ಈ ರಾಶಿಯವರು ಸೂಕ್ತ ಎಚ್ಚರಿಕೆಯಿಂದ ಮುನ್ನಡೆಯಿರಿ

01-11-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಆಶ್ವೀಜ ಮಾಸ
ಕೃಷ್ಣ ಪಕ್ಷ
ಅಷ್ಟಮಿ ತಿಥಿ
ಆಶ್ಲೇಷ ನಕ್ಷತ್ರ 

ರಾಹುಕಾಲ  01.30 ರಿಂದ 02.57
ಯಮಗಂಡ ಕಾಲ  06.14 ರಿಂದ 07.41
ಗುಳಿಕ ಕಾಲ  09.09 ರಿಂದ 10.36
 

ಮೇಷ ರಾಶಿ : ಇಂದು ನಿಮ್ಮ ರಾಶಿಯ ಅಧಿಪತಿ ರಾಹುಯುತನಾಗಿರುವುದರಿಂದ ಹೃದಯ ಭಾಗದಲ್ಲಿ ಸ್ವಲ್ಪ ತೊಂದರೆಗಳು ಕಾಣಬಹುದು. ನಿಮ್ಮ ಸಂಗಾತಿಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವೂ ಬರವುವ ಸಾಧ್ಯತೆ ಇದೆ. ಮಾತನಾಡುವಾಗ ಎಚ್ಚರವಿರಲಿ. ಮಾತಿನಿಂದ ಎಡವಟ್ಟುಗಳಾಗುವ ಸಾಧ್ಯತೆ ಇದೆ. 
ಪರಿಹಾರ - ಜೇನು ತುಪ್ಪವನ್ನು ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಿ

ವೃಷಭ - ನಿಮ್ಮ ಶತ್ರುಗಳ ಕಾಟ ಮುಕ್ತಾಯವಾಗಲಿದೆ, ನೀವಂದುಕೊಂಡ ಕಾರ್ಯಕ್ಕೆ ತಂದೆಯಿಂದ  ಸ್ವಲ್ಪ  ಅಡೆತಡೆಗಳಾಗುವ ಸಾಧ್ಯತೆ. ನಿಮ್ಮ ಸಂಗಾತಿ ಮರಳಿ ಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಹೊಂದಾಣಿಕೆ. 
ಪರಿಹಾರ - ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ಮಿಥುನ - ನಿಮ್ಮ ರಾಶಿಯವರಿಗೆ ಸ್ವಲ್ಪ ಗೊಂದಲದ ದಿನ, ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಲ್ಪ ಹಿಂಜರಿಕೆ. ಸ್ವಲ್ಮ ಮಟ್ಟಿಗೆ ಧನವ್ಯಯವೂ ಇದೆ. ಜೇಬು ಅಥವಾ ಪರ್ಸ್ ನಿಂದ ಹಣ ತೆಗೆಯುವಾಗ ಎಚ್ಚರ. ಧನ ಸ್ಥಾನದ ರಾಹು ಕತ್ತರಿ ಅಂದರೆ ಕಳೆದುಕೊಳ್ಳುವ ಪ್ರಸಂಗ ತರಬಹುದು.
ಪರಿಹಾರ - ನಾಗ ದೇವರಿಗೆ ನಮಸ್ಕಾರ ಹಾಕಿ

ಕಟಕ - ಸ್ವಲ್ಪ ಎದೆ ಭಾಗದಲ್ಲಿ ಉರಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನಿಮ್ಮ ತಲೆಗೆ ಸ್ವಲ್ಪ ಪೆಟ್ಟು ಬೀಳುವ ಸಾಧ್ಯತೆ ಇದೆ. ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ. ತಾಯಿಯಿಂದ ಸಹಕಾರ ಸಿಗಲಿದೆ
ಪರಿಹಾರ - ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹಾಲು ಕೊಟ್ಟುಬನ್ನಿ

ಸಿಂಹ - ನಿಮ್ಮ ಕಚೇರಿಯಲ್ಲಿ ಸ್ವಲ್ಪ ಕಿರಿಕಿರಿ, ನಿಮ್ಮ ನಿರ್ಧಾರಗಳಿಗೆ ಹಿರಿಯರ ಅಡ್ಡಗಾಲು, ನಿಮ್ಮ ಮನಸ್ಸಿನ ಹತೋಟಿ ಕಳೆಯಬಹುದು. ವಾಗ್ವಾದಗಳೂ ಆಗುವ ಸಾಧ್ಯತೆ. ಆದಷ್ಟು ತಾಳ್ಮೆ ಇರಲಿ.
ಪರಿಹಾರ - ಬೆಳಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡಿ

ಕನ್ಯಾ - ಯಾವುದೇ ಸಾಹಸ ಕಾರ್ಯಕ್ಕೆ ಕೈ ಹಾಕಬೇಡಿ. ಕಾರಣ ನಿಮ್ಮ ರಾಶಿಯ ಅಧಿಪತಿ ಶತ್ರುವಿನ ಮನೆ ಸೇರಿದ್ದಾನೆ. ಶತ್ರುಗಳ ತೊಂದರೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಆದಷ್ಟು ಮಿತ ಭಾಷಿಗಳಾಗಿ. ನಿಮ್ಮ ತಾಯಿಗೆ ನಮಸ್ಕಾರ ಮಾಡಿ ಕಾರ್ಯ ಪ್ರಾರಂಭ ಮಾಡಿ
ಪರಿಹಾರ - ಸುಮಂಗಲೆಗೆ ಮಂಗಲದ್ರವ್ಯ ದಾನ ಮಾಡಿ

ತುಲಾ - ನಿಮ್ಮ ಮಾತಿನಿಂದ ನಿಮಗೆ ಲಾಭವಿದೆ, ಉಪನ್ಯಾಸಕರಿಗೆ, ವಕೀಲರಿಗೆ ಉತ್ತಮ ದಿನವಾಗಿರಲಿದೆ. ಧನವೂ ಹರಿದು ಬರಲಿದೆ. ನಿಮ್ಮ ಕುಟುಂಬದಲ್ಲಿ ಸೌಖ್ಯವನ್ನು ಕಾಣುತ್ತೀರಿ.
ಪರಿಹಾರ - ಶುಕ್ರ ಗ್ರಹ ಪ್ರಾರ್ಥನೆ ಮಾಡಿ

ವೃಶ್ಚಿಕ - ನಿಮ್ಮ ಸಕಲ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ, ನೀವು ಅಂದುಕೊಂಡ ಹೊಸ ಕಾರ್ಯಕ್ಕೆ ಚಾಲನೆ ಸಿಗಲಿದೆ. ಹಿರಿಯರ ಸಹಕಾರವೂ ದೊರೆಯಲಿದೆ. ನಿಮ್ಮ ಸಹೋದರರ ಸಲಹೆ ಪಡೆದು ಮುಂದುವರೆಯಿರಿ.
ಪರಿಹಾರ - ಉಪ್ಪಿಲ್ಲದ ಊಟ ಮಾಡಿ

ಧನಸ್ಸು - ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯ ಕಾಣುತ್ತೀರಿ, ನಿಮ್ಮ ಮಾತಿನಿಂದಲೇ ನಿಮಗೆ ಕೆಟ್ಟ ಹೆಸರು ಬರುವುದು. ಯಾರಿಗೂ ಸಲಹೆ ಕೊಡಲು ಹೋಗಬೇಡಿ. ಕಾರ್ಯಾರಂಭ ಮಾಡುವ ಮುನ್ನ ಗುರು ಪ್ರಾರ್ಥನೆ ಮಾಡಿ
ಪರಿಹಾರ - ಹಸುವಿಗೆ ಗ್ರಾಸ ಕೊಡಿ

ಮಕರ - ನಿಮ್ಮ ಮನಸ್ಸಿನ ಹೊಸ ಯೋಜನೆ ಕಾರ್ಯರೂಪಕ್ಕೆ ಬರಲಿದೆ, ನಿಮ್ಮ ಅಕ್ಕಪಕ್ಕದವರಿಂದ ಅನುಕೂಲ ಸಿಗಲಿದೆ. ಆದರೆ ವೃಥಾ ಮೈಮೇಲೆ ಕೆಲಸ ಎಳೆದುಕೊಳ್ಳಬೇಡಿ. ನಿಮ್ಮ ಕೈಲಾದಷ್ಟು ಮಾತ್ರವೇ ಒಪ್ಪಿಕೊಳ್ಳಿ
ಪರಿಹಾರ - ಶಿವನಿಗೆ ಜಲಾಭಿಷೇಕ ಮಾಡಿಸಿ

ಕುಂಭ - ನಿಮ್ಮ ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ. ಕಾರ್ಯ ಕ್ಷೇತ್ರಕ್ಕೆ ಹೊರಡುವಾಗ ಮನೆಯಿಂದ ನಿಮ್ಮ ತಾಯಿಯ ಬಳಿ ಅಕ್ಷತೆ ಸ್ವೀಕರಿಸಿ ಹೊರಡಿ. ಬರುವ ದಾರಿಯಲ್ಲಿ ಎಚ್ಚರ ತಪ್ಪಿ ನಡೆಯದೆ ರಸ್ತೆ ಕಡೆ ಗಮನ ಇರಲಿ, ಎಡವಿ ಬೀಳುವ ಸಾಧ್ಯತೆ ಇದೆ.
ಪರಿಹಾರ - ಶಿವ ಸಹಸ್ರನಾಮ ಪಠಿಸಿ

ಮೀನ - ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ, ಉತ್ತಮ ಪ್ರಗತಿ ಕಾಣುತ್ತೀರಿ, ವಿದ್ಯಾ ಪ್ರಗತಿ, ಬೋಧನೆಯಿಂದ ನಿಮ್ಮ ಕೀರ್ತಿ ಹೆಚ್ಚಲಿದೆ. ಮಕ್ಕಳಿಂದ ಅನುಕೂಲ, ಧನಾಗಮನ, ಉತ್ತಮ ದಿನ.
ಪರಿಹಾರ - ಗುರು ಪ್ರಾರ್ಥನೆ ಮಾಡಿ
  
ವಾಞ್ಮಯೀ