ವಿಶೇಷ ಭವಿಷ್ಯ : ಭಾಗ್ಯೋದಯ ಕಾಣಲಿದೆ ಈ ರಾಶಿಗೆ

ಮೇಷ ರಾಶಿ : ರಾಶ್ಯಾಧಿಪತಿ ಸ್ವಕ್ಷೇತ್ರಕ್ಕೆ ಬಂದಿದ್ದಾನೆ ಹಾಗಾಗಿ ಕಾರ್ಯ ಸಾಧನೆ, ಸಾಹಸ ಕಾರ್ಯಗಳಲ್ಲಿ ಮುನ್ನಡೆ, ಮುಂತಾದ ಶುಭ ಫಲವಿದೆ, ಮನೆ ಖರೀದಿ, ಗೃಹ ನಿರ್ಮಾಣದಂಥ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಶುಭದಿನ. 

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.

ವೃಷಭ : ಮಂಗಳಕಾರ್ಯ ಸಾಗಲಿದೆ, ಮನಸ್ಸಿಗೆ ನೆಮ್ಮದಿ ಆದರೆ ಆರೋಗ್ಯ ಬಾಧೆ ಸ್ವಲ್ಪ ಮಟ್ಟಿಗೆ ಬಾಧಿಸಲಿದೆ, ದಾಂಪತ್ಯದಲ್ಲಿ ಹೊಂದಾಣಿಕೆ, ನಿಮ್ಮ ವ್ಯಾಪಾರ ವೃದ್ಧಿ, ಸಹೋದರ ಭಾವರದಲ್ಲಿ ಸ್ವಲ್ಪ ತೊಂದರೆಗಳಾಗುವ ಸಾಧ್ಯತೆ. ಎಚ್ಚರವಾಗಿರಿ.  

ದೋಷ ಪರಿಹಾರ : ಶ್ರೀಧರ ಸ್ವಾಮಿಗಳ ಪ್ರಾರ್ಥನೆ ಮಾಡಿ.

ಮಿಥುನ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಅಸಾಧ್ಯ, ಆದರೆ ಸ್ವಲ್ಪ ನಿರಾಳತೆಯೂ ಸಿಗಲಿದೆ. ಅನವಶ್ಯಕ ಖರ್ಚುಗಳು, ವ್ಯಾಪಾರದಲ್ಲಿ ಹೊಂದಾಣಿಕೆ, ಸ್ತ್ರೀಯರ ಸಹಕಾರ,  ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ.

ದೋಷ ಪರಿಹಾರ : ಹರಿಹರ ಪ್ರಾರ್ಥನೆ ಮಾಡಿ 

ಕಟಕ : ದೇಹದಲ್ಲಿ ಸ್ವಲ್ಪ ಬಾಧೆ ಕಾಣಿಸಿಕೊಳ್ಳುತ್ತದೆ, ಆದರೆ ಮನಸ್ಸಿಗೆ ಸಮಾಧಾನವಾಗುವ ಮಾತಾಡುತ್ತಾರೆ ನಿಮ್ಮ ಸಂಗಾತಿ. ಮಾತಿನಿಂದ ಗೆಲ್ಲುವ ದಿನ,  ಕೆಲ ನಿರ್ಧಾರಗಳು ನಿಮ್ಮನ್ನು  ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ. 

ದೋಷ ಪರಿಹಾರ : ಲಲಿತಾ ದೇವಿ ಸ್ಮರಣೆ ಮಾಡಿ. 

ಸಿಂಹ : ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಲಿದೆ, ಮಾತಿನಿಂದ ತೊಂದರೆ, ಒಂದು ಗಂಭೀರ ಸಮಸ್ಯೆಯಿಂದ ನಿಮ್ಮ ಆತ್ಮ ಶಕ್ತಿ ಕುಂದಿಹೋಗಲಿದೆ. ಧನವ್ಯಯ, ಸ್ತ್ರೀಯರಿಂದ ಸ್ವಲ್ಪ ಗಂಭೀರ ಸಮಸ್ಯೆ ಉಂಟಾಗಲಿದೆ. ಮಾತಿನಲ್ಲಿ ಎಚ್ಚರವಿರಲಿ.

ದೋಷ ಪರಿಹಾರ : ಶಿವನಿಗೆ ಜಲಾಭಿಷೇಕ ಮಾಡಿಸಿ.  

ಕನ್ಯಾ : ನಿಮ್ಮ ಮನೆಯಲ್ಲಿ  ಹಾಗೂ ಕುಟುಂಬದವರಲ್ಲಿ ಭಿನ್ನಾಭಿಪ್ರಾಯ, ಪ್ರಯಾಣ ಸಂದರ್ಭದಲ್ಲಿ ಸ್ತ್ರೀಯರಿಂದ  ಸಹಾಯ, ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ದೇವಸ್ಥಾನ ದರ್ಶನ. 
  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

ತುಲಾ :  ಧನಾಗಮನ, ಗುರು ವಚನದಿಂದ ಬದುಕು ಉತ್ತಮ ಮಾರ್ಗಕ್ಕೆ ಬರಲಿದೆ, ಸಹೋದರಿ ನಿಮ್ಮ ಜಗಳಕ್ಕೆ ಕಾರಣಳಾಗಬಹುದು, ಯಾವ ಭರವಸೆಯನ್ನೂ ಕೊಡಬೇಡಿ. ಉತ್ತಮರ ಭೇಟಿ, ಅನುಕೂಲದ ದಿನ.

ದೋಷ ಪರಿಹಾರ : ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ. 

ವೃಶ್ಚಿಕ : ಸ್ತ್ರೀಯರೊಡನೆ ಮಾತನಾಡುವಾಗ ಎಚ್ಚರವಿರಲಿ, ನಿಮ್ಮ ಮಾತು ಪ್ರಮಾದವನ್ನೇ ತರಬಹುದು, ಅನ್ಯರ ಸಹಾಯ ಬೇಡುವ ಸಾಧ್ಯತೆ ಇದೆ, ನಿಮ್ಮ ಆರೋಗ್ಯ ವೃದ್ಧಿಯಾಗಲಿದೆ, ಉತ್ತಮ ದಿನ ಹೆದರುವ ಅವಶ್ಯಕತೆ ಇಲ್ಲ. 

ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ಧನಸ್ಸು : ಕಾಲಿನ ಭಾಗದಲ್ಲಿ ಹಾಗೂ ಗುಹ್ಯ ಭಾಗದಲ್ಲಿ ತೊಂದರೆ ಕಾಣಿಸಲಿದೆ, ಮಾತಿನಲ್ಲಿ ತೊಡಕು, ಸಹೋದರಿ ಸಹಾಯಕ್ಕೆ ಬರುವುದಿಲ್ಲ, ನಿಮ್ಮ ಪ್ರತಿಭೆಯಿಂದ ಸಾಹಸಕಾರ್ಯ ಮಾಡುತ್ತೀರಿ. 

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಮಕರ :  ರಾಶಿಯಲ್ಲಿರುವ ರವಿ ಬುಧರ ಯುತಿಯಿಂದ ಪ್ರಶಂಸೆ, ಆದರೆ ತಂದೆ ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಲಿದೆ. ಕೊಟ್ಟ ಸಾಲ ಮರಳಿ ಬರಲಿದೆ, ವಾಹನ ಖರೀದಿ, ಹಾಗೂ ಮನೆ ಖರೀದಿ ಸಾಧ್ಯತೆ. 
  
ದೋಷ ಪರಿಹಾರ : ಶಿವ ಪ್ರಾರ್ಥನೆ ಮಾಡಿ 

ಕುಂಭ : ಸುಗ್ರಾಸ ಭೋಜನ, ಸಹೋದರರ ಸಹಕಾರ, ದಾಂಪತ್ಯದಲ್ಲಿ ವಿರಸ, ವ್ಯಾಪಾರದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ. ಆದರೆ ಧನ ಸಹಾಯ ಹಾಗೂ ಆರ್ಥಿಕ ಪ್ರಗತಿ ಕಾಣಲಿದ್ದೀರಿ. ಸಮಧಾನದ ದಿನ.

ದೋಷ ಪರಿಹಾರ :  ನವ ಧಾನ್ಯ ದಾನ ಮಾಡಿ
  
ಮೀನ :  ಉತ್ತಮ ದಿನ, ಭಾಗ್ಯೋದಯವಾಗುವ ಕಾಲ, ಧನಾಗಮನ, ಮನೆ ಹಾಗೂ ಮುಖ್ಯ ಕಾಗದ ಪತ್ರಗಳ ಲಭ್ಯವಾಗುತ್ತವೆ. ಕುಟುಂಬ ಸೌಖ್ಯ, ಸಮಾಧಾನದ ದಿನ. ಚಿಂತೆಗಳು ದೂರವಾಗುತ್ತವೆ.  
  
ದೋಷ ಪರಿಹಾರ : ಕಡಲೆ ಕಾಳು ದಾನ ಮಾಡಿ