ಬೆಂಗಳೂರು(ಜ. 10)  ಚಂದ್ರಗ್ರಹಣಕ್ಕೆ ಸಮಯ ಹತ್ತಿರವಾಗಿದೆ.  ಚಂದ್ರಗ್ರಹಣ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುನ್ನು ನಾವು ಮೊದಲು ನೋಡಬೇಕು. ಹಿರಿಯ ಜ್ಯೋತಿಷಿ ಎಸ್‌ಕೆ ಜೈನ್ ಈ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಜನವರಿ 10 ಅಂದರೆ ಶುಕ್ರವಾರ 10.37ಕ್ಕೆ ಆರಂಭವಾಗುವ ಗ್ರಹಣ ಜನವರಿ 11 ರಂದು 2.42ಕ್ಕೆ ಮುಕ್ತಾಯವಾಗುತ್ತದೆ. 

ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧದ ಕಾರ್ಮೋಡದ ನಡುವೆಯೂ ಗ್ರಹಣ ಬಂದಿದೆ.  ಹಾಗಾದರೆ ಏನು ಮಾಡಬೇಕು ಏನು ಮಾಡಬಾರದು ಸಣ್ಣ ಪಟ್ಟಿ ನೋಡಿಕೊಂಡು ಬನ್ನಿ..

ಚಂದ್ರಗ್ರಹಣದ ವಿಶೇಷತೆಗಳು ಏನು?

ಡಿಸೆಂಬರ್ ನಲ್ಲಿ ನಡೆದ ಸೂರ್ಯಗ್ರಹಣ ಮತ್ತು ಈ ಚಂದ್ರ ಗ್ರಹಣ ಎರಡಕ್ಕೂ ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಗ್ರಹಣದ ಸಮಯದಲ್ಲಿ ಮಾಂಸಾಹಾರ ಸೇವನೆ, ಮದ್ಯಪಾನ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂದು ಜ್ಯೋತಿಷಗಳು ಹೇಳುತ್ತಾರೆ. ಈ ಸಂದರ್ಭದಲ್ಲಿ ಸಂಭೋಗವೂ ಸಲ್ಲ.

ತುಪ್ಪದ ಅಂಶ ಇರುವ ಊಟ ಸೇವನೆ ಮಾಡಬೇಕು ಅದಕ್ಕೂ ನಿಯಮಗಳಿವೆ. ಈರುಳ್ಳಿ ಮತ್ತು ಶುಂಠಿ ಅಂಶ ಇರದ ಆಹಾರವನ್ನು ಸೂರ್ಯ ಅಸ್ತಮಾನಕ್ಕೂ ಮುನ್ನ ಸೇವನೆ ಮಾಡಬೇಕು. ಗ್ರಹಣ ಸಂದರ್ಭ ಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡುವುದು ಒಳಿತು.  ಶಿವ ದೇವರ ಆರಾಧನೆ ಮಾಡಿಕೊಳ್ಳಬೇಕು ಎಂದು ಜೈನ್ ತಿಳಿಸುತ್ತಾರೆ.

ಏನನ್ನೂ  ಮಾಡಲೇಬಾರದು: ಸಿಸೇರಿಯನ್ ಮೂಲಕ ಮಕ್ಕಳ ಜನನ ಯಾವ ಕಾರಣಕ್ಕೂ ಈ ಸಂದರ್ಭದಲ್ಲಿ ಮಾಡಲೇಬಾರದು. ಒಂದು ವೇಳೆ ಅಂಥ ಪ್ರಯತ್ನಕ್ಕೆ ಮುಂದಾದರೆ ಮಗು ಅಥವಾ ತಾಯಿಯ ಪ್ರಾಣಕ್ಕೆ ಸಂಚಕಾರ ಬರಬಹುದು ಎಂದು ಜೈನ್ ಎಚ್ಚರಿಸುತ್ತಾರೆ. ಪ್ರಯಾಣ ಮಾಡುವುದು ಕೂಡ ಒಳಿತಲ್ಲ ಎಂದು ತಿಳಿಸುತ್ತಾರೆ.