ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕರ್ಕಟಕ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಆತ್ಮೀಯರೇ ಇಂದು ನಿಮ್ಮ ಸಹೋದರಿಯಿಂದ ಭಾಗ್ಯೋದಯವಾಗುತ್ತೆ. ನಿಮ್ಮ ದೇಹದಲ್ಲಿ ಉತ್ಸಾಹ ಹೊಮ್ಮಲಿದೆ. ಆದರೆ ಹೃದಯ ಭಾಗದಲ್ಲಿ ತೊಂದರೆ ಕಾಣುತ್ತದೆ. ಹೊಸ ಕಾರ್ಯಗಳನ್ನು ಮಾಡುವ ಆಲೋಚನೆ ಪ್ರಾರಂಭವಾಗಲಿದೆ. ಸ್ವಲ್ಪ ತನೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 
  
ದೋಷಪರಿಹಾರ : ಕುಜ ಆರಾಧನೆ ಮಾಡಿ

ವೃಷಭ : ಆತ್ಮೀಯರೇ  ಇಂದು ನಿಮ್ಮ ಮಿತ್ರರಿಂದ ಹಾಗೂ ನಿಮ್ಮ ಮಾತಿನ ಚಾತುರ್ಯದಿಂದ ಧನ ಲಾಭ ಬರಲಿದೆ. ನಿಮ್ಮ ಗಂಟಲಿನ ಭಾಗದಲ್ಲಿ ಸ್ವಲ್ಪ ನೋವು ಇತ್ಯಾದಿ ತೊಂದರೆ ಕಾಣಿಸಿಕೊಳ್ಳಲಿದೆ. ದುರ್ಗಾ ದೇವಸ್ಥಾನಕ್ಕೆ 5 ಪ್ರದಕ್ಷಿಣೆ ಹಾಕಿ.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳು ದಾನ ಮಾಡಿಬನ್ನಿ.

ಮಿಥುನ : ಆತ್ಮೀಯರೇ ಇಂದು ನಿಮ್ಮ ಮನಸ್ಸು ಚಂಚಲವಾಗಲಿದೆ. ಮಾತಿನಿಂದ ಕಲಹವೂ ಆಗಬಹುದು,  ಆರೋಗ್ಯವೂ ವೃದ್ಧಿಯಾಗಲಿದೆ, ಜೊತೆಗೆ ಸ್ತ್ರೀ ಮೂಲಕ ಧನಪ್ರಾಪ್ತಿ ಹಾಗೂ ಧನ ವ್ಯಯವಾಗಲಿದೆ. ನಿಮ್ಮ ಮಕ್ಕಳಿಂದ ಹಾಗೂ ವಿದೇಶಗಳಿಂದ ಶುಭ ಸುದ್ದಿ ಬರಲಿದೆ. 

ದೋಷ ಪರಿಹಾರ : ನಿಮ್ಮ ಕುಲ ದೇವರಿಗೆ ದೀಪ ಹಚ್ಚಿ.

ಕಟಕ : ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಸಂಜೆವೇಳೆಗೆ ಚೇತರಿಗೆ ಕಾಣಲಿದೆ. ನಿಮ್ಮ ತಂದೆಯಿಂದ ಸಹಾಯ ಹಾಗೂ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಉತ್ತಮರ ಭೇಟಿ ಹಾಗೂ ಸದ್ವಿಚಾರ ಚಿಂತನೆ. ಸ್ತ್ರೀಯರೊಂದಿಗೆ ವಾಗ್ವಾದಗಳಾಗುವ ಸಾಧ್ಯತೆ ಇದೆ.
  
ದೋಷ ಪರಿಹಾರ : ಮನಸ್ಸಿನಲ್ಲಿ 108 ಬಾರಿ ಮಹಾಲಕ್ಷ್ಮೀ ಜಪ ಮಾಡಿ.

ಸಿಂಹ : ಆತ್ಮೀಯರೇ, ಇಂದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ವ್ಯಯವಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮ ಸ್ಥೈರ್ಯ ಸ್ವಲ್ಪ ಮಟ್ಟಿಗೆ ಕುಗ್ಗಲಿದೆ. ಅಂದುಕೊಂಡ ಕಾರ್ಯಗಳು ಸ್ವಲ್ಪ ವಿಳಂಬವಾಗಿ ನಡೆಯಲಿವೆ. ನಿಮ್ಮ ಸಹಾಯಕ್ಕೆ ನಿಮ್ಮ ಅಕ್ಕಪಕ್ಕದವರು ಬರುತ್ತಾರೆ ಎಂದು ನಿರೀಕ್ಷಿಸದಿರುವುದು ಒಳಿತು.

ದೋಷ ಪರಿಹಾರ : ಸೂರ್ಯನಾರಾಯಣ ದರ್ಶನ ಮಾಡಿ

ಕನ್ಯಾ : ಆತ್ಮೀಯರೇ ನಿಮ್ಮ ರಾಶ್ಯಾಧಿಪತಿ ಲಾಭದಲ್ಲಿದ್ದಾನೆ ಹಾಗಾಗಿ ಲಾಭದ ದಿನ ಅಷ್ಟೇ ಅಲ್ಲ ಅಲ್ಲಿ ವ್ಯಯಾಧಿಪತಿಯೂ ಇದ್ದಾನೆ ಹಾಗಾಗಿ ಬಂದ ಲಾಭ ಹಾಗೇ ವ್ಯಯವೂ ಆಗಲಿದೆ. ಸ್ತ್ರೀ ಮೂಲಕ ಧನ ವ್ಯಯ, ಅಂದುಕೊಂಡ ಕಾರ್ಯಗಳು ಸ್ಥಗಿತ.
  
ದೋಷ ಪರಿಹಾರ : ಶ್ರೀನಿವಾಸ ಕಲ್ಯಾಣದಂಥ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ.

ತುಲಾ :  ಆತ್ಮೀಯರೇ ನಿಮ್ಮ ಆರೋಗ್ಯ ಚೇತರಿಕೆಯಾಗಲಿದೆ. ನಿಮ್ಮ ಧನ ಸಮೃದ್ಧವಾಗಲಿದೆ. ಉತ್ತಮರ ಸಹಕಾರ. ಆತ್ಮೀಯ ಸ್ನೇಹಿತರ ಭೇಟಿ. ದಾಂಪತ್ಯದಲ್ಲಿ ಹೊಂದಾಣಿಕೆ ದೂರದ ಊರಿಗೆ ಪ್ರಯಾಣ ಹೊರಡುವ ಚಿಂತನೆ ನಡೆಸಿದ್ದೀರಿ. ಶುಭವಾಗಲಿದೆ. 

ದೋಷ ಪರಿಹಾರ : ಔದುಂಬರ ವೃಕ್ಷಕ್ಕೆ 5 ಪ್ರದಕ್ಷಿಣೆ ಹಾಕಿ.

ವೃಶ್ಚಿಕ : ಆತ್ಮೀಯರೇ,  ನಿಮ್ಮ ಸಹೋದರರು ನಿಮ್ಮ ಸಹಾಯಕ್ಕೆ ಬರುವುದರ ಜೊತೆಗೆ ನಿಮ್ಮ ಪಾಲುದಾರಿಕೆಯಲ್ಲಿ ಭಾಗಿಯಾಗುತ್ತಾರೆ. ಸ್ವಲ್ಪ ಗೊಂದಲವೂ ಇದೆ. ಯಾವುದೇ ಕಾರ್ಯ ಮಾಡುವ ಮುನ್ನ ಗುರು ದರ್ಶನ ಹಾಗೂ ಗುರು ಮಾರ್ಗದರ್ಶನ ಪಡೆಯುವುದು ಉತ್ತಮ.  

ದೋಷ ಪರಿಹಾರ : ಶೃಂಗೇರಿ ಗುರುಗಳ ದರ್ಶನ ಮಾಡಿ.

ಧನಸ್ಸು : ಆತ್ಮೀಯರೇ ನಿಮ್ಮ ಮನಸ್ಸಿಗೆ ಇಂದು ಅಶಾಂತಿ ಯಾವ ಕಾರ್ಯವೂ ಪೂರ್ಣವಾಗಲಿಲ್ಲ ಎಂಬ ಚಿಂತೆ. ನಿಮ್ಮ ದೇಹ ಸ್ವಲ್ಪ ಕೃಷವಾಗಲಿದೆ. ಧನ ಲಾಭದ ಜೊತೆ ಸ್ವಲ್ಪ ವ್ಯಯವೂ ಇದೆ. ವೃಥಾ ಖರ್ಚು ಮಾಡುವ ಸಂದರ್ಭ ಒದಗಬಹುದು.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳುದಾನ ಮಾಡಿ. 

ಮಕರ :  ಆತ್ಮೀಯರೇ ಇಂದು ನಿಮ್ಮ ಯೋಚನೆಯಲ್ಲಿ ದ್ವಂದ್ವ ಭಾವ ಮೂಡುವ ಸಾಧ್ಯತೆ ಇದೆ. ಶುಭ ಕಾರ್ಯಗಳಲ್ಲಿ ಅಥವಾ ಸ್ನೇಹಿತರೊಂದಿಗೆ ಕಲಾಪಗಳಲ್ಲಿ ಭಾಗಿಯಾಗುವ ದಿನವಾಗಿದೆ. ನಿಮ್ಮ ಮನಸ್ಸು ಪ್ರಶಾಂತವಾಗಲಿಕ್ಕೆ ಸೂರ್ಯೋಪಾಸನೆ ಮಾಡಿ.
  
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಭಸ್ಮ ದಾನ ಮಾಡಿ

ಕುಂಭ : ಆತ್ಮೀಯರೇ ನಿಮ್ಮ ಇಷ್ಟದವರೇ ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ. ಮಾನಸಿಕವಾಗಿ ಸ್ವಲ್ಪ ಖಿನ್ನರಾಗುತ್ತೀರಿ. ಅಂದುಕೊಂಡ ಕಾರ್ಯಗಳು ಸಫಲವಾಗುವುದಿಲ್ಲ. ನಿಮ್ಮ ಸ್ನೇಹಿತರ ಸಲಹೆ, ಮಾರ್ಗದರ್ಶನ ಪಡೆಯಿರಿ.

ದೋಷ ಪರಿಹಾರ :  ಓಂ ಭವಾಯ ನಮ: ಮಂತ್ರವನ್ನು 21 ಬಾರಿ ಪಠಿಸಿ
  
ಮೀನ : ಮಿತ್ರರೇ ಇಂದು ನಿಮ್ಮ ತಾಯಿ ನಿಮ್ಮ ಆರೋಗ್ಯ ಕಾಳಜಿ ಮಾಡುತ್ತಾರೆ. ನಿಮ್ಮ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಸ್ವಲ್ಪ ಮಟ್ಟಿಗೆ ಧನಲಾಭವೂ ಇದೆ. ಹೆಂಡತಿಯಿಂದ ಸಹಕಾರ ದೊರೆಯುತ್ತದೆ. ಸಂಗಾತಿಯಲ್ಲಿ ಆಡಿದ ಮಾತು ನಿಮ್ಮ ಮನಸ್ಸಿಗೆ ಹೊಸದಾರಿ ಎಂದೆನಿಸುತ್ತದೆ.
  
ದೋಷ ಪರಿಹಾರ : ಅರಳಿ ವೃಕ್ಷ ದರ್ಶನ, ಪ್ರದಕ್ಷಿಣೆ ಮಾಡಿ

ಗೀತಾಸುತ.