ಕೋಡಿಮಠದ ಶ್ರೀಗಳು ಮುನಿಪುರದ ಬಗ್ಗೆ ಮತ್ತು ರಾಜಕೀಯ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ನಂತರ ರಾಜಕೀಯ ವಿಪ್ಲವದ ಸೂಚನೆಗಳಿವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ದುಃಖಗಳು ಎದುರಾಗಲಿವೆ ಎಂದು ಎಚ್ಚರಿಸಿದ್ದಾರೆ.

ಹಾಸನ (ಜೂ.21): ಜಗತ್ತಿನಲ್ಲಿ ಯುದ್ಧದ ಕಾರ್ಮೋಡ ಆವರಿಸುತ್ತಿರುವ ನಡುವೆಯೇ ಕೋಡಿಮಠದಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕುರೂಹಲದ ಭವಿಷ್ಯ ನುಡಿದಿದ್ದಾರೆ. 'ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ..ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು..' ಎನ್ನುವ ಮಾತು ಹೇಳಿದ್ದು, ಇದರ ಅರ್ಥವನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸಚಿವ ವಿ. ಸೋಮಣ್ಣ ಮಠಕ್ಕೆ ಭೇಟಿ ನೀಡಿದ ಹೊತ್ತಲ್ಲಿ ಮಾತನಾಡಿದ ಅವರು, 'ವಿ.ಸೋಮಣ್ಣ ಮೂವತ್ತು-ನಲವತ್ತು ವರ್ಷಗಳಿಂದ ಮಠಕ್ಕೆ ಬರುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇಲ್ಲದೆ ಇದ್ದಾಗ ಜನತಾ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದಾಗಿನಿಂದಲೂ ಮಠದ ಭಕ್ತರು. ಈಗ ಸಾಕಷ್ಟು ಬೆಳೆದಿದ್ದಾರೆ ಎಂದು ಹೇಳಿದರು.

ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವದ ಲಕ್ಷಣವಿದೆ

ರಾಜ್ಯದಲ್ಲಿ ಮುಂದಿನ ಸಂಕ್ರಾಂತಿಯ ಬಳಿಕ ರಾಜಕೀಯ ವಿಪ್ಲವದ ಲಕ್ಷಣ ಕಾಣುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರ. ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವ ಲಕ್ಷಣ ಇದೆ ಎನ್ನುವ ಮೂಲಕ ಸ್ಫೋಟಕ ಭವಿಷ್ಯ ನೀಡಿದ್ದಾರೆ.

ನಿರೀಕ್ಷೆಗೂ ಮೀರಿದ ದುಖಃ ಭಾರತಕ್ಕೆ ಬರಲಿದೆ. ಮೇಘಸ್ಪೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ. ಇದು ರಾಜ್ಯಕ್ಕೂ ಇದೆ, ದೇಶಕ್ಕೂ ಇದೆ. ಹಿಂದೆ ಹೇಳಿದ್ದೆ ಎರಡು ಮೂರು ಜನ ಪ್ರಧಾನಮಂತ್ರಿಗಳು ಕೊಲೆ ಆಗ್ತಾರೆ ಅಂಥ ಹೇಳಿದ್ದೆ ಅದು ಆಗುತ್ತೆ. ಯುದ್ಧ ನಿಲ್ಲೋದು ಸಂವತ್ಸರ ಪರದಲ್ಲಿ ಕಷ್ಟ. ದ್ವೇಷ, ಅಸೂಯೆ ಈ‌ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.

ಊಹಿಸಲಾರದ ದುಃಖ ಈ ಭಾರತಕ್ಕೆ ಬರುತ್ತದೆ. ಪ್ರಕೃತಿದತ್ತವಾಗಿ ಮೇಘ ಸ್ಪೋಟ ಆಗುತ್ತೆ. ಜನಜೀವನ ಅಸ್ಥಿರವಾಗುತ್ತೆ, ಇನ್ನೂ ಜಾಸ್ತಿ ಆಗುತ್ತೆ. ಯಾವಾಗ ಮನೆಗೆ ಬರ್ತಾರೆ ಹೋಗ್ತಾರೆ ಎಂದು ಹೇಳುವುದು ಕಷ್ಟ. ದ್ವೇಷ, ಅಸೂಯೆ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಏನೂ ತೊಂದರೆ ಇಲ್ಲ ಎಂದ ಶ್ರೀಗಳು, ಮೋಡ ಬರುತ್ತೆ ಮೋಡ ಹೋಗುತ್ತೆ ಅಷ್ಟೇ. ಸಂಕ್ರಾಂತಿ ಒಳಗೆ ಮೇಘ ಸ್ಪೋಟ ಆಗುವ ಸಾಧ್ಯತೆ ಇದೆ. ಜನವರಿ ಒಳಗೆ ಒಂದು ದೊಡ್ಡ ಗಂಡಾಂತರ ಇದೆ. ಅಕಾಲದಲ್ಲಿ ಮಳೆ ಬಂದರೆ ಸಕಾಲದಲ್ಲಿ ತೊಂದರೆ ಆಗಲಿದೆ. ಈ ಬಾರಿ ಮಳೆ ಚನ್ನಾಗಿ ಆಗಲಿದೆ ಮತ್ತೆ ಜಲಸ್ಫೋಟ ಆಗಲಿದೆ. ಸಾಗರದಲ್ಲಿ ಒಂದು ಜಲಸ್ಪೋಟ ಎಂದು ಹೇಳಿದ್ದೆ ಅದು ಆಗಲಿದೆ ಎಂದು ಹೇಳಿದ್ದಾರೆ.

ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ.. ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು. ಇದರ ಅರ್ಥ ಮುಂದೆ ಹೇಳುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ. ಕೊರೋನಾ ಇನ್ನೊಂದು ರೂಪ ತಾಳಲಿದೆ. ಸಾವು ನೋವು ಕಡಿಮೆ ಇದ್ದರೂ ಸಮಸ್ಯೆ ಇದ್ದೇ ಇದೆ. ಕೆಲವು ದೇಶಗಳು ಮುಳುಗುತ್ತವೆ, ಕೆಲವು ದೇಶಗಳು ಏಳಲಿದೆ. ವಾಯು ಪ್ರಳಯ, ಭೂ ಪ್ರಳಯವಾಗುತ್ತೆ ಎಂದು ಹೇಳುವ ಮೂಲಕ ದೇಶ ರಾಜ್ಯದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.