ರಾಶಿ ಪ್ರತಿಯೊಬ್ಬ ವ್ಯಕ್ತಿಯ ಗುಣ ನಡತೆಯನ್ನು ತೋರಿಸುತ್ತದೆ. ಒಬ್ಬರ ರಾಶಿ ಇದು ಎಂದು ಹೇಳಿದರೆ ಸಾಕು ಜ್ಯೋತಿಷಿಗಳು ಅವರ ಗುಣಗಳ ಬಗ್ಗೆ ಹೇಳುತ್ತಾರೆ. ಯಾವ ರಾಶಿಯವರ ಗುಣ ಯಾವ ರೀತಿಯಾಗಿದೆ ಎಂಬ ಮಾಹಿತಿ ಇಲ್ಲಿದೆ. 

ಮೇಷ: ಇವರು ಯಾವುದೇ ವಿಷ್ಯದಲ್ಲಿ ಓವರ್ ಆಗಿ ತೊಡಗಿಕೊಳ್ಳುತ್ತಾರೆ. ಇದರಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಯಾಕೆಂದರೆ ಓವರ್ ಕಾನ್ಪಿಡೆನ್ಟ್ ಅವರಿಗೆ ಸೋಲನ್ನು ನೀಡುತ್ತದೆ. ಜೊತೆಗೆ ಈ ರಾಶಿಯವರು ಸ್ವಲ್ಪ ಮುಂಗೋಪಿಯಾಗಿರುತ್ತಾರೆ. 

ವೃಷಭ: ಇವರು ಹಠಮಾರಿಗಳು. ಜೊತೆಗೆ ಅಸೂಯೆಯೂ ಜಾಸ್ತಿ. ಇವರೊಟ್ಟಿಗೆ ಅಡ್ಜಸ್ಟ್ ಮಾಡಿಕೊಂಡು ಹೋಗುವುದು ಕಷ್ಟ. 

ಮಿಥುನ: ಅಗಾಗ ಇವರ ಮೂಡ್ ಸ್ವಿನ್ ಆಗುತ್ತಿರುತ್ತದೆ. ಒಂದು ಸಲ ಇದ್ದ ಮೂಡ್ ಇನ್ನೊಂದು ಸಲ ಇರೋದಿಲ್ಲ. ಇದರಿಂದಯಾರ ಜೊತೆಯೂ ಇವರ ಬಾಂಧವ್ಯ ಸರಿ ಇರೋಲ್ಲ.

ಕಟಕ: ಸಾಫ್ಟ್ ವ್ಯಕ್ತಿತ್ವ ಇವರದ್ದು. ಇವರಿಗೆ ಏನಾದರೂ ತಪ್ಪಾದರೆ ತುಂಬಾ ಬೇಸರವಾಗುತ್ತಾರೆ. ಇವರಲ್ಲಿ ನೆಗೆಟಿವಿಟಿ ಹೆಚ್ಚಾಗಿರೋದ್ದರಿಂದ, ಭಯದಲ್ಲಿಯೇ ಇರುತ್ತಾರೆ. ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ. 

ಸಿಂಹ: ಸಿಂಹ ರಾಶಿ ಎಂದ ಕೂಡಲೇ ಆ ರಾಶಿಯ ವ್ಯಕ್ತಿತ್ವ ಏನು ಅನ್ನೋದು ಗೊತ್ತಾಗುತ್ತೆ. ಈ ರಾಶಿಯವರಲ್ಲಿ ಅಹಂ ಸ್ವಲ್ಪ ಜಾಸ್ತಿ. ತಾನು ಹೇಳಿದ್ದೇ ನಡೆಯಬೇಕು, ತಾ ಅಂದುಕೊಂಡಂತೆ ಆಗಬೇಕೆಂದುಕೊಳ್ಳುತ್ತಾರೆ. ಇದರಿಂದ ಇವರ ಸುತ್ತಲಿನ ಜನಕ್ಕೆ ಇರಿಟೇಟ್ ಆಗುತ್ತದೆ. 

ಕನ್ಯಾ: ಜಗಳಗಂಟಿ ಸ್ವಭಾವ ಅಂತಾರಲ್ಲ ಅಂತಹ ಸ್ವಭಾವ ಇವರದ್ದು. ಇವರು ಯಾರನ್ನು ಅಷ್ಟು ಬೇಗ ಕ್ಷಮಿಸೋದಿಲ್ಲ. ಯಾರನ್ನಾದರೂ ಅಥವಾ ವಸ್ತುಗಳನ್ನು ಇಷ್ಟ ಪಟ್ಟರೆಂದರೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ಇಲ್ಲ ಅಂದ್ರೆ ನೋ.. 

ತುಲಾ: ನಿರ್ಧಾರ ತೆಗೆದುಕೊಳ್ಳುವ ವಿಚಾರ ಬಂದಾಗ ಇವರು ವಿಚಲಿತರಾಗುತ್ತಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅದಲ್ಲದೆ ಪದೇ ಪದೇ ಇವರ ನಿರ್ಧಾರವೂ ಬದಲಾಗುತ್ತಿರುತ್ತದೆ. 

ವೃಶ್ಚಿಕ: ಪ್ರೀತಿಸುವ ಗುಣವುಳ್ಳವರು. ಆದರೆ, ಪೊಸೆಸಿವ್ ಜಾಸ್ತಿ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಇವರ ಕೋಪದ ಕಟ್ಟೆ ಒಡೆದು ಹೋಗುತ್ತದೆ. ತಮ್ಮ ಸೇಡು ತೀರಿಸಿಕೊಳ್ಳಲು ಇವರು ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. 

ಧನು: ಇವರು ಗಾಳಿ ಬಂದ ಕಡೆಗೆ ತೂರುವವರು. ಇವರ ಮನಸು ಸ್ಥಿರವಾಗಿರೋದಿಲ್ಲ. ಒಂದು ಬಾರಿ ಹೇಳಿದ್ದು ಮತ್ತೊಂದು ಬಾರಿ ನೆನಪಿರೋದಿಲ್ಲ ಇವರಿಗೆ. 

ಮಕರ: ಇತರರಿಗೆ ಏನಾದರೆ ನಮಗೇನು ಅನ್ನೋ ಪಾಲಿಸಿ ಇವರದ್ದು. ತಮ್ಮದೇ ನಿಯಮಗಳನ್ನು ಮಾಡಿ, ಅದನ್ನೇ ವೇದವಾಕ್ಯ ಎಂದು ನಂಬುತ್ತಾರೆ. ಇವರು ಹೆಚ್ಚಾಗಿ ಇತರರನ್ನು ಗೌರವಿಸುವುದಿಲ್ಲ.

ಕುಂಭ: ಇವರದ್ದು ರೆಬೆಲ್ ವ್ಯಕ್ತಿತ್ವ. ತಮಗೆ  ಸರಿ ಕಂಡದ್ದನ್ನು ಮಾಡುತ್ತಾರೆ. ತಮ್ಮಷ್ಟಕ್ಕೇ ತಾವಿರುತ್ತಾರೆ. ಇತರರಿಂದ ಸಾಧ್ಯವಾದಷ್ಟು ದೂರವಿರುತ್ತಾರೆ. 

ಮೀನ: ಏನು ಬೇಕು, ಏನು ಬೇಡ ಅನ್ನೋದು ಇವರಿಗೆ ಗೊತ್ತಿಲ್ಲ. ತಮ್ಮಷ್ಟಕ್ಕೆ ತಾವು ಯಾವುದೋ ಲೋಕದಲ್ಲಿ ಕಳೆದು ಹೋಗಲು ಇಷ್ಟ ಪಡುವ ರಾಶಿಯವರು ಇವರು.