ಮೇಷ ರಾಶಿ : ನಿಮ್ಮ ರಾಶಿಗೆ ರಾಶ್ಯಾಧಿಪತಿ ದೃಷ್ಟಿ ಇರುವುದರಿಂದ ಸ್ವಶ್ರಮದಿಂದ ಕಾರ್ಯ ಸಾಧನೆ, ನಿಮ್ಮ ಸಂಗಾತಿ ಸಹಕಾರ ಸಿಗಲಿದೆ. ಆದರೆ ತಂದೆಯವರು ಹಾಗೂ ನಿಮ್ಮ ಮಡದಿಯ ನಡುವೆ ಭಿನ್ನಾಭಿಪ್ರಾಯಬರುವ ಸಾಧ್ಯತೆ ಇದೆ. ಎಚ್ಚರವಾಗಿ ಮಾತನಾಡಿ 
ಪರಿಹಾರ - ದುರ್ಗಾ ದೇವಿಗೆ ಕುಂಕುಮಾರ್ಚನೆ ಮಾಡಿಸಿ

ವೃಷಭ - ನಿಮ್ಮ ಸಂಗಾತಿ ನಿಮ್ಮ ವ್ಯಾಪಾರದಲ್ಲಿ ಸಹಾಯ ಮಾಡುತ್ತಾರೆ. ಜೊತೆಗೆ ವ್ಯಾಪಾರ ವೃದ್ಧಿಯೂ ಇದೆ. ಗಣಕ ಯಂತ್ರ ವ್ಯಾಪಾರಿಗಳಿಗೆ ಉತ್ತಮ ದಿನ ಆದರೆ ಶತ್ರುಗಳ ಕಾಟ ಇದೆ. ಮನೆಯಲ್ಲಿ ಸಮಾಧಾನವಿರಲಿ. 
ಪರಿಹಾರ - ಬನಶಂಕರಿ ದೇವಿಗೆ ನಿಂಬೆಹಣ್ಣಿನ ಹಾರ ಮಾಡಿಸಿ ಹಾಕಿ

ಮಿಥುನ - ನಿಮ್ಮ ರಾಶಿಯ ಅಧಿಪತಿ ಶತ್ರ ಮನೆಯನ್ನು ಸೇರಿದ್ದಾನೆ. ನೀವು ನಂಬಿದವರೇ ನಿಮ್ಮ ಶತ್ರುಗಳಾಗಬಹುದು, ಸ್ತ್ರೀಯರಿಂದ ಸ್ವಲ್ಪ ಆತಂಕದ ಘಟನೆ. ಕಚೇರಿಯಲ್ಲಿ ಹೆಚ್ಚು ಮಾತನಾಡುವುದು ಬೇಡ. ಅನ್ಯ ಸ್ತ್ರೀಯರಿಂದ ದೂರವಿದ್ದುಬಿಡಿ.
ಪರಿಹಾರ - ದಂಪತಿಗಳಿಗೆ ವಸ್ತ್ರ ದಾನ ಮಾಡಿ

ಕಟಕ - ಕುಟುಂಬದ ಸಲುವಾಗಿ ಧನ ವ್ಯಯ, ನಿಮ್ಮ ಮಾತುಗಳಿಂದ ಧನ ಲಾಭವಾಗಲಿದೆ, ನಿಮ್ಮ ತಾಯಿಯಿಂದ ಕುಟುಂಬದಲ್ಲಿ ಮಹತ್ತರ ಬದಲಾವಣೆ, ಸ್ತ್ರೀಯರಿಂದ ಅನ್ನ ಲಭ್ಯವಾಗಲಿದೆ. ಊಟದಲ್ಲಿ ವ್ಯತ್ಯಯವೂ ಆಗಲಿದೆ.
ಪರಿಹಾರ - ಮೂಕಾಂಬೆ ದರ್ಶನ ಮಾಡಿ

ಸಿಂಹ - ನಿಮ್ಮ ನಿರ್ಧಾರದಲ್ಲಿ ಬದಲಾವಣೆ, ಕೊನೆ ಘಳಿಗೆಯಲ್ಲಿ ಹೊಸ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಹೋದರಿ ನಿಮ್ಮ ಸಹಾಯಕ್ಕೆ ಬರುತ್ತಾರೆ. ಮನೆಕಟ್ಟುವ ಯೋಚನೆ ಬರಲಿದೆ. ಗೃಹಾರಂಭ.
ಪರಿಹಾರ - ಶಿವನಿಗೆ ಗೋಧಿ ಸಮರ್ಪಣೆ ಮಾಡಿ

ಕನ್ಯಾ - ಹಿರಿಯ ಸಹೋದರರ ಸಹಾಯ ದೊರೆಯಲಿದೆ, ನಿಮ್ಮ ಸಂಗಾತಿಯಿಂದ ಅನ್ಯೋನ್ಯ ಭಾವ ಹೆಚ್ಚಲಿದೆ, ವಾಹನದಲ್ಲಿ ಓಡಾಡುವಾಗ ಎಚ್ಚರವಿರಲಿ, ಮನೆಯಲ್ಲಿ ಎಡವಿಬೀಳುವ ಸಾಧ್ಯತೆ ಇದೆ.
ಪರಿಹಾರ - ವಿಷ್ಣುವಿಗೆ ತುಳಸಿ ಹಾರ ಸಮರ್ಪಣೆ ಮಾಡಿ

ತುಲಾ - ನಿಮ್ಮ ಮನೆಯೊಳಗಿನ ಸ್ತ್ರೀಯರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ, ಸಹೋದರರು ಸ್ವಲ್ಪ ಕಿರಿಕಿರಿ ಮಾಡಿ ನಂತರ ಸುಮ್ಮನಾಗುತ್ತಾರೆ, ನಿಮ್ಮ ಸುಖಕ್ಕೆ ಭಂಗ ಬರುವ ಸಾಧ್ಯತೆ ಇದೆ. ಎಚ್ಚರವಾಗಿರಿ.
ಪರಿಹಾರ - ದುರ್ಗಾ ದೇವಿಗೆ ಬೆಲ್ಲ ನಿವೇದನೆ ಮಾಡಿ

ವೃಶ್ಚಿಕ - ನಿಮ್ಮ ರಾಶಿಯಲ್ಲಿರುವ ಗುರು ಬುಧರು ನಿಮ್ಮ ನಿಪುಣತೆಯನ್ನು ಹೆಚ್ಚಿಸಲಿದ್ದಾರೆ. ಆದರೆ ನಿಮಗೆ ಸ್ವಲ್ಪ ಮಟ್ಟಿಗೆ ಶತ್ರುಗಳ ಕಾಟವೂ ಇದೆ. ಆದರೆ ಗುರು ಪ್ರಾರ್ಥನೆಯಿಂದ ಎಲ್ಲವೂ ಸರಿಹೋಗಲಿದೆ.
ಪರಿಹಾರ - ಗುರುವಿಗೆ ವಸ್ತ್ರ ದಾನ ಮಾಡಿ

ಧನಸ್ಸು - ನಿಮ್ಮ ಮನೆಯೊಳಗೆ ಕಿರಿಕಿರಿ, ನೀವಂದುಕೊಂಡದ್ದೇನೂ ಜರುಗುತ್ತಿಲ್ಲ, ಗುರು ಬಲವಿಲ್ಲದ ಕಾರಣ ಮಾನಸಿಕ ಹಿಂಸೆ, ಆದರೆ ಸ್ವಪ್ರಯತ್ನದಿಂದ ಕಾರ್ಯ ಸಾಧನೆಯಾಗಲಿದೆ.
ಪರಿಹಾರ - ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಕರ - ದೈನಂದಿನ ಕಾರ್ಯಗಳಲ್ಲಿ ತೊಡಕು, ಕಚೇರಿಗೆ ಹೊರಡುವ ಮುನ್ನ ಮನೆಯಲ್ಲೇ ವಾಗ್ವಾದ, ಮಾತು ಹಿಡಿತದಲ್ಲಿರಲಿ, ಕಚೇರಿಗೆ ಹೋದಮೇಲೆ ಸಮಾಧಾನ. ಉತ್ತಮ ದಿನವಾಗಿ ಪರಿವರ್ತನೆಯಾಗಲಿದೆ.
ಪರಿಹಾರ - ಶನೈಶ್ಚರನಿಗೆ 11 ನಮಸ್ಕಾರ ಹಾಕಿ

ಕುಂಭ - ನಿಮ್ಮ ಸಾಧನೆಯಿಂದ ಲಾಭ, ಕೀರ್ತಿ ಲಭ್ಯ, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ, ನಿಮ್ಮ ಅನುಕೂಲ ಸಿದ್ಧಿಸುವುದು, ಉತ್ತಮ ದಿನವಾಗಿರಲಿದೆ.
ಪರಿಹಾರ - ಕಪ್ಪು ವಸ್ತ್ರದಲ್ಲಿ ಎಳ್ಳು ಕಟ್ಟಿ ದಾನ ಮಾಡಿ

ಮೀನ - ನಿಮ್ಮ ಭಾಗ್ಯದ ದಿನ ತೆರೆದಿದೆ, ಯಾವುದೇ ಕಾರ್ಯದಲ್ಲಿ ಪ್ರಗತಿ ಕಾಣುತ್ತೀರಿ, ಉತ್ತಮರ ಸಹವಾಸದಿಂದ ಮನಸ್ಸಿಗೆ ನಿರಾಳ, ಹಿರಿಯರಿಂದ ದೊಡ್ಡ ಸಹಾಯ ಲಭಿಸಲಿದೆ. 
ಪರಿಹಾರ - ದತ್ತಾತ್ರೇಯ ಸ್ವಾಮಿಗೆ 5 ಪ್ರದಕ್ಷಿಣೆ ಹಾಕಿ. 

ವಾಞ್ಮಯೀ.