ನಿಮಗಿಂದು ಲಾಭ ಗಳಿಕೆಯ ದಿನ : ಇನ್ನುಳಿದ ರಾಶಿ..?

ಮೇಷ ರಾಶಿ : ಇಂದು ನಿಮಗೆ ಮಕ್ಕಳಿಂದ ಅದರಲ್ಲೂ ಹೆಣ್ಣುಮಕ್ಕಳಿಂದ ಕಿರಿಕಿರಿ. ಶಾಲೆಯಲ್ಲಿ ನಿಮಗೆ ಬೇಸರವಾಗುವಂಥ ಸಮಸ್ಯೆ ಮಾಡಿಕೊಳ್ಳುತ್ತಾರೆ. ಹಿರಿಯ ಮಕ್ಕಳಾದರೆ ಸಂತಾನ ಸಮಸ್ಯೆಯಿಂದ ಬಳಲುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ಮಿತ್ರರಿಗಾಗಿ ಧನವ್ಯಯ.

ದೋಷಪರಿಹಾರ : ಆದಿತ್ಯ ಸ್ತೋತ್ರ ಪಠಿಸಿ

ವೃಷಭ : ವ್ಯಯಾಧಿಪತಿ ಕುಜ ಚಂದ್ರ ಸಹಿತನಾಗಿದ್ದಾನೆ. ಸ್ವಲ್ಪ ಮಾನಸಿಕ ಸಮಸ್ಯೆ ಕಾಡುತ್ತದೆ. ಅಂದುಕೊಂಡ ಕೆಲಸ ಆಗಲಿಲ್ಲವಲ್ಲಾ ಎಂಬ ಬೇಸರ ನಿಮ್ಮನ್ನು ಕಾಡುತ್ತದೆ. ಸಹೋದರರಿಗೆ ಅನುಕೂಲವಾತಾವರಣ, ಸಾಧಾರಣದಿನವಾಗಿರಲಿದೆ.

ದೋಷ ಪರಿಹಾರ : ಅವರೇ ಕಾಳು ದಾನ ಮಾಡಿ. 

ಮಿಥುನ : ದಾಂಪತ್ಯ ಹೊಂದಾಣಿಕೆಯಲ್ಲಿ  ಸಾಮರಸ್ಯ ಕಷ್ಟ, ರೋಗ ನಿವಾರಣೆ, ಉದ್ಯೋಗ ಸ್ಥಳದಲ್ಲಿ  ಬೆಂಕಿ ಅವಘಡ, ತಂದೆಯಿಂದ ಸಹಾಯ, ಮನೋರೋಗ ನಿವಾರಣೆ, ವಾಹನದಲ್ಲಿ ಸ್ವಲ್ಪ ತೊಂದರೆ ಸಾಧ್ಯತೆ.

ದೋಷ ಪರಿಹಾರ : ಶ್ರೀರಾಮ ಧ್ಯಾನ ಮಾಡಿ

ಕಟಕ :  ಧನಲಾಭ, ಸ್ತ್ರೀಯರಿಗಾಗಿ ಸ್ವಲ್ಪ ಧನ ವ್ಯಯ ಮಾಡಬೇಕಾದ ಪ್ರಸಂಗವೂ ಎದುರಾಗುತ್ತದೆ. ನಿಮ್ಮ ಬುದ್ಧಿಶಕ್ತಿಯಿಂದ ನಿಮ್ಮ ನಿಮ್ಮ ಯೋಜನೆ ಸಾಕಾರಗೊಳ್ಳುತ್ತದೆ. ಸ್ವಲ್ಪ ಹೊಟ್ಟೆ ಭಾಗ ಅಥವಾ ಕಿಬ್ಬೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆಹಾರ ವ್ಯತ್ಯಯವಾಗುವ ಸಾಧ್ಯತೆ ಇದೆ. 
  
ದೋಷ ಪರಿಹಾರ : ಲಕ್ಷ್ಮೀ ದೇವಸ್ಥಾನಕ್ಕೆ ಹಾಲು ಸಮರ್ಪಣೆ ಮಾಡಿ

ಸಿಂಹ : ಮಕ್ಕಳಿಂದ ಸ್ವಲ್ಪ ಮಟ್ಟಿಗೆ  ಅಸಮಾಧಾನ, ಪ್ರಯಾಣ ಬೆಳೆಸುವ ಸಾಧ್ಯತೆ ಇದೆ, ಕಾರ್ಯ ಸ್ಥಳದಲ್ಲಿ  ಉತ್ತಮರ ಸಹಕಾರ, ದಾಂಪತ್ಯದಲ್ಲಿ ಕಲಹ ಸಾಧ್ಯತೆ, ಮನೋವ್ಯಾಧಿ, ಅಸಮಧಾನ.

ದೋಷ ಪರಿಹಾರ : ಲಿಂಗಾಷ್ಟಕ ಹೇಳಿಕೊಳ್ಳಿ.

ಕನ್ಯಾ : ಇಂದು ನಿಮ್ಮ ಪಾಲಿಗೆ ತಂದೆಯಿಂದ ಸಹಕಾರ. ದೊಡ್ಡ ಪ್ರಮಾಣದಲ್ಲಿ ಧನ ವ್ಯಯವಾಗುವ ಸಾಧ್ಯತೆ ಇದೆ. ವಾಹನ ಜಖಂ ಆಗಲಿದೆ. ಪ್ರಯಾಣ ಮಾಡುವಾಗ ಎಚ್ಚರ ಇರಲಿ. ಪ್ರೀತಿ ಪಾತ್ರರೊಂದಿಗೆ ಮಾತು ಕಥೆ.
  
ದೋಷ ಪರಿಹಾರ : ತುಳಸಿಗೆ ನಮಸ್ಕಾರ ಮಾಡಿ

ತುಲಾ :  ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಉತ್ತಮ ಸಹಕಾರ, ಲಾಭದ ದಿನವೂ ಹೌದು. ಆದರೆ ಓರ್ವ ಸ್ತ್ರೀಯಿಂದ ಮನಸ್ತಾಪ ಸಾಧ್ಯತೆ. ಹಳೆ ದುಡ್ಡು ಮರಳಿಬರಲಿದೆ, ಮಾತಿನಿಂದ ಪ್ರಶಂಸೆ.

ದೋಷ ಪರಿಹಾರ : ಗಣಪತಿ ದರ್ಶನ ಮಾಡಿ

ವೃಶ್ಚಿಕ : ಇಂದು ಉದ್ಯೋಗ ಲಾಭ, ಹಿರಿಯರಿಂದ ಉಡುಗೊರೆ ಸಿಗಲಿದೆ. ಆದರೆ ನಿಮ್ಮ ಹಣ ಕಳುವಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ. ಅಣ್ಣ-ತಮ್ಮಂದಿರು ಸಹಾಯ ಮಾಡುತ್ತಾರೆ. ವಾಹನದಲ್ಲಿ ತೊಡಕು.

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ 

ಧನಸ್ಸು : ಇಂದು ನಿಮ್ಮ ಶರೀರದಲ್ಲಿ ಸ್ವಲ್ಪ ಆಯಾಸ. ಆದರೆ ವ್ಯಾಪಾರದಲ್ಲಿ ಲಾಭವನ್ನು ಪಡೆಯಲಿದ್ದೀರಿ. ಆರೋಗ್ಯ ಸಮಸ್ಯೆಯಿಂದಾಗಿ ನಿಮ್ಮಲ್ಲಿ ಆಲಸ್ಯ ಮೈಗೂಡಿಕೊಳ್ಳಲಿದೆ. ದಾಂಪತ್ಯದಲ್ಲಿ ಮಾತಿನ ಸಮರ.

ದೋಷ ಪರಿಹಾರ : ಗೋವಿಂದ ನಾಮಸ್ಮರಣೆ ಮಾಡಿ

ಮಕರ :  ಇಂದು ತಂದೆ ನಿಮ್ಮ ಸಹಾಯಕ್ಕೆ ಬರುತ್ತಾರೆ. ಸ್ತ್ರೀಯರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಂಡತಿಯಿಂದ ಸಹಕಾರ. ಮನೆಯಲ್ಲಿ ಸ್ವಲ್ಪ  ಗೊಂದಲ ವಾತಾವರಣ. ತಾಳ್ಮೆ ಕಳೆದುಕೊಳ್ಳುವುದು ಬೇಡ.
  
ದೋಷ ಪರಿಹಾರ : ಕೃಷ್ಣ ಪ್ರಾರ್ಥನೆ ಮಾಡಿ

ಕುಂಭ : ವ್ಯಾಪಾರಿಗಳಿಗೆ ಶುಭಲಾಭ, ಸುಖ ಬೋಜನ ಪ್ರಾಪ್ತಿ, ಆರೋಗ್ಯದಲ್ಲೂ ಕೊಂಚ ವ್ಯತ್ಯಯ, ನೆಗಡಿ ಕೆಮ್ಮು ಕಾಡಲಿದೆ, ಸ್ತ್ರೀಯರಿಂದ ಭಾಗ್ಯ ವೃದ್ಧಿ, ಹೊಟ್ಟೆ ಭಾಗದಲ್ಲಿ ನೋವು ಕಾಣುವ ಸಾಧ್ಯತೆಯೂ ಇದೆ.  

ದೋಷ ಪರಿಹಾರ : ಕುಕ್ಕೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
  
ಮೀನ : ಸ್ತ್ರೀಯರಿಗೆ ಆರೋಗ್ಯ ವೃದ್ಧಿ, ಧನ್ಯ ವ್ಯಯ, ಉದ್ಯೋಗದಲ್ಲಿ ಹಿರಿಯರಿಂದ ಕಿರಿಕಿರಿ, ಹೊಟ್ಟೆ ಸಂಬಂಧಿ ಬಾಧೆ ಕಾಡಲಿದೆ, ಸೌಭಾಗ್ಯ ವೃದ್ಧಿಯೋಗ, ವಿದ್ಯಾ ಸಂಪತ್ತು ಪ್ರಾಪ್ತವಾಗಲಿದೆ, ಗುರು ದರ್ಶನ   
  
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ 

ವಾಞ್ಮಯೀ.