Asianet Suvarna News Asianet Suvarna News

ಈ ವಾರ ನಿಮ್ಮ ಪಾಲಿಗೆ ಹೇಗಿದೆ : ಇಲ್ಲಿದೆ ಸಂಪೂರ್ಣ ಭವಿಷ್ಯ

ಈ ವಾರ ನಿಮ್ಮ ಪಾಲಿಗೆ ಹೇಗಿದೆ : ಇಲ್ಲಿದೆ ಸಂಪೂರ್ಣ ಭವಿಷ್ಯ

Weeklu Horoscope August 5
Author
Bengaluru, First Published Aug 5, 2018, 7:11 AM IST

ಈ ವಾರ ನಿಮ್ಮ ಪಾಲಿಗೆ ಹೇಗಿದೆ : ಇಲ್ಲಿದೆ ಸಂಪೂರ್ಣ ಭವಿಷ್ಯ

ಮೇಷ
ಯಾವುದೇ ನಿರ್ಧಾರಕ್ಕೆ ಬರುವುದಾದರೂ
ಹಿರಿಯರೊಂದಿಗೆ ಚರ್ಚಿಸಿ. ಆದಾಯದಲ್ಲಿ ಏರಿಕೆ.
ವೃತ್ತಿಯಲ್ಲಿ ಹೆಚ್ಚು ಪರಿಣತಿ ಸಾಧಿಸುವಿರಿ. ಹೆಚ್ಚು ನಿದ್ದೆ
ಮಾಡುವ ಅಭ್ಯಾಸದಿಂದ ಹೊರಗೆ ಬನ್ನಿ. ಮಕ್ಕಳ ಉತ್ಸಾಹ
ಹಿಮ್ಮಡಿಗೊಳ್ಳಿದೆ. ಆದಾಯದಲ್ಲಿ ಕೊಂಚ ಏರಿಕೆ. ಜಮೀನು
ಕೊಳ್ಳುವ ಯೋಚನೆಯನ್ನು ಮುಂದೂಡುವುದು ಒಳಿತು.

ವೃಷಭ
ಕಚೇರಿಯಲ್ಲಿ ಉಲ್ಲಾಸ. ಮಾಡುವ ಕೆಲಸದಲ್ಲಿ ನಿರೀಕ್ಷಿತ
ಪ್ರಗತಿ ದಾಖಲಾಗಲಿದೆ. ಕಲಾವಿದರಿಗೆ ಅವಕಾಶಗಳ
ಕೊರತೆ. ಕಣ್ಣಿನ ಆರೋಗ್ಯದಲ್ಲಿ ಸುಧಾರಣೆ. ಹೊಸ
ವ್ಯಕ್ತಿಗಳ ಪರಿಚಯದಿಂದ ನೂತನ ಅವಕಾಶಗಳ ಬಾಗಿಲು
ತೆರೆಯಲಿದೆ. ಮಂತ್ರಿಗಳಿಂದ ನೆರವಿನ ಹಸ್ತ. ಕುಂಟುಂಬದೊಂದಿಗೆ
ಪ್ರವಾಸ ಮಾಡುವ ಭಾಗ್ಯವಿದೆ.

ಮಿಥುನ
ವಿದ್ಯುತ್ ಉಪಕರಣಗಳಿಂದ ತೊಂದರೆಯಾಗುವ
ಸಾಧ್ಯತೆ. ಮನೆಯಲ್ಲಿ ಸಂತೋಷ ಇರಲಿದೆ. ನಾಲ್ಕು
ಜನರಿಗೆ ಉಪಯೋಗವಾಗುಂತಹ ಕಾರ್ಯ
ಮಾಡುವಿರಿ. ಲೋಕ ನಿಂದನೆಗೆ ಹೆಚ್ಚು ಗಮನ ನೀಡುವುದು
ಬೇಡ. ಅಸಮಾನ್ಯ ವ್ಯಕ್ತಿಗಳ ಭೇಟಿ. ನಿರಂತರ ಅಧ್ಯಯನದಲ್ಲಿ
ತೊಡಗಿಕೊಳ್ಳುವಿರಿ. ದಾಂಪತ್ಯದಲ್ಲಿ ಸುಖ.

ಕಟಕ
ದೀರ್ಘ ಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.
ಭೂ ವ್ಯಾಜ್ಯಗಳಲ್ಲಿ ಜಯವಾಗಲಿದೆ. ಬರಹ
ಗಾರರಿಗೆ ಮೆಚ್ಚುಗೆಗಳ ಮಹಾಪೂರ. ಸಂಬಂಧಗಳ
ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಸೂಕ್ಷ್ಮ ವಿಚಾರಗಳ ಬಗ್ಗೆ
ಮೊಂಡುತನದಿಂದ ವರ್ತಿಸುವುದು ಬೇಡ. ಹೊಸ ಕಾರು
ಕೊಳ್ಳುವ ಯೋಗವಿದೆ.

ಸಿಂಹ
ಚಿನ್ನಾಭರಣ ವ್ಯಾಪಾರಿಗಳಿಗೆ ಆರ್ಥಿಕ ಹಿನ್ನಡೆ.
ಬ್ಯಾಂಕ್ ವಹಿವಾಟುಗಳಲ್ಲಿ ಜಾಗೃತೆ ಅಗತ್ಯ. ತೆರಿಗೆ
ಪಾವತಿಯಲ್ಲಿ ನಿಯಮಗಳನ್ನು ಸರಿಯಾಗಿ
ತಿಳಿದುಕೊಂಡು ಮುಂದುವರೆಯಿರಿ. ಹೊಸ ವಸ್ತುಗಳನ್ನು
ಕೊಳ್ಳುವಾಗ ಅಗತ್ಯ ಪರಿಶೀಲನೆ ನಡೆಸಿ. ದೂರದ ಸಂಬಂಧಿಗಳ
ಜೊತೆಗೆ ದೊಡ್ಡ ಮಟ್ಟದ ವ್ಯವಹಾರ ಏರ್ಪಡಲಿದೆ.

ಕನ್ಯಾ
ಸರಕಾರದಿಂದ ಬರಬೇಕಾದ ಅನುದಾನಗಳು
ಬರಲಿವೆ. ರಾಜಕಾರಣಿಗಳಿಗೆ ಪೂರ್ಣ ಪ್ರಮಾಣದ
ಬೆಂಬಲ ಸಿಗಲಿದೆ. ಬಾಲ ಪ್ರತಿಭೆಗಳಿಗೆ ದೊಡ್ಡ
ಮಟ್ಟದಲ್ಲಿ ಅವಕಾಶಗಳು ಒದಗಿಬರಲಿವೆ. ಕಾಯಕದಲ್ಲಿ ಆಸಕ್ತಿ
ಕಡಿಮೆ ಮಾಡಿಕೊಳ್ಳಬೇಡಿ. ಅನಿರೀಕ್ಷಿತವಾಗಿ ಬರುವ
ಘಟನೆಗಳನ್ನು ಸಮರ್ಥವಾಗಿ ನಿಭಾಯಿಸುವಿರಿ.

ತುಲಾ
ಕಾಟಾಚಾರಕ್ಕೆ ಕೆಲಸ ಮಾಡುವ ಪ್ರವೃತ್ತಿ ಕಡಿಮೆ
ಮಾಡಿಕೊಳ್ಳುವುದು ಉತ್ತಮ. ಚಿತ್ರಕಲಾವಿದರಿಗೆ
ಜೀವಮಾನದಲ್ಲಿಯೇ ದೊಡ್ಡ ಗೌರವ
ದೊರೆಯಲಿದೆ. ದೀರ್ಘ ಕಾಲದ ವ್ಯಾಧಿಯಿಂದ ಮುಕ್ತಿ.
ಹಿಡಿದ ಕೆಲಸವನ್ನು ಛಲ ಬಿಡದೇ ಮುಗಿಸುವಿರಿ. ವೈದ್ಯರಿಗೆ
ಕೆಲಸದ ಒತ್ತಡ ಹೆಚ್ಚು. ಆರೋಗ್ಯದಲ್ಲಿ ವೃದ್ಧಿ. 

ವೃಶ್ಚಿಕ
ರೈತರಿಗೆ ಒಳ್ಳೆಯ ಫಲ ದೊರೆಯಲಿದೆ.
ಸಂಗೀತಗಾರರಿಗೆ ಹೆಚ್ಚಿನ ಅವಕಾಶಗಳು ಬಾಗಿಲು
ತೆರೆಯಲಿವೆ. ತಿರುಗಾಟದಲ್ಲಿ ಆಸಕ್ತಿ ಹೆಚ್ಚಲಿದೆ.
ಹಿರಿಯರಿಂದ ಗೌರವ ಪ್ರಶಂಸೆ. ತಂದೆ, ತಾಯಿ ಜೊತೆಗೆ
ಸಂತೋಷ ಹಂಚಿಕೊಳ್ಳುವಿರಿ. ಒಡಹುಟ್ಟಿದವರ ಕಷ್ಟಕ್ಕೆ ಸ್ಪಂದನೆ.
ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ.

ಧನಸ್ಸು
ಹಿಂದಿನ ಆರ್ಥಿಕ ನಷ್ಟಗಳಿಂದ ಹೊರಗೆ ಬರುವಿರಿ.
ಖರ್ಚಿನಲ್ಲಿ ಏರಿಕೆಯಾಗಲಿದೆ. ವಾರಾಂತ್ಯದಲ್ಲಿ
ಆರೋಗ್ಯದಲ್ಲಿ ಏರುಪೇರು. ಸರಕಾರಿ ನೌಕರರಿಗೆ
ಕೆಲಸದಲ್ಲಿ ಒತ್ತಡ. ಸ್ನೇಹಿತರ ಮೇಲೆ ನಂಬಿಕೆ ಹೆಚ್ಚಾಗಲಿದೆ.
ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದುಡಿಯುವವರ ಪಾಲಿಗೆ ಶುಭ ಫಲ.

ಮಕರ
ಶುಭ ಕಾರ್ಯಗಳು ಮುಂದೂಡಲ್ಪಡುತ್ತವೆ.
ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ವಾಹನ
ಚಾಲಕರಿಗೆ ಹೆಚ್ಚಿನ ಕೆಲಸದ ಅವಕಾಶಗಳು
ದೊರೆಯ ಲಿವೆ. ಅಂದುಕೊಂಡು ಕೆಲಸಗಳಲ್ಲಿ ಸಮಾಧಾರನಕರ
ಯಶಸ್ಸು. ಎರಡು ದೋಣಿಯ ಮೇಲಿನ ಪ್ರಯಾಣ ಬೇಡ.

ಕುಂಭ
ಆರ್ಥಿಕವಾಗಿ ಲಾಭದಾಯಕ ದಿನಗಳ ಆರಂಭ. ಸಣ್ಣ
ವ್ಯಾಪಾರಿಗಳು ಬಂಡವಾಳ ಹೂಡಿಕೆಗೆ ಮುಂದಾ
ಗುವಿರಿ. ಪುಸ್ತಕ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಪತ್ರಕರ್ತರಿಗೆ ಕಠಿಣ ದಿನಗಳು. ಆತ್ಮೀಯ ಗೆಳೆಯರ ಕಷ್ಟಕ್ಕೆ ನೆರ
ವಾಗುವಿರಿ. ಆಹಾರ ಸೇವನೆಯಲ್ಲಿ ಮಿತಿ ಕಾಯ್ದುಕೊಳ್ಳಿ.
ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಅನಿರೀಕ್ಷಿತವಾಗಿ ಒದಗಲಿದೆ.

ಮೀನ
ವೈಚಾರಿಕ ಚಿಂತನೆಗಳು ಹೆಚ್ಚಾಗಲಿವೆ. ಅಂದುಕೊಂಡ
ಕಾರ್ಯಕ್ಕೆ ನೂರಾರು ವಿಘ್ನಗಳು ಎದುರಾಗಲಿವೆ.
ದಾಪಂತ್ಯದಲಿ ಕಲಹ ಅಂತ್ಯವಾಗಲಿದೆ. ಮಕ್ಕಳ
ಶೈಕ್ಷಣಿಕ ಚಟುವಟಿಕೆಗಳು ಹೆಚ್ಚಾಗಲಿವೆ. ವರಮಾನದಲ್ಲಿ ಏರಿಕೆ.
ಛಾಯಾಚಿತ್ರಗಾಹಕರಿಗೆ ಲಾಭದ ದಿನಗಳಿವು. 

Follow Us:
Download App:
  • android
  • ios