ಅಬ್ಬಾ...! ಕೈಲಾಸ ಪರ್ವತದ 8 ನಿಗೂಢಗಳಿವು!
ಕೈಲಾಸ ಪರ್ವತ... ಮಾನಸ ಸರೋವರದ ನಡುವೆ ಇರುವ ಈ ಪರ್ವತವು ಶಿವನ ಆವಾಸ ಸ್ಥಾನ ಎನ್ನಲಾಗುತ್ತದೆ. ಹೀಗಿದ್ದರೂ ಈ ಪರ್ವತಕ್ಕೆ ಸಂಬಂಧಿಸಿದ ಕೆಲ ನಿಗೂಢ ವಿಚಾರಗಳು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೂ ಬಹುದೊಡ್ಡ ಸವಾಲುಗಳಾಗಿವೆ. ಇಲ್ಲಿ ಸಂಭವಿಸುವ ಕೆಲ ವಿಚಿತ್ರಗಳು ವಿಜ್ಞಾನಿಗಳನ್ನೂ ಮೂಕ ವಿಸ್ಮಿತರನ್ನಾಗಿಸಿದೆ. ಕೈಲಾಶ ಪರ್ವತದ 8 ನಿಗೂಢತೆಗಳು ಇಲ್ಲಿವೆ ನೋಡಿ
1) ರಷ್ಯನ್ ಸಿದ್ಧಾಂತ: ಮೊದಲನೆಯದಾಗಿ ಈ ಪರ್ವತದ ಆಕೃತಿಯೇ ಬಹುದೊಡ್ಡ ರಹಸ್ಯ. ಇದೊಂದು ಬಹುದೊಡ್ಡ ಪಿರಮಿಡ್‌ನಂತೆ ಕಂಡು ಬರುತ್ತದೆ. ಹೀಗಾಗಿ ಇದು ಪರ್ವತವಲ್ಲ ಮಾನವ ನಿರ್ಮಿತ ಪಿರಾಮಿಡ್ ಎಂಬುವುದು ಕೆಲ ರಷ್ಯನ್ ವಿಜ್ಞಾನಿಗಳ ತರ್ಕವಾಗಿದೆ. ಇವು ಒಳಗಿಂದ ಟೊಳ್ಳಾಗಿವೆ ಮತ್ತು ಕೈಲಾಸ ಪರ್ವತದ ಒಳಗೆ ಹೋಗುವ ಮಾರ್ಗ ಇದರ ತುತ್ತ ತುದಿಯಲ್ಲಿದೆ ಓರ್ವ ಅಸಾಮಾನ್ಯ ಶಕ್ತಿ ಹೊಂದಿರುವ ವ್ಯಕ್ತಿ ಕೈಲಾಸ ಪರ್ವತವನ್ನು ನಿರ್ಮಿಸಿರಬಹುದು ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
2) ಪರ್ವತದ ಸುತ್ತ ರಹಸ್ಯಮಯ ಶಕ್ತಿ: ಕೈಲಾಸ ಪರ್ವತವನ್ನು ಅಲೌಕಿಕ ಶಕ್ತಿ ಸುತ್ತುವರೆದಿದೆ ಎಂಬ ನಂಬಿಕೆ ಇದೆ. ಇದೇ ಕಾರಣದಿಂದ ಯಾವೊಬ್ಬ ವ್ಯಕ್ತಿಯೂ ಈವರೆಗೆ ಪರ್ವತ ಏರಲಾಗಿಲ್ಲ. ಪರ್ವತ ಏರಲು ಯತ್ನಿಸಿ ಹತ್ತಿರ ಹೋದವರೆಲ್ಲರ ಆರೋಗ್ಯ ಏರು ಪೇರಾಗಿದ್ದು, ಎದೆ ಬಡಿತ ಹೆಚ್ಚಾಗಿ ಉಸಿರುಗಟ್ಟಿದ ಅನುಭವವಾಗಿದೆ. ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ಗಿಂತಲೂ ಚಿಕ್ಕದಿರುವ ಕೈಲಾಸ ಪರ್ವತವನ್ನು ಯಾವ ದಿಕ್ಕಿನಿಂದ ಹತ್ತಲು ಯತ್ನಿಸಿದರೂ ಇದೇ ಸ್ಥಿತಿ ನಿರ್ಮಾಣವಾಗುತ್ತದೆಯಂತೆ. ಆದರೆ ವಿಜ್ಞಾನಿಗಳು ಇದು ಮೂಡನಂಬಿಕೆ ರೇಡಿಯೋ ತರಂಗಗಳು ಪರ್ವತವನ್ನು ಸುತ್ತುವರೆದಿರುವುದರಿಂದ ಇಂತಹ ಅನುಭವವಾಗಿದೆ ಎಂದಿದ್ದಾರೆ.
3) ಅವಳಿ ಕೆರೆಗಳ ಸಿದ್ಧಾಂತ: ಕೈಲಾಸ ಪರ್ವತವು ಎರಡು ಕೆರೆಗಳಿಂದ ಆವೃತವಾಗಿದೆ. ಒಂದು ಮಾನಸ ಸರೋವರ[ದೇವತೆಗಳ ಸರೋವರ] ಮತ್ತೊಂದು ರಾಕ್ಷಸ ಸರೋವರ[ದೆವ್ವಗಳ ಸರೋವರ]. ಕೈಲಾಸ ಪರ್ವತವು ಈ ಎರಡರ ನಡುವೆ ಸಮತೋಲನ ಕಾಯ್ದುಕೊಂಡಿದ್ದು, ಇದು ನಮ್ಮಲ್ಲಿರುವ ಒಳ್ಳೆತನ ಹಾಗೂ ಕೆಟ್ಟತನ ಎರಡನ್ನೂ ಪ್ರತಿನಿಧಿಸುತ್ತದೆ. ಕೆಟ್ಟತನ ಎಂಬುವುದು ಹೊರಗಿರುವುದಲ್ಲ ನಮ್ಮಲ್ಲೇ ಇರುತ್ತದೆ ಎಂಬುವುದು ಜನರ ಮಾತಾಗಿದೆ.
4) ಓಂ ಪರ್ವತ: ಓಂ ಪರ್ವತದಲ್ಲಿ ಹಿಮವು ಆಕರ್ಷಕವಾಗಿ ಓಂ ಆಕೃತಿಯಲ್ಲಿ ಬೀಳುತ್ತದೆ ಎಂಬುವುದು ವಿಸ್ಮಯಕಾರಿ ವಿಚಾರವಾಗಿದೆ. ಇನ್ನು ಓಂ ಎಂಬುವುದು ಬ್ರಹ್ಮಾಂಡ ನಡುಗುವಾಗ ಕೇಳಿ ಬರುವ ಶಬ್ಧವಾಗಿದೆ ಎಂಬುವುದು ಗಮನಾರ್ಹ.
5) ಸ್ವಸ್ತಿಕ ನೆರಳಿನ ರಹಸ್ಯ: ಸೂರ್ಯ ಮುಳುಗುವ ವೇಳೆ ಕೈಲಾಸ ಪರ್ವತದ ಮೇಲೆ ಬೀಳುವ ನೆರಳು ಸ್ವಸ್ತಿಕ ಆಕೃತಿಯಂತಿರುತ್ತದೆ. ಆದರೆ ನೆರಳು ಸ್ವಸ್ತಿಕ ಆಕೃತಿ ಪಡೆದುಕೊಳ್ಳುವುದು ಯಾಕೆ ಎಂಬುವುದು ಇಂದಿಗೂ ನಿಗೂಢವಾಗಿದೆ.
6) ಕೈಲಾಶ ಪರ್ವತವೇರಿದ ಋಷಿ: ಈವರೆಗೂ ಕೇವಲ ಒಬ್ಬ ವ್ಯಕ್ತಿ ಕೈಲಾಶ ಪರ್ವತವನ್ನೇರಿದ್ದಾರೆನ್ನಲಾಗಿದೆ. ತನ್ನ ಉಪದೇಶ ಹಾಗೂ ಪದ್ಯಗಳಿಂದಲೇ ಬೌದ್ಧ ಧರ್ಮ ಸಾರುತ್ತಿದ್ದ ಮಿಲರೇಪಾ ಹೆಸರಿನ ಟಿಬೆಟ್ ನ ಋಷಿ ಕೈಲಾಸ ಪರ್ವತವನ್ನೇರಿದ್ದಾರೆ. ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಲು ಸಾಧ್ಯವಾಗಿದ್ದರೂ ಕೈಲಾಸ ಪರ್ವತವನ್ನೇರಲು ಸಾಧ್ಯವಾಗಿಲ್ಲ ಎಂಬುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹುದ್ದು
7) ಭಗವಂತ ಶಿವನ ಆವಾಸ ಸ್ಥಾನ: ಕೈಲಾಶ ಪರ್ವತದೊಳಗೆ 21000 ವರ್ಷ ಹಿಂದಿನ ಶಿವನ ಆವಾಸ ಸ್ಥಾನ ಇದೆ ಎನ್ನಲಾಗುತ್ತದೆ.
8) ಚಲಿಸುವ ಪರ್ವತ: ಪರ್ವತವು ನಿರಂತರವಾಗಿ ತನ್ನ ಸ್ಥಾನ ಬದಲಾಯಿಸುತ್ತಿರುವುದೂ ಪರ್ವತವೇರಲು ಇರುವ ತೊಡಕು. ಆದರೆ ಪರ್ವತದ ಚಲನೆ ಹಾಗೂ ಸ್ಥಾನ ಬದಲಾಗುವುದೇಕೆ ಎಂಬುವುದೂ ನಿಗೂಢವಾಗಿದೆ.