ಯಾವ ರಾಶಿಯವರಿಂದು ಎಚ್ಚರ ವಹಿಸಬೇಕು..?

Special Bhavishya July 5
Highlights

ಯಾವ ರಾಶಿಯವರಿಂದು ಎಚ್ಚರ ವಹಿಸಬೇಕು..?

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ  ಶನಿಯರು ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ರಾಶಿಯಿಂದ ವ್ಯಯ ಸ್ಥಾನದಲ್ಲಿ ಚಂದ್ರನಿದ್ದಾನೆ. ಸ್ವಲ್ಪ ಸುಖ ನಾಶ, ಮಾನಸಿಕ ಹಿಂಸೆ, ವಾಹನದಲ್ಲಿ ಸಂಚರಿಸುವಾಗ ಸ್ವಲ್ಪ ಎಡವಟ್ಟು ಸಂಭವಿಸಬಹುದು ನಿಧಾನಗತಿಯಲ್ಲಿ ಹೋಗಿ. ಜಾಗರೂಕವಾಗಿರಿ.  

ದೋಷಪರಿಹಾರ : ಇಂದು ಅನ್ನಪೂರ್ಣೇಶ್ವರಿ ದರ್ಶನ ಹಾಗೂ ತಾಯಿಗೆ 5 ಲೋಟ ಹಾಲು ಸಮರ್ಪಿಸಿ.

ವೃಷಭ : ಇಂದು ಸ್ತ್ರೀಯರಿಂದ ಲಾಭ, ಸ್ತ್ರೀಯರಿಗೂ ಲಾಭ, ಆದರೆ ಓರ್ವ ವ್ಯಕ್ತಿ ನಿಮ್ಮ ಹಾದಿತಪ್ಪಿಸುವ ಸಾಧ್ಯತೆ ಇದೆ. ಎಚ್ಚರದಿಂದ ಇರಬೇಕು. ಮುಖ್ಯವಾಗಿ ಧನ ಸ್ಥಾನದಲ್ಲಿ ರವಿ ಯಿದ್ದು ನಿಮ್ಮ ತಂದೆಯಿಂದ ಹಣ ಬರಲಿದೆ.  

ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ಮಿಥುನ : ನಿಮಗೆ ಹಿರಿಯರಿಂದ ಸಹಾಯ. ಕಚೇರಿಗೆ ಎಚ್ಚರವಾಗಿರಿ. ಇಂದು ಉದ್ಯೋಗ ಸ್ಥಾನದಲ್ಲಿ ಸ್ತ್ರೀಯರಿಂದ ಸಹಾಯ ಸಿಗಲಿದೆ, ಸಂಸಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವೂ ಬರಲಿದೆ. ಮುಖ್ಯವಾಗಿ  ನಿಮ್ಮ ಸಹೋದರಿಯರಲ್ಲಿ ಜಗಳ ಸಂಭವಿಸುವ ಸಾಧ್ಯತೆ ಇದೆ. ಸ್ವಲ್ಪ ಮಾತು ಹಿಡಿತದಲ್ಲಿರಲಿ. 

ದೋಷ ಪರಿಹಾರ : ಓಂ ಭವಾಯ ನಮ: ಮಂತ್ರವನ್ನು 12 ಬಾರಿ ಪಠಿಸಿ. 

ಕಟಕ : ಇಂದು ನಿಮ್ಮ ರಾಶಿಯ ಅಧಿಪತಿ ಭಾಗ್ಯ ಸ್ಥಾನದಲ್ಲಿರುವುದರಿಂದ ಭಾಗ್ಯ ವೃದ್ಧಿ, ಉಡುಗೊರೆ ಸಿಗಲಿದೆ, ಮಂಗಳಕಾರ್ಯಗಳು ನೆರವೇರಲಿವೆ. ಗುರುವಿನ ಅನುಕೂಲವೂ ಇದೆ. ಉತ್ತಮ ದಿನ
  
ದೋಷ ಪರಿಹಾರ : ಕೂತಲ್ಲೇ ನಾಗ ಪ್ರಾರ್ಥನೆ ಮಾಡಿದರೂ ಸಾಕು.  

ಸಿಂಹ : ಈದಿನ ನಿಮ್ಮ ಸಂಗಾತಿ ಅಥವಾ ನಿಮ್ಮ ಮನೆ ಹೆಣ್ಣುಮಕ್ಕಳು ನಿಮ್ಮೊಂದಿಗೆ ವಾಗ್ವಾದ ಮಾಡಬಹುದು. ಧನ ನಷ್ಟವಾಗುವ ಸಾಧ್ಯತೆ ಇದೆ. ಬರುವ ಲಾಭವೂ ಕೈತಪ್ಪಿಹೋಗಲಿದೆ.

ದೋಷ ಪರಿಹಾರ : ಶಿವ ಪ್ರಾರ್ಥನೆಯೇ ನಿಮ್ಮ ದಿನವನ್ನು ಶಾಂತಗೊಳಿಸುತ್ತದೆ.

ಕನ್ಯಾ : ಆತ್ಮೀಯರೇ ನಿಮ್ಮ ಕುಟುಂಬದವರಿಂದ ಸ್ವಲ್ಪ ಕಿರಿಕಿರಿ ಅನುಭವಿಸಬೇಕಾಗುತ್ತದೆ. ನಿಮ್ಮ ಮಾತೇ ನಿಮಗೆ ತೊಂದರೆ ಕೊಡುತ್ತದೆ. ಮಕ್ಕಳಿಂದ ಸ್ವಲ್ಪ ಕಲಹ ಸಾಧ್ಯತೆ. ಏನಪ್ಪಾ ಬರೀ ಸಮಸ್ಯೆಯೇ ಇದೆ ಅಂದುಕೊಳ್ಳಬೇಡಿ. ಧನಾಗಮನವೂ ಇದೆ.
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ. 

ತುಲಾ :  ನಿಮ್ಮ ಜೀವನದಲ್ಲಿ ಒಂದು ಹೊಸ ಪ್ರಯತ್ನ, ಸ್ವಲ್ಪ ಶ್ರಮವೂ ಇದೆ. ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯಕಾಣಲಿದ್ದೀರಿ. ಸಹೋದರರ ಸಹಾಯ ನಿಮ್ಮ ದಿನವನ್ನು ಉತ್ತಮಗೊಳಿಸಲಿದೆ.  

ದೋಷ ಪರಿಹಾರ : ಅರಳಿ ವೃಕ್ಷಕ್ಕೆ 3 ಪ್ರದಕ್ಷಿಣೆ ಹಾಕಿ. 

ವೃಶ್ಚಿಕ : ಪ್ರಿಯರೇ ನಿಮ್ಮ ರಾಶಿಯವರಿಗೆ ಸ್ವಲ್ಪ ಧನ ವ್ಯಯವಾಗುವ ಸಾಧ್ಯತೆ ಇದೆ. ಕುಟುಂಬದವರಿಗಾಗಿ ಹಣ ವ್ಯಯ. ಹೆಣ್ಣುಮಕ್ಕಳಿಂದ ಸಹಾಯವಾಗಲಿದೆ, ತಂದೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರಲಿದೆ. ಸ್ವಲ್ಪ ಸಮಾಧಾನವಿರಲಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ  

ಧನಸ್ಸು : ಆತ್ಮೀಯರೇ ನಿಮ್ಮ ಸಂಸಾರದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಪೋಲೀಸ್ ಅಧಿಕಾರಿಗಳಿಂದ ಸಹಾಯ ದೊರೆಯಲಿದೆ. ಅಷ್ಟೇ ಅಲ್ಲ ನಿಮ್ಮ  ನಿಮ್ಮ ಸನಿಹದ ಸ್ತ್ರೀಯರಿಂದ ಆತ್ಮೀಯರಿಂದ ಉಡುಗೊರೆ ಸಿಗಲಿದೆ. ಮುಖ್ಯವಾಗಿ ಅಕ್ಕಪಕ್ಕದವರು ಸ್ವಲ್ಪ ಜಗಳಕ್ಕೆ ಬರಲಿದ್ದಾರೆ ಎಚ್ಚರವಾಗಿರಿ.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳುದೀಪ ಹಚ್ಚಿ ಇಲ್ಲಾಂದ್ರೆ ನಿಮ್ಮ ಶರೀರ ತೂಕದ ಎಳ್ಳನ್ನು ಸಮರ್ಪಿಸಿದರೂ ಉತ್ತಮ.

ಮಕರ : ಪ್ರಿಯರೇ ಇಂದು ನಿಮ್ಮ ಪಾಲಿಗೆ ಸ್ವಲ್ಪ ಅರ್ಧ ಲಾಭ ಅರ್ಧ ನಷ್ಟದ ದಿನ. ಸುಖವೂ ಇದೆ ದು:ಖವೂ ಇದೆ. ಮೈ ತುಂಬ ಶ್ರಮ. ಆಯಾಸವೂ ಆಗಲಿದೆ. ತಮ್ಮಂದಿರಿಂದ ಸಹಾಯ. 
  
ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ 5 ನಮಸ್ಕಾರ ಮಾಡಿ. 

ಕುಂಭ :   ನಿಮಗೆ ಇಂದು ಒಂದು ಹೊಸ ಪರೀಕ್ಷೆಯ ದಿನ. ನಿಮ್ಮ ಆತ್ಮೀಯರು ಸಹಾಯ ಮಾಡಲಿದ್ದಾರೆ. ಕಚೇರಿಯಲ್ಲಿ ಸ್ವಲ್ಪ ಕಾರ್ಯ ವ್ಯತ್ಯಯ. ಇತರರ ಸಹಾಯ ಪಡೆಯಬೇಕಾದೀತು. ಓರ್ವ ಸ್ತ್ರೀ ನಿಮಗೆ ಧನ ಸಹಾಯ ಮಾಡುವರು. ಸ್ತ್ರೀಯರಿಗೆ ಉತ್ತಮ ದಿನ.

ದೋಷ ಪರಿಹಾರ : ಧರ್ಮಸ್ಥಳ ಮಂಜುನಾಥ ಸ್ಮರಣೆ ನಿಮ್ಮ ದಿನವನ್ನು ಉತ್ತಮಗೊಳಿಸಲಿದೆ. ಇಲ್ಲ ಓಂ ವಿಶ್ವೇಶ್ವರಾಯ ನಮ: ಎಂಬ ಮಂತ್ರವನ್ನು 11 ಬಾರಿ ಪಠಿಸಿ.
  
ಮೀನ :  ಇಂದು ಸುಖ ಭೋಜನ, ಉತ್ತಮ ಕಾರ್ಯಗಳು ಜರುಗಲಿವೆ. ಮಹಾ ಗುರುಗಳ ಭೇಟಿ ಮಾಡುವ ದಿನ, ಉತ್ತಮ ದಿನವಾಗಿರಲಿದೆ. ಚಿಂತೆ ಬೇಡ. 
  
ದೋಷ ಪರಿಹಾರ : ಹಳದಿ ಬಟ್ಟೆಯನ್ನು ಧರಿಸಿ. ನಿಮ್ಮ ಗುರುವಿಗೆ ನಮಸ್ಕಾರ ಮಾಡಿ

ಗೀತಾಸುತ.

loader