ಇಂದು ಸುಖ ವೃದ್ಧಿಯಾಗುವುದು ಯಾವ ರಾಶಿಗೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 7:16 AM IST
Special Bhavishya July 19
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಇಂದು ಸುಖ ವೃದ್ಧಿಯಾಗುವುದು ಯಾವ ರಾಶಿಗೆ..?

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಪ್ರಿಯರೇ ನಿಮ್ಮ ಸಂಸಾರದಲ್ಲಿ ಉತ್ತಮ ಸಾಮರಸ್ಯ, ಮಕ್ಕಳಿಂದ ಕುಟುಂಬಕ್ಕೆ ಸಹಕಾರ, ಪ್ರಯಾಣದಲ್ಲಿ ಓರ್ವ ಸಂಭಾವಿತ ವ್ಯಕ್ತಿಯ ಪರಿಚಯ, ಅನ್ಯರಿಂದ ಸಹಕಾರ ಪ್ರಾಪ್ತವಾಗಲಿದೆ.

ದೋಷಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ಜೇನುತುಪ್ಪ ಸಮರ್ಪಣೆ ಮಾಡಿ

ವೃಷಭ : ಇಂದು ನಿಮ್ಮ ಸುಖ ವೃದ್ಧಿ, ತಂದೆಯಿಂದ ಸಹಕಾರ, ಮಿತ್ರರಿಂದಲೂ ಸಹಾಯ ದೊರೆಯಲಿದೆ. ಮಕ್ಕಳು ನಿಮ್ಮ ಪ್ರತಿಭೆಗೆ ಅಂದರೆ ಬುದ್ಧಿಗೆ ಬೆಳಕಾಗುತ್ತಾರೆ. ಮಕ್ಕಳಿಂದ ಪಾಠ ಕಲಿಯಬೇಕಾಗುತ್ತದೆ. 

ದೋಷ ಪರಿಹಾರ : ಕೊಲ್ಲೂರು ಮೂಕಾಂಬೆ ದರ್ಶನ ಮಾಡಿಬನ್ನಿ.

ಮಿಥುನ : ಆತ್ಮೀಯರೇ ನಇಂದು ನಿಮ್ಮ ಪಾಲಿಗೆ ಶುಭದಿನ, ಧನಾಗಮನವಾಗಲಿದೆ. ನೀವು ಅಂದುಕೊಂಡ ಕಾರ್ಯ ಸಾಕಾರಗೊಳ್ಳಲಿದೆ. ನಿಮ್ಮ ವ್ಯವಹಾರದ ತೊಡಕುಗಳೂ ಕೂಡ ನಿವಾರಣೆಯಾಗಲಿವೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ.  

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತುಳಸಿಹಾರ ಕೊಟ್ಟುಬನ್ನಿ.

ಕಟಕ : ಇಂದು ನಿಮ್ಮ ಪಾಲಿಗೆ ತಾಯಿಯೇ ದೇವರು. ತಾಯಿಯಿಂದ ಸಹಾಯ ದೊರೆಯಲಿದೆ. ನಿಮ್ಮ ಸುಖ ಸಮೃದ್ಧವಾಗಲಿದೆ. ಸಂಗಾತಿ ನಿಮ್ಮ ಮನಸ್ಸಿಗೆ ಸ್ವಲ್ಪ ಘಾಸಿಮಾಡಬಹುದು ಆದರೆ ಅದರಿಂದ ನಿಮ್ಮ ಅನುಕೂಲವೂ ಇದೆ. ನೀರಿನ ಬಳಿ ಇರುವವರು ಜಾಗ್ರತೆ ಇಂದ ಇರಬೇಕು. ಅಪಾಯ ಸಾಧ್ಯತೆ ಇದೆ. ನಿಮ್ಮ ಶರೀರದಲ್ಲಿ ಸ್ವಲ್ಪ ಆರೋಗ್ಯ ವ್ಯತ್ಯಯವಾಗಬಹುದು. ಆಹಾರದಲ್ಲಿ ಎಚ್ಚರವಾಗಿರಿ.  
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ನಮಸ್ಕಾರ ಮಾಡಿದರೆ ಸಾಕು

ಸಿಂಹ : ಇಂದು ನಿಮ್ಮ ಮಾತಿನಿಂದ ನಿಮಗೆ ಪ್ರಶಂಸೆ, ಪ್ರಿಯವಾದವರು ಊಟವನ್ನು ತಂದುಕೊಡುತ್ತಾರೆ ಅಥವಾ ಅನ್ನ ಹಾಕುತ್ತಾರೆ. ಎಥೇಚ್ಛವಾಗಿ ನೀರು ಸಿಗಲಿದೆ. ಕೃಷಿಕರಿಗೆ ಉತ್ತಮದಿನವಾಗಿರಲಿದೆ. ಸಾಫ್ಟ್ ವೇರ್ ಉದ್ಯೋಗಿಗಳಿಗೆ ಧನ ವ್ಯಯ. 

ದೋಷ ಪರಿಹಾರ : ವಿಷ್ಣು ಹಾಗೂ ಲಕ್ಷ್ಮೀ ದೇವರ ದರ್ಶನ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಮನಸ್ಸಿನಲ್ಲಿ ಯಾವುದೋ ಒಂದು ವಿಷಯ ತುಂಬ ಕಾಡಲಿದೆ. ಯೋಚನೆ ಮಾಡಿ ನೀವು ಕುಸಿಯಬಹುದು. ಹಿರಿಯರ ಅಥವಾ ಆತ್ಮೀಯರ ಸಹಲೆ ಕೇಳಿ. ಪರಿಹಾರ ಸಿಗಲಿದೆ. ಮುಖ್ಯವಾಗಿ ನಿಮ್ಮ ಆರೋಗ್ಯ ಕೆಡುವ ಸಾಧ್ಯತೆ ಇದೆ. ಎಚ್ಚರವಾಗಿರಿ.
  
ದೋಷ ಪರಿಹಾರ : ಗುರು ದರ್ಶನ ಅಥವಾ ದತ್ತಾತ್ರೇಯ ದರ್ಶನ ಮಾಡಿ

ತುಲಾ :  ಆತ್ಮೀಯರೇ ಇಂದು ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು. ವೈದ್ಯರನ್ನು ಭೇಟಿ ಮಾಡಬೇಕಾದ ಅನಿವಾರ್ಯತೆ ಇದೆ. ನಿಮ್ಮ ಜೀವನದಲ್ಲಿ ಒಂದು ಮುಖ್ಯ ಘಟನೆ ನಡೆಯುವ ಸಾಧ್ಯತೆ ಇದೆ. ನಿಮ್ಮ ಮಾತು ನಯವಾಗಿರಲಿ.

ದೋಷ ಪರಿಹಾರ : ದುರ್ಗಾ ದೇವಿಯ ಆರಾಧನೆ ಮಾಡಿ

ವೃಶ್ಚಿಕ : ಆತ್ಮೀಯರೇ, ಇಂದು ನಿಮ್ಮ ಪಾಲಿಗೆ ಸಾಧನೆಯ ದಿನ, ನಿಮ್ಮ ಸಾಹಸ ಪ್ರವೃತ್ತಿಯಿಂದ ಒಂದು ಹೊಸ ಅವಕಾಶ ಸಿಗಲಿದೆ. ಆದರೆ ಸ್ವಲ್ಪ ಮಟ್ಟಿಗೆ ಧನ ವ್ಯಯವಾಗುವ ಸಾಧ್ಯತೆ ಇದೆ. ಕೊಟ್ಟು ಮೋಸಹೋಗಬೇಡಿ. ಎಚ್ಚರವಾಗಿದ್ದರೆ ಒಳಿತು. 

ದೋಷ ಪರಿಹಾರ : ಶನಿ ಆರಾಧನೆ ಅಥವಾ ತಿಲ ದಾನ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಆಲಸ್ಯ ಸ್ವಾಭಾವ, ವಯಸ್ಸಾಗಿಹೋಯ್ತಾ ಅನ್ನೋ ಯೋಚನೆ ಅಷ್ಟೇ ಅಲ್ಲ ನಿಮ್ಮಲ್ಲಿ ನಿಮಗೇ ಆತ್ಮಸ್ಥೈರ್ಯದ ಕೊರತೆ ಕಾಡಲಿದೆ. ನಿಮ್ಮ ಆತ್ಮಬಲ ವೃದ್ಧಿಗೆ ಸೂರ್ಯ ಪ್ರಾರ್ಥನೆ ಮಾಡಿ

ದೋಷ ಪರಿಹಾರ : ಸೂರ್ಯ  ನಮಸ್ಕಾರ ಮಾಡಿ.

ಮಕರ :  ಆತ್ಮೀಯರೇ ಇಂದು ನಿಮ್ಮ ಮನೆಯ ಕಾರಣಕ್ಕಾಗಿ ಸ್ವಲ್ಪ ಅಧಿಕ ಧನ ವ್ಯಯವಾಗಲಿದೆ. ನೀವು ಅಂದುಕೊಳ್ಳದ ಕಾರಣಕ್ಕೆ ಧನ ವ್ಯಯಿಸಬೇಕಾದ ಸಂದರ್ಭ ಒದಗಲಿದೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಬದಲಾವಣೆ ಕಾಣುವ ಸಾಧ್ಯತೆ ಇದೆ. ಸ್ತ್ರೀಯರೊಂದಿಗೆ ಎಚ್ಚರವಾಗಿರಿ. ಸ್ತ್ರೀಯರು ಪುರುಷರೊಡನೆ ವ್ಯವಹರಿಸುವಾಗ ಎಚ್ಚರವಾಗಿರಿ.
  
ದೋಷ ಪರಿಹಾರ : ಶಿವ ಧ್ಯಾನ ಅಥವಾ ಶಿನ ದರ್ಶನ ಮಾಡಿ

ಕುಂಭ : ಆತ್ಮೀಯರೇ ಇಂದು ಅಷ್ಟಮದಲ್ಲಿನ ಚಂದ್ರ ನಿಮ್ಮಲ್ಲಿ ಸ್ವಲ್ಪ ಆರೋಗ್ಯ ವ್ಯತ್ಯಯ ಮಾಡುತ್ತಾನೆ. ಸೊಂಟಭಾಗದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು ಅಲ್ಲದೆ ಕಾಲಿಗೆ ಪೆಟ್ಟಾಗುವ ಸಾಧ್ಯತೆಯೂ ಇದೆ. ಉಳಿದಂತೆ ಏನೂ ಸಮಸ್ಯೆ ಇಲ್ಲ. ಶುಭದಿನವಾಗಿರಲಿದೆ.   

ದೋಷ ಪರಿಹಾರ : ದೇವಿ ಅಥವಾ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ 
  
ಮೀನ : ಸ್ನೇಹಿತರೆ ಇಂದು ನಿಮ್ಮ ಸುಖ ಮಕ್ಕಳಿಗೆ ರವಾನೆಯಾಗುತ್ತದೆ. ಅಂದರೆ ನಿಮ್ಮ ಶ್ರಮದಿಂದ ಮಕ್ಕಳಿಗೆ ಲಾಭ, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು. ಉದ್ಯೋಗದಲ್ಲಿ ಉತ್ತಮ ಸಹಕಾರ. ಶುಭದಿನವಾಗಿರಲಿದೆ.    
  
ದೋಷ ಪರಿಹಾರ : ಚಂದ್ರ ದರ್ಶನ ಹಾಗೂ ಚಂದ್ರ ಮಂತ್ರಾರಾಧನೆ ಮಾಡಿ

ಗೀತಾಸುತ.

loader