ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಗುಣಗಳು ಅವನಲ್ಲಿದ್ದರೆ ಕಣ್ಣು ಮುಚ್ಚಿ ಕೊರಳೊಡ್ಡಿ

ವೇದಗಳಲ್ಲಿ ಬರುವ ಸಾಮುದ್ರಿಕಾ ಶಾಸ್ತ್ರ ಎಂಥವನನ್ನು ಪತಿಯಾಗಿ ಆರಿಸಬೇಕೆಂದು ತಿಳಿಸುವಾಗ ಆತನಲ್ಲಿರಬೇಕಾದ 20 ಲಕ್ಷಣಗಳನ್ನು ಹೇಳಿದೆ. ಅವುಗಳಲ್ಲಿ ಕನಿಷ್ಠ 12 ಲಕ್ಷಣ ಹುಡುಗನಲ್ಲಿದ್ದರೂ ಕಣ್ಣು ಮುಚ್ಚಿ ಕೊರಳೊಡ್ಡಬಹುದು.

Marry a man who has half of these characteristics

ಹಿಂದೆ ರಾಜ ಮಹಾರಾಜರು ತಮ್ಮ ಪುತ್ರಿಗೆ ಸ್ವಯಂವರ ಏರ್ಪಡಿಸುತ್ತಿದ್ದಾಗ, ಎಂಥ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂಬ ಒಂದಿಷ್ಟು ನಿಯಮಾವಳಿಗಳಿರುತ್ತಿದ್ದವು. ಒಂದಿಷ್ಟು ಸ್ಪರ್ಧೆಗಳನ್ನಿಡಲಾಗುತ್ತಿತ್ತು. ಈ ಎಲ್ಲವನ್ನೂ ಯೋಜಿಸುವಲ್ಲಿ ರಾಜರಿಗೆ ಸಲಹೆ ನೀಡುತ್ತಿದ್ದುದು ಅಂದಿನ ಋಷಿಮುನಿಗಳು. ಈ ನಿಯಮಗಳನ್ನೇ ಶಾಸ್ತ್ರವಾಗಿಸಿ ಸಾಮುದ್ರಿಕಾ ಶಾಸ್ತ್ರ ಅಥವಾ ಲಕ್ಷಣ ಶಾಸ್ತ್ರವೆಂದು ಮುಂದಿನ ತಲೆಮಾರುಗಳ ಸಹಾಯಕ್ಕಾಗಿ ರೂಪಿಸಲಾಗಿದೆ. ಅದರಂತೆ ಸಕಲ ಗುಣ ವಲ್ಲಭನ 20 ಮುಖ್ಯ ಗುಣಗಳನ್ನು ನೀಡಲಾಗಿದೆ. ಅವುಗಳಲ್ಲಿ ಕನಿಷ್ಠ ಅರ್ಧದಷ್ಟು ನೀವು ನೋಡುವ ಹುಡುಗನಲ್ಲಿದ್ದರೆ ಕಣ್ಣು ಮುಚ್ಚಿಕೊಂಡು ತಾಳಿಗೆ ಕೊರಳೊಡ್ಡಬಹುದು. 

ತಾಯಿಯಾದ ಮೇಲೂ ತ್ವಚೆಯ ರಂಗು ಕಾಪಾಡಿಕೊಳ್ಳುವುದು ಹೇಗೆ?

1. ಗಂಡಿಗೆ ಧೈರ್ಯವೇ ಲಕ್ಷಣ. ಆತ ಕೆಲಸ ಎಷ್ಟೇ ಸಣ್ಣದಿರಲಿ, ದೊಡ್ಡದಿರಲಿ- ಸಿಂಹದ ಚೈತನ್ಯದಲ್ಲಿ ಧೈರ್ಯದಿಂದ ನಿಭಾಯಿಸಬಲ್ಲವನಾಗಿರಬೇಕು.
2. ಬೆಳಗ್ಗೆ ಬೇಗ ಏಳುವ ಅಭ್ಯಾಸ ಹೊಂದಿದ್ದು, ಇತರರಿಗೂ ಬೇಗ ಏಳುವಂತೆ ಸ್ಪೂರ್ತಿ ತುಂಬುವವನು, ಇದರ ಆರೋಗ್ಯ ಲಾಭಗಳನ್ನು ಬಲ್ಲವನು ಖಂಡಿತವಾಗಿಯೂ ಒಳ್ಳೆಯ ಯುವಕ. 
3. ತನ್ನ ಜೀವನ ಹಾಗೂ ಅದರಲ್ಲಿರುವ ಪ್ರಮುಖರ ಬಗ್ಗೆ ಬಹಳ ಎಚ್ಚರದಿಂದಿದ್ದು, ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ಹೊಂದಿರಬೇಕು. 
4. ಉದಾಸೀನತೆ ಇಲ್ಲದ ಜೀವವಾಗಿರಬೇಕು. ಕಷ್ಟ ಪಡಲು ಹೆದರದೆ, ಎಂಥ ಕೆಲಸವನ್ನು ಕೂಡಾ ಮಾಡಬಲ್ಲೆ ಎಂಬ ಹಾರ್ಡ್ ವರ್ಕರ್ ಆಗಿರಬೇಕು.
5. ಯಾರು ತನ್ನ ಆಹಾರ, ಆಸ್ತಿಯನ್ನು ಕುಟುಂಬ ಸದಸ್ಯರಿಗೆ ಸಮನಾಗಿ ಹಂಚಿಕೊಳ್ಳಲು ಬಯಸುವನೋ, ಗೆಳೆಯರ ಉದ್ಧಾರಕ್ಕಾಗಿ ಯೋಚಿಸುವನೋ, ಆತ ತನ್ನ ಜೀವನಸಂಗಾತಿಯೊಡನೆಯೂ ನೋವುನಲಿವುಗಳನ್ನು ಸಮನಾಗಿ ಹಂಚಿಕೊಳ್ಳುವ ಮನಸ್ಸು ಹೊಂದಿರುತ್ತಾನೆ.

Marry a man who has half of these characteristics
6. ಉತ್ತಮ ಕೇಳುಗನಾಗಿರಬೇಕು. ತನ್ನ ಜೊತೆಗಿರುವವರ ಅಗತ್ಯಗಳನ್ನು, ಆಸೆಗಳನ್ನು ಪೂರೈಸುವ ಮನಸ್ಸುಳ್ಳವನಾಗಿದ್ದು, ಅದನ್ನು ಈಡೇರಿಸಲು ಕೆಲಸ ಮಾಡುವವನಾಗಿರಬೇಕು.
7. ಪ್ರೀತಿಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವವನು, ಸಂಬಂಧಗಳು, ವೈಯಕ್ತಿಕ ಹಾಗೂ ಔದ್ಯೋಗಿಕ ಬದುಕಿನ ಸಂಕೀರ್ಣತೆಗಳನ್ನು ಬಲ್ಲವನು, ಅವುಗಳಲ್ಲಿ ಎಂಥ ಅಪಾಯ ಎದುರಾದರೂ ಎದುರಿಸಲು ಸಿದ್ಧವಿರುವವನಾಗಿರಬೇಕು. 
8. ತನ್ನ ಲವ್ ಲೈಫ್‌ನ ಖಾಸಗಿತನವನ್ನು ಉಳಿಸಿಕೊಳ್ಳುವವನು, ಗೆಳೆಯರ ಬಳಿ ಗಂಡಸ್ಥನದ ಜಂಭ ಕೊಚ್ಚಿಕೊಳ್ಳದವನು ನಿಜವಾಗಿಯೂ ಪತ್ನಿಯನ್ನು ಸುಖವಾಗಿಟ್ಟುಕೊಳ್ಳುತ್ತಾನೆ.
9. ಬದುಕಿನ ಎಲ್ಲ ಮಜಲುಗಳಲ್ಲೂ ತಾಳ್ಮೆ ಹಾಗೂ ಪರಿಶ್ರಮವನ್ನು ಮೈಗೂಡಿಸಿಕೊಂಡವನು ಹೆಂಡತಿಯನ್ನು ಬಾಳಿಸಬಲ್ಲ. 
10. ಬೇಡದ ವಸ್ತುಗಳನ್ನು ಬಯಸದವನು. ವಸ್ತುಗಳಿಗಿಂತ ಹೆಚ್ಚಾಗಿ ಜನರು, ನೆನಪುಗಳು ಹಾಗೂ ಅತ್ಯಗತ್ಯ ವಸ್ತುಗಳಿಗೆ ಮಾತ್ರ ಮಣೆ ಹಾಕುವವನು. 
11. ಯಶಸ್ಸು ಹಾಗೂ ಆಸ್ತಿಗಾಗಿ ಆಹಂಕಾರ ಪಡದೆ ಸಮಚಿತ್ತದಿಂದ ಸ್ವೀಕರಿಸುವವನು. 
12. ಮಹತ್ವಾಕಾಂಕ್ಷಿಯಾಗಿದ್ದು, ಸುತ್ತಲಿನ ಜನರೊಡನೆ ಭಯಭಕ್ತಿ, ಗೌರವದಿಂದ ನಡೆದುಕೊಳ್ಳುವವನು. 
13. ತನಗಿರುವುದರಲ್ಲೇ ತೃಪ್ತಿ ಹೊಂದಿದ್ದು, ಹೆಚ್ಚಿನದನ್ನು ಗಳಿಸುವ ಬಯಕೆ, ಮನೋಬಲ ಹೊಂದಿದವನು. ಹಾಗಿದ್ದೂ, ತನಗೆ ಇಲ್ಲದುದರ ಬಗ್ಗೆ ಬೇಸರ ಇಲ್ಲದವನು. 
14. ತನ್ನ ಆಹಾರಗಳ ಬಗ್ಗೆ ಗಮನ ಹರಿಸುತ್ತಾ, ಆರೋಗ್ಯಕ್ಕೆ ಪೂರಕ ಆಹಾರ ಸೇವಿಸುವವನು. ಹಾಗೆಯೇ ಜೊತೆಗಿರುವವರೂ ಆರೋಗ್ಯಕರ ಆಹಾರ ಸೇವಿಸುವಂತೆ ಪ್ರೋತ್ಸಾಹಿಸುವವರು. 
15. ಅತಿಯಾಗಿ ನಿದ್ದೆ ಮಾಡದೆ, ಉದಾಸೀನ ತೋರದೆ, ಸದಾ ಕಾಲ ಫ್ರೆಶ್ ಆಗಿರುವವನು.
16. ಸಹೋದ್ಯೋಗಿಗಳು, ಸೀನಿಯರ್, ಜೂನಿಯರ್ ಎಲ್ಲರನ್ನೂ ಪ್ರೀತಿ, ಸ್ನೇಹ, ಗೌರವದಿಂದ ಕಾಣುವ ಸ್ವಭಾವದವನು.

ರಾಶಿ ಅನುಸಾರ ನಿಮ್ಮ ಈ ಅಂಗಗಳು ಆಕರ್ಷಕವಾಗಿರುತ್ತವೆ!
17. ದೂರ್ತರು ದಾಳಿ ನಡೆಸಿದಾಗ ಕೇವಲ ಹೇಡಿತನದಿಂದ ಓಡಿಹೋಗುವುದಕ್ಕೆ ಯತ್ನಿಸುವ ಬದಲು, ಅವರನ್ನೆದುರಿಸುವ, ಅದಕ್ಕಾಗಿ ಇತರೆ ಉಪಾಯ ಮಾಡುವವನು. 
18. ಕೆಲಸದ ಮೇಲೆ ಪ್ರೀತಿ ಇರುವವನು. ಹೊರಗಿನ ಸಮಯ ಸಮಯ, ಸನ್ನಿವೇಶಗಳು ಪ್ರತಿಕೂಲವಿದ್ದರೂ ಇಚ್ಛೆಯಿಂದ ಕೆಲಸೋಚಿಸಬಲಲ್ಲವನು.  ಮಾಡುವವನು. 
19. ಎಂಥ ಕಠಿಣ ಸ್ಥಿತಿಯಲ್ಲೂ ತಾಳ್ಮೆಗೆಡದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲವನು. ವಿಷಯವನ್ನು ಬಹಳ ಬೇಗ ಗ್ರಹಿಸಿ, ಯೋಚಿಸಬಲ್ಲವನು. ಗೆಳೆಯರು ಹಾಗೂ ಕುಟುಂಬದೊಡನೆ ಜಗಳವಾಡುವಾಗ, ವಾದಿಸುವಾಗ ಹಿಂಸಾತ್ಮಕ ಕೃತ್ಯಕ್ಕೆ ಇಳಿಯದವನು. 
20. ಸಕಾರಾತ್ಮಕ ಯೋಚನೆಯುಳ್ಳವನಾಗಿದ್ದು, ಮುಂದೆ ಒಳಿತಾಗಲಿದೆ ಎಂದು ನಂಬಿ ಕನಸುಗಳನ್ನು ಕಾಣುವವನು. 

Latest Videos
Follow Us:
Download App:
  • android
  • ios