ಸಂಖ್ಯಾಶಾಸ್ತ್ರದ ಪ್ರಕಾರ, ಮದುವೆಯ ದಿನಾಂಕವು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ತಿಂಗಳ 1, 10, 19, 28, 5, 14, 23, 9, 18, 27 ರಂದು ಮದುವೆಯಾದರೆ ಏರಿಳಿತ, ಸಣ್ಣ ಗಲಾಟೆ, ಸವಾಲುಗಳು ಎದುರಾಗುತ್ತವೆ. 2, 11, 20, 29, 4, 13, 22, 31, 6, 15, 24, 7, 16, 25, 8, 17, 26 ರಂದು ಮದುವೆಯಾದರೆ ಸಂತೋಷ, ಅದ್ಭುತ, ಯಶಸ್ವಿ ದಾಂಪತ್ಯ ಜೀವನ ನಡೆಸಬಹುದು.
ಈಗಿನ ದಿನಗಳಲ್ಲಿ ವಿಚ್ಛೇದನ (Divorce)ದ ಸಂಖ್ಯೆ ಹೆಚ್ಚಾಗ್ತಿದೆ. ಮದುವೆಯಾದ ವರ್ಷಕ್ಕೆ ದಂಪತಿ ಬೇರೆಯಾಗ್ತಿರುವ ಘಟನೆ ಜಾಸ್ತಿಯಾಗಿದೆ. ಮದುವೆಗೂ ಸಂಖ್ಯಾಶಾಸ್ತ್ರ (Numerology)ಕ್ಕೂ ಸಂಬಂಧವಿದೆ. ಸಂಖ್ಯೆಗಳು ವೈವಾಹಿಕ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಯಾವುದೇ ವ್ಯಕ್ತಿಯ ಮದುವೆಯ ದಿನಾಂಕ ಮತ್ತು ಸಮಯವು ಇಡೀ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಕೆಲವೊಂದು ದಿನಾಂಕದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ದಾಂಪತ್ಯ (marriage) ಸಂಘರ್ಷಕ್ಕೆ ಕಾರಣವಾಗುತ್ತದೆ. ನಾವಿಂದು ಸಂಖ್ಯಾ ಶಾಸ್ತ್ರದ ಪ್ರಕಾರ ಯಾವ ದಿನಾಂಕದಲ್ಲಿ ಮದುವೆ ಆಗ್ಬಾರದು ಎಂಬ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಜೀವನದಲ್ಲಿ ಏರಿಳಿತ : ಮದುವೆಗೆ ಮುನ್ನ ಜಾತಕ ನೋಡಿ, ದಿನಾಂಕ ಫಿಕ್ಸ್ ಮಾಡೋದು ಅನೇಕರಲ್ಲಿ ಈಗ್ಲೂ ಜಾರಿಯಲ್ಲಿದೆ. ಮತ್ತೆ ಕೆಲವರು ತಮಗಿಷ್ಟವಾಗುವ ದಿನಾಂಕದಂದು ದಾಂಪತ್ಯಕ್ಕೆ ಕಾಲಿಡ್ತಾರೆ. ಅದೇನೇ ಆಗಿರಲಿ, ಕೆಲ ದಿನಾಂಕದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಸದಾ ಜೀವನದಲ್ಲಿ ಏರಿಳಿತ ಎದುರಿಸ್ತಾರೆ. ಯಾವುದೇ ತಿಂಗಳ 1, 10, 19 ಅಥವಾ 28 ರಂದು ಮದುವೆ ನಡೆದಿದ್ದರೆ ಅಂತಹ ದಂಪತಿ ವೈವಾಹಿಕ ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವಾಗಲೂ ಒಂದಲ್ಲ ಒಂದು ವಿಷಯದ ಬಗ್ಗೆ ಜಗಳ ಇದ್ದೇ ಇರುತ್ತದೆ. ಹಾಗಾಗಿ ಆದಷ್ಟು ಈ ದಿನಾಂಕದಂದು ನೀವು ಮದುವೆಯಾಗಲು ಹೋಗ್ಬೆಡಿ.
ಚಾಣಕ್ಯನ ಪ್ರಕಾರ ಈ ಸ್ಥಳಗಳಲ್ಲಿ ನಾಚಿಕೆ ಪಡಬಾರದಂತೆ
ಆಗಾಗ ಗಲಾಟೆ : 5, 14 ಮತ್ತು 23 ರಂದು ಮದುವೆಯಾದ ಜೋಡಿ ದಾಂಪತ್ಯ ಸೂರ್ಯ ಮತ್ತು ನೆರಳಿನಂತೆ ಸಾಗುತ್ತದೆ. ತಮ್ಮ ಸಂಗಾತಿಯೊಂದಿಗೆ ಆಗಾಗ್ಗೆ ಸಣ್ಣಪುಟ್ಟ ಗಲಾಟೆ ಮಾಡಿಕೊಳ್ತಾರೆ ಈ ದಂಪತಿ.
ಇದ್ದೇ ಇರುತ್ತೆ ಸವಾಲು : ಸಂಖ್ಯಾಶಾಸ್ತ್ರದ ಪ್ರಕಾರ, 9, 18 ಮತ್ತು 27 ನೇ ತಾರೀಖಿನಂದು ವಿವಾಹವಾಗುವ ಜನರ ವೈವಾಹಿಕ ಜೀವನವು ಸವಾಲಿನದ್ದಾಗಿಯೇ ಇರುತ್ತದೆ. ಇಬ್ಬರ ನಡುವೆ ಸ್ವಲ್ಪ ಬಿರುಕಿದ್ದರೂ ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಈ ದಂಪತಿ ಮುಂದೆ ಸಾಕ್ತಾರೆ.
ಸಂತೋಷದ ದಾಂಪತ್ಯ : ಇನ್ನು ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 2, 11, 20 ಮತ್ತು 29 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜನರ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಇಬ್ಬರೂ ಪರಸ್ಪರ ಹೊಂದಿಕೊಂಡು ಜೀವನ ನಡೆಸುತ್ತಾರೆ. ಯಾವುದೇ ಸಮಯದಲ್ಲಿ ಇವರು ಒಬ್ಬರನ್ನೊಬ್ಬರು ಬಿಟ್ಟುಕೊಡೋದಿಲ್ಲ. ಸದಾ ಒಟ್ಟಿಗೆ ಜೀವನ ನಡೆಸಲು ಮುಂದಾಗ್ತಾರೆ.
ಅದ್ಭುತ ದಾಂಪತ್ಯ : 4, 13, 22 ಮತ್ತು 31 ರಂದು ವಿವಾಹವಾಗುವವರ ವೈವಾಹಿಕ ಜೀವನ ಅದ್ಭುತವಾಗಿರುತ್ತದೆ. ಪರಸ್ಪರ ಪ್ರೀತಿ ಮಾಡುವ ಇವರ ಜೀವನವು ಸುಖಕರವಾಗಿರುತ್ತದೆ. ಐಷಾರಾಮಿ ಜೀವನವನ್ನು ಇವರು ನಡೆಸುತ್ತಾರೆ.
ಸಂತೋಷವಾಗಿರುತ್ತೆ ದಾಂಪತ್ಯ : 6, 15 ಮತ್ತು 24 ರಂದು ವಿವಾಹವಾಗುವ ಜನರ ವೈವಾಹಿಕ ಜೀವನ ಸರಿಯಾದ ಹಾದಿಯಲ್ಲಿ ಸಾಗುತ್ತದೆ. ಅವರು ತಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ.
ಚಾಣಕ್ಯನ ಪ್ರಕಾರ ಮಧ್ಯಾಹ್ನ ಮಲಗಿದ್ರೆ ಏನಾಗುತ್ತೆ ಗೊತ್ತಾ?
ಹೆಚ್ಚಿರುತ್ತೆ ಪ್ರೀತಿ : ಯಾವುದೇ ತಿಂಗಳ 7, 16 ಮತ್ತು 25 ರಂದು ವಿವಾಹವಾಗುವ ಹುಡುಗ ಮತ್ತು ಹುಡುಗಿಯ ದಾಂಪತ್ಯ ಜೀವನವು ತುಂಬಾ ಚೆನ್ನಾಗಿ ನಡೆಯುತ್ತದೆ. ಅವರಿಗೆ ದಾಂಪತ್ಯ ಜೀವನದಲ್ಲಿ ಎಲ್ಲಾ ಸಂತೋಷ ಸಿಗುತ್ತದೆ. ಸಮಯ ಕಳೆದಂತೆ ಪರಸ್ಪರ ಪ್ರೀತಿಯೂ ದುಪ್ಪಟ್ಟಾಗುತ್ತದೆ.
ಯಶಸ್ವಿ ದಾಂಪತ್ಯ : ಸಂಖ್ಯಾಶಾಸ್ತ್ರದ ಪ್ರಕಾರ, 8, 17 ಅಥವಾ 26 ನೇ ತಾರೀಖಿನಂದು ಮದುವೆಯಾದ ಜೋಡಿ ದಾಂಪತ್ಯ ಜೀವನವು ಯಶಸ್ವಿಯಾಗುತ್ತದೆ. ನಿಮ್ಮ ಜೀವನ ಸಂಗಾತಿಯು ಪ್ರತಿಯೊಂದು ಸಂತೋಷ ಮತ್ತು ದುಃಖದಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ.
