ಇಂದು ಈ ಒಂದು ರಾಶಿಗೆ ಘಾಸಿಯ ದಿನವಾಗಿದೆ

Special Bhavishya July 9
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮೇಷ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮೇಷ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಪ್ರಿಯ ಓದುಗರೇ ನಿತ್ಯಕರ್ಮ ಮುಗಿಸಿದ ನಂತರ ನಿಮ್ಮ ಕುಟುಂಬದ ಸ್ತ್ರೀಯರಿಂದ 10 ರೂಪಾಯಿಗಳನ್ನು ಪಡೆದು ಅದನ್ನು ಹತ್ತಿರದ ದೇವಿ ದೇವಸ್ಥಾನದ ಹುಂಡಿಗೆ ಹಾಕಿಬನ್ನಿ. ಹೀಗೆ ಮಾಡುವುದರಿಂದ ಬರಬೇಕಿದ್ದ ಸಾಲ ವಾಪಸ್ಸು ಬರಲಿದೆ. ಅಷ್ಟೇ ಅಲ್ಲ ಇಂದು ಕುಟುಂಬದ ಹೆಣ್ಣುಮಕ್ಕಳು ನಿಮಗೆ ಸಹಾಯಕರಾಗಿ ನಿಲ್ಲುತ್ತಾರೆ. ಉತ್ತಮ ದಿನವಿದೆ. ಶುಭವಾಗಲಿ. ಆದರೆ ಆತ್ಮೀಯರೇ ಸ್ವಲ್ಪ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಬಹುದು ಎಚ್ಚರಿಕೆವಾಗಿರಿ.

ದೋಷಪರಿಹಾರ : ದೇವಿ ದರ್ಶನ ಹಾಗೂ ತಾಯಿಗೆ ಅರಿಸಿನ ಕುಂಕುಮ ಸಮರ್ಪಣೆ ಮಾಡಿಬನ್ನಿ.

ವೃಷಭ : ಗೆಳೆಯರೇ ನಿಮ್ಮ ಮನಸ್ಸಿಗೆ ಇಂದು ಸ್ವಲ್ಪ ಘಾಸಿಯಾಗಲಿದೆ. ಚಂದ್ರ ಇಂದು ಕೃತ್ತಿಕಾ ನಕ್ಷತ್ರದಲ್ಲಿದ್ದಾನೆ ಕೃತ್ತಿಕೆ ಅಗ್ನಿ ನಕ್ಷತ್ರವಾಗಿದ್ದು ಸ್ವಲ್ಪ ಬೆಂಕಿ ಸ್ವಭಾವ ಮೂಡಲಿದೆ. ಮನೆಯಲ್ಲಿ ಸ್ವಲ್ಪ ಕಲಹದ ವಾತಾವರಣ ಸ್ತ್ರೀಯರು ಇಂದು ಶಾಂತವಾಗಿದ್ದರೆ ಉತ್ತಮ. ಚಂದ್ರನ ಆರಾಧನೆ ಮಾಡಿ.   

ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಒಂದು ತಂಬಿಗೆಯಾಗುವಷ್ಟು ಹಾಲನ್ನು ಸಮರ್ಪಿಸಿ ಬನ್ನಿ.

ಮಿಥುನ : ಇಂದು ನಿಮ್ಮ ಹಣ ವ್ಯಯ. ಏನಪ್ಪಾ ವಾರದ ಮೊದಲನೇ ದಿನವೇ ಹೀಗಾ ಅಂದ್ರೆ ಹೌದು ನಿಮ್ಮ ರಾಶಿಯಿಂದ ಧನಾಧಿಪತಿ ವ್ಯಯ ಸ್ಥಾನದಲ್ಲಿರುವುವಾಗ ಹೇಗೆ ಧನಲಾಭ ಅಂತ ಹೇಳಲು ಸಾಧ್ಯ..? ಇರಲಿ ಆದರೆ ಆ ಹಣ ನಿಮ್ಮ ಅನುಕೂಲಕ್ಕಾಗಿಯೇ ಆಗಿರುತ್ತದೆ. ಅಂದಹಾಗೆ ಕುಟುಂಬದವರಲ್ಲಿ ಸ್ವಲ್ಪ ವಾಗ್ವಾದ ಏರ್ಪಡಬಹುದು ಎಚ್ಚರವಾಗಿರಿ.  

ದೋಷ ಪರಿಹಾರ : ನಾಗಾರಾಧನೆ ಅಥವ ಮುಕ್ತಿನಾಗ ಕ್ಷೇತ್ರ ದರ್ಶನ ಮಾಡಿ.

ಕಟಕ : ನಿಮ್ಮ ದಿನ ಪ್ರಾರಂಭವಾಗುವುದೇ ಲಾಭ ನಷ್ಟಗಳೊಂದಿಗೆ. ಇಂಧು ನಿಮ್ಮ ಪಾಲಿಗೆ ಶುಭಾಶುಭ ಎರಡೂ ಇವೆ. ಸ್ತ್ರೀಯರಿಗಾಗಿ ಹಣ ವ್ಯಯ ಮಾಡುವ ಸಾಧ್ಯತೆ ಇದೆ. ಕೇಂದ್ರದ ಗುರು ಶುಭ ಫಲವನ್ನು ತರಲಿದ್ದಾನೆ. 
  
ದೋಷ ಪರಿಹಾರ : ಇಂದು ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ಸಿಂಹ : ಇಂದು ದೇಹ ಸೌಖ್ಯ, ಮನೆಯಲ್ಲಿ ವಿರೋಧವಿದ್ದರೂ ನಿಮ್ಮ ಶ್ರಮದಿಂದ ಕಾರ್ಯ ಸಾಧನೆಯಾಗುತ್ತದೆ. ಸಹೋದರರು ನಿಮ್ಮ ಕಡೆನಿಲ್ಲುತ್ತಾರೆ. ಉದ್ಯೋಗದಲ್ಲಿ ವ್ಯಯ. ಕಿರಿಕಿರಿ ಅಥವಾ ಉದ್ಯೋಗದಲ್ಲೇ ಏರುಪೇರಾಗುವ ಸಾಧ್ಯತೆ ಇದೆ. 

ದೋಷ ಪರಿಹಾರ : ಶಿವನ ಆರಾಧನೆ, ಬಿಲ್ವಪತ್ರೆ ಸಮರ್ಪಣೆ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮಿಂದಲೇ ನಿಮಗೆ ಲಾಭ ಅಂದರೆ ನಿಮ್ಮ ಶ್ರಮಕ್ಕೆ ದುಪ್ಪಟ್ಟು ಲಾಭ ಸಿಗಲಿದೆ. ನಿಮ್ಮ ಹತ್ತಿರವಲ್ಲದವರಿಂದ ನಿಮಗೆ ಸ್ವಲ್ಪ ನಷ್ಟವೂ ಇದೆ. ಆದರೆ ಒಳ್ಳೇದಿನವೇ ಇದೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ.
  
ದೋಷ ಪರಿಹಾರ : ವಿಷ್ಣು ಸಹಸ್ರನಾಮದ ಒಂದು ನಾಮ ಪಠಿಸಿದರೂ ಶುಭ ಫಲ. 

ತುಲಾ :  ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ, ಶೀತ ಬಾಧೆ ಕಾಡಲಿದೆ. ಜಲ ಸಂಬಂಧಿ ಕಂಟಕ ನಿಮ್ಮನ್ನು ಗಾಬರಿಮಾಡಲಿದೆ. ನೀರಿನ ಬಗ್ಗೆ ಸ್ವಲ್ಪ ಎಚ್ಚರವಿರಲಿ. ಕುತ್ತಿಗೆ ಭಾಗದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.

ದೋಷ ಪರಿಹಾರ : ಶನೈಶ್ಚರ ಆರಾಧನೆ ಮಾಡಿ 

ವೃಶ್ಚಿಕ : ಆತ್ಮೀಯರೇ ನಿಮ್ಮ ಸಂಗಾತಿ ತುಂಬ ಅನುಕೂಲವನ್ನುಂಟುಮಾಡುತ್ತಾರೆ. ವ್ಯಾಪಾರದಲ್ಲೂ ನಿಮಗೆ ಸಹಕಾರ ಸಿಗಲಿದೆ. ಸ್ವಲ್ಪ ಹಣ ನಷ್ಟವಾದರೂ ಮಾನಸಿಕವಾಗಿ ಬೇರಸವಿರುವುದಿಲ್ಲ. ಮನೆ ದೇವರಿಗೆ ನಮಸ್ಕಾರ ಮಾಡಿ

ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ  

ಧನಸ್ಸು : ಇಂದು ಸ್ತ್ರೀಯರಿಗೆ ಸಾಲ ಕೊಡುವ ಸಂದರ್ಭ ಒದಗಲಿದೆ. ಕೊಡಲಾಗದೆ ಬಿಡಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮಕ್ಕಳಿಂದ ಸಂತೋಷ, ಮಡದಿ ದೂರವಾಗುವ ಸಂಭವ, ಕೆಲವರಿಗೆ ತೀವ್ರವಾಗಿ ಮತ್ತು ಕೆಲವರಿಗೆ ಸಾಧಾರಣವಾದ ಅನುಭವವಾಗುತ್ತದೆ. 

ದೋಷ ಪರಿಹಾರ : ಲಕ್ಷ್ಮೀನಾರಾಯಣ ಸ್ಮರಣೆ ಅಥವಾ ದರ್ಶನ ಮಾಡಿ

ಮಕರ :  ನಿಮ್ಮ ರಾಶಿಗೂ ನಿಮ್ಮ ಸಪ್ತಮ ರಾಶಿಗೂ ಹೋಲಿಕೆ ಮಾಡಿದಾರ ನಿಮ್ಮ ರಾಶಿಯಲ್ಲೂ ಎರಡು ಗ್ರಹಗಳಿವೆ, ನಿಮ್ಮ ಸಪ್ತಮ ರಾಶಿಯಲ್ಲೂ ಎರಡು ಗ್ರಹಗಳಿವೆ. ಏನು ವ್ಯಾಪಾರದಲ್ಲಿ ಎರಡು ಬಗೆಯ ನಷ್ಟ. ನಿಮ್ಮಲ್ಲಿ ಎರಡೆರಡು ಮನಸ್ಸು. ಯಾವುದೇ ನಿರ್ಧಾರ ಮಾಡಲಾಗದೆ ಗೊಂದಲ. ಹಿರಿಯರ ಸಲಹೆ ಪಡೆಯಿರಿ.
  
ದೋಷ ಪರಿಹಾರ : ದತ್ತಾತ್ರೇಯ ಸ್ಮರಣೆ ಮಾಡಿ 

ಕುಂಭ :   ಇಂದು ನಿಮ್ಮ ಪಾಲಿಗೆ ಶುಭದಿನ, ತಾಯಿಯಿಂದ ಸಹಾಯ ಸಿಗಲಿದೆ, ಬಂಧುಗಳ ಆಗಮನ ಅಥವಾ ಬಂಧುಗಳಿಂದ ಸಹಾಯ ದೊರೆಯಲಿದೆ. ಮಾನಸಿಕ ಶಾಂತಿ ಆರೋಗ್ಯದಲ್ಲಿ ಸದೃಢತೆ ಇರುತ್ತದೆ. ಉತ್ತಮ ದಿನ.   

ದೋಷ ಪರಿಹಾರ : ತಾಯಿಗೆ ನಮಸ್ಕಾರ ಮಾಡಿ. 
  
ಮೀನ : ನಿಮ್ಮ ರಾಶಿಯವರಿಗೆ ಇಂದು ಸಹೋದರಿಯರಿಂದ ಉತ್ತಮ ಸಹಕಾರ, ನಿಮ್ಮ ತಂದೆಯಿಂದ ಮನೆ ದೊರೆಯುವ ಸಾಧ್ಯತೆ, ಬುದ್ಧಿಗೆ ಸ್ವಲ್ಪ ಮಂಕುಕವಿಯುವ ಸಾಧ್ಯತೆ ಇದೆ. ಸೊಂಟ ಭಾಗದಲ್ಲಿ ಸ್ವಲ್ಪ ತೊಂದರೆಯಾಗಬಹುದು. ಎಚ್ಚರವಾಗಿರಿ. 
  
ದೋಷ ಪರಿಹಾರ : ದುರ್ಗಾ ದರ್ಶನ ನಿಮ್ಮ ದಿನವನ್ನು ಉತ್ತಮವಾಗಿಡಲಿದೆ.

ಗೀತಾಸುತ.

loader