ಈ ರಾಶಿಯವರಿಗಿಂದು ಶುಭ ಸುದ್ದಿಯೊಂದು ದೊರೆಯುವುದು ಖಚಿತ

Special Bhavishya June 25
Highlights

ಈ ರಾಶಿಯವರಿಗಿಂದು ಶುಭ ಸುದ್ದಿಯೊಂದು ದೊರೆಯುವುದು ಖಚಿತ

25-06-18 -  ಸೋಮವಾರ
ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ
ಶುಕ್ಲ ಪಕ್ಷ
ತ್ರಯೋದಶಿ ತಿಥಿ
ಅನುರಾಧ ನಕ್ಷತ್ರ

ಮೇಷ ರಾಶಿ : ಈದಿನ ನಿಮ್ಮ ದಿನ. ಉತ್ಸಾಹದಾಯಕದಿನ, ಕಚೇರಿಗೆ ಹೋಗುವಾಗ ಸಮ ಮನಸ್ಕರಿಗೆ ಸಹಾಯ ಮಾಡುವ ಮನಸ್ಸು. ಸ್ವಲ್ಪ ಶೀತ-ಕೆಮ್ಮು ನಿಮ್ಮನ್ನು ಬಾಧಿಸಲಿದೆ. ಆದರೆ ಸ್ನೇಹಿತರ ಮಾತು ನಿಮ್ಮ ಉಲ್ಲಾಸವನ್ನು ಹೆಚ್ಚಿಸಲಿದೆ.  


ದೋಷ ಪರಿಹಾರ - ನಿಮ್ಮ ಮಿತ್ರರ ಸಹಿತ ಹತ್ತಿರದ  ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಥವಾ ದುರ್ಗಾ ದೇವಸ್ಥಾನಕ್ಕೆ ಹೋಗಿಬನ್ನಿ.


ವೃಷಭ : ಎದ್ದ ತಕ್ಷಣ ಕನಿಷ್ಠ 15 ನಿಮಿಷ ಸೂರ್ಯನ ಶಾಖ ದೇಹಕ್ಕೆ ಬೀಳಲಿ. ಸೂರ್ಯನಿಗೆ ಅಭಿಮುಖವಾಗಿ ನಿಂತುಕೊಳ್ಳಿ. ಇಂದು ನಿಮ್ಮ ಮನಸ್ಸು ಸ್ವಲ್ಪ ಖಿನ್ನತೆಯಿಂದ ಕೂಡಿರುತ್ತದೆ. ಯೋಚಿಸಬೇಡಿ ನಿಮ್ಮ ಉತ್ಸಾಹ ತುಂಬಲಿಕ್ಕೆ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿಕೊಳ್ಳಿ 12 ಬಾರಿ ಟೆರೇಸ್ ಹತ್ತಿ ಸೂರ್ಯನಿಗೆ ಆ ತಾಮ್ರತ ತಂಬಿಗೆಯನ್ನು ತೋರಿಸುತ್ತಾ 12 ಬಾರಿ ಓಂ ನಮೋ ಭಾಸ್ಕರಾಯ ಎಂದು ಹೇಳಿ ನಂತರ ನೀರನ್ನು ಕುಡಿದುಬಿಡಿ. ಇಡೀ ದಿನ ಉತ್ಸಾಹ ತುಂಬಿರಲಿದೆ.


ದೋಷ ಪರಿಹಾರ : ಸಮಯ ಮಾಡಿಕೊಂಡು 21 ನಿಮಿಷ ಧ್ಯಾನ ಮಾಡಿ 


ಮಿಥುನ : ಆತ್ಮೀಯರೇ ನಿಮ್ಮ ಸಂಗಾತಿಯಿಂದ ಒಂದು ಗಂಭೀರ ವಿಷಯ ಚರ್ಚೆಯಾಗಲಿದೆ. ರಾಜಕಾರಣಿಗಳಿಗೆ ಒಂದು ಸಂತಸ ಸುದ್ದಿಯೂ ಬರಲಿದೆ. ನಿಮ್ಮ ಕಾರ್ಯ ಸಾಧನೆಗೆ ಬೇಕಾದ ಉಪಯುಕ್ತ ಮಾಹಿತಿ ಸಿಗಲಿದೆ. ಮಿತ್ರರಿಗೆ ನೋವಾಗುವಂತೆ ಮಾತನಾಡಬೇಡಿ.


ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಣೆಯೇ ಒಳಿತು ತರುವ ಮಾರ್ಗ. 


ಕಟಕ : ಇಂದು ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ದುರ್ಗಾದೇವಿಗೆ ಅಥವಾ ಅನ್ನಪೂರ್ಣೇಶ್ವರಿಗೆ ಹಾಲನ್ನು ಸಮರ್ಪಿಸುವುದು. ಆ ಹಾಲನ್ನು ತೀರ್ಥವಾಗಿ ಪಡೆದು ನೀವು ಸ್ವೀಕರಿಸಬೇಕು. ಇಷ್ಟಾದ ನಂತರವೇ ನೀವು ನಿಮ್ಮ ನಿತ್ಯ ಕಾರ್ಯಗಳಲ್ಲಿ ತೊಡಗಿ. ಇಲ್ಲ ಅಂದ್ರೆ ಕೆಟ್ಟದ್ದಾಗತ್ತೆ ಅಂತ ಅಲ್ಲ. ನಿಮ್ಮ ರಾಶಿಯ ಅಧಿಪತಿ ಇಂದು ಶಕ್ತಿ ಹೀನನಾಗಿದ್ದಾನೆ. ನೀಚ ಸ್ಥಾನದಲ್ಲಿದ್ದಾನೆ. ಹಾಗಾಗಿ ಒಂದು ಪುಷ್ಟಿ ಕೊಡುವ ಕಾರ್ಯ ಅಷ್ಟೆ. 


ದೋಷ ಪರಿಹಾರ : ಅನ್ನಪೂರ್ಣೇಶ್ವರಿ ಸ್ಮರಣೆ ಮಾಡಿ


ಸಿಂಹ :  ಈ ದಿನ ನಿಮ್ಮ ಸಂಪೂರ್ಣಕಾರ್ಯಗಳಲ್ಲಿ ಜಯ ಹಾಗೂ ಲಾಭ ಸಿಗಲಿದೆ. ನಿಮ್ಮ ಮಕ್ಕಳಿಂದ ಸ್ವಲ್ಪ ದಿನದ ಕಾರ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಉಗ್ರ ಸ್ವಭಾವ ಸ್ವಲ್ಪ ಶಾಂತವಾಗಲಿ. ನಿಮ್ಮ ಯೋಚನೆ ಸರಿ ಇರಬಹುದು ಆದರೂ ಅಭಿಪ್ರಾಯ ಹಂಚಿಕೆಯಾಗುವಾಗ ಸ್ವಲ್ಪ ಸಮಾಧಾನವಿರಲಿ.


ದೋಷ ಪರಿಹಾರ : ಶಿವಿಗೆ ಗೋಧಿಯಿಂದ ಅಭಿಷೇಕ ಮಾಡಿಸಿದಲ್ಲಿ ಸಮಸ್ಯೆ ಸಂಪೂರ್ಣ ಸರಿಹೋಗಲಿದೆ.


ಕನ್ಯಾ : ಸ್ತ್ರೀಯರಿಗೆ ಸಂತೋಷದ ದಿನ, ನಿಮ್ಮ ತಂದೆ ತಾಯಿಗಳು ಅಥವಾ ತತ್ಸಮಾನರಿಂದ ಉಡುಗೊರೆ ಅಥವಾ ಪ್ರಶಂಸೆ ಗಿಟ್ಟಲಿದೆ. ನಿಮ್ಮ ಹೊಸ ಯೋಜನೆಗೆ ಹಿರಿಯರ ಸಹಕಾರ ಸಿಗಲಿದೆ.   ಓಡಾಡುವಾಗ ಸ್ವಲ್ಪ ಎಚ್ಚರವಾಗಿರಿ.


ದೋಷ ಪರಿಹಾರ : ತಿಲ ದಾನ ಮಾಡಿದಲ್ಲಿ ಓಡಾಟ ಅಥವಾ ವಾಹನದಲ್ಲಾಗುವ ತೊಂದರೆ ತಪ್ಪಲಿದೆ. 


ತುಲಾ : ನೀವಂದುಕೊಂಡ ಕಾರ್ಯ ಇಂದು ನೆರವೇರಲಿದೆ, ಸ್ವಲ್ಪ ಧನ ನಷ್ಟವಾಗಲಿದೆ. ಅಲ್ಲದೆ ಓರ್ವ ಆಗಂತುಕ ನಿಮ್ಮ ದಾರಿತಪ್ಪಿಸಬಹುದು ಹುಷಾರಾಗಿರಿ.  


ದೋಷ ಪರಿಹಾರ : ಗುರು ಸನ್ನಿಧಾನಕ್ಕೆ ಅಥವಾನವಗ್ರಹ ದೇವಸ್ಥಾನಕ್ಕೆ ಕಡಲೆ ಧಾನ್ಯವನ್ನು ಸಮರ್ಪಣೆ ಮಾಡಿ 


ವೃಶ್ಚಿಕ : ಇಂದು ನೀವಂದುಕೊಂಡತೆ ನಡೆಯಬೇಕಿದ್ದರೆ ತಾಳ್ಮೆ ಬೇಕು. ವೃಥಾ ಆತುರ ಮಾಡಬೇಡಿ. ಮಾನಸಿಕ ಕ್ಷೋಭೆ ನಿಮ್ಮನ್ನು ಕಾಡಲಿದೆ. ಸೂರ್ಯ ದರ್ಶನ ಮಾಡಿ. ಸಮಾಧಾನವೇ ನಿಮ್ಮ ದಿನವನ್ನು ಸುಂದರಗೊಳಿಸಲಿದೆ. 


ದೋಷ ಪರಿಹಾರ : ದೇವೀ ಸ್ತೋತ್ರ ಮಾಡಿ, ಅಥವಾ ದೇವಿ ದೇವಸ್ಥಾನಕ್ಕೆ ಹೋಗಿ 5 ನಮಸ್ಕಾರ ಮಾಡಿ


ಧನಸ್ಸು : ಇಂದು ಒಂದು ನಿರ್ಣಯಕ್ಕೆ ಬರೋಣವೆಂದುಕೊಂಡಿರುತ್ತೀರಿ ಆದರೆ ಅದು ಸಾಕಾರವಾಗುವುದಿಲ್ಲ, ಸ್ವಲ್ಪ ಆರೋಗ್ಯವೇ ಬಾಧೆ. ಮಾನಸಿಕವಾಗಿ ದೃಢತೆ ಇರುವುದಿಲ್ಲ. ಹಿರಿಯರ ಸಲಹೆ ಬಹಳ ಮುಖ್ಯಪಾತ್ರ ವಹಿಸುತ್ತದೆ.


ದೋಷ ಪರಿಹಾರ : ಸೂರ್ಯ ನಮಸ್ಕಾರ ಮಾಡಿ


ಮಕರ : ನಿಮ್ಮ ಪಾಲಿಗೆ ಮಹಾ ಸೋಮಾರಿತನವೇ ಶತ್ರು. ಬೇಗ ಏಳದಿರುವುದರಿಂದ ಹಿಡಿದು ಎಲ್ಲ ಕೆಲಸಗಳೂ ತಡವಾಗಲಿವೆ. ಆದರೆ ಕಾರ್ಯ ವಿಘ್ನತೆ ಇಲ್ಲ. ನಿಧಾನವಾದರೂ ಎಲ್ಲವೂ ನಿಮಗೆ ಪೂರಕವಾಗಿರಲಿದೆ.  


ದೋಷ ಪರಿಹಾರ : ಶಂ ಶನೈಶ್ಚರಾಯ ನಮ: ಅಂತ ಶ್ರದ್ಧೆಯಿಂದ 7 ಬಾರಿ ಪಠಿಸಿ.


ಕುಂಭ : ಉಪಾಸನಾ ಶಕ್ತಿಯಿಂದ ಈ ದಿನ ವಿಶೇಷವೊಂದನ್ನು ಸಾಧಿಸುತ್ತೀರಿ. ಶಿವ ದರ್ಶನ, ಶಿವಧ್ಯಾನವೇ ನಿಮ್ಮ ದಿನವನ್ನು ಅದ್ಭುತಗೊಳಿಸಲಿದೆ. ಶುಭವಾಗಲಿ. 


ದೋಷ ಪರಿಹಾರ : ಓಂ ಶ್ರೇಷ್ಠಾಯ ನಮ: ಈ ಮಂತ್ರವನ್ನು 11 ಬಾರಿ ಪಠಿಸಿ  


ಮೀನ : ಉದ್ಯೋಗದಲ್ಲಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಒಂದು ಸಮಸ್ಯೆ ಬಗೆಹರಿಯುವ ಸಾಧ್ಯತೆಯೂ ಇದೆ. ಕಚೇರಿಗೆ ಹೊರಟವರು, ಮನೆಯಲ್ಲಿರುವವರು, ಯಾರೇ ಆಗಲಿ ಶ್ರೀ ಗುರವೇ ನಮ: ಎಂಬುದನ್ನು 21 ಬಾರಿ ಪಠಿಸಿ


ದೋಷ ಪರಿಹಾರ : ಸಾಧ್ಯವಾದರೆ ಬಾಳೆಹಣ್ಣು - ಅಕ್ಕಿಯನ್ನು ಹಸುವಿಗೆ ಕೊಡಿ

loader