ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ಕೆಲವೊಂದು ಗಿಡಗಳನ್ನು ನೆಟ್ಟರೆ ಸುಖ, ಸಂತೋಷ, ಸಮೃದ್ಧಿ, ಇರುತ್ತೆ. ಇದರಿಂದ ಮನೆ ಜನರ ಮೇಲೂ ಸಕಾರಾತ್ಮಕ ಶಕ್ತಿ ಬೀರುತ್ತದೆ. ಅಂತಹ ಗಿಡಗಳು ಯಾವುವು ನೋಡಿ..

  • ಪಾರಿಜಾತ ಗಿಡ ಮನೆಯಲ್ಲಿ ಆಸ್ತಿ ಹಾಗೂ ಪ್ರೀತಿಯನ್ನು ವೃದ್ಧಿಸುತ್ತದೆ.
  • ಗೋಲ್ಡನ್ ಪಾಥೋಸ್ ಗಿಡ ಮನೆಯಲ್ಲಿದ್ದರೆ, ದುಷ್ಟಶಕ್ತಿ ವಿರುದ್ಧ ಹೋರಾಡಲು ಸಹಕರಿಸುತ್ತದೆ.
  • ಮನೆಯಲ್ಲಿ ದಾಳಿಂಬೆ ಗಿಡ ನೆಡುವುದರಿಂದ ರಾಹು, ಕೇತುವಿನ ನಕಾರಾತ್ಮಕ ಶಕ್ತಿ ಹಾಗೂ ಮಾಟ ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ.
  • ಅಲೋವೆರಾ ಅಥವಾ ಲೋಳೆಸರ ಗಿಡವನ್ನು ಅದೃಷ್ಟದ ಗಿಡವೆಂದು ಭಾವಿಸಲಾಗುತ್ತದೆ. ಇದನ್ನು ಮನೆಯ ಮುಂದಿಟ್ಟಿರೆ ಯಾವುದೇ ದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲವೆನ್ನುತ್ತಾರೆ.
  • ಮನೆ ಮುಂದೆ ತುಳಸಿ ಸಸಿ ನೆಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
  • ಮನೆಯ ಹಿಂದೆ ಬಾಳೆ ಸಸಿಯನ್ನು ನೆಟ್ಟರೆ ಮದುವೆ ಕಾರ್ಯಗಳು ಬೇಗ ನಡೆಯುತ್ತದೆ.
  • ವಾಸ್ತು ಸಸ್ಯ ಡ್ರಕೇನಾ ಸ್ಯಾಂಡೆರಿನಾವನ್ನು ಗುಡ್ ಲಕ್ ಪ್ಲಾಂಟ್ ಎಂದು ಕರೆಯಲಾಗುತ್ತದೆ. ಇದನ್ನು ಮನೆ ಅಥವಾ ಆಫೀಸಿನಲ್ಲಿ ಬೆಳೆಸಿದರೆ ಅಲ್ಲಿ ಶಾಂತಿ ನೆಮ್ಮದಿ ಜೊತೆಗೆ ಗುಡ್ ಲಕ್ ಕೂಡ ನಿಮ್ಮದಾಗುತ್ತದೆ.