ನೀವಿಂದು ಸ್ತ್ರೀಯರಿಂದ ದೂರು ಇರುವುದು ಒಳಿತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jul 2018, 7:09 AM IST
Special Bhavishya July 16
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಸಿಂಹ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ. 

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಸಿಂಹ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ. 


ಮೇಷ ರಾಶಿ : ನಿಮ್ಮ ರಾಶಿಯ ಅಧಿಪತಿಯಾದ ಕುಜ ಕರ್ಮಸ್ಥಾನದಲ್ಲಿ ಅಂದ್ರೆ ಉದ್ಯೋಗ ಸ್ಥಾನದಲ್ಲಿ  ಉಚ್ಛನಾಗಿರುವುದರಿಂದ ಉದ್ಯೋಗದಲ್ಲಿ ಬಡ್ತಿ, ಸಮಾಧಾನ ಸಿಗಲಿದೆ.  ಸ್ತ್ರೀಯರಿಂದ ದೂರವಿದ್ದರೆ ಲೇಸು.

ದೋಷ ಪರಿಹಾರ - ದುರ್ಗಾ ದರ್ಶನ ಮಾಡಿ ಹಾಗೂ ಉದ್ದಿನ ಕಾಳನ್ನು ದಾನ ಮಾಡಿ

ವೃಷಭ : ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಸ್ವಲ್ಪ ಮೃದು ಮಾತುಗಳಾಡಿ, ಅಷ್ಟಮದಲ್ಲಿನ ಶನಿ ಸ್ವಲ್ಪ ಮಟ್ಟಿಗೆ ಆರೋಗ್ಯವನ್ನು ಹಾಳುಮಾಡುವ ಸಾಧ್ಯತೆ ಇದೆ ತಿನ್ನುವ ವಿಷಯದಲ್ಲಿ ಜಾಗೃತೆ ಇದ್ದರೆ ಸಾಕು.

ದೋಷ ಪರಿಹಾರ : ರಾಹು ದೋಷ ನಿವಾರಣೆಗೆ ಕ್ಷೀರ ದಾನ ಮಾಡಿ, ಶನಿ ದೋಷ ನಿವಾರಣೆಗೆ ಕಪ್ಪು ವಸ್ತ್ರದಲ್ಲಿ ಎಳ್ಳನ್ನು ಕಟ್ಟಿ ವಸ್ತ್ರ ಸಮೇತ ದಾನ ಮಾಡಿ 

ಮಿಥುನ : ಸಪ್ತಮದಲ್ಲಿರುವ ಶನಿಯಿಂದಾಗಿ ನಿಮ್ಮ ವ್ಯಾಪಾರದಲ್ಲಿ ತೊಂದರೆಯಾಗುವ ಸಾಧ್ಯತೆ, ಗಂಡ ಹೆಂಡಿರಲ್ಲೂ ಕೂಡ ಸ್ವಲ್ಪ ವಾಗ್ವಾದವಾಗಬಹುದು. ಹೆಚ್ಚು ಮಾತನಾಡುವ ಬದಲು ಸಮಾಧಾನದಿಂದಿರಿ. ಬೇಡದ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅದರಿಂದ ಏನೂ ಪ್ರಯೋಜನವಿಲ್ಲ ದಿನ ಹಾಳಾಗಲಿದೆ ಅಷ್ಟೆ. 

ದೋಷ ಪರಿಹಾರ : ಶನೈಶ್ಚರ ದೇವಾಲಯಕ್ಕೆ ಎಳ್ಳು ದಾನ ಮಾಡಿ, ಸಾಧ್ಯವಾದರೆ ಶನಿ ದೇವರಿಗೆ 7 ನಮಸ್ಕಾರ ಹಾಕಿಬನ್ನಿ 

ಕಟಕ : ಸ್ತ್ರೀಯರೊಡನೆ ಹೆಚ್ಚು ಮಾತು ಬೇಡ, ಮನೆಯಲ್ಲಿ ಹಿರಿಯರ ಮಾತು ಕೇಳುವುದರಿಂದ ಕಲಹ ದೂರವಾಗುವುದರಲ್ಲಿ ಸಂಶಯವೇ ಇಲ್ಲ. ಬಿಸಿ ನೀರು ಕುಡಿಯಿರಿ. ಮಿತ್ರರಿಂದ ಧನ ಸಹಾಯ, ಸ್ತ್ರೀಯರಿಗಾಗಿ ಧನವ್ಯಯ.

ದೋಷ ಪರಿಹಾರ : ಸಾಧ್ಯವಾದರೆ 5 ಜನ ಸುಮಂಗಲೆಯರಿಗೆ  ಮಂಗಲದ್ರವ್ಯಗಳನ್ನು ದಾನ ಮಾಡಿ, ಇಲ್ಲವಾದರೆ ದೇವಿ ದೇವಸ್ಥಾನಕ್ಕೆ ಎರಡು ಬಿಳಿ ಹೂವನ್ನು ಸಮರ್ಪಿಸಿಬನ್ನಿ

ಸಿಂಹ : ರಾಶ್ಯಾಧಿಪತಿಯು ಲಾಭದಲ್ಲಿರುವುದರಿಂದ ವೈದ್ಯರಿಗೆ, ವೈದ್ಯ ಸಂಬಂಧಿ ಕೆಲಸ ಮಾಡುವವರಿಗೆ ಶುಭದಾಯಕ ದಿನ, ಇನ್ನು ಪಂಚಮದಲ್ಲಿರುವಂಥ ಶನಿ ನಿಮ್ಮ ಮಕ್ಕಳಲ್ಲಿ ಅಥವಾ ಸಂತಾನದಲ್ಲಿ ಸ್ವಲ್ಪ ಸಮಸ್ಯೆಯನ್ನ ತರಬಹುದು, ಜಾಗರೂಕರಾಗಿರಿ.

ದೋಷ ಪರಿಹಾರ : ಪಂಚಮ ಶನಿ ದೋಷಕ್ಕೆ ಶಿವನ ದೇವಾಲಯಕ್ಕೆ ಹೋಗಿ ತಿಲ ದಾನ ಮಾಡಿಬನ್ನಿ ಅಥವಾ ನಿಮ್ಮ ಹೆಸರಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡಿಸಿದರೂ ದೋಷ ಶಮನವಾಗಲಿದೆ.

ಕನ್ಯಾ : ಉದ್ಯೋಗ ಪ್ರಾಪ್ತಿಯಾಗಲಿದೆ, ವೈದ್ಯ ಸಂಬಂಧಿ ಕೆಲಸಗಾರರಿಗೂ ಅನುಕೂಲದ ದಿನ, ಆದರೆ ವಾಹನ ಚಲಾಯಿಸುವಾಗ ಮಾತ್ರ ಎಚ್ಚರದಿಂದಿರಿ. ಕಾರಣ ವಾಹನ ಸ್ಥಾನದಲ್ಲಿ ಶನಿ ಇದ್ದಾನೆ. 

ದೋಷ ಪರಿಹಾರ : ಅಂಥ ಸಮಸ್ಯೆ ಏನೂ ಇಲ್ಲ ನಿಮಗೆ ವಾಹನದಲ್ಲಾಗುವ ಸಮಸ್ಯೆಗೆ ನಿಧಾನವಾಗಿ ಚಲಿಸಿ ಆತುರ ಬೇಡ. ನಿಮ್ಮ ಮನೆ ದೇವರಿಗೆ ನಮಸ್ಕಾರ ಮಾಡಿ ಹೊರಡಿ.

ತುಲಾ : ಸಹೋದರರಲ್ಲಿ ಸ್ವಲ್ಪ ಮಟ್ಟಿಗೆ ಮಾತಿನ ಘರ್ಷಣೆ ಸಾಧ್ಯತೆ, ಹೆಚ್ಚು ಮಾತನಾಡುವುದು ಬೇಡ.

ದೋಷ ಪರಿಹಾರ : ಶನೈಶ್ಚರ ದೇವಸ್ಥಾನದಲ್ಲಿ ನಿಮ್ಮ ತೂಕದ ಎಳ್ಳನ್ನು 7 ಭಾಗ ಮಾಡಿ ದಾನ ಮಾಡಿ. ಸಾಧ್ಯವಾಗದಿದ್ದರೆ ಶನಿ ದೇವರಿಗೆ 7 ಪ್ರಕ್ಷಿಣೆಹಾಕಿಬನ್ನಿ.

ವೃಶ್ಚಿಕ : ರಾಶ್ಯಾಧಿಪತಿ ತೃತೀಯ ಸ್ಥಾನದಲ್ಲಿ ಉಚ್ಚನಾಗಿದ್ದು  ಸಾಹಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ, ಆದರೆ ಧನ ಸ್ಥಾನದಲ್ಲಿರುವ ಶನಿ ನಿಮ್ಮ ಹಣಕ್ಕೆ ಕತ್ತರಿ ಹಾಕುತ್ತಾನೆ. ಸ್ವಲ್ಪ ಎಚ್ಚರಿಕೆಯಿಂದ ಇರಿ.

ದೋಷ ಪರಿಹಾರ : ಧನಲಕ್ಷ್ಮಿ ಯಂತ್ರವನ್ನು ಇಟ್ಟು ಶ್ರೀ ಸೂಕ್ತದಿಂದ ಅಭಿಷೇಕ ಮಾಡಿದರೆ ಖಂಡಿತ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ.

ಧನಸ್ಸು : ರಾಶ್ಯಾಧಿಪತಿ ಲಾಭದಲ್ಲಿದ್ದಾನೆ  ಹಾಗಾಗಿ ಲಾಭದ ದಿನವಾಗಿರಲಿದೆ. ಆದರೆ ಶನಿ ರಾಶಿಯಲ್ಲೇ ಕೂತಿರುವುದರಿಂದ ದೇಹಾಯಾಸ ಸಾಧ್ಯತೆ. ದೇಹಕ್ಕೆ ಪೆಟ್ಟಾಗಲಿದೆ, ಎಡವಿ ಬೀಳುವ ಸಾಧ್ಯತೆ ಇದೆ.

ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ

ಮಕರ : ರಾಶ್ಯಾಧಿಪತಿ ವ್ಯಯಸ್ಥಾನದಲ್ಲಿದ್ದಾನೆ ಹಾಗಾಗಿ ನೀವು ತೆಗೆದುಕೊಳ್ಳುವ ತೀರ್ಮಾನಗಳು ಎಡವಟ್ಟು ಮಾಡಬಹುದು, ಸುಖಾಧಿಪತಿ ಉಚ್ಛನಾಗಿರುವುದರಿಂದ ಸುಖ ಸಮೃದ್ಧವಾಗಲಿದೆ. ಸುಖ ಇದೆ ಅಂತ ಮೈಮರೆಯುವುದು ಬೇಡ.

ದೋಷ ಪರಿಹಾರ : ಸುಬ್ರಹ್ಮಣ್ಯ ಹಾಗೂ ಶನೈಶ್ಚರ ದರ್ಶನ ಮಾಡಿಬನ್ನಿ

ಕುಂಭ : ರಾಶ್ಯಾಧಿಪತಿಯು ಲಾಭದಲ್ಲಿದ್ದಾನೆ ಹಾಗಾಗಿ ಲಾಭದ ದಿನವಾಗಿರಲಿದೆ, ಮುಖ್ಯವಾಗಿ ಧನಾಧಿಪತಿಯಾದ ಗುರುವಿನ ದೃಷ್ಟಿ ಇರುವುದರಿಂದ ಧನ ಸಮೃದ್ಧವಾಗುತ್ತದೆ. ಬಂದ ಹಣವನ್ನ ಸದ್ವಿನಿಯೋಗ ಮಾಡಿಕೊಳ್ಳಿ.

ದೋಷ ಪರಿಹಾರ : ಶಿವ ಸ್ಮರಣೆ.

ಮೀನ : ರಾಶ್ಯಾಧಿಪತಿ ಅಷ್ಟಮ ಸ್ಥಾನದಲ್ಲಿರುವುದರಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು, ಸೊಂಟದ ಭಾಗದಲ್ಲಿ ನೋವಾಗಬಹುದು ಎಚ್ಚರದಿಂದಿರಿ.

ದೋಷ ಪರಿಹಾರ : ಕಡಲೆಬೇಳೆ ದಾನ ಮಾಡಿ

ಗೀತಾಸುತ

loader