ರಾಶಿ ಫಲ ಹೇಗಿದೆ? ನಿಮ್ಮ ಜಾತಕ ನೀವೇ ನೋಡಿಕೊಳ್ಳಿ

sun sign and horoscope match
Highlights

ಇಂದು ಗುರು, ಶುಕ್ರ, ಚಂದ್ರ...ಗ್ರಹಗಳು ಯಾವ ಯಾವ ಮನೆಯಲ್ಲಿವೆ? ಯಾವ ರಾಶಿಯವರಿಗೆ ಶುಭ ಫಲ? ಯಾರಿಗಿಲ್ಲವೋ ಅದೃಷ್ಟ, ಅವರು ಏನು ಮಾಡಿದರೆ ಒಳ್ಳೆಯಾದಗುತ್ತೆ? ಇಲ್ಲಿವೆ ಫುಲ್ ಡಿಟೇಲ್ಸ್. ನಿಮ್ಮ ಜಾತಕ ನೀವೇ ನೋಡಿಕೊಳ್ಳಿ.

ಶ್ರೀ ವಿಲಂಬಿ ನಾಮ ಸಂವತ್ಸರ

ಉತ್ತರಾಯಣ

ಗ್ರೀಷ್ಮ ಋತು

ನಿಜ ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ಪಂಚಮಿ ತಿಥಿ

ಆಶ್ಲೇಷ ನಕ್ಷತ್ರ


ಮೇಷ ರಾಶಿ: ನಿಮ್ಮ ರಾಶಿಯ ಅಧಿಪತಿಯಾದ ಕುಜ ಕರ್ಮಸ್ಥಾನದಲ್ಲಿ ಅಂದ್ರೆ ಉದ್ಯೋಗ ಸ್ಥಾನದಲ್ಲಿ  ಉಚ್ಛನಾಗಿರುವುದರಿಂದ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ, ಸುಖ ಸ್ಥಾನದಲ್ಲಿ ಶುಕ್ರ ಹಾಗೂ ರಾಹು ಗ್ರಹಗಳ ಯುತಿಯಿಂದ ಸ್ತ್ರೀಯರಿಂದ ಸಮಸ್ಯೆಗೆ ಒಳಗಾಗುವಿರಿ. ಹಾಗಾಗಿ ಸ್ತ್ರೀಯರಿಂದ ದೂರವಿದ್ದರೆ ಲೇಸು.
ದೋಷ ಪರಿಹಾರ - ದುರ್ಗಾ ದರ್ಶನ ಮಾಡಿ ಹಾಗೂ ಬಿಳಿ ವಸ್ತ್ರ ದಾನ ಹಾಗೂ ಉದ್ದಿನ ಕಾಳನ್ನು ದಾನ ಮಾಡಿ

ವೃಷಭ: ರಾಶ್ಯಾಧಿಪತಿ ತೃತೀಯ ಸ್ಥಾನದಲ್ಲಿ ರಾಹುಯುಕ್ತನಾಗಿರುವುದರಿಂದ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಸ್ವಲ್ಪ ಮೃದು ಮಾತುಗಳಾಡಿ, ಅಷ್ಟಮದಲ್ಲಿನ ಶನಿ ಸ್ವಲ್ಪ ಮಟ್ಟಿಗೆ ಆರೋಗ್ಯವನ್ನು ಹಾಳುಮಾಡುವ ಸಾಧ್ಯತೆ ಇದೆ ತಿನ್ನುವ ವಿಷಯದಲ್ಲಿ ಜಾಗೃತೆ ಇದ್ದರೆ ಸಾಕು.

ದೋಷ ಪರಿಹಾರ : ರಾಹು ದೋಷ ನಿವಾರಣೆಗೆ ಕ್ಷೀರ ದಾನ ಮಾಡಿ, ಶನಿ ದೋಷ ನಿವಾರಣೆಗೆ ಕಪ್ಪ ವಸ್ತ್ರದಲ್ಲಿ ಎಳ್ಳನ್ನು ಕಟ್ಟಿ ವಸ್ತ್ರ ಸಮೇತ ದಾನ ಮಾಡಿ 


ಮಿಥುನ: ಸಪ್ತಮದಲ್ಲಿರುವ ಶನಿಯಿಂದಾಗಿ ನಿಮ್ಮ ವ್ಯಾಪಾರದಲ್ಲಿ ತೊಂದರೆಯಾಗುವ ಸಾಧ್ಯತೆ, ಗಂಡ ಹೆಂಡಿರಲ್ಲೂ ಕೂಡ ಸ್ವಲ್ಪ ವಾಗ್ವಾದವಾಗಬಹುದು. ಹೆಚ್ಚು ಮಾತನಾಡುವ ಬದಲು ಸಮಾಧಾನದಿಂದಿರಿ. ಬೇಡದ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅದರಿಂದ ಏನೂ ಪ್ರಯೋಜನವಿಲ್ಲ ದಿನ ಹಾಳಾಗಲಿದೆ ಅಷ್ಟೆ. 

ದೋಷ ಪರಿಹಾರ: ಶನೈಶ್ಚರ ದೇವಾಲಯಕ್ಕೆ ಎಳ್ಳು ದಾನ ಮಾಡಿ, ಸಾಧ್ಯವಾದರೆ ಶನಿ ದೇವರಿಗೆ 7 ನಮಸ್ಕಾರ ಹಾಕಿಬನ್ನಿ 

ಕಟಕ: ರಾಶಿಯಲ್ಲಿರುವ ಶುಕ್ರ-ರಾಹುಗಳಿಂದ ಗಂಟಲಿನಲ್ಲಿ ತೊಂದರೆಯಾಗಬಹುದು, ಸ್ತ್ರೀಯರೊಡನೆ ಹೆಚ್ಚು ಮಾತು ಬೇಡ, ಮನೆಯಲ್ಲಿ ಹಿರಿಯರ ಮಾತು ಕೇಳುವುದರಿಂದ ಕಲಹ ದೂರವಾಗುವುದರಲ್ಲಿ ಸಂಶಯವೇ ಇಲ್ಲ. ಬಿಸಿ ನೀರು ಕುಡಿಯಿರಿ.

ದೋಷ ಪರಿಹಾರ: ಸಾಧ್ಯವಾದರೆ 5 ಜನ ಸುಮಂಗಲೆಯರಿಗೆ  ಮಂಗಲದ್ರವ್ಯಗಳನ್ನು ದಾನ ಮಾಡಿ, ಇಲ್ಲವಾದರೆ ದೇವಿ ದೇವಸ್ಥಾನಕ್ಕೆ ಎರಡು ಬಿಳಿ ಹೂವನ್ನು ಸಮರ್ಪಿಸಿಬನ್ನಿ

ಸಿಂಹ: ರಾಶ್ಯಾಧಿಪತಿಯು ಲಾಭದಲ್ಲಿರುವುದರಿಂದ ವೈದ್ಯರಿಗೆ, ವೈದ್ಯ ಸಂಬಂಧಿ ಕೆಲಸ ಮಾಡುವವರಿಗೆ ಶುಭದಾಯಕ ದಿನ, ಇನ್ನು ಪಂಚಮದಲ್ಲಿರುವಂಥ ಶನಿ ನಿಮ್ಮ ಮಕ್ಕಳಲ್ಲಿ ಅಥವಾ ಸಂತಾನದಲ್ಲಿ ಸ್ವಲ್ಪ ಸಮಸ್ಯೆಯನ್ನ ತರಬಹುದು, ಜಾಗರೂಕರಾಗಿರಿ. ಅವರಿವರ ಮಾತು ಕೇಳಿ ಇಲ್ಲಸಲ್ಲದ ಟ್ರೀಟ್ಮೆಂಟ್ ತಗೋಬೇಡಿ.

ದೋಷ ಪರಿಹಾರ : ಪಂಚಮ ಶನಿ ದೋಷಕ್ಕೆ ಶಿವನ ದೇವಾಲಯಕ್ಕೆ ಹೋಗಿ ತಿಲ ದಾನ ಮಾಡಿಬನ್ನಿ ಅಥವಾ ನಿಮ್ಮ ಹೆಸರಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡಿಸಿದರೂ ದೋಷ ಶಮನವಾಗಲಿದೆ. ಹೆದರಬೇಡಿ. 

ಕನ್ಯಾ: ರಾಶ್ಯಾಧಿಪತಿಯು ಕರ್ಮಸ್ಥಾನದಲ್ಲಿ  ಅಂದ್ರೆ ಉದ್ಯೋಗ ಸ್ಥಾನ ಅಂತ. ಅಲ್ಲಿ ಗ್ರಹಬಲಯುತನಾಗಿರುವುದರಿಂದ  ಖಂಡಿತ ಉದ್ಯೋಗ ಪ್ರಾಪ್ತಿಯಾಗಲಿದೆ, ವೈದ್ಯ ಸಂಬಂಧಿ ಕೆಲಸಗಾರರಿಗೂ ಅನುಕೂಲದ ದಿನ, ಆದರೆ ವಾಹನ ಚಲಾಯಿಸುವಾಗ ಮಾತ್ರ ಎಚ್ಚರದಿಂದಿರಿ. ಕಾರಣ ವಾಹನ ಸ್ಥಾನದಲ್ಲಿ ಶನಿ ಇದ್ದಾನೆ. 
ದೋಷ ಪರಿಹಾರ : ಅಂಥ ಸಮಸ್ಯೆ ಏನೂ ಇಲ್ಲ ನಿಮಗೆ ವಾಹನದಲ್ಲಾಗುವ ಸಮಸ್ಯೆಗೆ ನಿಧಾನವಾಗಿ ಚಲಿಸಿ ಆತುರ ಬೇಡ. ನಿಮ್ಮ ಮನೆ ದೇವರಿಗೆ ನಮಸ್ಕಾರ ಮಾಡಿ ಹೊರಡಿ.

ತುಲಾ: ರಾಶ್ಯಾಧಿಪತಿಯು ಶತ್ರವಿನ ಮನೆಯಲ್ಲಿ ರಾಹು ಯುತನಾಗಿರುವುದರಿಂದ ಉದ್ಯೋಗ ಸ್ಥಾನದಲ್ಲಿ ಸ್ತ್ರೀಯರಿಂದ ಸಮಸ್ಯೆಗೆ ಒಳಗಾಗುವಿರಿ. ಸಹೋದರರಲ್ಲಿ ಸ್ವಲ್ಪ ಮಟ್ಟಿಗೆ ಮಾತಿನ ಘರ್ಷಣೆ ಸಾಧ್ಯತೆ, ಹೆಚ್ಚು ಮಾತನಾಡುವುದು ಬೇಡ.

ದೋಷ ಪರಿಹಾರ: ಶನೈಶ್ಚರ ದೇವಸ್ಥಾನದಲ್ಲಿ ನಿಮ್ಮ ತೂಕದ ಎಳ್ಳನ್ನು 7 ಭಾಗ ಮಾಡಿ ದಾನ ಮಾಡಿ. ಸಾಧ್ಯವಾಗದಿದ್ದರೆ ಶನಿ ದೇವರಿಗೆ 7 ಪ್ರಕ್ಷಿಣೆಹಾಕಿಬನ್ನಿ.


ವೃಶ್ಚಿಕ: ರಾಶ್ಯಾಧಿಪತಿ ತೃತೀಯ ಸ್ಥಾನದಲ್ಲಿ ಉಚ್ಛನಾಗಿದ್ದು ಸಾಹನ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ, ಆದರೆ ಧನ ಸ್ಥಾನದಲ್ಲಿರುವ ಶನಿ ನಿಮ್ಮ ಹಣಕ್ಕೆ ಕತ್ತರಿ ಹಾಕುತ್ತಾನೆ. ಟೀ ಕುಡಿಯುವಾಗ ಹೋಗುವ ಹಣಕ್ಕಿಂತ ಪಾರ್ಟಿ ಕೊಟ್ಟಾಗ ಹೋಗುವಷ್ಟು ಹಣ ಹೋಗಬಹುದು.  ಸ್ವಲ್ಪ ಎಚ್ಚರಿಕೆಯಿಂದ ಇರಿ.

ದೋಷ ಪರಿಹಾರ: ಧನಲಕ್ಷ್ಮಿ ಯಂತ್ರವನ್ನು ಇಟ್ಟು ಶ್ರೀ ಸೂಕ್ತದಿಂದ ಅಭಿಷೇಕ ಮಾಡಿದರೆ ಖಂಡಿತ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ನಂಬಿಕೆ ಇರಬೇಕು.  

ಧನಸ್ಸು: ರಾಶ್ಯಾಧಿಪತಿ ಲಾಭದಲ್ಲಿದ್ದಾನೆ  ಹಾಗಾಗಿ ಲಾಭದ ದಿನವಾಗಿರಲಿದೆ. ಆದರೆ ಶನಿ ರಾಶಿಯಲ್ಲೇ ಕೂತಿರುವುದರಿಂದ ದೇಹಾಯಾಸ ಸಾಧ್ಯತೆ. ದೇಹಕ್ಕೆ ಪೆಟ್ಟಾಗಲಿದೆ, ಎಡವಿ ಬೀಳುವ ಸಾಧ್ಯತೆ ಇದೆ, ಓಡಾಡುವಾಗ ಸ್ವಲ್ಪ ನೆಲ ನೋಡಿ ಸಾಕು. 

ದೋಷ ಪರಿಹಾರ: ಒಂದು ಉಪಯೋಗಿಸಲಿಕ್ಕೆ ಸಾಧ್ಯವಾಗುವ ಕಬ್ಬಿಣದ ವಸ್ತುವನ್ನು ದಾನ ಮಾಡಿ

ಮಕರ : ರಾಶ್ಯಾಧಿಪತಿ ವ್ಯಯಸ್ಥಾನದಲ್ಲಿದ್ದಾನೆ ಹಾಗಾಗಿ ನೀವು ತೆಗೆದುಕೊಳ್ಳುವ ತೀರ್ಮಾನಗಳು ಎಡವಟ್ಟು ಮಾಡಬಹುದು, ಸುಖಾಧಿಪತಿ ಉಚ್ಛನಾಗಿರುವುದರಿಂದ ಸುಖ ಸಮೃದ್ಧವಾಗಲಿದೆ. ಸುಖ ಇದೆ ಅಂತ ಮೈಮರೆಯುವುದು ಬೇಡ.

ದೋಷ ಪರಿಹಾರ: ಸುಬ್ರಹ್ಮಣ್ಯ ಹಾಗೂ ಶನೈಶ್ಚರ ದರ್ಶನ ಮಾಡಿಬನ್ನಿ

ಕುಂಭ: ರಾಶ್ಯಾಧಿಪತಿಯು ಲಾಭದಲ್ಲಿದ್ದಾನೆ ಹಾಗಾಗಿ ಲಾಭದ ದಿನವಾಗಿರಲಿದೆ, ಮುಖ್ಯವಾಗಿ ಧನಾಧಿಪತಿಯಾದ ಗುರುವಿನ ದೃಷ್ಟಿ ಇರುವುದರಿಂದ ಧನ ಸಮೃದ್ಧವಾಗುತ್ತದೆ. ಬಂದ ಹಣವನ್ನ ಸದ್ವಿನಿಯೋಗ ಮಾಡಿಕೊಳ್ಳಿ.

ದೋಷ ಪರಿಹಾರ : ಅಂಥ ದೋಷವೇನೂ ಇಲ್ಲ. ನೆಮ್ಮದಿಯಾಗಿರಿ

ಮೀನ : ರಾಶ್ಯಾಧಿಪತಿ ಅಷ್ಟಮ ಸ್ಥಾನದಲ್ಲಿರುವುದರಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು, ಸೊಂಟದ ಭಾಗದಲ್ಲಿ ನೋವಾಗಬಹುದು ಎಚ್ಚರದಿಂದಿರಿ.
ದೋಷ ಪರಿಹಾರ : ನಿಮ್ಮ ಗುರುವರ್ಯರಿಗೆ ನಮಸ್ಕಾರ ಹಾಕಿ. ಸಿರಿವಂತರು ಧನ ಸಹಾಯ ಮಾಡಿ

.ಗೀತಾಸುತ ಸಂಪರ್ಕ ಸಂಖ್ಯೆ +919164408090

loader