ಗೋಮತಿ ನದಿಯಲ್ಲಿ ಮಾತ್ರ ಸಿಗುವ ಗೋಮತಿ ಚಕ್ರದ ಮಹತ್ವ ಅಪಾರ. ಹಿಂದೂ ಸಂಪ್ರದಾಯದ ಪ್ರಕಾರ ಗೋಮತಿ ನದಿ ಋಷಿ ಮಹರ್ಷಿ ವಶಿಷ್ಟನ ಪುತ್ರಿ. ಈ ನದಿಯಲ್ಲಿ ಏಕಾದಶಿ ದಿನದಂದು ಸ್ನಾನ ಮಾಡಿದರೆ ಮಾಡಿದ ಪಾಪವೆಲ್ಲವೂ ನಾಶವಾಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ಗೋಮತಿ ಚಕ್ರ ನೋಡಲು ಸಣ್ಣದೊಂದು ಕಲ್ಲಿನಂತಿದ್ದು, ಒಂದು ಕಡೆ ಬೆಳಗುತ್ತದೆ, ಇನ್ನೊಂದು ಕಡೆ ವೃತ್ತಾಕಾರದಲ್ಲಿರುತ್ತದೆ. ಗೋಮತಿ ಚಕ್ರವನ್ನು ಸದಾ ಕಿಸೆಯಲ್ಲುಟ್ಟುಕೊಂಡರೆ ಸುಖ, ಸಮೃದ್ಧಿ ಹಾಗೂ ನೆಮ್ಮದಿ ಹೆಚ್ಚುತ್ತದೆ.

ಸೆಕ್ಸ್ ಲೈಫ್ ವೃದ್ಧಿಸಲು ಬೆಡ್ ರೂಂ ವಾಸ್ತು ಹಿಂಗಿರಲಿ

ಮತ್ತೊಂದು ಪೌರಾಣಿಕ ಕಥೆಯೂ ಇದೆ... ರಾಧೆಗೆ ವಸತಿ ಹಾಗೂ ಆಶ್ರಯ ನೀಡಲು ವಿಷ್ಣು ದೇವನು ಕೃಷ್ಣನ ಅವತಾರದಲ್ಲಿ ದ್ವಾರಕಕ್ಕೆ ಆಗಮಿಸುತ್ತಾನೆ. ಗೋಮತಿ ನದಿಯ ಸಮೀಪದಲ್ಲಿ ವಿಷ್ಣು ಮರವೊಂದನ್ನು ನೆಡುತ್ತಾನೆ. ಈ ಮರದಲ್ಲಿ ಬಿಟ್ಟ ಹಣ್ಣು ತಿನ್ನಲು ಯೋಗ್ಯವಾಗಿರುವುದಿಲ್ಲ. ಆದರೂ, ಕೃಷ್ಣ ನೆಟ್ಟ ಮರದ ಹಣ್ಣೆಂದು ರಾಧೆ ಆಸೆ ಪಡುತ್ತಾಳೆ. ತಿನ್ನಲಾಗದ ಕಾರಣ ತನ್ನಲ್ಲಿಯೇ ಇಟ್ಟುಕೊಳ್ಳುವುದರಿಂದ ಇದರ ಮಹತ್ವ ಹೆಚ್ಚಾಗಿದೆ.

 

ಹೇಗೆ ಇಟ್ಟುಕೊಳ್ಳಬೇಕು? ಹ್ಯಾಂಡ್ ಬ್ಯಾಗ್ ಅಥವಾ ಪರ್ಸ್‌ನಲ್ಲಿ ಗೋಮತಿ ಚಕ್ರವಿದ್ದರೆ ಹಣ ಹೆಚ್ಚತ್ತದೆ. ಇನ್ನು ಮನೆ ನಿರ್ಮಿಸುವಾಗ ಪಾಯ ತೆಗೆಯುವ ಸಮಯದಲ್ಲಿ 11 ಗೋಮತಿ ಚಕ್ರವನ್ನು ಹೂತು ಹಾಕಿದರೆ, ಯಾವದೇ ಅಡೆ-ತಡೆ ಇಲ್ಲದೇ ನಿರ್ಮಾಣ ಕಾರ್ಯ ಮುಗಿಯುತ್ತದೆ. 11 ರುದ್ರರನ್ನು ಈ ಚಕ್ರ ಪ್ರತಿನಿಧಿಸುತ್ತದೆ.

ವಧು-ವರರ ಮುಂದೆ ಬೆಕ್ಕು ಸಾಗಿದರೆ ದಾಂಪತ್ಯ ಸೂಪರ್

  • ಸಾಲ ಬಾಧೆಯಿಂದ ನರಳುವವರು 11 ಗೋಮತಿ ಚಕ್ರಗಳಿಗೆ ಅರಿಶಿಣ ಹಚ್ಚಿ ಶಿವಲಿಂಗದ ಮುಂದಿಟ್ಟು, ಶಿವ ನಾಮ ಜಪಿಸಬೇಕು. ನಂತರ 11 ಚಕ್ರಗಳನ್ನು ಹಳದಿ ಬಟ್ಟೆಯಿಂದ ಕಟ್ಟಿ ಮನೆಯ ಎಲ್ಲಾ ಮೂಲೆಗಳಲ್ಲಿ ಕಟ್ಟಬೇಕು. ಆಮೇಲೆ ಹರಿಯೋ ನೀರಲ್ಲಿ ಹಾಕಬೇಕು.
  • 11 ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟಿ ಬ್ಯಾಗಿನಲ್ಲಿ ಇಟ್ಟಿಕೊಂಡರೆ ಹಣ ಹರಿದು ಬರುತ್ತದೆ.
  • ಕೆಟ್ಟ ಕಣ್ಣು ಅಥವಾ ಕೆಟ್ಟ ದೃಷ್ಟಿಯಿಂದ ದೂರವಿರಲು ಏಳು ಸಲ ಈ ಚಕ್ರವನ್ನು ತಲೆಗೆ ಸುತ್ತು ಬರಿಸಿ, ಹಿಂದಕ್ಕೆ ಬಿಸಾಕಬೇಕು. ನಂತರ ಅದನ್ನು ನೋಡದೆ ಮನೆಗೆ ಹೋಗಬೇಕು.
  • ಅಡುಗೆ ಮನೆಯಲ್ಲಿ ಸಾಮಾನು ಖಾಲಿಯಾಗಬಾರದೆಂದರೆ ಅಕ್ಕಿ ಡಬ್ಬ ಅಥವಾ ಗೋಧಿ ಹಿಟ್ಟಿನ ಡಬ್ಬದಲ್ಲಿ ಇದನ್ನು ಇಡಬೇಕು.
  • 11 ಗೋಮತಿ ಚಕ್ರವನ್ನು ಕೆಂಪು ಕುಂಕುಮದೊಂದಿಗೆ ಇಟ್ಟಿಕೊಂಡರೆ ಮದುವೆ ಬೇಗ ಆಗುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.