ರಾಶಿಗೆ ಸಿಗಲಿದೆ ಒಂದು ಶುಭ ಸಮಾಚಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 7:14 AM IST
Special Bhavishya August 4
Highlights

ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

 ರಾಶಿಗೆ ಸಿಗಲಿದೆ  ಒಂದು ಶುಭ ಸಮಾಚಾರ 

ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ಸುಖ ಭೋಜನ, ದಾಂಪತ್ಯದಲ್ಲಿ ಹೊಂದಾಣಿಕೆ, ಸಾಮರಸ್ಯ, ರಾಜಕಾರಣಿಗಳಿಂದ ಕ್ಷೇತ್ರ ಸಂಬಂಧಿ ಕೆಲಸಗಳ ಅನುಕೂಲ, ಶುಭ ದಿನವಾಗಿರಲಿದೆ. ಮನಸ್ಸಿನಲ್ಲಿ ಉಲ್ಲಾಸ ಸಂಗಾತಿಯಿಂದ ಸಂತಸದ ಮಾತುಗಳು. ದಶಮ ಅಂಗಾರಕ ದಿಕಗ್ಬಲದಿಂದ ಹೆಚ್ಚು ಅನುಕೂಲ ಮಾಡಲಿದ್ದಾನೆ. ಉತ್ತಮದಿನವಾಗಿದೆ.
  
ದೋಷಪರಿಹಾರ : ಅರ್ಧ ಕೆಜಿ ತೊಗರಿ ಬೇಳೆಯನ್ನು ದಾನ ಮಾಡಿ.

ವೃಷಭ : ಆತ್ಮೀಯರೇ ಇಂದು ನಿಮ್ಮ ಸಹೋದರಿ ನಿಮ್ಮ ಹಣ ವ್ಯಯಕ್ಕೆ ಕಾರಣವಾಗಬಹುದು, ನಿಮ್ಮ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯೂ ಆಗಬಹುದು. ಮಂಡಿ ಹಾಗು ತೊಡೆ ಭಾಗದಲ್ಲಿ ನೋವಾಗುವ ಸಾಧ್ಯತೆ ಇರುತ್ತದೆ. ವೈದ್ಯರನ್ನು ಭೇಟಿ ಮಾಡಿ. 

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ನಿಮ್ಮ ಆರೋಗ್ಯ ಸುಧಾರಣೆ ಮಾಡುತ್ತದೆ.

ಮಿಥುನ : ಆತ್ಮೀಯರೇ ಇಂದು ನಿಮ್ಮ ಹಣ ದ್ವಿಗುಣವಾಗಿ ಬರಲಿದೆ. ನೀರಿನ ವ್ಯಾಪಾರಿಗಳಿಗೆ  ವಿಶೇಷ ಲಾಭ, ನಿಮ್ಮ ಮಕ್ಕಳು ನಿಮಗೆ ಸಹಾಯಕವಾಗುತ್ತಾರೆ. ಮುಖದಲ್ಲಿ ಮಚ್ಚೆ ಅಥವಾ ಗಾಯ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ಸ್ವಲ್ಪ ಮಾತಿನ ಘರ್ಷಣೆಯೂ ಆಗಬಹುದು ಎಚ್ಚರವಾಗಿರಿ.

ದೋಷ ಪರಿಹಾರ : ಮಹಾನಾರಾಯಣೋಪನಿಷತ್ ಮಂತ್ರವನ್ನು ಪಾರಾಯಣ ಮಾಡಿಸಿ.

ಕಟಕ : ಇಂದು ನಿಮ್ಮ ಉದ್ಯೋಗದಲ್ಲಿ ಸ್ತ್ರೀಯರ ಸಹಕಾರ, ಪ್ರಶಂಸೆ ಹಾಗೂ ಗೌರವ ಲಭ್ಯವಾಗಲಿದೆ. ದಾಂಪತ್ಯದಲ್ಲಿ ಸ್ವಲ್ಪಮಟ್ಟಿಗೆ ವಿರಸ ಭಿನ್ನಾಭಿಪ್ರಾಯಗಳು ಮೂಡಬಹುದು. ಮಾನಸಿಕವಾಗಿ ನೀವು ಎದೆಗುಂದುವ ಸಾಧ್ಯತೆಯೂ ಇದೆ. ದುರ್ಗಾ ದೇವಿ ದರ್ಶನ ಮಾಡಿ
  
ದೋಷ ಪರಿಹಾರ : ದೇವಿ ದೇವಸ್ಥಾನಕ್ಕೆ ಹಾಲನ್ನು ಸಮರ್ಪಣೆ ಮಾಡಿ ಅಥವ ಬಿಳಿ ವಸ್ತ್ರ ದಾನ ಮಾಡಿ

ಸಿಂಹ : ಆತ್ಮೀಯರೇ, ವ್ಯಯಾಧಿಪತಿಯಾದ ಚಂದ್ರನಿಂದ ನಿಮ್ಮ ಭಾಗ್ಯ ನಷ್ಟವಾಗುವ ದಿನ, ಆದರೆ ಚಂದ್ರನಿಗೆ ಗುರು ದೃಷ್ಟಿಯೂ ಇದೆ. ಅದೇ ಚಂದ್ರನಿಗೆ ಕುಜ ದೃಷ್ಟಿಯೂ ಇದೆ. ಹೋದ ಫಲ ಹಾಗೆಯೇ ಮರಳಿ ಬರುತ್ತದೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಶುಭದಿನವಾಗಿರಲಿದೆ.


ದೋಷ ಪರಿಹಾರ : ಶಿವ ಹಾಗೂ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಧನಾಗಮನ, ನಿಮ್ಮ ಬಂಧುಗಳ ಆಗಮನವೂ ಇದೆ, ಪ್ರಯಾಣದಲ್ಲಿ ಓರ್ವ ವೃದ್ಧರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಸಂಭವಿಸುತ್ತದೆ. ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ.
  
ದೋಷ ಪರಿಹಾರ : 3 ಬಾರಿ ವಿಷ್ಣು ಸಹಸ್ರನಾಮ ಪಠಿಸಿ

ತುಲಾ :  ಆತ್ಮೀಯರೇ ನಿಮ್ಮ ದೇಹದಲ್ಲಿ ಚೇತರಿಕೆ, ಆರೋಗ್ಯ ವೃದ್ಧಿ ಕೂಡ ಇದೆ. ಆದರೆ ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ, ಜೊತೆಗೆ ನಿಮ್ಮ ಮನೆ  ಜಾಗದಲ್ಲಿ ಅಥವಾ ನಿಮ್ಮ ವಾಹನದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಗಣಪತಿ ದರ್ಶನ ಮಾಡಿ
 

ದೋಷ ಪರಿಹಾರ : ಗಣಪತಿಗೆ ಗರಿಕೆ ಸಮರ್ಪಣೆ ಮಾಡಿ

ವೃಶ್ಚಿಕ : ಆತ್ಮೀಯರೇ,  ನಿಮ್ಮ ದಿನ ಆನಂದವಾಗಿರುತ್ತದೆ. ಮನೆ ಕೆಲಸಗಳಲ್ಲಿ ನಿರಾಸಕ್ತಿ ಇದ್ದು ನಿಮ್ಮ ಸುಖ ಸಂತೋಷಕ್ಕೆ ಹೆಚ್ಚು ಗಮನ ಕೊಟ್ಟು ವಿಹಾರ ಹಾಗೂ ಮನೋರಂಜನೆಗಳಲ್ಲಿ ಭಾಗಿಯಾಗುತ್ತೀರಿ. 

ದೋಷ ಪರಿಹಾರ : ಸುಬ್ರಹ್ಮಣ್ಯನಿಗೆ ಜೇನು ಸಮರ್ಪಣೆ ಮಾಡಿ.

ಧನಸ್ಸು : ಆತ್ಮೀಯರೇ ನಿಮ್ಮ ಮಗಳು ನಿಮ್ಮ ಸಹಕಾರಕ್ಕೆ ಬರುತ್ತಾಳೆ, ನಿಮ್ಮ ಆದಾಯ ವೃದ್ಧಿಸುತ್ತದೆ, ನಿಮ್ಮ ಅಕ್ಕಪಕ್ಕದವರು ನಿಮ್ಮ ಅನುಕೂಲಕ್ಕೆ ಬರುತ್ತಾರೆ. ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ ಮಾಡುವ ಸಮಯ ಒದಗಲಿದೆ.

ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ ಸಾಧ್ಯವಾಗದೇ ಇದ್ದರೆ ಸಾಯಿಬಾಬಾ ದರ್ಶನ ಮಾಡಿ.

ಮಕರ :  ಆತ್ಮೀಯರೇ ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ, ನಿಮ್ಮ ಮನೆ ಜಾಗದಲ್ಲಿ ನೀರು ಲಭ್ಯವಾಗುತ್ತದೆ, ಜೊತೆಗೆ ಉದ್ಯೋಗದಲ್ಲಿ ಅಭಿವೃದ್ಧಿ ಲಾಭವೂ ಇರಲಿದೆ. ಉತ್ತಮದಿನವಾಗಿರಲಿದೆ.
  
ದೋಷ ಪರಿಹಾರ : ಶನಿ ದೇವರಿಗೆ ಎಳ್ಳು ದಾನ ಮಾಡಿ

ಕುಂಭ : ಆತ್ಮೀಯರೇ ನಿಮ್ಮ  ಆದಾಯ ವೃದ್ಧಿಯಾಗಲಿದೆ. ನಿಮ್ಮ ಸಹೋದರಿ ಸಮಾನರು ನಿಮಗೆ ಅನುಕೂಲ ಮಾಡುವುದಕ್ಕಿಂತ ಕಿರಿಕಿರಿ ಮಾಡುತ್ತಾರೆ. ಮನೆಯಲ್ಲಿ ಉತ್ತಮ ಸಹಕಾರ, ಉದ್ಯೋಗದಲ್ಲೂ ಭರವಸೆ ಮೂಡುವ ದಿನಗಳು. ಗೆಳೆಯರಿಂದ ಸಹಕಾರ ದೊರೆಯುವ ದಿನ.

ದೋಷ ಪರಿಹಾರ :  ಶಿವನಿಗೆ ಜಲಾಭಿಷೇಕ ಮಾಡಿಸಿ.
  
ಮೀನ : ಮಿತ್ರರೇ ಇಂದು ನಿಮ್ಮ ಪಾಲಿದೆ ಧನಾಗಮನ, ಕುಟುಂಬ ಸೌಖ್ಯ, ತಾಯಿ ಕಡೆಯಿಂದ ಅನುಕೂಲ, ಮಕ್ಕಳಿಂದಲೂ ಧನ ಲಾಭ, ಉತ್ತಮ ದಿನವಾಗಿರಲಿದೆ. ನಿಮ್ಮ ವ್ಯಾಪಾರದಲ್ಲಿ ಮಾತ್ರ ಸ್ತ್ರೀಯರಿಂದ ತೊಂದರೆ ಹಾಗೂ ನಷ್ಟ ಸಂಭವ. ಎಚ್ಚರವಾಗಿರಬೇಕು.
  
ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿಸಿ

ಗೀತಾಸುತ.

loader