Asianet Suvarna News Asianet Suvarna News

ನಿಮ್ಮನೆ ಪೀಠೋಪಕರಣಗಳ ಮೆರುಗು ಮರೆಯಾಗದಿರಲು ಈ ಟಿಪ್ಸ್ ಅನುಸರಿಸಿ!

ಮನೆಯಲ್ಲಿರುವ ಮರದ ಪೀಠೋಪಕರಣಗಳ ಕ್ಲೀನಿಂಗ್ ಹಾಗೂ ನಿರ್ವಹಣೆಯೇ ನಿಮಗೆ ದೊಡ್ಡ ತಲೆನೋವಾಗಿದೆಯೇ? ಚಿಂತೆ ಬಿಡಿ, ಸಿಂಪಲಾಗಿರುವ ಕೆಲವು ಟಿಪ್ಸ್ ಅನುಸರಿಸಿದರೆ ಸಾಕು, ನಿಮ್ಮನೆ ಕುರ್ಚಿ, ಸೋಫಾಗಳು ಲಕಲಕ ಹೊಳೆಯುತ್ತವೆ ನೋಡಿ. 

Tips to keep wooden furniture at its good form
Author
Bangalore, First Published Jan 17, 2020, 3:28 PM IST
  • Facebook
  • Twitter
  • Whatsapp

ಇಂದು ಪ್ಲಾಸ್ಟಿಕ್, ಪ್ಲೈವುಡ್,ಪ್ಲಾಸ್ಟರ್ ಆಫ್ ಪ್ಯಾರೀಸ್,ಕಬ್ಬಿಣಗಳನ್ನು ಬಳಸಿ ಮಾಡುವ ಫರ್ನಿಚರ್‍ಗಳು ಎಷ್ಟೇ ಆಕರ್ಷಕವಾಗಿ ಕಂಡರೂ ಮರದ ಪೀಠೋಪಕರಣಗಳೊಂದಿಗೆ ಸ್ಪರ್ಧೆಗಿಳಿಯಲಾರವು. ಮನೆಯ ಅಂದಕ್ಕೆ ಮತ್ತಷ್ಟು ಮೆರುಗು ನೀಡಲು ಮರದ ಪೀಠೋಪಕರಣಗಳೇ ಬೆಸ್ಟ್. ಆದರೆ,ಅವುಗಳನ್ನು ಕೂಡ ಸೂಕ್ತವಾಗಿ ನಿರ್ವಹಣೆ ಮಾಡುವುದು ಅಗತ್ಯ.ನೀವು ಎಷ್ಟೇ ಜಾಗ್ರತೆ ವಹಿಸಿದರೂ ಸಮಯ ಕಳೆದಂತೆ ತೂತುಗಳು,ಬಿರುಕುಗಳು ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ.ಆದರೆ,ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಮರದ ಫರ್ನಿಚರ್‍ಗಳು ಅಂದ ಕಳೆದುಕೊಳ್ಳದಂತೆ ಮಾಡಬಹುದು.

ಒರೆಸಲು ಉಗುರು ಬೆಚ್ಚಗಿನ ನೀರು ಬಳಸಿ: ಫರ್ನಿಚರ್‍ಗಳಲ್ಲಿ ಧೂಳು,ಕೊಳೆ ಕುಳಿತುಕೊಳ್ಳುವುದು ಸಾಮಾನ್ಯ.ಸಂದಿಗೊಂದಿಗಳಲ್ಲಿ ಕುಳಿತಿರುವ ಧೂಳನ್ನು ಪ್ರತಿದಿನ ಕ್ಲೀನ್ ಮಾಡುವುದು ಅಗತ್ಯ.ಕೆಲವರು ವಾರಕ್ಕೋ, ತಿಂಗಳಿಗೋ ಒಮ್ಮೆ ಕ್ಲೀನ್ ಮಾಡಿದರಾಯಿತು ಎಂದು ಸುಮ್ಮನಿದ್ದು ಬಿಡುತ್ತಾರೆ. ಹೀಗೆ ಮಾಡುವುದರಿಂದ ಕೊಳೆ ತೆಗೆಯಲು ಕಷ್ಟವಾಗಬಹುದು.ಅಲ್ಲದೆ, ಮನೆಯಲ್ಲಿ ಮಕ್ಕಳು,ವಯಸ್ಸಾದವರಿದ್ದರೆ ಡಸ್ಟ್ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ.ಅಲ್ಲದೆ, ಮರದ ಕುರ್ಚಿ, ಸೋಫಾಗಳ ಮೇಲೆ ಕುಳಿತಿರುವ ಧೂಳು, ಕೊಳೆ ಬೇಗ ಎದ್ದು ಕಾಣಿಸುವ ಮೂಲಕ ಅವುಗಳ ಅಂದಗೆಡಿಸುತ್ತವೆ. ಆದಕಾರಣ ಪ್ರತಿದಿನ ಉಗುರು ಬೆಚ್ಚಗಿನ ನೀರಿನಲ್ಲಿ ಮೃದುವಾಗಿರುವ ಬಟ್ಟೆಯನ್ನು ಅದ್ದಿ ಮರದ ಫರ್ನಿಚರ್‍ನ ಹೊರ ಮೈ ಮೇಲೆ ಕುಳಿತಿರುವ ಕೊಳೆಯನ್ನು ಒರೆಸಿ. ಆ ಬಳಿಕ ಮನೆಯ ಕಿಟಕಿಗಳ ಕರ್ಟನ್‍ಗಳನ್ನು ಬದಿಗೆ ಸರಿಸಿ ಸೂರ್ಯನ ಕಿರಣಗಳು ಫರ್ನಿಚರ್ ಮೇಲೆ ಸ್ವಲ್ಪ ಸಮಯ ಬೀಳುವಂತೆ ನೋಡಿಕೊಳ್ಳಿ.ಇಲ್ಲವಾದರೆ ಒದ್ದೆ ಬಟ್ಟೆಯಲ್ಲಿ ಕ್ಲೀನ್ ಮಾಡಿದ ಬಳಿಕ ಒಣಗಿರುವ ಬಟ್ಟೆಯಿಂದ ಒಮ್ಮೆ ಒರೆಸಿ. ನೀರಿನಾಂಶ ಎಲ್ಲೂ ಉಳಿಯದಂತೆ ಎಚ್ಚರ ವಹಿಸುವುದು ಅಗತ್ಯ.ನೀರಿನಾಂಶ ಉಳಿದರೆ ಮರದ ಫರ್ನಿಚರ್ ಬೇಗ ಹಾಳಾಗುತ್ತದೆ.

ಲಿವಿಂಗ್ ರೂಮ್ ಗೋಡೆಯೂ ಮಾತಾಡಬಲ್ಲದು ಗೊತ್ತಾ?

ಲಕಲಕ ಹೊಳೆಯಲು ಹೀಗೆ ಮಾಡಿ: ಸ್ವಲ್ಪ ವರ್ಷಗಳ ಬಳಿಕ ಮರದ ಪೀಠೋಪಕರಣಗಳು ಕಳೆಗುಂದುತ್ತವೆ.ಇವುಗಳಿಗೆ ಹೊಸ ಲುಕ್ ನೀಡಲು ಮೃದುವಾದ ವ್ಯಾಕ್ಸ್ ಪೇಸ್ಟ್ನ ತೆಳುವಾದ ಕೋಟಿಂಗ್ ನೀಡಿ.ಕೆಲವು ನಿಮಿಷಗಳ ಕಾಲ ಪೀಠೋಪಕರಣಗಳನ್ನು ಮುಟ್ಟಬೇಡಿ.ನಂತರ ಮೃದುವಾದ ಬ್ರಷ್ ಅಥವಾ ಬಟ್ಟೆಯಿಂದ ಪೀಠೋಪಕರಣಗಳ ಮೇಲೆ ಬಫ್‍ನಿಂದ ಮುಖಕ್ಕೆ ಪೌಡರ್ ಹಚ್ಚುವ ಮಾದರಿಯಲ್ಲಿ ನಿಧಾನವಾಗಿ ಒತ್ತಿ.ಇದಾದ 30-60 ನಿಮಿಷಗಳ ಬಳಿಕ ಬ್ರಷ್‍ನಿಂದ ಉಜ್ಜಿದರೆ ಮರದ ಪೀಠೋಪಕರಣಗಳು ಲಕ ಲಕ ಹೊಳೆಯುತ್ತವೆ.

ಸೂರ್ಯನ ಕಿರಣಗಳ ಬಗ್ಗೆ ಎಚ್ಚರ: ಮರದ ಪೀಠೋಪಕರಣಗಳ ಮೇಲೆ ಸೂರ್ಯನ ನೇರ ಕಿರಣಗಳು ಬೀಳದಂತೆ ಎಚ್ಚರ ವಹಿಸಬೇಕು.ಬೇಸಿಗೆಯಲ್ಲಿ ತೀಕ್ಷ್ಣವಾಗಿರುವ ಸೂರ್ಯನ ಕಿರಣಗಳು ಮರದ ಮೇಲ್ಮೈಗೆ ತಾಗಿದರೆ ಅವುಗಳ ಬಣ್ಣ ಮಾಸುವ ಜೊತೆಗೆ ಒಣಗಿ ಬಿರುಕು ಬಿಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಪಾಯಕಾರಿ ಕಿರಣಗಳಿಂದ ಫರ್ನಿಚರ್‍ಗಳನ್ನು ಸಂರಕ್ಷಿಸಲು ಬಟ್ಟೆ ಅಥವಾ ಪ್ಲಾಸ್ಟಿಕ್ ಕವರ್‍ನಿಂದ ಅವುಗಳನ್ನು ಮುಚ್ಚುವುದು ಅಗತ್ಯ.

ಬಿರುಕು ಮುಚ್ಚಲು ಶೂ ಪಾಲಿಷ್: ಮರದ ಫರ್ನಿಚರ್‍ಗಳನ್ನುನೀವು ಎಷ್ಟೇ ಜತನ ಮಾಡಿದರೂ ಬಿರುಕು ಕಾಣಿಸಿಕೊಳ್ಳುವುದು ಮಾಮೂಲು.ನಿಮ್ಮ ಮರದ ಫರ್ನಿಚರ್‍ಗಳಲ್ಲೂ ಬಿರುಕುಗಳಿವೆಯೇ? ಯೋಚನೆ ಮಾಡ್ಬೇಡಿ, ಶೂ ಪಾಲಿಷ್ ತೆಗೆದುಕೊಂಡು ಬಿರುಕಿರುವ ಅಥವಾ ಗೆರೆಗಳು ಬಿದ್ದಿರುವ ಸ್ಥಳದ ಮೇಲೆ ಉಜ್ಜಿ.ಮಾರ್ಕರ್ ಪೆನ್ ಬಳಸಿಯೂ ಈ ಕೆಲಸ ಮಾಡಬಹುದು.ಇದರಿಂದ ಬಿರುಕು ಅಥವಾ ಗೆರೆಗಳು ಎದ್ದು ಕಾಣಿಸುವುದಿಲ್ಲ.

ಕಿಟಕಿ ಪರದೆ ಮನೆ, ಮನಸ್ಸಿನ ಕತೆ ಹೇಳುತ್ತೆ!

ರಂಧ್ರಗಳ ಬಾಯಿ ಮುಚ್ಚಿಸುವುದು ಹೇಗೆ ಗೊತ್ತಾ?: ಮರದ ಪೀಠೋಪಕರಣಗಳಲ್ಲಿ ಕಾಲಕ್ರಮೇಣ ಚಿಕ್ಕ ಚಿಕ್ಕ ರಂಧ್ರಗಳು ಕಾಣಿಸಿಕೊಳ್ಳುತ್ತವೆ.ಇವು ಪೀಠೋಪಕರಣಗಳ ಅಂದಗೆಡಿಸುತ್ತವೆ.ಈ ರಂಧ್ರಗಳನ್ನು ಮುಚ್ಚಲು ಟೂಥ್‍ಪೇಸ್ಟ್ಗೆ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಹಚ್ಚಬೇಕು.ಬೂದಿಗೆ ಅಡುಗೆ ಎಣ್ಣೆ ಮಿಕ್ಸ್ ಮಾಡಿ ಕೂಡ ಈ ತೂತುಗಳನ್ನು ಮುಚ್ಚಬಹುದು.ಕೈಯಿಂದ ಅಥವಾ ಮೃದುವಾದ ಬಟ್ಟೆ ಬಳಸಿ ಈ ಮಿಶ್ರಣಗಳನ್ನು ರಂಧ್ರಗಳಿರುವ ಭಾಗದ ಮೇಲೆ ಹಚ್ಚಬಹುದು. 

Follow Us:
Download App:
  • android
  • ios