Asianet Suvarna News Asianet Suvarna News

ನವರಾತ್ರಿ: ಯಾವ ದಿನ, ಯಾವ ಬಣ್ಣದ ವಸ್ತ್ರ ಧರಿಸಬೇಕು?

ನವರಾತ್ರಿ ಆರಂಭವಾಗಿದೆ.  ಸ್ತ್ರೀ ಶಕ್ತಿಯನ್ನು ಪ್ರತನಿಧಿಸುವ ದೇವಿಯನ್ನು ಆರಾಧಿಸುವ ಈ ಹಬ್ಬದ ಒಂದೊಂದು ದಿನಕ್ಕೂ ಒಂದೊಂದು ಅರ್ಥವಿದೆ. ಸ್ತ್ರಿ ಶಕ್ತಿ ಸ್ವರೂಪಿಣಿಯಾದ ದೇವಿಯನ್ನು ನವ ರೂಪದಲ್ಲಿ ಪೂಜಿಸುವುದು ಈ ನವರಾತ್ರಿ ವಿಶೇಷ.

Significance of Navratri nine colors and nine sweets
Author
Bengaluru, First Published Oct 10, 2018, 6:38 PM IST

ಕರ್ನಾಟಕದಲ್ಲಿ ದಸರಾವೆಂದು, ಬಂಗಳಾದಲ್ಲಿ ದುರ್ಗಾ ಪೂಜೆಯೆಂದು, ಗುಜರಾತಿನಲ್ಲಿ ಗರ್ಭಾ ನೃತ್ಯದೊಂದಿಗೆ ನವರಾತ್ರಿಯನ್ನು ಆಚರಿಸಲಾಗುತ್ತಿದೆ. ವಿಧವಿಧವಾಗಿ, ದೇವಿಯ ನಾನಾ ರೂಪಗಳನ್ನು ಪೂಜಿಸುವುದಾದರೂ, ದುಷ್ಟ ಶಕ್ತಿ ವಿರುದ್ಧ ಶಿಷ್ಟ ಶಕ್ತಿಯ ವಿಜಯವನ್ನು ಸಂಭ್ರಮಿಸುವುದೇ ಈ ಹಬ್ಬದ ಮುಖ್ಯ ಉದ್ದೇಶ.

ದೇವಿಯ ಒಂಬತ್ತು ಅವತಾರಗಳನ್ನು ಪ್ರತಿನಿಧಿಸುವ ಪ್ರತಿಯೊಂದು ದಿನಕ್ಕೂ ತನ್ನದೇ ಆದ ವೈಶಿಷ್ಟ್ಯಗಳಿವೆ. ದೇವಿಯ ಅವತಾರಕ್ಕೆ ತಕ್ಕಂತೆ ನೈವೇಧ್ಯವನ್ನು ಮಾಡುವುದರೊಂದಿಗೆ, ಆ ನಿರ್ದಿಷ್ಟ ದೇವಿಗೆ ಪ್ರಿಯವಾದ ಬಣ್ಣದ ವಸ್ತ್ರವನ್ನೂ ಧರಿಸುವುದು ಮತ್ತೊಂದು ವಿಶೇಷ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಯಾವ ತಿಂಡಿ ಮಾಡಬೇಕು, ಯಾವ ಬಣ್ಣದ  ವಸ್ತ್ರ ಧರಿಸಬೇಕೆಂಬ ವಿವರ ಇಲ್ಲಿದೆ....

ಮೊದಲ ದಿನ: ಪಾಡ್ಯ
ಪಾರ್ವತಿ ಎಂದೇ ಕರೆಯಲ್ಪಡುವ ಶೈಲಿಪುತ್ರಿಯನ್ನು ಆರಾಧಿಸುವ ದಿನ.  ಹಳದಿ ಈ ದೇವಿಗೆ ಪ್ರಿಯವಾದ ಬಣ್ಣವಾಗಿದ್ದು, ಹಳದಿ ಸಿಹಿಯನ್ನು ತಯಾರಿಸಬಹುದು. ಕೇಸರಿ ಪಾಯಸ, ಕೇಸರಿ ಹಲ್ವಾ ಸೇರಿದಂತೆ ಹಳದಿ ಬಣ್ಣದ ಹಲವು ತಿಂಡಿಗಳ ನೈವೇಧ್ಯ ಮಾಡಬಹುದು.

2ನೇ ದಿನ- ಬಿದಿಗೆ
ಜ್ಞಾನ ದೇವಿಯಾದ ಬ್ರಹ್ಮಚಾರಿಣಿಯನ್ನು ಆರಾಧಿಸುವ ದಿನ. ಹಸಿರು ವಸ್ತ್ರ ಧರಿಸುವುದರೊಂದಿಗೆ, ಹಸಿರು ನೈವೇಧ್ಯ ಶ್ರೇಷ್ಠ. ಬಾಳೆ ಹಣ್ಣಿನ ಹಲ್ವಾದಂಥ ತಿಂಡಿಯನ್ನು ಮಾಡಬಹುದು.

ಮೂರನೇ ದಿನ: ತದಿಗೆ
ದೇವಿ ಚಂದ್ರಘಂಟಾಗೆ ಮೀಸಲಿರುವ ಈ ದಿನದಲ್ಲಿ ಬೂದಿ ಬಣ್ಣದ ವಸ್ತ್ರ ಧರಿಸಬೇಕು. ಹಣೆಯಲ್ಲಿ ಅರ್ಧ ಚಂದ್ರನನ್ನು ಇಟ್ಟುಕೊಂಡ ಈಕೆಗೆ ಹಾಲು ಬಾಯಿಯಂಥ ಸಿಹಿ ಮಾಡಬಹುದು.

ನಾಲ್ಕನೇ ದಿನ: ಚೌತಿ
ಖುಷ್ಮಾಂದ ದೇವಿಗೆ ಅರ್ಪಿತವಾದ ನಾಲ್ಕನೇ ದಿನದಲ್ಲಿ ಕೇಸರಿ ಬಣ್ಣದ ವಸ್ತ್ರ ಧರಿಸಬೇಕು. ಕ್ಯಾರೇಟ್ ಹಲ್ವಾದಂಥ ಸಿಹಿ ತಯಾರಿಸಬಹುದು.

ಐದನೇ ದಿನ: ಪಂಚಮಿ
ಶುದ್ಧತೆಯ ಪ್ರತೀಕವಾದ ಸ್ಕಂದಮಾತೆಯನ್ನು ಪೂಜಿಸಬೇಕಾದ ಈ ದಿನದಲ್ಲಿ ಶ್ವೇತ ವಸ್ತ್ರ ಧರಿಸಬೇಕು. ಅನ್ನದ ಪಾಯಸದಿಂಥ ನೈವೇಧ್ಯ ದೇವಿಗೆ ಶ್ರೇಷ್ಠ.

ಆರನೇ ದಿನ: ಷಷ್ಠಿ
ದೇವಿ ಕಾತ್ಯಾಯನಿಗೆ ಸಮರ್ಪಿತವಾದ ಈ ದಿನದಲ್ಲಿ ಕೆಂಪು ವಸ್ತ್ರ ಧರಿಸಿದರೆ ಶ್ರೇಷ್ಠ. ವೈರಿಗಳೆಡೆಗೆ ಕೆಂಗಣ್ಣು ತೋರುವ ಈ ದೇವಿ, ದುಷ್ಟ ಸಂಹಾರಕ್ಕೆ ಸಿದ್ಧಳಾಗಿದ್ದಾಳೆ. ಬೀಟ್‌ರೂಟ್ ಹಲ್ವಾದಂಥ ಗಾಢ  ಬಣ್ಣದ ನೈವೇಧ್ಯ ದೇವಿಗೆ ಇಷ್ಟ.

ಏಳನೇ ದಿನ: ಸಪ್ತಮಿ
ಕಾಳರಾತ್ರಿಯ ದಿನವಾದ ಸಪ್ತಮಿಯಂದು ಕಡುನೀಲಿ ಬಣ್ಣದ ವಸ್ತ್ರ ಧರಿಸಬೇಕು.  ದೇವಿಯ ಅಗಾಧ ಶಕ್ತಿಯನ್ನು ನೀಲಿ ಪ್ರತಿನಿಧಿಸುತ್ತದೆ. ಶಂಭ ಮತ್ತು ನಿಶುಂಭ ಎಂಬ ಇಬ್ಬರು ರಾಕ್ಷಸರನ್ನು ಕೊಂದವಳು ಈ ದೇವಿ. ನೇರಳೆ ಬಣ್ಣದ ಯಾವುದೇ ವಿಶೇಷ ಖಾದ್ಯಗಳು ಇಲ್ಲದಿರುವ ಕಾರಣ ನೇರಳೆ ಹಣ್ಣನ್ನು ನೈವೇಧ್ಯಕ್ಕೆ ಇಡಬಹುದು.

ಎಂಟನೇ ದಿನ: ಅಷ್ಟಮಿ
ಮಾತಾ ಮಹಾಗೌರಿಯನ್ನು ಪೂಜಿಸಬೇಕು. ಗುಲಾಬಿ ಬಣ್ಣವನ್ನು ಪ್ರೀತಿಸುವ ಗೌರಿಗೆ ಗುಲಾಬಿ ಎಸಳಿನ ಯಾವುದಾದರೂ ಸಿಹಿ ತಯಾರಿಸಬಹುದು.

ಒಂಬತ್ತನೇ ದಿನ: ನವಮಿ
ನವರಾತ್ರಿಯ ಕಡೆಯ ದಿನ ದೇವಿ ಸಿದ್ಧಿರಾತ್ರಿಗೆ ಮೀಸಲು. ನೇರಳೆ ಬಣ್ಣವನ್ನು ಇಷ್ಟ ಪಡುವ ಈ ದೇವಿ ಜ್ಞಾನ ಮತ್ತು ಬುದ್ಧಿಯ ಪ್ರತೀಕ. ಅಂಜೂರದ ಯಾವುದಾದರೂ ಸಿಹಿ ತಯಾರಿಸಬಹುದು.

Follow Us:
Download App:
  • android
  • ios