ಈ ರಾಶಿಯವರಿಗೆ ಇಂದು ಹಣವು ಹರಿದುಬರಲಿದೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 7:08 AM IST
Special Bhavishya August 8
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮಿಥುನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಈ ರಾಶಿಯವರಿಗೆ ಇಂದು ಹಣವು ಹರಿದುಬರಲಿದೆ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮಿಥುನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಆತ್ಮೀಯರೇ ಇಂದು ನಿಮ್ಮ ಸಹೋದರಿ ಅಥವಾ ಸಹೋದರಿ ಭಾವದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ದಿನದ ಮುಖ್ಯ ಕಾರ್ಯದಲ್ಲಿ ಅವರ ಸಹಕಾರ ಇರಲಿದೆ. ಕುಜನರು ನಿಮ್ಮ ಧನ ವ್ಯಯಕ್ಕೆ ಕಾರಣವಾಗಬಹುದು ಎಚ್ಚರವಾಗಿರಿ. 
  
ದೋಷಪರಿಹಾರ : ಕೆಂಪು ವಸ್ತ್ರ ದಾನ ಮಾಡಿ, ತೊಗರಿ ಬೇಳೆ ದಾನ ಮಾಡಿ

ವೃಷಭ : ಆತ್ಮೀಯರೇ  ಇಂದು ನಿಮ್ಮ ಧನಮೂಲ ಸಮೃದ್ಧಿಯಾಗಲಿದೆ. ಆರೋಗ್ಯದಲ್ಲಿ ಏರುಪೇರಾಗುತ್ತದೆ, ನಿಮ್ಮ ಮಕ್ಕಳು ನಿಮ್ಮ ಮನಸ್ಸಿನ ಭಾವನೆಗಳನ್ನ ಹತಾಶೆ ಮಾಡುತ್ತಾರೆ. ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ ಇದೆ. ಶ್ರೀಸೂಕ್ತ ಪಾರಾಯಣ ಮಾಡಿಸಿ

ದೋಷ ಪರಿಹಾರ : ದುರ್ಗಾ ದೇವಸ್ಥಾನದಲ್ಲಿ ಕ್ಷೀರಾಭಿಷೇಕ ಮಾಡಿಸಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ಮನಸ್ಸು ಸ್ವಲ್ಪ ಚಂಚಲವಾಗಲಿದೆ. ನಿಮ್ಮ ಸಂಗಾತಿಯಲ್ಲಿ ಹೆಚ್ಚಿನ ಆಸಕ್ತಿ, ನಿಮ್ಮ ಕಾರ್ಯ ಸ್ಥಳದಲ್ಲಿ ಉತ್ತಮ ಸಹಕಾರ ಹಾಗೂ ಅನುಕೂಲ ಉಂಟಾಗಲಿದೆ. ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವೂ ಇದೆ. ನಿಮ್ಮ ಮಕ್ಕಳು ನಿಮಗೆ ಅನುಕೂಲವಾಗುತ್ತಾರೆ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ಕಟಕ : ಇಂದು ನಿಮ್ಮ ದೇಹಾರೋಗ್ಯ ವ್ಯತ್ಯಯವಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ತಂದೆಯವರು ನಿಮ್ಮ ಆರೋಗ್ಯ ಕಾಳಜಿವಹಿಸಿ ಸಹಾಯ ಹಸ್ತ ಚಾಚುತ್ತಾರೆ. ನಿಮ್ಮ ಬಂಧುಗಳಲ್ಲಿ ಉತ್ತಮ ಬಾಂಧವ್ಯ ಮೂಡಿ ಸಹಾಯ ದೊರೆಯಲಿದೆ. ನಿಮ್ಮ ಸಹೋದರಿಯರು ಕಿರಿಕಿರಿಯನ್ನೂ ಮಾಡಲಿದ್ದಾರೆ. ಮಿಶ್ರಫಲ ಹೊಂದಲಿದ್ದೀರಿ.
  
ದೋಷ ಪರಿಹಾರ : ದುರ್ಗಾಸಪ್ತಶತಿ ಪಾರಾಯಣ ಮಾಡಿಸಿ

ಸಿಂಹ : ಆತ್ಮೀಯರೇ, ಇಂದು ನಿಮ್ಮ ಆತ್ಮಸ್ಥೈರ್ಯ ಕುಸಿಯಲಿದೆ. ನಿಮ್ಮ ಆತ್ಮೀಯ ಸ್ನೇಹಿತೆ ನಿಮ್ಮ ಧನವ್ಯಯಕ್ಕೆ ಕಾರಣರಾಗುತ್ತಾರೆ. ನಿಮ್ಮ ಸಹೋದರರು ನಿಮ್ಮ ಕಷ್ಟಕ್ಕೆ ನೆರವಾಗುತ್ತಾರೆ. ನಿಮ್ಮ ಆರೋಗ್ಯ ಕ್ಷೀಣವಾಗುವ ಮುನ್ನ ಭಾಸ್ಕರನ ಪ್ರಾರ್ಥನೆ ಮಾಡಿ.

ದೋಷ ಪರಿಹಾರ : ಶಿವನಿಗೆ ಗೋಧಿಯಿಂದ ದಾನ ಮಾಡಿ

ಕನ್ಯಾ : ಆತ್ಮೀಯರೇ ನಿಮ್ಮ ಸರ್ವ ಕಾರ್ಯಗಳೂ ಈಡೇರಿಲಿವೆ, ಯಾವುದಕ್ಕೂ ಹೆಚ್ಚು ಚಿಂತಿಸುವ ಪ್ರಮೇಯವಿಲ್ಲ. ನಿಮಗೆ ಬರಬೇಕಿದ್ದ ಹಣ ಮರಳಿ ಬರಲಿದೆ. ನಿಮ್ಮ ಮಕ್ಕಳಿಂದ  ಸಿಹಿ ಸುದ್ದಿ ಬರಲಿದೆ. ಸಮಾಧಾನದ ದಿನ.
  
ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತುಳಸಿ ಮಾಲೆ ಸಮರ್ಪಣೆ ಮಾಡಿ

ತುಲಾ :  ಆತ್ಮೀಯರೇ ನಿಮ್ಮ ದೇಹಾರೋಗ್ಯ ವೃದ್ಧಿಯಾಗಲಿದೆ, ಸದ್ಗುರುಗಳ ದರ್ಶನವಾಗಲಿದೆ, ಆದರೆ ನೀವು ಸಂಚಾರ ಮಾಡುವಾಗ ಮಾತ್ರ ಎಚ್ಚರದಿಂದ ಇರಬೇಕಾಗುತ್ತದೆ. ವಾಹನ ಅಥವಾ ನಿಮ್ಮ ನಡಿಗೆಯಿಂದ ಎಡವಿ ಬೀಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.

ದೋಷ ಪರಿಹಾರ : ಸುಮಂಗಲಿಯರಿಗೆ ವಸ್ತ್ರ ದಾನ ಮಾಡಿ

ವೃಶ್ಚಿಕ : ಆತ್ಮೀಯರೇ,  ಇಂದು ನಿಮ್ಮ ಮಾತುನಿಂದ ಕಾರ್ಯದಲ್ಲಿ, ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಆದಷ್ಟು ಕಡಿಮೆ ಮಾತಾಡಿದರೆ ಒಳಿತು. ನಿಮ್ಮ ಮನೆಯಲ್ಲಿ ಕಳ್ಳಕಾಕರ ಭಯ ಕಾಣಬಹುದು, ಮನೆ ಬೀಗ ಹಾಕುವಾಗ ಜಾಗ್ರತೆ ವಹಿಸಿ. 

ದೋಷ ಪರಿಹಾರ : ನಾಗ ದೇವರಿಗೆ ವಸ್ತ್ರದಾನ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ಶರೀರದಲ್ಲಿ ಒಂದುವಿಧವಾದ ಪ್ರಯಾಸ, ಅಶಾಂತಿ ಕುಟುಂಬದಲ್ಲಿ ಅಸಹಕಾರ, ನೆಮ್ಮದಿ ಭಂಗ ಇತ್ಯಾದ ಬೇಸರ ಸಂಗತಿಗಳೇ ಇವೆ. ಆದರೆ ಜೊತೆಗೆ ಧನ ಲಾಭವೂ ಇದೆ. ಮಿಶ್ರಫಲ

ದೋಷ ಪರಿಹಾರ : ಗಾಣಗಾಪುರ ದತ್ತನ ದರ್ಶನ ಮಾಡಿ

ಮಕರ :  ಆತ್ಮೀಯರೇ ಇಂದು ನಿಮ್ಮ ಮನೆಯಲ್ಲಿ ಸಣ್ಣಮಟ್ಟದ ಕಲಹ ಸಂಭವಿಸಬಹುದು, ನಿಮ್ಮ ಆಲೋಚನೆಗಳಿಗೆ ವಿರುದ್ಧ ಅಭಿಪ್ರಾಯಬರಬಹುದು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವೂ ಆಗಿ ಶೀತಬಾಧೆ ಕಾಡಲಿದೆ. ಆದಷ್ಟು ಆಹಾರದಲ್ಲಿ ಜಾಗ್ರತೆ ಇರಲಿ.
  
ದೋಷ ಪರಿಹಾರ : ನಿಮ್ಮ ಕುಲದೇವತಾ ಆರಾಧನೆ ಮಾಡಿ

ಕುಂಭ : ಆತ್ಮೀಯರೇ ಇಂದು ನಿಮ್ಮ ಮನಸ್ಸಿಗೆ ಉಲ್ಲಾಸದ ದಿನ, ನಿಮ್ಮ ಬಂಧುಗಳು ಹಾಗೂ ನಿಮ್ಮ ಮಕ್ಕಳು ನಿಮ್ಮ ಸಂತಸವನ್ನು ಇಮ್ಮಡಿಮಾಡಲಿದ್ದಾರೆ. ಆದರೆ ನೀವು ತೆಗೆದುಕೊಂಡ ನಿರ್ಧಾರಗಳು ಬದಲಾಗಲಿವೆ. ಅನುಕೂಲವೂ ಇದೆ.

ದೋಷ ಪರಿಹಾರ :  ಶಿವ ದೇವಸ್ಥಾನಕ್ಕೆ  ಭಸ್ಮ ದಾನ ಮಾಡಿ
  
ಮೀನ : ಮಿತ್ರರೇ ಇಂದು ನಿಮ್ಮ ಸುಖ ಇಮ್ಮಡಿಯಾಗಲಿದೆ. ತಾಯಿಯ ಸಹಕಾರ ಹೆಚ್ಚಾಗಿ ಲಭ್ಯವಾಗಲಿದೆ. ಬಂಧುಗಳ ಸಹಾಯದಿಂದ ನಿಮ್ಮ ಕಾರ್ಯ ಸುಲಭವಾಗಲಿದೆ. ಉತ್ತಮ ದಿನ. ಆದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವೂ ಇದೆ ಎಚ್ಚರವಾಗಿರಿ.
  
ದೋಷ ಪರಿಹಾರ : ದತ್ತಾತ್ರೇಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ಗೀತಾಸುತ.

loader