ಈ ರಾಶಿಯವರ ನಿರೀಕ್ಷೆಯಂತೆ ಅಂದುಕೊಂಡದ್ದು ನೆರವೇರುವುದು ಖಚಿತ

Special Bhavishya June 30
Highlights

ಈ ರಾಶಿಯವರ ನಿರೀಕ್ಷೆಯಂತೆ ಅಂದುಕೊಂಡದ್ದು ನೆರವೇರುವುದು ಖಚಿತ

ಈ ರಾಶಿಯವರ ನಿರೀಕ್ಷೆಯಂತೆ ಅಂದುಕೊಂಡದ್ದು ನೆರವೇರುವುದು ಖಚಿತ

ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ
ದ್ವಿತೀಯಾ ತಿಥಿ
ಉತ್ತರಾಷಾಢ ನಕ್ಷತ್ರ

ರಾಹುಕಾಲ - 09.08 ರಿಂದ 10.49
ಯಮಗಂಡ ಕಾಲ - 02.12 ರಿಂದ 03.53
ಗುಳಿಕ ಕಾಲ - 05.46 ರಿಂದ 07.27

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ  ಶನಿಯರು ಹಾಗೂ  ಮಕರ ರಾಶಿಯಲ್ಲಿ ಚಂದ್ರ-ಕುಜ-ಕೇತುಗಳ ಯುತಿ ಇದೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ನೋಡಿ ನಿಮ್ಮ ರಾಶಿಯಿಂದ 10 ನೇ ಮನೆಯಲ್ಲಿ ಚಂದ್ರ ರಾಶ್ಯಾಧಿಪತಿಯೊಟ್ಟಿಗೇ ಸೇರಿದ್ದಾನೆ. ಚಂದ್ರನು ಸುಖಾಧಿಪತಿಯಾಗಿದ್ದು ಸುಖ ಸಮೃದ್ಧವಾಗಲಿದೆ, ಜೊತೆಗೆ ವಾಹನ ಖರೀದಿ ಮಾಡುವ ಮನಸ್ಸು ಬರಲಿದೆ, ಅಷ್ಟೇ ಅಲ್ಲ ಕೆಲವರಿಗೆ ಇಂದು ಓರ್ವ ಸ್ತ್ರೀಯಿಂದ ಉದ್ಯೋಗ ಪ್ರಾಪ್ತಿಯೂ ಇದೆ. 

ದೋಷಪರಿಹಾರ : ಆದರೆ ಕೇತು ಯುಕ್ತನಾಗಿರುವುದರಿಂದ ಗಣಪತಿ ಪ್ರಾರ್ಥನೆ ಎಲ್ಲ ದೋಷವನ್ನೂ ನಿವಾರಿಸುತ್ತದೆ.

ವೃಷಭ : ನಿಮ್ಮ ರಾಶಿಯ ಅಧಿಪತಿ ಹಾಗೂ ಚಂದ್ರ ಪರಸ್ಪರ ನೋಡುತ್ತಿರುವುದರಿಂದ ಸ್ತ್ರೀಯರಿಂದ ಸ್ವಲ್ಪ ಮನಸ್ತಾಪ, ಜಗಳ, ಅಡ್ಡಿ ಆತಂಕಗಳು ಎದುರಾಗಲಿವೆ. ಸ್ತ್ರೀಯರೇ ನಡುವೇಯೇ ಕಲಹಗಳಾಗುವ ಪ್ರಮೇಯ. ಅಷ್ಟೇ ಅಲ್ಲ ಮುಖ್ಯವಾಗಿ ಇಂದು ಮನಸ್ಸು ಸ್ವಲ್ಪ ವ್ಯಾಮೋಹಕ್ಕೆ ಗುರಿಯಾಗಿ ತೊಂದರೆ ಸಂಭವ. ಎಚ್ಚರವಾಗಿದ್ದರೆ ಒಳಿತು.

ದೋಷ ಪರಿಹಾರ : ಓಂ ಶುಕ್ರಾಯ ನಮ:  ಓಂ ಚಂದ್ರಮಸೇ ನಮ: ಹಾಗೂ ಓಂ ಸುಬ್ರಹ್ಮಣ್ಯಾಯ ನಮ: ಈ ಮೂರೂ ಮಂತ್ರವನ್ನು 18 ಬಾರಿ ಪಠಿಸಿ.

ಮಿಥುನ : ಈ ರಾಶಿಯವರ ಅಧಿಪತಿ ಬುಧ ಬುಧನೂ ಕೂಡ ಚಂದ್ರನ ದೃಷ್ಟಿಗೆ ಒಳಗಾಗಿದ್ದಾನೆ. ಮನೆಯಲ್ಲೇ ಸ್ವಲ್ಪ ಕಲಹದ ವಾತಾವರಣ, ನಿಮ್ಮ ಮಾತಿಗೆ ಅಡ್ಡಿ, ನಿಮ್ಮ ನಿರ್ಧಾರದಲ್ಲೂ ಗೊಂದಲ ಕಾಣುತ್ತದೆ. ಏನು ಮಾಡಲಿ ಎಂಬ ಯೋಚನೆ ಕಾಡುತ್ತದೆ. ಸಮಸಯ ವ್ಯರ್ಥವೂ ಆಗಲಿದೆ. 

ದೋಷ ಪರಿಹಾರ : ವಿಷ್ಣು ಸಹಸ್ರನಾಮವನ್ನು ಸಂಪೂರ್ಣ ಪಠಿಸಿ.

ಕಟಕ : ನಿಮ್ಮ ರಾಶಿಯ ಅಧಿಪತಿ ಚಂದ್ರ ಈ ಚಂದ್ರ ಇಂದು ನಿಮ್ಮ ರಾಶಿಯನ್ನು ನೋಡುತ್ತಿದ್ದಾನೆ. ಚಂದ್ರ ಶತ್ರುವಿನ ಮನೆಯಲ್ಲಿ ಮಿತ್ರನೊಂದಿಗೆ ಕುಳಿತಿದ್ದಾನೆ ಹಾಗಾಗಿ ಮಿತ್ರರ ಸಹಾಯದಿಂದ ಶತ್ರುಗಳ ಕಾಟ ತಪ್ಪುತ್ತದೆ. ನಿಮ್ಮಲ್ಲಿ ಒಂದು ಆತ್ಮಸ್ಥೈರ್ಯ ಮೂಡುತ್ತದೆ. 
ದೋಷ ಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ

ಸಿಂಹ : ನಿಮ್ಮ ರಾಶಿಯ ಅಧಿಪತಿ ಸೂರ್ಯ. ಸೂರ್ಯನು ಲಾಭದಲ್ಲಿದ್ದಾನೆ. ಆದರೆ ಶನಿ ದೃಷ್ಟಿ ಸೂರ್ಯನ ಮೇಲಿದೆ. ಅಪ್ಪ - ಮಕ್ಕಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ, ಜಗಳ. ಅಷ್ಟೇ ಅಲ್ಲ ಸುಖಾಧಿಪತಿ ಕೇತು ಯುಕ್ತನಾಗಿರುವುದರಿಂದ ಸುಖ ಹಾನಿ. ಸಮಾಧಾನದಿಂದ ವರ್ತಿಸುವುದೇ ಎಲ್ಲದಕ್ಕೂ ಪರಿಹಾರ.

ದೋಷ ಪರಿಹಾರ : 5 ಕೆಜಿ ಗೋಧಿಯಿಂದ ಶಿವನಿಗೆ ಅಭಿಷೇಕ ಮಾಡಿಸಿ. ಅಥವಾ 5 ಕೆಜಿ ಗೋಧಿ ದಾನವನ್ನಾಗಿ ಕೊಟ್ಟುಬಿಡಿ.

ಕನ್ಯಾ : ನಿಮ್ಮ ರಾಶಿಯ ಅಧಿಪತಿಯು ಲಾಭ ಸ್ಥಾನದಲ್ಲಿ ಶತ್ರುವಿನ ಮನೆಯಲ್ಲಿದ್ದಾನೆ. ಹಾಗಾಗಿ ವ್ಯಾಪಾರ ಸ್ಥಳದಲ್ಲಿ ಅಥವಾ ಹಣ ಪ್ರಾಪ್ತಿಯಾಗುವುದರಲ್ಲಿ ಶತ್ರಗಳ ಮೋಸ ತಂತ್ರ ನಿಮ್ಮನ್ನು ಕಂಗಾಲಾಗಿಸಬಹುದು. ಸ್ವಲ್ಪ ಯೋಚನೆಯಿಂದ ನಿರ್ಧಾರ ಮಾಡಿ. ಕ್ಷಣ ಕ್ಷಣವೂ ಹುಷಾರಾಗಿರಿ.
  
ದೋಷ ಪರಿಹಾರ : ಓಂ ಸಾಕ್ಷಿಣೇ ನಮ: ಎಂಬ ಮಂತ್ರವನ್ನು ಭಕ್ತಿಯಿಂದ 12 ಬಾರಿ ಪಠಿಸಿ.

ತುಲಾ :  ನಿಮ್ಮ ರಾಶಿಯ ಅಧಿಪತಿ ಉದ್ಯೋಗ ಸ್ಥಾನದಲ್ಲಿದ್ದು ಅಲ್ಲಿಗೆ ಚಂದ್ರ, ಕುಜ, ಕೇತು ಗ್ರಹಗಳ ದೃಷ್ಟಿ ಇರುವುದರಿಂದ ಉದ್ಯೋಗದಲ್ಲಿ ಅಪಾಯ, ಸ್ತ್ರೀಯರಿಂದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಬಲ ವ್ಯಯ,  ಶತ್ರಗಳ ಸಮಸ್ಯೆಯೂ ಕಾಡಲಿದೆ. 

ದೋಷ ಪರಿಹಾರ : ಓಂ ಶುಕ್ರಾಯ ನಮ: ಮಂತ್ರವನ್ನು 28 ಬಾರಿ ಪಠಿಸಿ.

ವೃಶ್ಚಿಕ : ನಿಮ್ಮ ರಾಶಿಯ ಅಧಿಪತಿ ಚಂದ್ರಯುಕ್ತನಾಗಿ ಉಚ್ಛನಾಗಿರುವುದರಿಂದ ಶುಭ ಫಲ ನಿರೀಕ್ಷಸಬಹುದು, ಸ್ತ್ರೀಯರಿಂದ ಅನುಕೂಲ, ಭ್ರಾತೃಗಳಿಂದ ಸಹಾಯವಾಗಲಿದೆ. ಸಮಾಧಾನದ ದಿನ 

ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಹಾಗೂ ಪ್ರಾರ್ಥನೆ ಮಾಡಿ

ಧನಸ್ಸು : ಉತ್ತಮ ಫಲಗಳನ್ನು ನಿರೀಕ್ಷಿಸಬಹುದು, ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಆದ್ರೆ ನಿಮಗೆ ಅಂಟಿರುವ ಸಾಡೇಸಾಥ್ ನಿಮಗೆ ಸ್ವಲ್ಪ ಖಿನ್ನತೆ ತರಬಹುದು. ಇರಲಿ ಆಗುವುದೆಲ್ಲಾ ಒಳಿತಿಗೆ ಎಂಬ ಭಾವ ಇರಲಿ. 

ದೋಷ ಪರಿಹಾರ : ಹಸುವಿಗೆ ಬಾಳೆಹಣ್ಣು ಹಾಗೂ ಅಕ್ಕಿ ಬೆಲ್ಲವನ್ನು ಸಮರ್ಪಣೆ ಮಾಡಿ. 

ಮಕರ : ರಾಶಿಯಲ್ಲಿ  ಚಂದ್ರ-ಕುಜ-ಕೇತುಗಳಯುತಿ ನಿಮ್ಮ ಮನಸ್ಸನ್ನು ಚಂಚಲ ಮಾಡುತ್ತದೆ. ಅಷ್ಟೇ ಅಲ್ಲ ನೀವು ಉತ್ಸಾಹದಲ್ಲಿ  ಮಾಡಿದ ಕಾರ್ಯಗಳನ್ನು ಭಗ್ನಗೊಳಿಸುತ್ತದೆ. ಹಣ ನಷ್ಟವಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ.
  
ದೋಷ ಪರಿಹಾರ : ತಾಮ್ರ ತಂಬಿಗೆಯ ತುಂಬ ಭಸ್ಮ ತುಂಬಿ ( ಹೋಮದ ಭಸ್ಮವಾಗಿದ್ದರೆ ಒಳಿತು) ಅದನ್ನು ಶಿವ ದೇವಾಲಯದ ಅರ್ಚಕರಿಗೆ ದಾನ ಮಾಡಿಬನ್ನಿ.

ಕುಂಭ :   ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ, ಆಲಸ್ಯ ನಿಮ್ಮನ್ನು ಕಾಡಲಿದೆ, ತಾಯಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ. ಶತ್ರಗಳು ಒಳಸಂಚು ಮಾಡಿ ನಿಮ್ಮನ್ನು ಗೆಲ್ಲಲು ನೋಡುತ್ತಾರೆ. ಎಚ್ಚರವಾಗಿರಿ. ಆದರೆ ಮಾರಕವೇನೂ ಇಲ್ಲ. ಧಾವಂತ ಬೇಡ.

ದೋಷ ಪರಿಹಾರ :  ಓಂ ಸತ್ಯಾಯ ನಮ: ಮಂತ್ರವನ್ನು 24 ಬಾರಿ ಪಠಿಸಿ
  
ಮೀನ : ಆತ್ಮೀಯರೇ ಇಂದು ಯಾವ ಕೆಲಸ ಮಾಡಲಿಕ್ಕೂ ಮನಸ್ಸಿಲ್ಲದಂತಾಗುತ್ತದೆ. ನಿಮ್ಮ ಮಕ್ಕಳಿಂದ ನಿಮಗೆ ಲಾಭವಿದೆ. ಇಂದು ನಿಮ್ಮ ತಾಯಿ ಮಾತನ್ನು ಕೇಳಿ ಕೆಲಸಗಳನ್ನು ಪ್ರಾರಂಭಿಸಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆ ಇದೆ.   
ದೋಷ ಪರಿಹಾರ : ಶ್ರೀಚಕ್ರ ಉಪಾಸನೆ ಅಥವಾ ದರ್ಶನ ನಮಸ್ಕಾರ ಮಾಡಿ.

ಗೀತಾಸುತ

loader