ಬೆಂಗಳೂರು[ಮಾ.02]: ಸೋಮವಾರ ಮಾರ್ಚ್ 4 ಶಿವರಾತ್ರಿ ಸಂಭ್ರಮ ಕಳೆಗಟ್ಟಲಿದೆ. ಶಿವನ ಆರಾಧಕರೆಲ್ಲರಿಗೂ ಇದು ಅತ್ಯಂತ ವಿಶೇಷ ದಿನ. ಶಿವರಾತ್ರಿ ಭಾರತದ ಅತ್ಯಂತ ಪ್ರಮುಖ ಹಬ್ಬಗಳಲ್ಲೊಂದಾಗಿದ್ದು, ಅಂದು ರಾತ್ರಿಯಿಡೀ ಜಾಗರಣೆ ನಡೆಸಿ ಶಿವನ ಆರಾಧನೆ ಮಾಡಲಾಗುತ್ತದೆ. ಈ ಮೂಲಕ ಭಕ್ತರು ಆತನ ಅನುಗ್ರಹ ಪಡೆಯುತ್ತಾರೆ. ಇಷ್ಟೇ ಅಲ್ಲದೇ ಬಹುತೇಕ ಮಂದಿ ಅಂದು ಉಪವಾಸವಿರುತ್ತಾರೆ. 

ಶಿವರಾತ್ರಿಯಂದು ನಿರಾಹಾರ ಹಾಗೂ ನಿರ್ಜಲ ಹೀಗೆ ಎರಡು ಬಗೆಯ ಉಪವಾಸಗಳನ್ನು ಭಕ್ತರು ಪಾಲಿಸುತ್ತಾರೆ. ಅನ್ನ, ಕಾಳು ಮೊದಲಾದ ಯಾವುದೇ ಘನ ಆಹಾರ ಸೇವಿಸದೇ ಇರುವುದು ನಿರಾಹಾರವಾದರೆ, ಇವುಗಳೊಂದಿಗೆ ನೀರನ್ನೂ ಸೇವಿಸದೆ ಇರುವುದು ನಿರ್ಜಲ ಉಪವಾಸ.

ಹೀಗೆ ನೀರು, ಆಹಾರ ಬಿಟ್ಟು ಉಪವಾಸ ಮಾಡುವುದು ಬಹಳ ಕಠಿಣ. ಹೀಗಿದ್ದರೂ ಭಕ್ತರು ಮಹಾದೇವನ ಅನುಗ್ರಹ ಪಡೆಯಲು ಇದನ್ನು ಮಾಡುತ್ತಾರೆ. ಒಂದು ವೇಳೆ ಭಕ್ತರು ಶಿವರಾತ್ರಿಯಂದು ಪ್ರೀತಿ, ಶುದ್ಧ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಉಪವಾಸವಿದ್ದರೆ, ಶಿವನ ದೈವಿಕ ಅನುಗ್ರಹ ಗಳಿಸಬಹುದು ಎಂಬ ನಂಬಿಕೆ ಇದೆ.

ಸದ್ಗುರು ಇಶಾ ಫೌಂಡೇಶನ್ ಶಿವರಾತ್ರಿ ಸಂಭ್ರಮ, ಅಹೋರಾತ್ರಿ ಕಾರ್ಯಕ್ರಮ

ಹೀಗಿರುವಾಗ ಬಹುತೇಕರಿಗೆ ತಾವೇನು ತಿನ್ನಬೇಕು ಎಂದು ತಿಳಿದಿದೆ. ಆದರೆ ಉಪವಾಸ ಮಾಡುವಾಗ ಸೇವಿಸಬಾರದಾದ 4 ಆಹಾರಗಳು ಹೀಗಿವೆ.

1. ಒಂದು ವೇಳೆ ನೀವು ಶಿವರಾತ್ರಿಯಂದು ಉಪವಾಸವಿರುತ್ತೀರೆಂದಾದರೆ ನೀವು ಕಾಳು ಹಾಗೂ ದ್ವಿದಳ ಧಾನ್ಯಗಲನ್ನು ಸೇವಿಸಬಾರದು. ಯಾಕೆಂದರೆ ಮಹಾಶಿವರಾತ್ರಿ ಉಪವಾಸ ನಿರಾಹಾರವಾದುದರಿಂದ ಘನ ಆಹಾರ ಸೇವಿಸುವಂತಿಲ್ಲ.

2. ಉಪವಾಸವೆಂದರೆ ಖಾರ, ಮಸಾಲೆಯುಕ್ತ ಆಹಾರ ಹಾಗೂ ಈರುಳ್ಳಿ, ಬೆಳ್ಳುಳ್ಳಿ ಮೊದಲಾದವುಗಳಿಂದ ದೂರವಿರಬೇಕು. ಇವುಗಳಿಂದ ಹೊಟ್ಟೆ ಕೆಡುವ ಸಾಧ್ಯತೆಗಳಿವೆ. ಈ ಮೂಲಕ ನಿಮ್ಮ ಆಧ್ಯಾತ್ಮಕ್ಕೆ ತೊಡಕಾಗಬಹುದು.

3. ಸಂರಕ್ಷಿಸಲ್ಪಟ್ಟ ಪಾನೀಯ ಹಾಗೂ ಹಣ್ಣುಗಳಿಂದಲೂ ದೂರವಿರಿ. ಇವುಗಳಲ್ಲಿ ಸಂರಕ್ಷಕಗಳನ್ನು(Preservatives) ಬಳಸುವುದರಿಂದ ಉಪವಾಸವಿರುವ ಸಂದರ್ಭದಲ್ಲಿ ಇದರ ಸೇವನೆ ಒಳ್ಳೆಯದಲ್ಲ.

4. ಉಪವಾಸ ಬಿಡುವ ಸಂದರ್ಭದಲ್ಲೂ ಈ ಮೇಲೆ ಸೂಚಿಸಿದ ಆಹಾರಗಳಿಂದ ದೂರವಿರಿ. ಹೊಡ್ಡೆ ಕೆಡುವ ಸಾಧ್ಯತೆಗಳು ಅಧಿಕವಿರುತ್ತದೆ. ಕಿಚಡಿ, ದಾಲ್  ಮೊದಲಾದವುಗಳನ್ನು ಸೇವಿಸಿ, ಇದರಿಂದ ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ.