ಇಂದು ನಿಮ್ಮ ರಾಶಿಗೆ ಧನ ಸಮೃದ್ಧಿಯ ದಿನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 7:16 AM IST
Special Bhavishya August 6
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  
 

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಬೆಳಗ್ಗೆ ಎದ್ದ ಕೂಡಲೇ 24 ಬಾರಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಇಂದು ನಿಮ್ಮ ಧನ ಸಮೃದ್ಧಿಯಾಗಲಿದೆ, ಕುಟುಂಬದವರಿಂದ ಸಹಾಯ ಸಿಗಲಿದೆ, ವಾಹನ ಖರೀದಿಯಬಗ್ಗೆ ಯೋಚನೆ ಮಾಡುವ ದಿನ, ಹಳೆ ವಸ್ತುಗಳ ಮಾರಾಟ ಮಾಡುವ ಮನಸ್ಸು. ದೈವಾನುಕೂಲವೂ ಇದೆ.
  
ದೋಷಪರಿಹಾರ : ಕೆಂಪು ವಸ್ತ್ರವನ್ನು ವಿದ್ಯಾವಂತರಿಗೆ ದಾನ ಮಾಡಿ

ವೃಷಭ : ಆತ್ಮೀಯರೇ ಇಂದು ನಿಮ್ಮ ದಿನ ಪ್ರಾರಂಭವಾಗುವ ಮುನ್ನ ಲಕ್ಷ್ಮೀ ಸ್ತೋತ್ರವನ್ನು 12 ಬಾರಿ ಪಠಿಸಿ. ನಿಮ್ಮ ಮನಸ್ಸಿಗೆ ಇಂದು ಸಮಾಧಾನದ ದಿನ, ನಿಮ್ಮ ಬಂಧುಗಳಿಂದ ಪ್ರಶಂಸೆ ಹಾಗೂ ನಿಮ್ಮ ಕಾರ್ಯ ವೃದ್ಧಿಯೂ ಆಗಲಿದೆ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಿದೆ. ನಿಮ್ಮ ಮಿತ್ರರೊಂದಿಗೆ ವಿಹಾರ ಹಾಗೂ ಸುಖ ಭೋಜನ ಪ್ರಾಪ್ತಿ. 

ದೋಷ ಪರಿಹಾರ : ಕ್ಷೀರ ದಾನ ಮಾಡಿ.

ಮಿಥುನ : ಆತ್ಮೀಯರೇ ನಿಮ್ಮ ನಿತ್ಯ ಕರ್ಮ ಮುಗಿಸಿದ ಕೂಡಲೇ ನಿಮ್ಮ ಮನಸ್ಸಿಗೆ ತೋಚಿದ ವಿದ್ವಾಂಸರಿಗೆ ಕೈಲಾಗುವ ದಾನ ಮಾಡುವ ಮೂಲಕ ದಿನವನ್ನು ಪ್ರಾರಂಭ ಮಾಡಿ. ನಿಮ್ಮ ಕಾರ್ಯಗಳು ಕೈಗೂಡುವ ದಿನವಾಗಿದೆ. ಮಕ್ಕಳಿಂದ ಶುಭ ವಾರ್ತೆ ಕೇಳಲಿದ್ದೀರಿ. ಶುಭ ದಿನ

ದೋಷ ಪರಿಹಾರ : ಹರಿವಂಶ ಪುಸ್ತಕವನ್ನು ದಾನ ಮಾಡಿ.

ಕಟಕ : ಇಂದು ನೀವು ಮಾಡಬೇಕಾದ ಮೊದಲ ಕೆಲಸ ದುರ್ಗಾ ದೇವಿಯನ್ನು 32 ಬಾರಿ ಸ್ಮರಿಸುವುದು. ಅದಾದನಂತರವೇ ಮುಂದಿನ ಕೆಲಸ ಮಾಡಬೇಕು. ಇಂದು ನಿಮ್ಮ ದಿನ ಶುಭದಾಯಕವಾಗಿರಲಿದೆ. ನಿಮ್ಮ ಕಾರ್ಯ ಹಾಗೂ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಕಾಣಲಿದ್ದೀರಿ. ನಿಮ್ಮ ವಾಹನ ಹಾಗೂ ಭೂಮಿಯಲ್ಲಿ ಲಾಭ ಕಾಣಲಿದ್ದೀರಿ.
  
ದೋಷ ಪರಿಹಾರ : 2 ಕೆ.ಜಿ ಅಕ್ಕಿ ದಾನ ಮಾಡಿಬನ್ನಿ.

ಸಿಂಹ : ಆತ್ಮೀಯರೇ, ಇಂದು ನೀವು ಬೆಳಗ್ಗೆ ಎದ್ದ ಕೂಡಲೇ ಸೂರ್ಯ ದರ್ಶನ ಮಾಡುತ್ತಾ 108 ಬಾರಿ ಗಾಯತ್ರೀ ಮಂತ್ರ ಪಠಿಸಿ. ನಿಮ್ಮ ಕಾರ್ಯಲಾಭವಾಗಲಿದೆ. ಅಷ್ಟೇ ಅಲ್ಲ ಇಂದು ಧನ ವ್ಯಯವಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಆಪ್ತರ ಸಹಾಯ.

ದೋಷ ಪರಿಹಾರ : 5 ಕೆ.ಜಿ ಗೋಧಿಯನ್ನು ದಾನ ಮಾಡಿ

ಕನ್ಯಾ : ಆತ್ಮೀಯರೇ ಇಂದು ಬೆಳಗ್ಗೆ ನಿಮ್ಮ ನಿತ್ಯ ಕರ್ಮ ಮುಗಿಸಿ ಅತಿಥಿಗಳಿಗೆ ಸಹಾಯ ಮಾಡುವ ಮೂಲಕ ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಮ್ಮ ಧನ ಸಮೃದ್ಧಗೊಳ್ಳಲಿದೆ. ಉತ್ತಮ ದಿನವಾಗಿರಲಿದೆ.
  
ದೋಷ ಪರಿಹಾರ : ಸುಮಂಗಲೆಯರಿಗೆ ವಸ್ತ್ರ ದಾನ ಮಾಡಿ.

ತುಲಾ :  ಆತ್ಮೀಯರೇ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಗುರು ದರ್ಶನ ಅಥವಾ ಗುರು ಪ್ರಾರ್ಥನೆ ಮಾಡಿ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು, ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಯೂ ಆಗಬಹುದು. ನಿಮ್ಮ ಗುಂಪಿಗೆ ನಿಮ್ಮ ವಲಯಕ್ಕೆ ಸೇರದ ಒಬ್ಬರು ಕಿರಿಕಿರಿ ಉಂಟುಮಾಡುತ್ತಾರೆ. ಎಚ್ಚರವಾಗಿರಿ.

ದೋಷ ಪರಿಹಾರ : ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿ

ವೃಶ್ಚಿಕ : ಆತ್ಮೀಯರೇ,  ಇಂದು ನಿಮ್ಮ ತಾಯಿಗೆ ನಮಸ್ಕಾರ ಮಾಡಿ ಈದಿನದ ಕಾರ್ಯ ಪ್ರಾರಂಭ ಮಾಡಿ. ನಿಮ್ಮ ಸಂಗಾತಿಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ನಿಮ್ಮ ಸಹೋದರರು ನಿಮ್ಮ ಸಹಾಯಕ್ಕೆ ಬರುತ್ತಾರೆ. ತಂದೆಯಿಂದ ಸಹಾಯ ದೊರೆಯುತ್ತದೆ. 

ದೋಷ ಪರಿಹಾರ : ಎರಡು ತೆಂಗಿನಕಾಯಿ ಹಾಗೂ ಹಣ್ಣುಗಳನ್ನು ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಿ ಬನ್ನಿ.

ಧನಸ್ಸು : ಆತ್ಮೀಯರೇ ಇಂದು ಅರಳಿ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ನಿಮ್ಮ ನರ ದೌರ್ಬಲ್ಯ ಇಂದು ನಿಮ್ಮನ್ನು ಕಾಡಲಿದೆ, ಅಷ್ಟೇ ಅಲ್ಲ ನಿಮ್ಮ ದೇಹ ಸ್ವಲ್ಪ ಆಯಾಸದಿಂದ ಕೂಡಿರುತ್ತದೆ. ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಿ.

ದೋಷ ಪರಿಹಾರ : ಗುರು ಚರಿತ್ರೆ ಪುಸ್ತಕವನ್ನು ಓದುವವರಿಗೆ ದಾನ ಮಾಡಿ.

ಮಕರ :  ಆತ್ಮೀಯರೇ ಇಂದು ನಿಮ್ಮ ಸೇವಕರಿಗೆ ಅಥವಾ ನಿಮ್ಮ ಕಾರ್ಯ ಮಾಡುವ ಸಹಾಯಕರಿಗೆ ವಸ್ತ್ರ ದಾನ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ನಿಮ್ಮ ಕಾರ್ಯ ಅನುಕೂಲವಾಗಲಿದೆ. ಹಿರಿಯರ ಮಾರ್ಗ ದರ್ಶನ ಸಿಗಲಿದೆ. ಉತ್ತಮ ದಿನ.
  
ದೋಷ ಪರಿಹಾರ : ದೀಪ ದಾನ ಮಾಡಿ

ಕುಂಭ : ಆತ್ಮೀಯರೇ ಇಂದು ನಿಮ್ಮ ಮುಖ್ಯ ಕಾರ್ಯ ಆರಂಭವಾಗುವ ಮುನ್ನ ಪಕ್ಷಿಗಳಿಗೆ ಧಾನ್ಯ ಹಾಗೂ ನೀರು ಹಾಕಿ ಕಾರ್ಯ ಪ್ರಾರಂಭ ಮಾಡಿ. ಇಂದು ಕಾರ್ಯ ಕ್ಷೇತ್ರದಲ್ಲಿ ಮಿತ್ರರ ಸಹಾಯ, ಓರ್ವ ಮಿತ್ರರು ನಿಮ್ಮನ್ನು ಕಾಣಲು ಬರುತ್ತಾರೆ, ಅಷ್ಟೇ ಅಲ್ಲ ತಾಯಿ ನಿಮ್ಮ ಸಹಾಯಕ್ಕೆ ಬರುತ್ತಾರೆ. ಸ್ತ್ರೀಯರ ಭೇಟಿ. ವಾಹನ ಅನುಕೂಲ.

ದೋಷ ಪರಿಹಾರ :  ತಿಲ ದಾನ ಮಾಡಿ
  
ಮೀನ : ಮಿತ್ರರೇ ಇಂದು ನಿಮ್ಮ ದಿನ ಪ್ರಾರಂಭವಾಗುವ ಮುನ್ನ ನಿಮ್ಮ ತಂದೆ-ತಾಯಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಸಹೋದರಿ ನಿಮ್ಮ ಕಾರ್ಯಕ್ಕೆ ಅನುಕೂಲ ಮಾಡುತ್ತಾರೆ. ದಾಂಪತ್ಯದಲ್ಲಿ ಸ್ವಲ್ಪ ಹೊಂದಾಣಿಕೆ ಕಡಿಮೆಯಾಗಲಿದೆ. ಮಾತು ಕಡಿಮೆ ಮಾಡಿ.
  
ದೋಷ ಪರಿಹಾರ : ಸಪ್ತಶತಿ ಪುಸ್ತಕವನ್ನು ಪಾರಾಯಣ ಮಾಡುವ ಆಸಕ್ತರಿಗೆ ದಾನ ಮಾಡಿ

ಗೀತಾಸುತ.

loader