿ
ಎಲ್ಲವನ್ನೂ ಹೇಳಿಕೊಳ್ಳುವುದು ಬೇಡ. ತಂದೆ ತಾಯಿಗಳ
ಮಾತಿನಿಂದ ಹೊಸ ಉತ್ಸಾಹ ಬರಲಿದೆ. ಅಂದುಕೊಂಡಿರುವ
ಶುಭ ಕಾರ್ಯವನ್ನು ಶೀಘ್ರವಾಗಿ ಮುಗಿಸಿ. ಶುಭಫಲ.

ಧಮಸ್ಸು
ಕಳೆದುಹೋದ ಅಮೂಲ್ಯ ವಸ್ತು ದಿಢೀರ್
ಸಿಗಲಿದೆ. ಹಳೆಯ ಪ್ರೇಮಿಯ ನೆನಪಿನಿಂದ
ಹೊರ ಬನ್ನಿ. ಉದ್ಯೋಗದಲ್ಲಿ ಪ್ರಗತಿ. ಶುಚಿತ್ವದ
ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ನಿಮ್ಮ
ಕಾರ್ಯಗಳಿಗೆ ಹಿರಿಯರಿಂದ ಪ್ರಶಂಸೆ. ಶುಭಫಲ.

ಮಕರ
ಯಾವುದೇ ಕೆಲಸಕ್ಕೆ ಕೈಹಾಕುವಾಗ ಎಚ್ಚರವಿರಲಿ.
ನಿಮ್ಮ ಯಶಸ್ಸನ್ನು ಸಹಿಸದವರ ನಡುವೆ
ವ್ಯವಹಾರ ಬೇಡ. ಶುಭ ಕಾರ್ಯ ಸನ್ನಿಹಿತ.
ಧರ್ಮ ಕಾರ್ಯಗಳಿಂದ ಮಾನಸಿಕ ನೆಮ್ಮದಿ. ತಾಳ್ಮೆಯಿಂದ
ವರ್ತಿಸಿ. ಒಳ್ಳೆಯವರ ಸಹವಾಸ ಮಾಡಿ. ಗೆಲುವಾಗಲಿದೆ.

ಕುಂಭ
ಇನ್ನೊಬ್ಬರ ಕಷ್ಟಗಳಿಗೆ ನೆರವಾಗುವಿರಿ. ವಿದ್ಯಾರ್ಥಿ
ಗಳಿಗೆ ಒಳ್ಳೆಯ ದಿನಗಳ ಆರಂಭ. ನಿಮ್ಮ
ಕೆಲಸಗಳಿಗೆ ಕಲ್ಲು ಹಾಕುವವರ ಬಗ್ಗೆ ತಲೆಕೆಡಿಸಿ
ಕೊಳ್ಳಬೇಡಿ. ಯಾರನ್ನೂ ಅತಿಯಾಗಿ ನಂಬಬೇಡಿ.
ಹಸನ್ಮುಖಿಗಳಾಗಿರಿ. ಆರ್ಥಿಕವಾಗಿ ಈ ವಾರ ತುಸು
ಬಿಗಿಯಾಗಲಿದೆ. ಚಿಂತೆ ಮಾಡುತ್ತಾ ಕೂರುವುದು ಬಿಡಿ.

ಮೀನ
ಹಿಂದಿನ ಮನಸ್ತಾಪಗಳು ದೂರವಾಗುವ ಎಲ್ಲ
ಲಕ್ಷಣಗಳಿವೆ. ನಿಮ್ಮ ಮೇಲಿನವರೊಂದಿಗೆ ಹೆಚ್ಚು
ಮಾತಿಗಿಳಿಯದಿರುವುದೇ ಲೇಸು. ಖರ್ಚು
ಕಡಿಮೆ ಮಾಡಿ. ಮಕ್ಕಳ ಆರೋಗ್ಯದ ಕಡೆ ಹೆಚ್ಚು
ಗಮನವಿರಲಿ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ
ತೆಗೆದುಕೊಳ್ಳುವ ಗುಣ ಬೆಳೆಸಿಕೊಳ್ಳಿ. ಒಳಿತಾಗಲಿ

Follow Us:
Download App:
  • android
  • ios