ಈ ರಾಶಿಗೆ ಶುಭ ಸಮಯ ಎದುರಾಗಲಿದೆ

23-11-18 - ಶುಕ್ರವಾರ

ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ಪೌರ್ಣಮಿ
ಕೃತ್ತಿಕಾ ನಕ್ಷತ್ರ 

ರಾಹುಕಾಲ  10.40 ರಿಂದ 12.06
ಯಮಗಂಡ ಕಾಲ  02.57 ರಿಂದ 04.23
ಗುಳಿಕ ಕಾಲ  07.49 ರಿಂದ 09.14
 
ಮೇಷ ರಾಶಿ : ಮನಸ್ಸಿಗೆ ಅಸಮಧಾನ, ಅಗ್ನಿ ಅವಘಡ ಸಂಭವ, ಹೃದಯ ಭಾಗದಲ್ಲಿ ತೊಂದರೆ, ಸ್ತ್ರೀಯರಿಂದ-ವ್ಯಾಪಾರ ಪಾಲುದಾರರಿಂದ ಅನುಕೂಲದ ದಿನ, ಧನ ಲಾಭವಿದೆ. ಕಾರ್ಯ ಪ್ರಾರಂಭದ ಮುನ್ನ ದುರ್ಗಾ ದೇವಿಗೆ 5 ನಮಸ್ಕಾರ ಮಾಡಿ.

ದೋಷಪರಿಹಾರ : ದುರ್ಗಾ ಮಂಪ್ರ ಪಠಿಸಿ

ವೃಷಭ : ಆರೋಗ್ಯ ವೃದ್ಧಿ, ಸ್ನೇಹಿತರಿಂದ ದೊಡ್ಡಮಟ್ಟದ ಸಹಾಯವನ್ನು ನಿರೀಕ್ಷಿಸಬಹುದು, ದಾಂಪತ್ಯದಲ್ಲಿ ಆತ್ಮೀಯತೆ ಹೆಚ್ಚುತ್ತದೆ, ಗುರುಹಿರಿಯರ ಆಶೀರ್ವಾದದಿಂದ ನಿಮ್ಮ ಕಾರ್ಯ ವೃದ್ಧಿ, ವ್ಯಾಪಾರದಲ್ಲಿ ಹಿರಿಯರ ಸಲಹೆ, ಸಹಾಯ ದೊರೆಯಲಿದೆ.
      
ದೋಷ ಪರಿಹಾರ : ಗಣಪತಿ ಪ್ರಾರ್ಥನೆ ಮಾಡಿ

ಮಿಥುನ : ನೀವು ಮಾಡುವ ಪಾಲುದಾರಿಕೆ ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ಸ್ನೇಹಿತರಲ್ಲಿ ವಾಗ್ವಾದಗಳಾಗುವ ಸಂದರ್ಭ ಎದುರಾಗಲಿದೆ, ಉನ್ನತ ಕಾರ್ಯ ಸಾಧನೆಗೆ ಮೂರ್ಖರ ಅಡ್ಡಿ. 
ದೋಷ ಪರಿಹಾರ : ಹನುಮಂತ ದೇವರ ಸ್ಮರಣೆ ಮಾಡಿ

ಕಟಕ : ಮಕ್ಕಳಿಂದ ನಿಮ್ಮ ಹೆಸರು ಬೆಳಗಲಿದೆ, ಪ್ರತಿಭಾ ಪ್ರದರ್ಶನ ಹಾಗೂ ಪ್ರಶಂಸೆ, ಉತ್ತಮರ ಸಹವಾಸದಿಂದ ಮನ:ಶಾಂತಿ, ಪ್ರಯಾಣ ಬೆಳೆಸುವ ಸಾಧ್ಯತೆ, ದಾಂಪತ್ಯದಲ್ಲಿ ಸಣ್ಣಮಟ್ಟಿಗೆ ಬಿರುಕು. ಲಲಿತಾ ಉಪಾಸನೆ ಮಾಡಿ 
  
ದೋಷ ಪರಿಹಾರ : ಲಲಿತಾ ಸಹಸ್ರನಾಮ ಪಠಿಸಿ

ಸಿಂಹ :  ಮಿತ್ರರಲ್ಲಿ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ತಂದೆಯ ಸಹಾಯ ಹಾಗೂ ಮಾರ್ಗದರ್ಶನ ಸಿಗಲಿದೆ, ಹೆಂಡತಿಯ ಮಾತು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ. ಮಹಾ ಸಾಹಸಕ್ಕೆ ಕೈ ಹಾಕುವ ಮನಸ್ಸಾಗಲಿದೆ. ಅನುಕೂಲದ ದಿನ.

ದೋಷ ಪರಿಹಾರ : ಸೂರ್ಯ ನಮಸ್ಆಕರ ಮಾಡಿ.

ಕನ್ಯಾ : ಸ್ತ್ರೀಯರಿಂದ ಅನುಕೂಲ, ಉತ್ತಮ ಚಿಂತೆನೆಗಳು ಮೂಡುತ್ತವೆ, ಗುರುಹಿರಿಯರ ಸಲಹೆಯಿಂದ ಧನಾಗಮನ, ಮನೆಯಲ್ಲಿ ಮಂಗಲಕರ ವಾತಾವರಣ, ಪೂಜಾದಿ ಕಾರ್ಯಗಳ ಸಂಭ್ರಮ. 
  
ದೋಷ ಪರಿಹಾರ : ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿಸಿ

ತುಲಾ : ಮನೆಯಲ್ಲಿ ನಿಮ್ಮ ಮಾತಿಗೆ ಗೌರವ ಸಿಗಲಿದೆ, ಊರವರ ಸಹಾಯಕ್ಕೆ ನಿಮ್ಮ ಮಾರ್ಗದರ್ಶನ, ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ, ನಿಮ್ಮ ಅನುಕೂಲಕ್ಕಾಗಿ ನಿಮ್ಮ ಕಾರ್ಯ ಸಾಧನೆಗಾಗಿ ಗಣಪತಿ ಉಪಾಸನೆ ಮಾಡಿ.  

ದೋಷ ಪರಿಹಾರ : ಗಣೇಶ ಅಥರ್ವಶೀರ್ಷ ಮಂತ್ರ ಶ್ರವಣ ಮಾಡಿ

ವೃಶ್ಚಿಕ :  ಹಿರಿಯರು ನಿಮ್ಮ ಕಾರ್ಯ ಸಾಧನೆಗೆ ಪ್ರಶಂಸೆ ಮಾಡುತ್ತಾರೆ, ಮೂರು ಜನರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗಲಿದೆ, ಉದ್ಯೋಗಾವಕಾಶ ಲಭ್ಯವಾಗಲಿದೆ, ವಿದೇಶ ಪ್ರಯಾಣದ ಸಾಧ್ಯತೆ.     

ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ

ಧನಸ್ಸು :  ನಿಮ್ಮ ಮನೆಯಲ್ಲಿ ವಸ್ತು ಕಳವು, ಚಿಂತೆಯಿಂದ ಬಳಲುತ್ತೀರಿ, ನಿಮ್ಮ ಸಹೋದರರ ಸಹಕಾರ ಇಲ್ಲವಾಗುತ್ತದೆ, ಸಣ್ಣಮಟ್ಟಿಗೆ ಕಲಹವೂ ಉಂಟಾಗಬಹುದು. ಆಲಸ್ಯದಿಂದಾಗಿ ನಿಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ. 

ದೋಷ ಪರಿಹಾರ : ಆಂಜನೇಯ ಪ್ರಾರ್ಥನೆ ಮಾಡಿ

ಮಕರ : ವೃಥಾ ಧನವ್ಯಯ, ಆದರೆ ಒಂದು ಗುರುತರ ಜವಾಬ್ದಾರಿ ನಿಮಗೆ ವಹಿಸಲಾಗುವ ದಿನ, ಲಾಭದ ದಿನವಾಗುರುತ್ತದೆ, ಮಿಶ್ರಫಲದ ದಿನವಾಗಿರಲಿದೆ, ಹಿರಿಯರ ಭೇಟಿ ಹಾಗೂ ಅನುಕೂಲ ದಿನವಾಗಿರಲಿದೆ. 
  
ದೋಷ ಪರಿಹಾರ : ಮೃತ್ಯಂಜುಯ ಪ್ರಾರ್ಥನೆ ಮಾಡಿ

ಕುಂಭ :   ಹಣಕ್ಕಾಗಿ ಅನ್ಯ ಮಾರ್ಗ ಬಳಸುವ ಮನಸ್ಸಾಗುತ್ತದೆ, ವೃಥಾ ಸಮಸ್ಯೆಯನ್ನು ಎಳೆದುಕೊಳ್ಳಬೇಡಿ, ನಿಮ್ಮ ಕರ್ತವ್ಯದಲ್ಲಿ ನಿಷ್ಠೆ ಇದ್ದರೂ ನಿಮ್ಮ ಉದ್ಯೋಗ ಮಿತ್ರರು ನಿಮ್ಮನ್ನು ದೂಷಿಸುತ್ತಾರೆ. ತಾಳ್ಮೆ ಇರಲಿ.

ದೋಷ ಪರಿಹಾರ : ದುರ್ಗಾ-ವಿನಾಯಕ ದರ್ಶನ ಮಾಡಿ
  
ಮೀನ : ಮನಸ್ಸಿಗೆ ಸಮಾಧಾನ, ಉತ್ತಮರ ಭೇಟಿ, ಆರೋಗ್ಯ ವೃದ್ಧಿ, ಸಮಸ್ಯೆ ನಿವಾರಣೆಗೆ ಹಿರಿಯರ ಮಾರ್ಗದರ್ಶನ, ಪ್ರವಾಸ ಹೊರಡುವ ಆಲೋಚನೆ, ಅನುಕೂಲವಾತಾವರಣ. ಉತ್ತಮ ದಿನವಾಗಿರಲಿದೆ. 
  
ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ

ವಾಞ್ಮಯೀ.