ಮಾರ್ಗಶಿರ ಮಾಸದ ಹುಣ್ಣಿಮೆಯನ್ನು ದತ್ತಾತ್ರೇಯನ ಜನ್ಮದಿನವೆಂದು ಆಚರಿಸಲಾಗುತ್ತದೆ. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಪ್ರತೀಕವಾದ ದತ್ತಾತ್ರೇಯನ ಪ್ರಾರ್ಥನೆಯಿಂದ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹಿಂದೂಗಳು ನಂಬುತ್ತಾರೆ.

ಗುಜರಾತ್ ಸೇರಿ ದಕ್ಷಿಣ ಭಾರತದಲ್ಲಿ ದತ್ತನನ್ನು ಪೂಜಿಸುವ ಭಕ್ತರಿದ್ದಾರೆ. ಈ ದೇವತಾ ಪುರಷನಿಗೆ ಮೂರು ಮುಖ ಹಾಗೂ ಆರು ಕೈಗಳು ಏಕಿವೆ ಎಂಬುದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ.

ಅವತಾರ ಪುರುಷ ದತ್ತ ಜನಿಸಿದ್ದು ಹೀಗೆ... ಮಹಾಪತಿವ್ರತೆಯಾದ ಅನಸೂಯಾನ ಪಾತಿವ್ರತ್ಯವನ್ನು ಹೇಗಾದರೂ ಭಂಗಗೊಳಿಸಬೇಕೆಂಬ ನಿರ್ಧಾರದಿಂದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ತೆರಳುತ್ತಾರೆ. ಅನಸೂಯಾ ಪತಿ ಅತ್ರಿ ಮಹರ್ಷಿಗಳು ಹೊರ ಹೋಗಿದ್ದಾಗ, ಆಶ್ರಮಕ್ಕೆ ಸನ್ಯಾಸಿಗಳ ರೂಪದಲ್ಲಿ ಈ ತ್ರಿಮೂರ್ತಿಗಳು ತೆರಳುತ್ತಾರೆ.

ಆಶ್ರಮಕ್ಕೆ ಯಾರೂ ಬಂದರೂ ಹಾಗೆಯೇ ಕಳುಹಿಸುವುದಿಲ್ಲವೆಂದು ಅರಿತಿದ್ದ ತ್ರಿಮೂರ್ತಿಗಳು ಅನಸೂಯ ಮನೆಗೆ ಊಟಕ್ಕೆ ಹೋಗುತ್ತಾರೆ. ಜತೆಗೆ, ಬೆತ್ತಲೆಯಾಗಿ ಬಡಿಸಬೇಕೆಂಬ ಶರತ್ತೂ ವಿಧಿಸುತ್ತಾರೆ. ಯಾವುದಕ್ಕೂ ವಿಚಲಿತವಾಗದ ಅನಸೂಯ ತನ್ನ ತಪಶ್ಯಕ್ತಿಯಿಂದ ಈ ತ್ರೀಮೂರ್ತಿಗಳ ಮೇಲೆ ತೀರ್ಥ ಪ್ರೋಕ್ಷಿಸಿ, ಮಕ್ಕಳನ್ನಾಗಿ ಪರಿವರ್ತಿಸುತ್ತಾಳೆ. ಆಗ ನೆಮ್ಮದಿಯಾಗಿ ಆ ಮೂರು ಪುಟ್ಟ ಪುಟ್ಟ ಮಕ್ಕಳಿಗೆ ಸ್ತನ್ಯ ಪಾನವನ್ನೂ ಮಾಡಿಸುತ್ತಾಳೆ. ಅತ್ತ ಅತಿಥಿಗಳ ಇಚ್ಛೆಯಂತೆ ಬೆತ್ತಲೆಯಾಗಿಯೇ ಸತ್ಕಾರವನ್ನೂ ಪೂರೈಸಿರುತ್ತಾಳೆ. ಇತ್ತ ತನ್ನ ಪಾತಿವ್ರತ್ಯವನ್ನು ಪಾಡಿಕೊಳ್ಳುವಲ್ಲಿಯೂ ಯಶಸ್ವಿಯಾಗುತ್ತಾಳೆ.

ದತ್ತನೆಂದು ನಾಮಕರಣ...

ಮನೆಗೆ ಮರಳಿದ ಪತಿಗೆ, ಅನಸೂಯಾ ಎಲ್ಲ ವಿಚಾರವನ್ನೂ ವಿವರಿಸುತ್ತಾಳೆ. ತನ್ನ ಅತೀಂದ್ರೀಯ ಶಕ್ತಿಯಿಂದ ಎಲ್ಲವನ್ನೂ ಅರಿತಿದ್ದ ಅತ್ರಿ ಮಹರ್ಷಿಗಳು ಮೂರೂ ಮಕ್ಕಳನ್ನು ಒಂದಾಗಿಸಿ, ದತ್ತನೆಂದು ನಾಮಕರಣ ಮಾಡುತ್ತಾರೆ. ಆ ಕಾರಣದಿಂದಲೇ ಮೂರು ತಲೆಗಳು ಹಾಗೂ ಆರು ಕೈಗಳುಳ್ಳ ದತ್ತಾತ್ರೇಯ ಜನ್ಮ ತಾಳುತ್ತಾನೆ.

ಆದರೆ, ತ್ರಿಮೂರ್ತಿಗಳು ಎಷ್ಟು ಹೊತ್ತಾದರೂ ಮರಳಿದಿದ್ದಾಗ ಲಕ್ಷ್ಮಿ, ಸರಸ್ವತಿ ಹಾಗೂ ಪಾರ್ವತಿಯರು ಚಿಂತಿರಾಗುತ್ತಾರೆ. ಅತ್ರಿ ಆಶ್ರಮಕ್ಕೆ ಆಗಮಿಸಿ, ನೈಜ ಸ್ವರೂಪದಲ್ಲಿಯೇ ಪತಿಯರನ್ನು ಮರಳಿಸಲು ಕೋರುತ್ತಾರೆ. ಅನಸೂಯ ಅಸ್ತು ಎನ್ನುತ್ತಾಳೆ. ಆದರೆ, ಬೇಕಾದ ವರ ಬೇಡುವಂತೆ ದಂಪತಿಗೆ ಹೇಳುತ್ತಾರೆ.

ಅಪಾರ ಮಹಿಮೆಯ ಶ್ರೀಧರ ಸ್ವಾಮಿಗಳು

ಮಕ್ಕಳಿಲ್ಲದ ದಂಪತಿ ಮಕ್ಕಳಿಗಾಗಿಯೇ ಪ್ರಾರ್ಥಿಸುತ್ತಾರೆ. ಆಗ ತ್ರಿಮೂರ್ತಿ ಸ್ವರೂಪಿ ದತ್ತಾತ್ರೇಯನೇ ಪುನರ್ ಅವತಾರವೆತ್ತುತ್ತಾನೆ. ಈ ರೀತಿ ಅವತಾರವೆತ್ತಿದ ದಿನವನ್ನೇ ದತ್ತ ಜಯಂತಿ ಎಂದು ಆಚರಿಸುತ್ತಾರೆ.

ದತ್ತನ ದೇವಸ್ಥಾನಗಳಿಗೆ ಭೇಟಿ ನೀಡಿ, ಉಪವಾಸ ಮಾಡಿ ದತ್ತ ಜಯಂತಿಯನ್ನು ಆಚರಿಸಲಾಗುತ್ತದೆ. ಅದರಲ್ಲಿಯೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಗುಜರಾತ್‌ನಲ್ಲಿ ದತ್ತ ಭಕ್ತರು ಹೆಚ್ಚು. ಗುಲ್ಬರ್ಗಾ ಸಮೀಪದ ಗಾಣಗಪುರ, ಕೋಲ್ಹಾಪುರ ಜಿಲ್ಲೆಯ ನರಸಿಂಹ ವಾಡಿ, ಆಂಧ್ರದ ಕಾಕಿನಾಡದ ಪಿಥಾಪುರಮ್, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಔದುಂಬರ ಹಾಗೂ ಗುಜರಾತಿನ ಸೌರಾಷ್ಟ್ರದಲ್ಲಿರುವ ಗಿರ್ನಾರ್‌ನಲ್ಲಿ ಈ ತ್ರಿಭುವನ ಪಾಲಕ, ಸದ್ಗುಣ ಮೂರ್ತಿ, ನಿರಾಕಾರನಾದ ದತ್ತಾತ್ರೇಯ ದೇವಸ್ಥಾನಗಳಿವೆ