ಮೇಷ ರಾಶಿ : ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು, ನಿಮ್ಮ ಆರೋಗ್ಯದಲ್ಲೂ ಸ್ವಲ್ಪ ವ್ಯತ್ಯಯ, ಸಂಗಾತಿಯಿಂದ ಸಹಾಯ, ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ನಿರೀಕ್ಷೆಯ ಫಲ ಸಿಗದು. 
ದೋಷಪರಿಹಾರ : ಆರೋಗ್ಯ ವೃದ್ಧಿಗಾಗಿ ಸೂರ್ಯೋಪಾಸನೆ ಮಾಡಿ

ವೃಷಭ : ನಿಮ್ಮ ಆರೋಗ್ಯ ವ್ಯತ್ಯಯವಾಗಬಹುದು, ನಂಬಿದವರಿಂದ ವ್ಯಾಪಾರದಲ್ಲಿ ಅನುಕೂಲತೆಗಳು, ಸ್ನೇಹಿತರಿಂದ, ಸಂಗಾತಿಯಿಂದ ಸಹಾಯದ ದಿನ, ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ, ಸಮಾಧಾನದ ಫಲಗಳು.  
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ

ಮಿಥುನ : ದಾಂಪತ್ಯ ಕಲಹ, ವ್ಯಾಪಾರದಲ್ಲೂ ನಷ್ಟ, ಕಳ್ಳಕಾಕರರ ತೊಂದರೆ, ತಾಯಿ ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಸ್ವೀಕರಿಸಿ, ಮಕ್ಕಳಿಂದ ಸ್ವಲ್ಪ ಅಸಮಧಾನ.  

ದೋಷ ಪರಿಹಾರ : ವಿಷ್ಣುಸಹಸ್ರನಾಮ ಪಠಿಸಿ

ಕಟಕ : ದೇಹದಲ್ಲಿ ಸ್ವಲ್ಪ ತೊಂದರೆ ಸಂಭವ, ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಮನೆಯಲ್ಲಿ ಸ್ವಲ್ಪ ತೊಂದರೆ ಆದರೆ ಅನುಕೂಲವೂ ಇದೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ, ಕಾಲಿನ ಭಾಗಕ್ಕೆ ಪೆಟ್ಟಾಗಬಹುದು. ಓಡಾಡುವಾಗ ಎಚ್ಚರವಾಗಿರಿ.
  
ದೋಷ ಪರಿಹಾರ : ಲಕ್ಷ್ಮೀ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ 

ಸಿಂಹ : ಅಗ್ನಿ ಅವಘಡ ಸಂಭವ, ಆದಷ್ಟು ಜಾಗ್ರತೆ ಇರಲಿ, ಸ್ತ್ರೀ ಮೂಲಕ ಧನಾಗಮನ, ಸಹೋದರ ಸಹೋದರಿಯರಿಂದ ಅನುಕೂಲ, ಗೃಹ ಹಾಗೂ ವಾಹನ ಲಾಭ, ಮಕ್ಕಳಿಂದ ಸ್ವಲ್ಪ ಮನಸ್ಸಿಗೆ ಬೇಸರ.  

ದೋಷ ಪರಿಹಾರ : ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ : ಮನಸ್ಸಿಗೆ ಸಮಾಧಾನ, ಲಾಭದ ದಿನವಾಗಿರಲಿದೆ, ತಂದೆಯಲ್ಲಿ ಅಸಮಧಾನ, ವಾಹನದಲ್ಲಿ ತೊಂದರೆ, ಓಡಾಡುವಾಗ ಎಚ್ಚರ ಬೇಕು, ನಿಮ್ಮ ಆರೋಗ್ಯದಲ್ಲಿ ವ್ಯತ್ಯವೂ ಇದೆ, ಸುಬ್ರಹ್ಮಣ್ಯ ದರ್ಶನದಿಂದ ಮನಸ್ಸಿಗೆ ಸಮಾಧಾನ. 
  
ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಮಾಡಿ

ತುಲಾ :  ಮನಸ್ಸಿಗೆ ಅಸಮಧಾನ, ದಾಂಪತ್ಯ ಕಲಹ, ಕೋಟ್ರು ಕಚೇರಿಯಲ್ಲಿ ಸಮಸ್ಯೆಗಳು, ಭೂಮಿ ಖರೀದಿಯಲ್ಲಿ ತೊಂದರೆಯಾಗಬಹುದು, ಧನಲಾಭವಿದೆ. ಅವರೆ ಕಾಳು ದಾನ ಮಾಡಿ.

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ 

ವೃಶ್ಚಿಕ :  ಆರೋಗ್ಯ ವೃದ್ಧಿ, ಕಾರ್ಯ ಸಾಧನೆ, ಹಣ ಕಳೆದುಹೋಗುವ ಸಾಧ್ಯತೆ ಇದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆ ಹಾಗೂ ತೊಂದರೆಯಾಗುವ ಸಾಧ್ಯತೆ ಇದೆ. ಮಾತು ಕಡಿಮೆ ಮಾಡಿ. 

ದೋಷ ಪರಿಹಾರ : ನಾಗ ದೇವರಿಗೆ ಕ್ಷೀರಾಭಿಷೇಕ ಮಾಡಿಸಿ  

ಧನಸ್ಸು :  ಆರೋಗ್ಯದಲ್ಲಿ ವ್ಯತ್ಯಯ, ಧನ ಸ್ಥಾನದ ಕುಜ ಹಾಗೂ ಕೇತು ಮಾಂದಿಯರು ಸಾಹಸ ಕಾರ್ಯದಲ್ಲಿ ತೊಡಕು, ವ್ಯವಹಾರಲ್ಲೂ ತೊಡಕು ಮಾಡುತ್ತದೆ, ಅಷ್ಟಮದ ರಾಹು ಆರೋಗ್ಯದಲ್ಲಿ ತೀವ್ರ ತೊಂದರೆ ಉಂಟುಮಾಡಬಹುದು.

ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ.

ಮಕರ :  ಸಪ್ತಮದ ರಾಹು ವ್ಯಾಪಾರದಲ್ಲಿ , ದಾಂಪತ್ಯದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ, ಭಾಗ್ಯ ಸ್ಥಾನದ ಚಂದ್ರ ಅದೃಷ್ಟಕ್ಕೆ ಕತ್ತರಿ ಹಾಕುತ್ತಾನೆ. ಉದ್ಯೋಗದಲ್ಲಿ ಯಶಸ್ಸು. ಉತ್ತಮ ಸಹಕಾರ. 
  
ದೋಷ ಪರಿಹಾರ : ನಾಗ ಪ್ರಾರ್ಥನೆ ಮಾಡಿ 

ಕುಂಭ :   ಅತ್ಯುತ್ತಮ ದಿನ, ಉದ್ಯೋಗ ವೃದ್ಧಿ, ಅಧಿಕಾರದಲ್ಲಿ ಯಶಸ್ಸು, ಲಾಭದಾಯಕ ದಿನವೂ ಆಗಿದೆ. ವಸ್ತ್ರ ವ್ಯಾಪಾರಿಗಳಿಗೆ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭದ ದಿನವಾಗಿರಲಿದೆ.   

ದೋಷ ಪರಿಹಾರ : ಶುಕ್ರಗ್ರಹ ಪ್ರಾರ್ಥನೆ ಮಾಡಿ 
  
ಮೀನ : ಅದೃಷ್ಟದ ದಿನ, ನಿಮ್ಮ ಭಾಗ್ಯದ ಬಾಗಿಲು ತೆಗೆದಂತೆಯೇ. ಸಕಲ ಕಾರ್ಯಗಳಲ್ಲೂ ಸಿದ್ಧಿ, ಕುಟುಂಬ ವೃದ್ಧಿ, ಭೂಮಿ ಲಾಭ. ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ಜಾಗ್ರತೆಯಿಂದ ಮಾತನಾಡಿ.  
  
ದೋಷ ಪರಿಹಾರ : ಅರಳಿ ವೃಕ್ಷ ಪ್ರದಕ್ಷಿಣೆ ಮಾಡಿ

ವಾಞ್ಮಯೀ.